ಉಕ್ರೇನ್ ಜೊತೆಗಿನ ಸಂಘರ್ಷದಲ್ಲಿ ರಷ್ಯಾ ಸೇನೆಯಲ್ಲಿದ್ದ ಇಬ್ಬರು ಭಾರತೀಯರ ಸಾವು

By Mahmad RafikFirst Published Jun 12, 2024, 12:49 PM IST
Highlights

ವಿದೇಶದಲ್ಲಿರುವ ಕೆಲ ಏಜೆನ್ಸಿಗಳು, ಹೆಚ್ಚಿನ ಸಂಬಳದ ಆಮಿಷ ನೀಡಿ ಭಾರತೀಯರನ್ನು ಕರೆಸಿಕೊಳ್ಳುತ್ತವೆ. ಅಲ್ಲಿಗೆ ತೆರಳಿದ ಬಳಿಕ ಭಾರತೀಯರನ್ನು ರಷ್ಯಾ ಮತ್ತು ಉಕ್ರೇನ್ ಯುದ್ಧಭೂಮಿಗೆ ಕಳುಹಿಸಲಾಗುತ್ತಿದೆ.

ನವದೆಹಲಿ: ರಷ್ಯಾ ಮತ್ತು ಉಕ್ರೇನ್ ನಡುವಿನ ಸಂಘರ್ಷದಲ್ಲಿ (Russia and Ukraine conflict) ಇಬ್ಬರು ಭಾರತೀಯರು ಸಾವನ್ನಪ್ಪಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹೇಳಿದೆ. ಈ ಇಬ್ಬರು ರಷ್ಯಾದ ಸೇನೆಯಲ್ಲಿ (Russian Army)  ನೇಮಕಗೊಂಡಿದ್ದರು. ಮೃತರ ನಿಧನಕ್ಕೆ ರಷ್ಯಾ ಸೇನೆ ಸಂತಾಪ ಸೂಚಿಸಿದೆ. ರಷ್ಯಾ ಸೇನೆಯಲ್ಲಿ ನೇಮಕಗೊಂಡಿರುವ ಭಾರತೀಯರನ್ನು ಬಿಡುಗಡೆಗೊಳಿಸುವಂತೆ ರಷ್ಯಾದ ರಾಯಭಾರಿ ಮತ್ತು ಮಾಸ್ಕೋದಲ್ಲಿರುವ ರಷ್ಯಾದ ಅಧಿಕಾರಿಗಳ ಜೊತೆ ಭಾರತದ ರಾಯಭಾರಿ ಕಚೇರಿ ಒತ್ತಾಯಿಸಿದೆ. ಭಾರತೀಯರನ್ನು ರಷ್ಯಾದ ಸೇನೆಗೆ ನೇಮಿಸಿಕೊಳ್ಳುವ ಕುರಿತು ಪರಿಶೀಲನೆ ನಡೆಸಬೇಕು ಎಂದು ಭಾರತ ಆಗ್ರಹಿಸಿದೆ. ಇಂತಹ ನೇಮಕಾತಿ ಪ್ರಕ್ರಿಯೆಯಲ್ಲಿ ಭಾರತದ ಪಾಲುದಾರಿಕೆ ಇರಲ್ಲ ಎಂದು ಸ್ಪಷ್ಟಪಡಿಸಿದೆ. ಜೂನ್ 11ರಂದು ರಷ್ಯಾ ಸೇನೆ ಈ ಕುರಿತು ಅಧಿಕೃತ ಹೇಳಿಕೆಯನ್ನು ಬಿಡುಗಡೆ ಮಾಡಿದೆ. 

ರಷ್ಯದ ಸೇನೆಯಲ್ಲಿ ನೇಮಕಗೊಂಡಿರುವ ಭಾರತೀಯರನ್ನು ಶೀಘ್ರವೇ ಭಾರತಕ್ಕೆ ಹಿಂದಿರುಗಿಸುವ ಪ್ರಕ್ರಿಯೆ ನಡೆಯಬೇಕು ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ನವದೆಹಲಿಯಲ್ಲಿರುವ ರಷ್ಯಾದ ರಾಯಭಾರಿ ಮತ್ತು ಮಾಸ್ಕೋದಲ್ಲಿರುವ ರಷ್ಯಾದ ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ. ಈ ಕುರಿತು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣ್‌ದೀರ್ ಜೈಸ್ವಾಲ್ ಪ್ರತಿಕ್ರಿಯೆ ನೀಡಿದ್ದಾರೆ. ನಾವು ರಷ್ಯಾದ ಅಧಿಕಾರಿಗಳ ಜೊತೆಯಲ್ಲಿ ನಿರಂತರವಾಗಿ ಸಂಪರ್ಕದಲ್ಲಿದ್ದೇವೆ. ರಷ್ಯಾ ಸೇನೆಯಲ್ಲಿರೋ ಭಾರತೀಯರನ್ನು ಕರೆತರುವ ಕೆಲಸಗಳು ನಡೆಯುತ್ತಿವೆ ಎಂದು ಮಾಹಿತಿ ನೀಡಿದ್ದಾರೆ.

Latest Videos

ಹೊಸ ವರ್ಷ ಆಚರಿಸಲು ರಷ್ಯಾಗೆ ಹೋದ 7 ಭಾರತೀಯರನ್ನು ಸೇನೆಗೆ ಸೇರಿಸಿ ಯುದ್ಧಕ್ಕೆ ಕಳಿಸಿದ ರಷ್ಯಾ

ಮಾನವ ಕಳ್ಳಸಾಗಣೆ 

ವಿದೇಶದಲ್ಲಿರುವ ಕೆಲ ಏಜೆನ್ಸಿಗಳು, ಹೆಚ್ಚಿನ ಸಂಬಳದ ಆಮಿಷ ನೀಡಿ ಭಾರತೀಯರನ್ನು ಕರೆಸಿಕೊಳ್ಳುತ್ತವೆ. ಅಲ್ಲಿಗೆ ತೆರಳಿದ ಬಳಿಕ ಭಾರತೀಯರನ್ನು ರಷ್ಯಾ ಮತ್ತು ಉಕ್ರೇನ್ ಯುದ್ಧಭೂಮಿಗೆ ಕಳುಹಿಸಲಾಗುತ್ತಿದೆ. ದೇಶದಲ್ಲಿ ಈ ರೀತಿಯ ನೇಮಕಾತಿಗಳು ನಡೆಯುತ್ತಿವೆ ಎಂಬ ಆರೋಪಗಳು  ಕೇಳಿ ಬಂದ ಹಿನ್ನೆಲೆ ಸಿಬಿಐ ದೆಹಲಿ, ತ್ರಿವೇಂದ್ರಂ, ಮುಂಬೈ, ಅಂಬಾಲ, ಚಂಡೀಗಢ, ಮಧುರೈ, ಚೆನ್ನೈ ಸೇರಿದಂತೆ ದೇಶದ 13 ಸ್ಥಳಗಳಲ್ಲಿ ದಾಳಿ ನಡೆಸಿತ್ತು. 

ಮಾನವ ಕಳ್ಳಸಾಗಣೆಯ ಏಜೆನ್ಸಿಗಳು ಭಾರತದಲ್ಲಿ ನೆಟ್‌ವರ್ಕ್‌ನಂತೆ ಕೆಲಸ ಮಾಡುತ್ತಿವೆ. ಯುಟ್ಯೂಬ್ ಸೇರಿದಂತೆ ಸೋಶಿಯಲ್ ಮೀಡಿಯಾಗಳ ಮೂಲಕ ನಿರುದ್ಯೋಗಿ ಯುವಕರನ್ನು ಸೆಳೆಯುವ ಕೆಲಸ ಮಾಡುತ್ತಿದೆ.  ರಷ್ಯಾದಲ್ಲಿ ಹೆಚ್ಚು ಸಂಬಳದ ಉದ್ಯೋಗಕ್ಕಾಗಿ ಸಂಪರ್ಕಿಸಿ ಎಂಬ ಶೀರ್ಷಿಕೆಯಡಿಯಲ್ಲಿ ಜಾಹೀರಾತು ಪ್ರಕಟಿಸುತ್ತಿದ್ದಾರೆ. 

ಉಕ್ರೇನ್ ಕೈಯಲ್ಲಿ ಅಮೆರಿಕದ ವಿಷಕಾರಿ ರಾಸಾಯನಿಕ ಅಸ್ತ್ರ?; ಜಾಗತಿಕ ಆತಂಕವನ್ನು ಹೆಚ್ಚಿಸಿದ ರಷ್ಯಾದ ಆರೋಪ..!

ಮೋಸದಿಂದ ರಷ್ಯಾ ಸೇನೆಗೆ ನಮ್ಮನ್ನು ಸೇರಿಸಿದರು ಹಾಗೂ ಉಕ್ರೇನ್ ವಿರುದ್ಧ ಹೋರಾಡುವುದಕ್ಕೆ ಕಳುಹಿಸಿದರು ಎಂದು ರಷ್ಯಾ ಕಪಿಮುಷ್ಠಿಯಲ್ಲಿ ಬಂಧಿಯಾಗಿರುವ ಕೆಲ ಭಾರತೀಯರು ದೂರಿದ್ದರು. ಈ ಹಿನ್ನೆಲೆಯಲ್ಲಿ ನಮ್ಮನ್ನು ಇಲ್ಲಿಂದ ಬಿಡುಗಡೆ ಮಾಡಿ ಎಂದು ಪಂಜಾಬ್ ಮತ್ತು ಹರಿಯಾಣದಿಂದ ರಷ್ಯಾಗೆ ಬಂದ ಏಳು ಯುವಕರ ಗುಂಪು ಸಹಾಯಕ್ಕಾಗಿ ಭಾರತೀಯ ರಾಜತಾಂತ್ರಿಕ ಅಧಿಕಾರಿಗಳಿಗೆ ತುರ್ತು ಮನವಿ ಮಾಡಿತ್ತು.

We regret to state that two Indian nationals who had been recruited by the Russian Army have recently been killed in the ongoing conflict between Russia and Ukraine. The Ministry of External Affairs and the Indian Embassy in Moscow have strongly taken up the matter with the… pic.twitter.com/YSvD7kcCr3

— ANI (@ANI)
click me!