ಆ್ಯಪಲ್ ತನ್ನ ಹಲವಾರು ವೈಶಿಷ್ಟ್ಯಗಳಲ್ಲಿ ಓಪೆನ್ ಎಐನ ಚಾಟ್ ಜಿಪಿಟಿಯನ್ನು ಹೇಗೆ ಸಂಯೋಜಿಸುತ್ತಿದೆ ಮತ್ತು ಅದು ಹೇಗೆ ಡೇಟಾ ಉಲ್ಲಂಘನೆಗೆ ಕಾರಣವಾಗಬಹುದು ಎಂಬುದರ ಬಗ್ಗೆ ಭಾರತದ ಮೀಮ್ಸ್ ಚಿತ್ರವನ್ನು ತನ್ನ ಟ್ವೀಟರ್ ಖಾತೆಯಲ್ಲಿ ಹಂಚಿಕೆ ಮಾಡಿ ವಿಶ್ಲೇಷಿಸಿದ ಟೆಸ್ಲಾ ಕಂಪನಿಯ ಸಿಇಒ ಎಲಾನ್ ಮಸ್ಕ್
ನವದೆಹಲಿ(ಜೂ.12): ಸೋಮವಾರವಷ್ಟೇ ಆ್ಯಪಲ್ ಕಂಪನಿ ತನ್ನ ಉತ್ಪನ್ನಗಳಲ್ಲಿ ಬಳಸುವ ನೂತನ ಕೃತಕ ಬುದ್ಧಿಮತ್ತೆ ವ್ಯವಸ್ಥೆಯನ್ನು ಪರಿಚಯಿಸಿದೆ. ಇದು ಗ್ರಾಹಕರ ಖಾಸಗಿತನವನ್ನು ಗರಿಷ್ಠ ಮಟ್ಟದಲ್ಲಿ ಕಾಪಾಡಲಿದೆ ಎಂದು ಕಂಪನಿ ಹೇಳಿಕೊಂಡಿದೆ.
ಆದರೆ ಆ್ಯಪಲ್‌ನ ಈ ವಾದ ಸುಳ್ಳು ಎಂದು ಬಿಂಬಿಸುವ ನಿಟ್ಟಿನಲ್ಲಿ ಟೆಸ್ಲಾ ಕಂಪನಿಯ ಸಿಇಒ ಎಲಾನ್ ಮಸ್ಕ್, ಭಾರತದಲ್ಲಿ ಅತ್ಯಂತ ಜನಪ್ರಿಯವಾದ ಮೀಮ್ಸ್ ಒಂದನ್ನು ಬಳಸಿಕೊಂಡು ಆ್ಯಪಲ್‌ಗೆ ಟಾಂಗ್ ನೀಡಿದ್ದಾರೆ. ಆ್ಯಪಲ್ ತನ್ನ ಹಲವಾರು ವೈಶಿಷ್ಟ್ಯಗಳಲ್ಲಿ ಓಪೆನ್ ಎಐನ ಚಾಟ್ ಜಿಪಿಟಿಯನ್ನು ಹೇಗೆ ಸಂಯೋಜಿಸುತ್ತಿದೆ ಮತ್ತು ಅದು ಹೇಗೆ ಡೇಟಾ ಉಲ್ಲಂಘನೆಗೆ ಕಾರಣವಾಗಬಹುದು ಎಂಬುದರ ಬಗ್ಗೆ ಭಾರತದ ಮೀಮ್ಸ್ ಚಿತ್ರವನ್ನು ತನ್ನ ಟ್ವೀಟರ್ ಖಾತೆಯಲ್ಲಿ ಹಂಚಿಕೆ ಮಾಡಿ ವಿಶ್ಲೇಷಿಸಿದ್ದಾರೆ.
undefined
ಪ್ರಧಾನಿಯಾಗಿ ಮೋದಿ ಪುನರಾಯ್ಕೆ; ವಿಶ್ವದ ಶ್ರೀಮಂತ ಉದ್ಯಮಿ ಎಲಾನ್ ಮಸ್ಕ್ ಶುಭಾಶಯ
ಈ ಚಿತ್ರದಲ್ಲಿ ಐಫೋನ್ ಮೂಲಕ ಡಾಟಾವನ್ನು ಪಡೆದು ಓಪೆನ್ ಎಐಗೆ ಯಾವ ರೀತಿ ರವಾನೆ ಮಾಡಾಲಾಗುತ್ತದೆ ಎಂಬುದನ್ನು ಹೇಳುತ್ತಿರುವುದು ನೋಡಬಹುದು.