
ಬೈರುತ್: ಸಿರಿಯಾ ಗಡಿಯಲ್ಲಿ ಟರ್ಕಿಶ್ ಪಡೆ ವಾಯುದಾಳಿ ನಡೆಸಿದ್ದು, ಈ ಅವಘಡದಲ್ಲಿ ಒಟ್ಟು 17 ಜನರು ಸಾವಿಗೀಡಾಗಿದ್ದಾರೆ. ಡಮಸ್ಕಸ್ ಸರ್ಕಾರದ ಬೆದರಿಕೆಗೆ ಪ್ರತಿಕ್ರಿಯೆಯಾಗಿ ಈ ದಾಳಿ ನಡೆದಿದೆ ಎಂದು ಯುದ್ಧ ವೀಕ್ಷಣಾಲಯ ತಿಳಿಸಿದೆ. ಈ ವಾಯುದಾಳಿಯಲ್ಲಿ ಟರ್ಕಿಶ್ ಗಡಿಗೆ ಸಮೀಪವಿರುವ ಸಿರಿಯಾದ ಹಲವು ಹೊರತಾಣಗಳ ಮೇಲೆ ದಾಳಿ ಮಾಡಲಾಗಿದೆ ಎಂದು ಮಾನವ ಹಕ್ಕುಗಳಿಗೆ ಸಂಬಂಧಿಸಿದ ಸಿರಿಯನ್ ವೀಕ್ಷಣಾಲಯ ತಿಳಿಸಿದೆ. ಈ ದಾಳಿಯಲ್ಲಿ ಮೃತರಾದವರು ಕುರ್ದಿಶ್ ಪಡೆಗೆ ಸಂಬಂಧಿಸಿದವರೋ ಅಥವಾ ಸಿರಿಯಾ ಸರ್ಕಾರದ ಯೋಧರೊ ಎಂಬುದನ್ನು ಅದು ಖಚಿತಪಡಿಸಿಲ್ಲ. ಟರ್ಕಿಶ್ ಪಡೆ ಕೈಗೊಂಡ ಈ ವಾಯುದಾಳಿಯಲ್ಲಿ ಮೃತರಾದವರಲ್ಲಿ ಕನಿಷ್ಠ ಮೂವರು ಸಿರಿಯನ್ ಯೋಧರು ಹಾಗೂ ಆರು ಗಾಯಗೊಂಡ ಯೋಧರು ಸೇರಿದ್ದಾರೆ ಎಂದು ಮಿಲಿಟರಿ ಮೂಲಗಳನ್ನು ಆಧರಿಸಿ ಸಿರಿಯಾದ ಅಧಿಕೃತ ಸುದ್ದಿ ಸಂಸ್ಥೆ ಸನಾ ವರದಿ ಮಾಡಿದೆ.
ನಮ್ಮ ಸೇನೆಗೆ ಸಂಬಂಧಿಸಿದ ಸೇನಾ ಔಟ್‌ಪೋಸ್ಟ್‌ಗಳ ಮೇಲೆ ನಡೆದ ದಾಳಿಗೆ ಸಂಬಂಧಿಸಿದಂತೆ ನೇರವಾಗಿ ಹಾಗೂ ತಕ್ಷಣವೇ ಪ್ರತಿಕ್ರಿಯೆ ನೀಡಲಾಗುವುದು ಎಂದು ಸಿರಿಯಾ ಸೇನೆ ಹೇಳಿದ್ದಾಗಿ ಸನಾ ವರದಿ ಮಾಡಿದೆ. ಕುರ್ದಿಶ್ ಪ್ರಾಬಲ್ಯದ ಕೊಬಾನೆ ಪ್ರದೇಶದಲ್ಲಿ ಈ ದಾಳಿ ನಡೆದಿದೆ. ಈ ವೇಳೆ ರಾತ್ರಿಯೆಲ್ಲ ಕುರ್ದಿಶ್ ನೇತೃತ್ವದ ಸಿರಿಯನ್ ಪಡೆ ಹಾಗೂ ಟರ್ಕಿಶ್ ಪಡೆಗಳ ಮಧ್ಯೆ ಗುಂಡಿನ ಚಕಮಕಿ ನಡೆದಿದೆ.
US Drone Strike: ಐಸಿಸ್ ಸಿರಿಯಾ ಮುಖ್ಯಸ್ಥನ ಹತ್ಯೆ ಖಚಿತಪಡಿಸಿದ ಪೆಂಟಗನ್
ಕುರ್ದಿಶ್ ಪಡೆಯೂ ಟರ್ಕಿಶ್ ಪ್ರದೇಶದಲ್ಲಿ ಸಿಲುಕಿ ಹಾಕಿಕೊಂಡಿದೆ. ಓರ್ವ ಯೋಧನನ್ನು ಹತ್ಯೆ ಮಾಡಲಾಗಿದೆ ಎಂದು ಟರ್ಕಿಯ ರಕ್ಷಣಾ ಸಚಿವಾಲಯ ತಿಳಿಸಿದೆ. ಜೊತೆಗೆ ಸಿರಿಯಾದಲ್ಲಿ ನಡೆಸಿದ ದಾಳಿಯಲ್ಲಿ 13 ಉಗ್ರರನ್ನು ಸದೆಬಡಿಯಲಾಗಿದೆ ಎಂದು ಟರ್ಕಿಯ ಸಚಿವಾಲಯ ಹೇಳಿದೆ. ಕಳೆದ ಜುಲೈ 19 ರಿಂದಲೇ ಟರ್ಕಿಯೂ ಸಿರಿಯಾದ ಕುರ್ದಿಶ್ ಪ್ರಾಬಲ್ಯದ ಪ್ರದೇಶಗಳ ಮೇಲೆ ದಾಳಿ ನಡೆಸಲು ಆರಂಭಿಸಿದೆ. ಮಂಗಳವಾರ ಕುರ್ದಿಶ್ ನಿಯಂತ್ರಣದಲ್ಲಿರುವ ಹಸಕೆಹ್ ಪ್ರದೇಶದಲ್ಲಿ ಟರ್ಕಿಶ್ ಪಡೆ ನಡೆಸಿದ ದಾಳಿಯಲ್ಲಿ ನಾಲ್ವರು ಮೃತಪಟ್ಟಿದ್ದಾರೆ. ಆದರೆ ಸಿರಿಯಾ ಡೆಮಾಕ್ರಟಿಕ್ ಪೋರ್ಸ್ ಹೇಳುವ ಪ್ರಕಾರ ಜುಲೈನಿಂದ ಟರ್ಕಿಶ್ ಪಡೆ ನಡೆಸುತ್ತಿರುವ ದಾಳಿಯಲ್ಲಿ ಇದುವರೆಗೆ ಕನಿಷ್ಠ 13 ಜನ ಮೃತಪಟ್ಟಿದ್ದಾರೆ ಎಂದು ಹೇಳಿದೆ.
ಆಲ್ಟ್ ನ್ಯೂಸ್‌ನ ಜುಬೇರ್‌ಗೆ ಪಾಕ್, ಸಿರಿಯಾ, ಗಲ್ಫ್ ರಾಷ್ಟ್ರಗಳ ದೇಣಿಗೆ!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ