ನೈಜಿರಿಯಾದಲ್ಲಿ ಮೃಗಾಲಯಗಳಲ್ಲಿ ಅಕ್ರಮವಾಗಿ ಕಾಡುಪ್ರಾಣಿಗಳನ್ನು ಹಿಡಿದಿಟ್ಟು ಆಹಾರ ನೀಡದೆ ಉಪವಾಸ ಕೆಡವಲಾಗುತ್ತಿದೆ. ಹೀಗೆ ಸೆರೆಸಿಕ್ಕು ಅನ್ನಾಹಾರವಿಲ್ಲದೇ ಕಂಗೆಟ್ಟು ಅಸ್ಥಿಪಂಜರವಾದ ಸಿಂಹಗಳ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
ನಮ್ಮ ಭಾರತದಲ್ಲಿ ಮೃಗಾಲಯ ಎಂದರೆ ಅದು ಸರ್ಕಾರಿ ಸ್ವಾಮ್ಯದಲ್ಲಿರುತ್ತವೆ. ಅಲ್ಲಿ ಪ್ರಾಣಿಗಳನ್ನು ಸೆರೆಯಲ್ಲಿಟ್ಟರು ಅವುಗಳಿಗೆ ಆಹಾರಕ್ಕೇನು ಕೊರತೆ ಮಾಡುವುದಿಲ್ಲ. ಪ್ರಾಣಿಗಳನ್ನು ನೋಡಿಕೊಳ್ಳಲು ಜನರಿರುತ್ತಾರೆ ಹಾಗೂ ಅವುಗಳಿಗೆ ಹೊತ್ತು ಹೊತ್ತಿಗೆ ಆಹಾರ ನೀಡಲಾಗುತ್ತದೆ. ಆದರೆ ಆಫ್ರಿಕನ್ ರಾಷ್ಟ್ರವಾಗಿರುವ ನೈಜಿರೀಯಾದಲ್ಲಿರುವ ಮೃಗಾಲಯವೊಂದರ ದುಸ್ಥಿತಿ ನೋಡಿದರೆ ಕಣ್ಣಲ್ಲಿ ನೀರಲ್ಲ ರಕ್ತವೇ ಬರುವಂತಿದೆ. ಅಷ್ಟೊಂದು ಶೋಚನೀಯ ಸ್ಥಿತಿಯಲ್ಲಿ ಅಲ್ಲಿ ಕಾಡುಪ್ರಾಣಿಗಳು ಸಾವಿಗೆ ದಿನಗಣನೆ ಮಾಡುತ್ತಿವೆ. ಬಡ ರಾಷ್ಟ್ರವಾಗಿರುವ ನೈಜಿರೀಯಾದಲ್ಲಿ ಮನುಷ್ಯರಿಗೆ ಸರಿಯಾಗಿ ತಿನ್ನಲು ಆಹಾರವಿಲ್ಲ. ಇಂತಹ ಸ್ಥಿತಿಯಲ್ಲಿ ಪ್ರಾಣಿಗಳಿಗೆ ಅವರು ಎಲ್ಲಿಂದ ಆಹಾರ ಕೊಡುತ್ತಾರೆ. ಆದರೆ ಅಚ್ಚರಿಯ ವಿಚಾರ ಏನು ಅಂದ್ರೆ ಇಲ್ಲಿ ಈ ಮೃಗಾಲಯವನ್ನು ಅಕ್ರಮವಾಗಿ ನಡೆಸಲಾಗುತ್ತಿದೆ. ಅಕ್ರಮವಾಗಿ ಪ್ರಾಣಿಗಳನ್ನು ಹಿಡಿದು ಅನುಮತಿ ಇಲ್ಲದೇ ಮೃಗಾಲಯವನ್ನು ನಡೆಸಿ ಅದರಿಂದ ಬರುವ ಹಣದಿಂದ ಕೆಲವರು ಜೀವನೋಪಾಯ ಮಾಡುವಂತಹ ದುಸ್ಥಿತಿ ಅಲ್ಲಿದೆ.
ಗಾಯಗೊಂಡ ಸಿಂಹದ ಉಸಿರು, ಹಸಿದ ಸಿಂಹದ ಘರ್ಜನೆಗಿಂತ ಜೋರಾಗಿರುತ್ತದೆ ಎಂದು ಸಿನಿಮಾ ಡೈಲಾಗ್ ಅನ್ನು ನೀವು ಕೇಳಿರಬಹುದು. ಆದರೆ ಇಲ್ಲಿರುವ ಸಿಂಹಗಳು ಘರ್ಜಿಸುವುದಿರಲಿ ಕನಿಷ್ಠ ಉಸಿರಾಡಲು ಕಷ್ಟಪಡುತ್ತಿವೆ. ಮೂಳೆಯ ಮೇಲೆ ಚರ್ಮದ ತೊಗಲು ನೇತಾಡುವಂತೆ ಪ್ರಾಣಿಗಳ ದೇಹ ಕಾಣಿಸುತ್ತಿದ್ದು, ಕಣ್ಣೀರು ತರಿಸುತ್ತಿದೆ. ಸ್ವಚ್ಛಂದವಾಗಿ ಕಾಡಿನಲ್ಲಿ ಬಿಟ್ಟಿದ್ದರೆ ತಮ್ಮಷ್ಟಕ್ಕೆ ತಾವೇ ತಮ್ಮ ಆಹಾರವನ್ನು ಹುಡುಕಿಕೊಂಡು ತಿಂದು ಹಾಯಾಗಿ ಇರುತ್ತಿದ್ದ ಈ ಕಾಡುಪ್ರಾಣಿಗಳನ್ನು ಮನುಷ್ಯ ರೂಪದ ರಕ್ಷಸರು ಬೋನಿನೊಳಗೆ ಕೂಡಿ ಹಾಕಿ ತಮ್ಮ ಹೊಟ್ಟೆ ಹೊರೆಯಲು ಪ್ರಯತ್ನಿಸುತ್ತಿದ್ದಾರೆ. ಇಲ್ಲಿಗೆ ತೆರಳಿದ ಪ್ರವಾಸಿಗರು ಸಿಂಹ ಸೇರಿದಂತೆ ಇಲ್ಲಿ ಶೋಚನೀಯ ಸ್ಥಿತಿಯಲ್ಲಿ ಇರುವ ಕಾಡುಪ್ರಣಿಗಳ ಫೋಟೋಗಳನ್ನು ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಹರಿಯ ಬಿಟ್ಟಿದ್ದಾರೆ. ನೈಜೀರಿಯಾದ ಮೃಗಾಲಯವೊಂದರ ದೃಶ್ಯವೊಂದನ್ನು ಅಂತರಾಷ್ಟ್ರೀಯ ಎನ್‌ಜಿಒ ವೈಲ್ ಅಟ್ ಲೈಫ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ. ಇದು ನೈಜಿರಿಯಾದಲ್ಲಿ ಪ್ರಾಣಿಗಳ ದುಸ್ಥಿತಿ ಹೇಗಿದೆ ಎಂಬುದನ್ನು ಪ್ರಪಂಚಕ್ಕೆ ತಿಳಿಸುತ್ತಿದೆ.
ಕಂಡವ್ರ ಹೆಂಡ್ತಿ ಮೇಲೆ ಕಣ್ಣು ಹಾಕೋದ್ರಲ್ಲಿ ಈ ಸಿಂಹ ಏನು ಕಮ್ಮಿ ಇಲ್ಲ
ಪ್ರಾಣಿಗಳನ್ನು ಹಿಡಿದಿಟ್ಟು ಹೀಗೆ ಖಾಸಗಿಯಾಗಿ ಮೃಗಾಲಯಗಳನ್ನು ಮಾಡುವುದಲ್ಲದೇ ಅವುಗಳಿಗೆ ತಿನ್ನಲು ನೀಡದೇ ಉಪವಾಸ ಹಾಕಿ ಚಿತ್ರಹಿಂಸೆ ನೀಡುವ ಮಾಫಿಯಾ ಇಲ್ಲಿ ವ್ಯಾಪಕವಾಗಿದೆ.
ಈ ಬಗ್ಗೆ ಮಾತನಾಡಿದ ವೈಲ್ಡ್ ಎಟ್ ಲೈಫ್‌ನ ಸಿಸಿಒ ಅಸ್ಲಿನ್ ಗೆಡಿಕ್, ವೈಲ್ಡ್ ಅಟ್ ಲೈಫ್ ಈ ಪ್ರಾಣಿಗಳನ್ನು ರಕ್ಷಿಸುವ ಬಲವಾದ ಗುರಿಯನ್ನು ಹೊಂದಿದೆ. ಹಾಗೂ ಪ್ರಾಣಿಗಳ ರಕ್ಷಣೆಗಾಗಿ ಸತತ ಆಂದೋಲನವನ್ನು ನಡೆಸುತ್ತಿದೆ. ಎಲ್ಲಾ ಅಕ್ರಮವಾಗಿ ನಡೆಯುತ್ತಿರುವ ಇಂತಹ ಪ್ರಾಣಿ ಸಂಗ್ರಾಹಲಯಗಳನ್ನು ಮುಚ್ಚುವುದು ನಮ್ಮ ಗುರಿ ಎಂದು ಅವರು ಹೇಳಿದ್ದಾರೆ. ನಾವು ವನ್ಯಜೀವಿಗಳು ಕಾಡಿನಲ್ಲೇ ಇರಬೇಕು ಎಂದು ನಾವು ಬಯಸುತ್ತೇವೆ. ಇಲ್ಲಿನ ಗೂಡೊಂದರಲ್ಲಿ ಕಣ್ಣು ಕಾಣಿಸದ ಕರಡಿಯೊಂದು 30 ವರ್ಷಗಳಿಂದ ಸೆರೆಯಲ್ಲಿತ್ತು ಎಂದು ಅವರು ಹೇಳಿದ್ದಾರೆ.
ಮೂರು ಸಿಂಹಗಳೊಂದಿಗೆ ಜೀವಕ್ಕಾಗಿ ಕಾದಾಡುತ್ತಿರುವ ಮೊಸಳೆ: ವಿಡಿಯೋ ವೈರಲ್