ಭಾರತ, ಅಮೆರಿಕ ವಿರುದ್ಧ ರಹಸ್ಯ Cyber Army ಸ್ಥಾಪನೆಗೆ ಪಾಕ್‌ಗೆ ಟರ್ಕಿ ನೆರವು..!

By BK AshwinFirst Published Oct 27, 2022, 10:15 AM IST
Highlights

ಟರ್ಕಿಯ ಆಂತರಿಕ ಸಚಿವ ಸುಲೇಮಾನ್ ಸೊಯ್ಲು ಅವರೊಂದಿಗಿನ ಸಭೆಯಲ್ಲಿ ಆಂತರಿಕ ಸಚಿವ ಸ್ಥಾನವನ್ನು ಸಹ ಹೊಂದಿದ್ದ ಅಂದಿನ ಪ್ರಧಾನಿ ಇಮ್ರಾನ್ ಖಾನ್ ಅವರು ಈ ಯೋಜನೆಗೆ ಹಸಿರು ನಿಶಾನೆ ತೋರಿದ್ದರು ಎಂದೂ ತಿಳಿದುಬಂದಿದೆ.

ಆಗ್ನೇಯ ಏಷ್ಯಾದ ಮುಸ್ಲಿಮರ (Muslims) ಅಭಿಪ್ರಾಯಗಳನ್ನು ಪ್ರಭಾವಿಸಲು, ಸಾರ್ವಜನಿಕ ಅಭಿಪ್ರಾಯವನ್ನು (Public Opinion) ರೂಪಿಸಲು, ಯುಎಸ್ (United States) ಮತ್ತು ಭಾರತದ (India) ಮೇಲೆ ದಾಳಿ ಮಾಡಲು ಮತ್ತು ಪಾಕಿಸ್ತಾನಿ (Pakistan) ಆಡಳಿತಗಾರರ ವಿರುದ್ಧ ಟೀಕೆಗಳನ್ನು ದುರ್ಬಲಗೊಳಿಸಲು ಸೈಬರ್ ಸೈನ್ಯವನ್ನು (Cyber Army) ಸ್ಥಾಪಿಸಲು ಟರ್ಕಿ (Turkey) ಪಾಕಿಸ್ತಾನಕ್ಕೆ ರಹಸ್ಯವಾಗಿ ಸಹಾಯ ಮಾಡಿದೆ ಎಂದು ಅಂತಾರಾಷ್ಟ್ರೀಯ ಮಾಧ್ಯಮವೊಂದು ವರದಿ ಮಾಡಿದೆ. ಡಿಸೆಂಬರ್ 17, 2018 ರಂದು ಟರ್ಕಿಯ ಆಂತರಿಕ ಸಚಿವ ಸುಲೇಮಾನ್ ಸೊಯ್ಲು ಮತ್ತು ಪಾಕಿಸ್ತಾನದ ಅಂದಿನ ಆಂತರಿಕ ರಾಜ್ಯ ಸಚಿವ ಶೆಹರ್ಯಾರ್ ಖಾನ್ ಅಫ್ರಿದಿ ನಡುವಿನ ಖಾಸಗಿ ಮಾತುಕತೆಯ ಸಂದರ್ಭದಲ್ಲಿ ಅಂತಹ ಘಟಕವನ್ನು ಸ್ಥಾಪಿಸುವ ಪ್ರಸ್ತಾಪವನ್ನು ಮೊದಲು ಕೈಗೆತ್ತಿಕೊಳ್ಳಲಾಯಿತು ಎಂದು ತಿಳಿದುಬಂದಿದೆ. ಇನ್ನು, ಹಿರಿಯ ಅಧಿಕಾರಿಗಳ ಮಟ್ಟದಲ್ಲಿ ಈ ಚರ್ಚೆ ನಡೆದಿದ್ದು, ಇಸ್ಲಾಮಾಬಾದ್‌ನ ಆಂತರಿಕ ಸಚಿವಾಲಯದ ಹೆಚ್ಚಿನ ಸಿಬ್ಬಂದಿಯಿಂದ ಗೌಪ್ಯವಾಗಿ ಇರಿಸಲಾಗಿತ್ತು ಎಂದು ಹೇಳಲಾಗಿದೆ.

ಇನ್ನು, ಅದೇ ದಿನ ಟರ್ಕಿಯ ಆಂತರಿಕ ಸಚಿವ ಸುಲೇಮಾನ್ ಸೊಯ್ಲು ಅವರೊಂದಿಗಿನ ಸಭೆಯಲ್ಲಿ ಆಂತರಿಕ ಸಚಿವ ಸ್ಥಾನವನ್ನು ಸಹ ಹೊಂದಿದ್ದ ಅಂದಿನ ಪ್ರಧಾನಿ ಇಮ್ರಾನ್ ಖಾನ್ ಅವರು ಈ ಯೋಜನೆಗೆ ಹಸಿರು ನಿಶಾನೆ ತೋರಿದ್ದರು ಎಂದೂ ತಿಳಿದುಬಂದಿದೆ.

ಇದನ್ನು ಓದಿ: ಅಲ್‌ಖೈದಾಗೆ ಶಸ್ತ್ರಾಸ್ತ್ರ ಪೂರೈಸುವ ಟರ್ಕಿ ಉಗ್ರರೊಂದಿಗೂ ಪಿಎಫ್‌ಐ ನಂಟು: ಇಬ್ಬರು ನಾಯಕರಿಗೆ ಅತಿಥ್ಯ

ಅಕ್ಟೋಬರ್ 13, 2022 ರಂದು ಕಹ್ರಮನ್ಮಾರಾಸ್‌ನಲ್ಲಿರುವ ಸ್ಥಳೀಯ ಟಿವಿ ಸ್ಟೇಷನ್‌ಗೆ ನೀಡಿದ ಸಂದರ್ಶನದಲ್ಲಿ ಈ ರಹಸ್ಯ ಕಾರ್ಯಾಚರಣೆಯನ್ನು ಟರ್ಕಿಯ ಆಂತರಿಕ ಸಚಿವ ಬಹಿರಂಗಪಡಿಸಿದ್ದಾರೆ. ಅವರು ದೇಶವನ್ನು ಹೆಸರಿಸಲಿಲ್ಲ, ಆದರೆ ಅವರು ಟರ್ಕಿಯಿಂದ ಐದು ಅಥವಾ ಆರು ಗಂಟೆಗಳ ನೇರ ವಿಮಾನದ ದೇಶವನ್ನು ಉಲ್ಲೇಖಿಸಿದಾಗ ಅವರು ಪಾಕಿಸ್ತಾನದ ಬಗ್ಗೆ ಮಾತನಾಡುತ್ತಿರುವ ಬಗ್ಗೆ ಸ್ಪಷ್ಟ ಸಂದೇಶ ಹೇಳಿದ್ದಾರೆ.

ಇತ್ತೀಚಿಗೆ ಅನುಮೋದಿಸಲಾದ ವಿವಾದಾತ್ಮಕ ಸಾಮಾಜಿಕ ಮಾಧ್ಯಮ ಕಾನೂನಿನ ಕುರಿತು ಪ್ರತಿಕ್ರಿಯಿಸಿದ ಸುಲೇಮಾನ್ ಸೋಯ್ಲು ಅವರು ಇಸ್ಲಾಮಾಬಾದ್‌ಗೆ ಭೇಟಿ ನೀಡಿದ ಸಂದರ್ಭದಲ್ಲಿ ತಮ್ಮ ಮಾತುಕತೆಗಳನ್ನು ನೆನಪಿಸಿಕೊಂಡರು. ನಿಯೋಗಗಳ ನಡುವಿನ ಮಾತುಕತೆಯ ನಂತರ ಪಾಕಿಸ್ತಾನದ ಮಂತ್ರಿಯೊಬ್ಬರು ಅವರನ್ನು ಖಾಸಗಿ ಕೋಣೆಗೆ ಕರೆದೊಯ್ದರು ಮತ್ತು ಸೈಬರ್ ವ್ಯವಸ್ಥೆಯನ್ನು ಸ್ಥಾಪಿಸಲು ಸಹಾಯವನ್ನು ಕೇಳಿದರು ಎಂದೂ ಅವರು ಹೇಳಿದರು.

ಸಾಮಾಜಿಕ ಮಾಧ್ಯಮವನ್ನು ಬಳಸಿಕೊಂಡು ಪಾಕಿಸ್ತಾನದ ಬಗ್ಗೆ ನಕಾರಾತ್ಮಕ ಗ್ರಹಿಕೆಯನ್ನು ಸೃಷ್ಟಿಸಲು ಯುನೈಟೆಡ್ ಸ್ಟೇಟ್ಸ್ ಪ್ರಯತ್ನಿಸುತ್ತಿದೆ ಮತ್ತು ಯುಎಸ್ ಹಾಗೂ ಇತರರ ಇಂತಹ ಪ್ರಯತ್ನಗಳನ್ನು ಎದುರಿಸಲು ಸೈಬರ್ ಸೈನ್ಯವನ್ನು ಪ್ರಾರಂಭಿಸುವ ವೃತ್ತಿಪರರ ಅಗತ್ಯವಿದೆ ಎಂದು ಟರ್ಕಿಯ ಸಚಿವರಿಗೆ ಪಾಕಿಸ್ತಾನದ ಅಂದಿನ ಆಂತರಿಕ ರಾಜ್ಯ ಸಚಿವ ಶೆಹರ್ಯಾರ್ ಖಾನ್ ಅಫ್ರಿದಿ ಹೇಳಿದರು.

ಇದನ್ನೂ ಓದಿ: ರಾಮಮಂದಿರ ಸ್ಫೋಟಕ್ಕೆ PFI ಸಂಚು! ಮಹಾರಾಷ್ಟ್ರ ಉಗ್ರನಿಗ್ರಹ ದಳದಿಂದ ಸ್ಫೋಟಕ ಮಾಹಿತಿ

ಟರ್ಕಿ ಮತ್ತು ಪಾಕಿಸ್ತಾನಿ ನಿಯೋಗಗಳ ಮುಂದೆ ನಡೆದ ದ್ವಿಪಕ್ಷೀಯ ಮಾತುಕತೆಯ ಸಮಯದಲ್ಲಿ ಪಾಕಿಸ್ತಾನದ ಸಚಿವರು ಉದ್ದೇಶಪೂರ್ವಕವಾಗಿ ಈ ವಿನಂತಿಯನ್ನು ಎತ್ತದಂತೆ ನುಣುಚಿಕೊಂಡಿದ್ದಾರೆ ಎಂದೂ ಸುಲೇಮಾನ್‌ ಸೋಯ್ಲು ಹೇಳಿದ್ದಾರೆ. ಹಾಗೂ, ಅದರ ಬದಲಿಗೆ ಹಿಂದಿನ ಕೊಠಡಿಯ ಸಭೆಯಲ್ಲಿ ಖಾಸಗಿಯಾಗಿ ತಿಳಿಸಲು ಆದ್ಯತೆ ನೀಡಿದರು.
ಟರ್ಕಿಯು ಈ ವಿನಂತಿಗೆ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದು, ಭದ್ರತಾ ಜನರಲ್ ಡೈರೆಕ್ಟರೇಟ್‌ನಲ್ಲಿ (ಎಮ್ನಿಯೆಟ್) ವಿವಿಧ ವಿಭಾಗಗಳಿಂದ 5 ಪೊಲೀಸ್ ಮುಖ್ಯಸ್ಥರನ್ನು ಕಳುಹಿಸಲಾಗಿದೆ ಎಂದು ಸುಲೇಮಾನ್‌ ಸೋಯ್ಲು ಬಹಿರಂಗಪಡಿಸಿದರು.ಈ ಯೋಜನೆ ಆರಂಭವಾಗಲು ಪಾಕಿಸ್ತಾನದಲ್ಲಿ ಟರ್ಕಿ ತಿಂಗಳುಗಟ್ಟಲೆ ಕೆಲಸ ಮಾಡಿದೆ ಮತ್ತು ಅಂತಿಮವಾಗಿ ಅದನ್ನು ಪೂರ್ಣಗೊಳಿಸಿತು. ಈ ಸಹಕಾರವು ಸತತ ಸರ್ಕಾರಗಳ ಅಡಿಯಲ್ಲಿ ಮುಂದುವರೆದಿದ್ದು, ಸುಮಾರು 6,000 ಪಾಕಿಸ್ತಾನಿ ಪೊಲೀಸ್ ಅಧಿಕಾರಿಗಳು ಈ ಯೋಜನೆಗೆ ಮತ್ತು ಇತರ ಯೋಜನೆಗಳಿಗೆ ಟರ್ಕಿಯಿಂದ ತರಬೇತಿ ಪಡೆದಿದ್ದಾರೆ ಎಂದು ತಿಳಿದುಬಂದಿದೆ.

ಸೈಬರ್ ಅಪರಾಧದ ವಿರುದ್ಧ ಸಹಕಾರದ ದ್ವಿಪಕ್ಷೀಯ ಒಪ್ಪಂದದ ಅಡಿಯಲ್ಲಿ ರಹಸ್ಯ ಕಾರ್ಯವನ್ನು ಮರೆಮಾಚಲಾಗಿದೆ. ವಾಸ್ತವವಾಗಿ ಇದು ಯುಎಸ್, ಭಾರತ ಮತ್ತು ಇತರ ವಿದೇಶಿ ಶಕ್ತಿಗಳು ಅನುಸರಿಸಿದ ಪ್ರಭಾವದ ಕಾರ್ಯಾಚರಣೆಗಳ ವಿರುದ್ಧವಾಗಿದೆ ಎಂದು ಯೋಜನೆಯ ಪರಿಚಿತ ಮೂಲಗಳು ಮಾಹಿತಿ ನೀಡಿವೆ. 
 

click me!