
ಕೆನಡ(ಅ.26): ವಿದ್ಯಾರ್ಥಿಯನ್ನು ಸರಿದಾರಿಯಲ್ಲಿ ಮುನ್ನಡೆಸಿ, ವಿದ್ಯೆ, ಬುದ್ಧಿ, ಶಿಸ್ತು ಕಲಿಸಿ ಉನ್ನತ ವ್ಯಕ್ತಿಯನ್ನಾಗಿ ಮಾಡುವ ಸಾಮರ್ಥ್ಯ ಇರುವುದು ಶಿಕ್ಷಕನಿಗೆ ಮಾತ್ರ. ಜೀವನ ರೂಪಿಸಿದ ಶಿಕ್ಷಕ ಅಥವಾ ಶಿಕ್ಷಕಿ ಎದುರಿಗೆ ಸಿಕ್ಕಾಗ ಆಗುವ ಆನಂದ ಅಷ್ಟಿಷ್ಟಲ್ಲ. ಹೀಗೆ ವಿಮಾನ ಸಿಬ್ಬಂದಿಗೆ ತನ್ನ ಶಿಕ್ಷಕಿ ಇದೇ ವಿಮಾನದಲ್ಲಿ ಪ್ರಯಾಣಿಸುತ್ತಿದ್ದಾರೆ ಅನ್ನೋದು ಗೊತ್ತಾಗಿದೆ. ತಕ್ಷಣವೇ ಸಿಬ್ಬಂದಿ ವಿಮಾನದಲ್ಲಿ ಅನೌನ್ಸ್ ಮಾಡಿದ್ದಾರೆ. ನನಗೆ ವಿದ್ಯೆ ಕಲಿಸಿದ, ತಿದ್ದಿ ತೀಡಿದ ಶಿಕ್ಷಕಿ ಇದೇ ವಿಮಾನದಲ್ಲಿ ಪ್ರಯಾಣಿಸುತ್ತಿದ್ದಾರೆ. 30 ವರ್ಷಗಳ ಬಳಿಕ ಅವರನ್ನು ಭೇಟಿಯಾಗುವ ಅವಕಾಶ ಸಿಕ್ಕಿದೆ ಎಂದಿದ್ದಾರೆ. ಬಳಿಕ ನೇರವಾಗಿ ಶಿಕ್ಷಕಿ ಕುಳಿತ ಜಾಗಕ್ಕೆ ತೆರಳಿ ಬಿಗಿದಪ್ಪಿದ್ದಾರೆ. ಶುಭಾಶಯ ವಿನಿಮಯ ಮಾಡಿದ್ದಾರೆ. ಈ ವಿಡಿಯೋ ಭಾರಿ ವೈರಲ್ ಆಗಿದೆ.
ಕೆನಡಾದ YYZ/LAX ವಿನಾನದಲ್ಲಿ ಈ ಸಮಾಗಮ ನಡೆದಿದೆ. ವೆಸ್ಟ್ ಜೆಟ್ ಸಿಬ್ಬಂದಿ ಲೋರಿ ವಿಮಾನದ ಒಳ ಬಂದು ಘೋಷಣೆ ಮಾಡಿದ್ದಾರೆ. ಆರಂಭದಲ್ಲಿ ಈ ಘೋಷಣೆ ಯಾರಿಗೂ ಅಚ್ಚರಿ ತಂದಿಲ್ಲ. ಕಾರಣ ವಿಮಾನದ ನಿಯಮಗಳು ಸೇರಿದಂತೆ ಇತರ ಮಾಹಿತಿಗಳ ಘೋಷಣೆ ಎಂದು ತಿಳಿದಿದ್ದಾರೆ. ಆದರೆ ಲೋರಿ ಮಾತು ಆರಂಭಿಸಿದಾಗ ಎಲ್ಲರ ಕುತೂಹಲ ಹೆಚ್ಚಾಯಿತು. ಇಂದು ಅಂತಾರಾಷ್ಟ್ರೀಯ ಶಿಕ್ಷಕರ ದಿನ. ನಮ್ಮ ಜೀವನ ಬದಲಿಸಿದ, ನೆಚ್ಚಿನ ಶಿಕ್ಷಕರನ್ನು ಗೌರವಿಸುವ ದಿನ. ಹೀಗೆ ನನ್ನ ಜೀವನದಲ್ಲಿ ಅತೀ ಹೆಚ್ಚು ಇಷ್ಟಪಟ್ಟ ನೆಚ್ಚಿನ ಶಿಕ್ಷಕಿಯನ್ನು ಬೇಟಿಯಾಗುವ ಅವಕಾಶ ಸಿಕ್ಕಿದೆ. ನಾನು ಭಾವುಕಳಾಗಿದ್ದೇನೆ. 1990ರ ದಶಕದಲ್ಲಿ ನನಗೆ ವಿದ್ಯೆ ಕಲಿಸಿದ ಮಿಸ್ ಒ ಕೊನೆಲ್ ಶಿಕ್ಷಕಿ ಇದೇ ವಿಮಾನದಲ್ಲಿ ಪ್ರಯಾಣಿಸುತ್ತಿದ್ದಾರೆ. 30 ವರ್ಷದ ಬಳಿಕ ಅವರನ್ನು ಭೇಟಿಯಾಗುತ್ತಿದ್ದೇನೆ ಎಂದು ಲೋರಿ ಅನೌನ್ಸ್ ಮಾಡಿದ್ದಾರೆ.
ಗಾಡಿ ನಿಲ್ಸ್ರೋ... ಬಸ್ ಅಡ್ಡ ಹಾಕಿ ಏರಲು ಬಂದ ಆನೆ : ವಿಡಿಯೋ ವೈರಲ್
1990ರ ಬಳಿಕ ನಾನು ನೆಚ್ಚಿನ ಶಿಕ್ಷಕಿಯನ್ನು ಭೇಟಿಯಾಗಿಲ್ಲ. ಈ ಟೀಚರ್ ಶೇಕ್ಸ್‌ಪಿಯರ್ ಮೇಲೆ ಪ್ರೀತಿ ಮೂಡುವಂತೆ ಮಾಡಿದರು. ಪಿಯಾನೋ ನುಡಿಸಲು ಕಲಿಸಿದರು. ನಾನು ಪಿಯಾನೋದಲ್ಲಿ ಮಾಸ್ಟರ್ ಮಾಡಿದ್ದೇನೆ. ನಿಮಗೆ ಧನ್ಯವಾದ ಎಂದು ಹೇಳಿದ ಲೋರಿ ಬಳಿಕ ನೇರವಾಗಿ ಟೀಚರ್ ಬಳಿ ತೆರಳಿದ್ದಾರೆ. ಈ ವೇಳೆ ವಿಮಾನದಲ್ಲಿದ್ದ ಪ್ರಯಾಣಿಕರು ಚಪ್ಪಾಳೆ ಮೂಲಕ ಅಭಿನಂದಿಸಿದ್ದಾರೆ. ಶಿಕ್ಷಕಿಯನ್ನು ಅಪ್ಪಿಕೊಂಡು ಭಾವುಕರಾಗಿದ್ದಾರೆ. ಈ ವೇಳೆ ಶಿಕ್ಷಕಿ ಕೊನೆಲ್ ಕೂಡ ಭಾವುಕರಾಗಿದ್ದಾರೆ.
ಈ ವಿಡಿಯೋ ಭಾರಿ ವೈರಲ್ ಆಗಿದೆ. 10 ಲಕ್ಷಕ್ಕೂ ಹೆಚ್ಚಿನ ವೀವ್ಸ್ ಕಂಡಿದೆ. ಶಿಕ್ಷಕರನ್ನು ಗುರುತಿಸುವುದು, ಅವರನ್ನು ಗೌರವಿಸುವುದು ಅತೀ ಮುಖ್ಯ ಎಂದು ಹಲವರು ಕಮೆಂಟ್ ಮಾಡಿದ್ದಾರೆ. ಈ ಸಮಾಗಮ ಸಂಭ್ರಮದಲ್ಲಿ ನಾವು ಪಾಲುದಾರಿಗಳಾಗುತ್ತೇವೆ ಎಂದು ಹಲವರು ಕಮೆಂಟ್ ಮಾಡಿದ್ದಾರೆ.
ಪುಟ್ಟ ಬಾಲಕನ ಕಿತಾಪತಿಗೆ ಅಪ್ಪನ ಕಾರು ಅಮ್ಮನ ಲಿಪ್‌ಸ್ಟಿಕ್ ಎರಡೂ ಢಮಾರ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ