ಟಾಟಾ ಡೀಲ್‌ನಿಂದ ಅಮೆರಿಕದ 10 ಲಕ್ಷ ಮಂದಿಗೆ ಉದ್ಯೋಗ..!

By Kannadaprabha News  |  First Published Feb 15, 2023, 6:14 AM IST

ಭಾರತದ ಟಾಟಾ ಕಂಪನಿಯು ಬೋಯಿಂಗ್‌ನಿಂದ 210 ವಿಮಾನ ಖರೀದಿಸುತ್ತಿರುವುದು ಅಮೆರಿಕದ 44 ರಾಜ್ಯಗಳಲ್ಲಿ 10 ಲಕ್ಷ ಜನರಿಗೆ ಉದ್ಯೋಗ ಕೊಡಿಸಲಿದೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಹರ್ಷಿಸಿದ್ದಾರೆ.


ವಾಷಿಂಗ್ಟನ್‌: ಭಾರತದ ಟಾಟಾ ಕಂಪನಿಯು ಬೋಯಿಂಗ್‌ನಿಂದ 210 ವಿಮಾನ ಖರೀದಿಸುತ್ತಿರುವುದು ಅಮೆರಿಕದ 44 ರಾಜ್ಯಗಳಲ್ಲಿ 10 ಲಕ್ಷ ಜನರಿಗೆ ಉದ್ಯೋಗ ಕೊಡಿಸಲಿದೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಹರ್ಷಿಸಿದ್ದಾರೆ.

ಅಮೆರಿಕದ ಬೋಯಿಂಗ್‌-ಟಾಟಾ ಒಡೆತನದ ಏರ್‌ ಇಂಡಿಯಾ ನಡುವಿನ ವಿಮಾನ ಖರೀದಿ ಒಪ್ಪಂದದ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಬೈಡೆನ್‌, ‘ಅಮೆರಿಕವು ವಿಮಾನ ಉತ್ಪಾದನೆಯಲ್ಲಿ (aircraft production)ವಿಶ್ವದಲ್ಲೇ ಮುಂಚೂಣಿಯಲ್ಲಿದೆ. ಇಂದು ಏರ್‌ ಇಂಡಿಯಾ ಹಾಗೂ ಬೋಯಿಂಗ್‌ ನಡುವೆ 200ಕ್ಕೂ ಅಧಿಕ ವಿಮಾನಗಳ ಖರೀದಿಗೆ ಐತಿಹಾಸಿಕ ಒಪ್ಪಂದವಾಗಿದೆ ಎಂದು ತಿಳಿಸಲು ಹೆಮ್ಮೆ ಎನ್ನಿಸುತ್ತಿದೆ. ಇದರಿಂದ ಅಮೆರಿಕದ 44 ರಾಜ್ಯಗಳಲ್ಲಿ 10 ಲಕ್ಷ ಉದ್ಯೋಗ ಸೃಷ್ಟಿಆಗಲಿವೆ’ ಎಂದಿದ್ದಾರೆ.

Tap to resize

Latest Videos

ಅಲ್ಲದೆ, ಅನೇಕರಿಗೆ 4 ರ್ಷಗಳ ಕಾಲೇಜು ಡಿಗ್ರಿ ಪಡೆವ ಅಗತ್ಯವಿಲ್ಲ ಎಂದೂ ಚಟಾಕಿ ಹಾರಿಸಿದ್ದಾರೆ. ಅಂದರೆ ಅಮೆರಿಕನ್ನರಿಗೆ ಬೇಗ ಉದ್ಯೋಗ ಲಭಿಸಲಿದೆ ಎಂಬರ್ಥದ ಹೇಳಿಕೆ ನೀಡಿದ್ದಾರೆ. ಈ ಒಪ್ಪಂದವು ಭಾರತ ಹಾಗೂ ಅಮೆರಿಕ ನಡುವಿನ ಬಲಿಷ್ಠ ಆರ್ಥಿಕ ಸಹಭಾಗಿತ್ವಕ್ಕೆ (strong economic partnership) ನಿದರ್ಶನ. ನರೇಂದ್ರ ಮೋದಿ ಅವರ ಜತೆಗೂಡಿ ಮೈತ್ರಿಯನ್ನು ಇನ್ನಷ್ಟು ಬಲಗೊಳಿಸುತ್ತೇನೆ. ಜಾಗತಿಕ ಸವಾಲುಗಳನ್ನು ಒಟ್ಟಾಗಿ ಎದುರಿಸಿ ನಮ್ಮ ನಾಗರಿಕರಿಗೆ ಉತ್ತಮ ಭವಿಷ್ಯ ಸೃಷ್ಟಿಸುತ್ತೇವೆ ಎಂದಿದ್ದಾರೆ.

ವಿಶ್ವದ ಅತಿದೊಡ್ಡ ವಿಮಾನ ಖರೀದಿ ಒಪ್ಪಂದ: 470 ವಿಮಾನಗಳಿಗೆ ಟಾಟಾ ಬಿಗ್‌ಡೀಲ್‌

ಏರ್‌ ಇಂಡಿಯಾ (Air India) ನೀಡಿರುವ ವಿಮಾನದ ಆರ್ಡರ್‌, ಡಾಲರ್‌ ಲೆಕ್ಕದಲ್ಲಿ ಬೋಯಿಂಗ್‌ನ 3ನೇ ಅತಿದೊಡ್ಡ ಹಾಗೂ ವಿಮಾನಗಳ ಸಂಖ್ಯೆ ಲೆಕ್ಕದಲ್ಲಿ 2ನೇ ಅತಿದೊಡ್ಡ ಮಾರಾಟವಾಗಿದೆ.

ಇಂಥ ದಿನ ಬರುತ್ತೆ ಅಂದುಕೊಂಡಿರಲಿಲ್ಲ

Aero India 2023 ಸೂಪರ್‌ಸಾನಿಕ್ ಏರ್‌ಕ್ರಾಫ್ಟ್‌ನಿಂದ ಹನುಮಾನ್ ಸ್ಟಿಕ್ಕರ್ ಮಾಯ!

ಭಾರತದ ಕಂಪನಿಯೊಂದು ಮಾಡುವ ಖರೀದಿಯಿಂದ ಅಮೆರಿಕದ 44 ರಾಜ್ಯಗಳಲ್ಲಿ 10 ಲಕ್ಷ ಉದ್ಯೋಗ ಸೃಷ್ಟಿಆಗಲಿದೆ ಎಂದು ಅಮೆರಿಕ ಅಧ್ಯಕ್ಷರು ಹೇಳಿಕೆ ನೀಡುವ ದಿನ ಬರುತ್ತೆ ಎಂದು ನಾನು ಅಂದುಕೊಂಡಿರಲಿಲ್ಲ.

- ಹರ್ಷ ಭೋಗ್ಲೆ, ಕ್ರಿಕೆಟ್‌ ವಿಶ್ಲೇಷಕ

click me!