
ಜಕಾರ್ತ(ಏ.18): ಇಂಡೋನೇಷ್ಯಾದ ದ್ವೀಪವೊಂದರಲ್ಲಿ ಬುಧವಾರ ಜ್ವಾಲಾಮುಖಿಯೊಂದು ಸ್ಪೋಟಗೊಂಡಿದೆ. ಪರಿಣಾಮ ಪರ್ವತದ ಸುತ್ತಮುತ್ತಲು ಇರುವ 11,000 ಜನರನ್ನು ಕೂಡಲೇ ಸ್ಥಳಾಂತರಮಾಡಲು ಇಲ್ಲಿನ ಇಂಡೋನೇಷ್ಯಾ ಸರ್ಕಾರ ಆದೇಶಿಸಿದೆ. ಜ್ವಾಲಾಮುಖಿಯಿಂದಾಗಿ ಯಾವುದೇ ಸಾವು ನೋವು ಸಂಭವಿಸಿಲ್ಲ.
ಇಂಡೋನೇಷ್ಯಾ ಉತ್ತರ ದಿಕ್ಕಿನಲ್ಲಿರುವ ಸುಲವೇಸಿ ದ್ವೇಪದರುವಾಂಗ್ ಪರ್ವತದಲ್ಲಿ ಜ್ವಾಲಮುಖಿ ಸ್ಫೋಟಗೊಂಡಿದೆ. ಈ ಜ್ವಾಲಾಮುಖಿ ಒಂದೇ ದಿನದಲ್ಲಿ ಐದು ಬಾರಿ ಜೋರಾಗಿ ಚಿಮ್ಮಿದೆ. ಪರ್ವತಕ್ಕೆ ಸಮುದ್ರ ಹೊಂದಿಕೊಂಡಿರುವ ಕಾರಣ ಸುನಾಮಿ ಸಂಭವಿಸುವ ಸಾಧ್ಯತೆ ಇದೆ ಎಂದು ಆಡಳಿತ ಜೋರಾದ ಎಚ್ಚರಿಕೆ ನೀಡಿದೆ. ಸಮುದ್ರದ ಉತ್ತರ ಬದಿಯಲ್ಲಿ ತಗುಲಂಡಂಗ್ ದ್ವೀಪದಲ್ಲಿರುವ 11,000 ಜನರನ್ನು ಸ್ಥಳಾಂತರ ಮಾಡುವಂತೆ ಜನರಿಗೆ ಪರ್ವತದಿಂದ 6 ಕಿ.ಮೀ.ದೂರದಲ್ಲಿರುವಂತೆ ಎಚ್ಚರಿಕೆ ನೀಡಿದೆ.
ಶಾಲೆಯಲ್ಲಿ ನಮಾಜ್ ಬ್ಯಾನ್, ಯುಕೆ ಹೈಕೋರ್ಟ್ ಮೆಟ್ಟಿಲೇರಿದ ವಿದ್ಯಾರ್ಥಿಗೆ ಹಿನ್ನಡೆ!
2018ರಲ್ಲಿ ಅನಾಕ್ ಕ್ರಕತಾವ್ ಜ್ವಾಲಾಮುಖಿ ಸ್ಪೋಟದಿಂದಾಗಿ ಸುನಾಮಿ ಎದ್ದು, 430 ಮಂದಿ ಸಾವನ್ನಪ್ಪಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ