
ನವದೆಹಲಿ (ಏ.17): ಟೆಸ್ಲಾ ಸಂಸ್ಥಾಪಕ ಹಾಗೂ ಸೋಶಿಯಲ್ ಮೀಡಿಯಾ ವೇದಿಕೆ ಎಕ್ಸ್‌ನ ಮಾಲೀಕ ಏಪ್ರಿಲ್ 21 ರಂದು ಭಾರತಕ್ಕೆ ಭೇಟಿ ನೀಡಲಿದ್ದಾರೆ. ಇದಕ್ಕೂ ಮುನ್ನವೇ ಪಾಕಿಸ್ತಾನ ತನ್ನ ದೇಶದಲ್ಲಿ ಎಕ್ಸ್‌ಅನ್ನು ತಾತ್ಕಾಲಿಕವಾಗಿ ಬ್ಯಾನ್ ಮಾಡಿದೆ. ಕಳೆದ ಫೆಬ್ರವರಿಯಿಂದಲೇ ಈ ಬ್ಯಾನ್ ಜಾರಿಗೆ ಬಂದಿದ್ದು, ಈವರೆಗೂ ಅದನ್ನು ತೆಗೆದುಹಾಕಿಲ್ಲ. ಪಾಕಿಸ್ತಾನದ ಆಂತರಿಕ ಸಚಿವಾಲಯವು ಬುಧವಾರ ರಾಷ್ಟ್ರೀಯ ಭದ್ರತಾ ಕಾಳಜಿಗಳ ಮೇಲೆ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಎಕ್ಸ್ ಅನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲು ಆದೇಶಿಸಿದೆ ಎಂದು ಹೇಳಿದೆ. ಭವಿಷ್ಯದಲ್ಲಿ ಪಾಕಿಸ್ತಾನದಲ್ಲಿ ಎಕ್ಸ್ ಶಾಶ್ವತವಾಗಿ ಬ್ಯಾನ್ ಆಗಬಹುದು ಎನ್ನುವ ಅನುಮಾನ ಕೂಡ ವ್ಯಕ್ತವಾಗಿದೆ. ಫೆಬ್ರವರಿ ಮಧ್ಯದಿಂದ ಪಾಕಿಸ್ತಾನದಲ್ಲಿ ಟ್ವಿಟರ್ ಎಂದು ಕರೆಯಲ್ಪಡುವ ಎಕ್ಸ್ಅನ್ನು ಬಳಸುವಲ್ಲಿ ಸಮಸ್ಯೆ ಎದುರಾಗುತ್ತಿದೆ ಎಂದು ಯೂಸರ್‌ಗಳು ವರದಿ ಮಾಡುತ್ತಿದ್ದಾರೆ. ಆದರೆ, ಪಾಕಿಸ್ತಾನ ಮಾತ್ರ ಈ ಕುರಿತಾಗಿ ಯಾವುದೇ ಪ್ರಕಟಣೆಯನ್ನು ಹೊರಡಿಸಿಲ್ಲ.
ಆಂತರಿಕ ಸಚಿವಾಲಯವು ಬುಧವಾರದಂದು ಲಿಖಿತ ನ್ಯಾಯಾಲಯದ ಸಲ್ಲಿಕೆಯಲ್ಲಿ ಎಕ್ಸ್‌ಗೆ ತಾತ್ಕಾಲಿಕ ಬ್ಯಾನ್ ಮಾಡಿರುವುದನ್ನು ಖಚಿತಪಡಿಸಿದೆ. "ಪಾಕಿಸ್ತಾನ ಸರ್ಕಾರದ ಕಾನೂನುಬದ್ಧ ನಿರ್ದೇಶನಗಳಿಗೆ ಬದ್ಧವಾಗಿರಲು ಎಕ್ಸ್ ವಿಫಲವಾದ ಕಾರಣ ಮತ್ತು ಅದರ ಪ್ಲಾಟ್‌ಫಾರ್ಮ್‌ನ ದುರುಪಯೋಗದ ಬಗ್ಗೆ ಕಾಳಜಿಯನ್ನು ತಿಳಿಸಲು ನಿಷೇಧವನ್ನು ಹೇರುವುದು ಅಗತ್ಯವಾಗಿದೆ ಎಂದು ಇಲ್ಲಿ ಉಲ್ಲೇಖಿಸುವುದು ಬಹಳ ಪ್ರಸ್ತುತವಾಗಿದೆ" ಎಂದು ವರದಿ ಮಾಡಲಾಗಿದೆ. ಈ ಕುರಿತಂತೆ ಎಕ್ಸ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಪ್ರಧಾನಿ ಮೋದಿ ಭೇಟಿಗೆ ಕಾತುರದಿಂದ ಕಾಯ್ತಿರುವೆ: ಎಲಾನ್ ಮಸ್ಕ್
ಶಸ್ತ್ರಚಿಕಿತ್ಸೆಯ 5 ತಿಂಗಳ ಬಳಿಕ ಜಿಮ್ ಗೆ ಮರಳಿದ ಜುಕರ್ ಬರ್ಗ್, ಮಸ್ಕ್ ಗೆ ಟಾಂಗ್ ನೀಡಲು ಮಾತ್ರ ಮರೆಯಲಿಲ್ಲ!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ