ಆರೆಸ್ಸೆಸ್‌ ಸೇರಿ 200 ಮಂದಿ ಹತ್ಯೆಗೆ ಪಾಕ್‌ನಿಂದ ಹೊಸ ಉಗ್ರ ಸಂಘಟನೆ!

By Suvarna NewsFirst Published Oct 17, 2021, 10:53 AM IST
Highlights

* ಭದ್ರತೆ, ಮಾಹಿತಿದಾರರು, ಮಾಧ್ಯಮ ಪ್ರತಿನಿಧಿಗಳೇ ಉಗ್ರರ ಟಾರ್ಗೆಟ್‌

* ಆರೆಸ್ಸೆಸ್‌ ಸೇರಿ 200 ಮಂದಿ ಹತ್ಯೆಗೆ ಪಾಕ್‌ನಿಂದ ಹೊಸ ಉಗ್ರ ಸಂಘಟನೆ 

ನವದೆಹಲಿ(ಅ.17): ಕಾಶ್ಮೀರದಲ್ಲಿ(Kashmir) ಉಗ್ರರು, ಭದ್ರತಾ ಸಿಬ್ಬಂದಿ, ಹಿಂದುಗಳು(Hindu) ಮತ್ತು ಸ್ಥಳೀಯೇತರರನ್ನು ಗುರಿಯಾಗಿಸಿ ಹತ್ಯೆ ಆರಂಭಿಸಿರುವ ಹೊತ್ತಿನಲ್ಲೇ, ಭಾರತವನ್ನು ಗುರಿಯಾಗಿಸಿಕೊಂಡೇ ಹೊಸ ಉಗ್ರ ಸಂಘಟನೆಯೊಂದನ್ನು ರಚಿಸಲು ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ(ISI) ಸಂಚು ರೂಪಿಸಿದ ಎಂಬ ಆಘಾತಕಾರಿ ಮಾಹಿತಿಯನ್ನು ಗುಪ್ತಚರ ಸಂಸ್ಥೆಗಳು ಕಲೆ ಹಾಕಿವೆ.

ಈ ಸಂಘಟನೆ ಮುಖಾಂತರ ಆರೆಸ್ಸೆಸ್‌(RSS), ಬಿಜೆಪಿ(BJP) ಮತ್ತು ಉದ್ಯಮಿಗಳು ಸೇರಿ 200 ಮಂದಿಯ ಹತ್ಯೆಯ ಸಂಚು ರೂಪಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಉಗ್ರರ ಪಟ್ಟಿಯಲ್ಲಿ ಜಮ್ಮು-ಕಾಶ್ಮೀರದಲ್ಲಿ ಭದ್ರತಾ ಸಿಬ್ಬಂದಿ, ರಕ್ಷಣಾ ಸಿಬ್ಬಂದಿಗೆ ಮಾಹಿತಿ ಪೂರೈಸುವವರು, ಸರ್ಕಾರಕ್ಕೆ ಹತ್ತಿರದ ಮಾಧ್ಯಮ ಪ್ರತಿನಿಧಿಗಳು, ಸ್ಥಳೀಯೇತರರು, ಕಾಶ್ಮೀರಿ ಪಂಡಿತರು ಸೇರಿದ್ದಾರೆ ಎಂದು ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿದೆ.

ಇತ್ತೀಚೆಗಷ್ಟೇ ಪಾಕಿಸ್ತಾನ ಆಕ್ರಮಿತ ಕಾಶ್ಮೀರದ(Kashmir) ಮುಜಾಫ್ಫರಬಾದ್‌ನಲ್ಲಿ ಸಣ್ಣ ಉಗ್ರ ಸಂಘಟನೆಗಳ ಮುಖ್ಯಸ್ಥರ ಜತೆ ಐಸ್‌ಐ ಸಭೆ ನಡೆಸಿದ್ದು, ಭಾರತದ ಯಾವೆಲ್ಲಾ ವ್ಯಕ್ತಿಗಳ ಮೇಲೆ ದಾಳಿ ನಡೆಸಬೇಕು ಮತ್ತು ಅವರ ವಾಹನಗಳ ಮಾಹಿತಿಗಳ ಕುರಿತು ಐಎಸ್‌ಐ ತಯಾರಿಸಿದ 200 ಮಂದಿಯ ಪಟ್ಟಿಯನ್ನು ಉಗ್ರರಿಗೆ ನೀಡಿರುವ ಸಾಧ್ಯತೆಯಿದೆ. ಈ ದಾಳಿಗಳಿಗೆ ಅಗತ್ಯವಿರುವ ಸಣ್ಣ-ಪುಟ್ಟಶಸ್ತ್ರಾಸ್ತ್ರಗಳು ಮತ್ತು ಗ್ರೈನೇಡ್‌ಗಳನ್ನು ಉರಿ ಮತ್ತು ತಂಗ್ದಾರ್‌ ಸೆಕ್ಟರ್‌ಗಳ ಮೂಲಕ ಕಳ್ಳ ಸಾಗಣೆ ನಡೆಯಲಿದೆ. ಈ ಕುರಿತಾಗಿ ಗಡಿಯಲ್ಲಿರುವ ಪೊಲೀಸ್‌ ಮತ್ತು ಭದ್ರತಾ ಸಿಬ್ಬಂದಿ ಅಗತ್ಯ ಭದ್ರತಾ ಕ್ರಮ ಕೈಗೊಳ್ಳುವಂತೆಯೂ ಭಾರತೀಯ ಗುಪ್ತಚರ ಎಚ್ಚರಿಕೆ ನೀಡಿದೆ.

click me!