ಸೋಲೊಪ್ಪಿಕೊಳ್ಳಲ್ಲ, ಮುಂದುವರೆದ ಟ್ರಂಪ್ ಚುನಾವಣಾ ಕ್ಯಾತೆ!

By Suvarna NewsFirst Published Nov 28, 2020, 4:48 PM IST
Highlights

ಅಮೆರಿಕಾದಲ್ಲಿ ಮುಂದುವರಿದ ಚುನಾವಣಾ ಕ್ಯಾತೆ| ಸೋಲೊಪ್ಪಿಕೊಳ್ಳಲ್ಲ ಎಂದು ಡೊನಾಲ್ಡ್ ಟ್ರಂಪ್ ಹಠ| 'ಚುನಾವಣಾ ಅಕ್ರಮ ನಡೆಸಿ ಜೋ ಬೈಡೆನ್‌ ಗೆದ್ದಿದ್ದಾರೆ'| ಜ.20ಕ್ಕೆ ಶ್ವೇತ ಭವನ ಬಿಟ್ಟು ಕೊಡುವೆ ಎಂದ ಟ್ರಂಪ್

ವಾಷಿಂಗ್ಟನ್(ನ.28): ಅಮೆರಿಕಾದ ಇತಿಹಾಸದಲ್ಲಿ ಡೊನಾಲ್ಡ್ ಟ್ರಂಪ್‌ನಂಥ ಅಧ್ಯಕ್ಷ ಬೇರಾರು ಇರಲಾರರು. ಅಮೆರಿಕಾದ ಚುನಾವಣೆ ಮುಗಿದಿದೆ. ಜೋ ಬೈಡೆನ್ ಮುಂದಿನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಆದರೆ ತಾನು ಮಾತ್ರ ಸೋಲನ್ನು ಒಪ್ಪಿಕೊಳ್ಳಲ್ಲ ಎಂದು ಟ್ರಂಪ್ ಹಠಹಿಡ್ದಿದ್ದಾರೆ.

ಕ್ಯಾಬಿನೆಟ್‌ ಸದಸ್ಯರ ಘೋಷಿಸಿದ ಅಮೆರಿಕ ಭಾವಿ ಅಧ್ಯಕ್ಷ ಬೈಡನ್‌: ಬ್ಲಿಂಕನ್ ವಿದೇಶಾಂಗ ಸಚಿವ!

ಚುನಾವಣೆಯಲ್ಲಿ ಅಕ್ರಮವಾಗಿದೆ, ಜೋ ಬೈಡೆನ್ ಮೋಸದಿಂದ ಗೆದ್ದಿದ್ದಾರೆ, ಇದು ನೂರಕ್ಕೆ ನೂರು ಶೇಕಡಾ ರಿಗ್ಗ್‌ಡ್ ಎಲೆಕ್ಷನ್ ಎಂದು ಮತ್ತೆ ಟ್ವೀಟ್ ಮಾಡಿದ್ದಾರೆ. ಟ್ರಂಪ್‌ ಹೇಳಿಕೆಯನ್ನು ಪ್ರಶ್ನಿಸಿದ ಪತ್ರಕರ್ತನ ಮೇಲೆ ಟ್ರಂಪ್ ರೇಗಾಡಿದ್ದಾರೆ.

ಇನ್ನೊಂದು ಕಡೆ, ತಾನು ಜ.20ಕ್ಕೆ ಶ್ವೇತಭವನವನ್ನು ಬಿಟ್ಟುಕೊಡುವುದಾಗಿಯೂ ಟ್ರಂಪ್ ಹೇಳಿದ್ದಾರೆ. ಆದರೆ, ಅಷ್ಟರವರೆಗೆ ಬಹಳಷ್ಟು ಬದಲಾವಣೆ ಆಗಲಿದೆ, ನೊಡುತ್ತಲಿರಿ ಎಂದೂ ಟ್ರಂಪ್ ಎಚ್ಚರಿಸಿರೋದು ಕುತೂಹಲ ಹುಟ್ಟುಹಾಕಿದೆ.

ಟ್ರಂಪ್‌ಗೆ ನೀಡಲಾದ ಪ್ರತಿಕಾಯ ಔಷಧ ಕೊರೋನಾಗೆ ಬಳಸಲು ಅಸ್ತು!

ಒಟ್ಟಾರೆಯಾಗಿ ಜೋ ಬೈಡೆನ್ ಅಧಿಕಾರ ಸ್ವೀಕರಿಸುವವರೆಗೆ ಅಮೆರಿಕಾದಲ್ಲಿ ಏನೇನಾಗುತ್ತೋ ಕಾದು ನೋಡ್ಬೇಕಷ್ಟೇ.

click me!