
ಇಸ್ಲಮಾಬಾದ್(ನ.27): ಮದುವೆ ಬಳಿಕ ವಧು ವರರಿಗೆ ಅತಿಥಿಗಳು ಹಾಗೂ ಕುಟುಂಬಸ್ಥರು ಏನಾದರೊಂದು ಗಿಫ್ಟ್ ಕೊಡುವುದು ಸಾಮಾನ್ಯ. ಆದರೆ ಯಾವುದಾದರೂ ಮದುವೆಯಲ್ಲಿ AK-47 ಗಿಫ್ಟ್ ಆಗಿ ಕೊಟ್ಟಿರುವ ಬಗ್ಗೆ ನೀವು ಯಾವತ್ತಾದರೂ ಕೇಳಿದ್ದೀರಾ? ಅರೆ.... ನಿಜಾನಾ? ಅನ್ನೋರು ಈ ಸುದ್ದಿ ಓದಲೇಬೇಕು.
ಹೌದು ಪಾಕಿಸ್ತಾನದಲ್ಲಿ ಈ ಘಟನೆ ನಡೆದಿದ್ದು, ಸದ್ಯ ಈ ವಿಡಿಯೋ ಭಾರೀ ವೈರಲ್ ಆಗಿದೆ. ಇಲ್ಲೊಂದು ಮದುವೆ ಕಾರ್ಯಕ್ರಮ ನಡೆದಿದ್ದು, ವರನ ಬಳಿ ಬಂದ ಮಹಿಳೆಯೊಬ್ಬಳು ಆತನ ಹಣೆಗೆ ಮುತ್ತಿಟ್ಟು, ಆತನಿಗೆ AK-47 ಗಿಫ್ಟ್ ಆಗಿ ನೀಡುತ್ತಾಳೆ. ಇದನ್ನು ಕಂಡು ಮದುವೆಗೆ ಆಗಮಿಸಿದ್ದ ಅತಿಥಿಗಳು ಖುಷಿಯಿಂದ ಕೂಗಾಡುತ್ತಾರೆ.
ಈ ವಿಡಿಯೋದಲ್ಲಿ ಮಹಿಳೆ ವರನನ್ನು ರಹನಾ ಎಂದು ಪದೇ ಪದೇ ಕರೆಯುತ್ತಿರುವುದನ್ನು ಕಾಣಬಹುದು. ಈ ವಿಡಿಯೋವನ್ನು ಟ್ವಿಟರ್‌ನಲ್ಲಿ ಶೇರ್ ಮಾಡಿರುವ ವ್ಯಕ್ತಿ'ನಮ್ಮ ಭಾವನೆಗಳೆಡೆ ಗಮನ ನೀಡುವ ಅತ್ತೆ ಸಿಗಬೇಕು' ಎಂದು ಬರೆದಿದ್ದಾರೆ. ಹೀಗಿದ್ದರೂ ಇದು ಯಾವಾಗ ನಡೆದ ಘಟನೆ ಎಂದು ಬರೆದಿಲ್ಲ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ