ಮೆಕ್ಸಿಕೋದ ಪಾರ್ಕ್‌ನಲ್ಲಿ ಖಾಲಿ ಬೆಂಚಿನಲ್ಲಿ ನಾಯಿಯೊಂದನ್ನು ಕಟ್ಟಲಾಗಿತ್ತು. ಮಾಲೀಕನೇ ಬಿಟ್ಟು ಹೋಗಿದ್ದ ನಾಯಿ ಬಚಾವಾಗಿದ್ದು ಹೇಗೆ...? ಇಲ್ಲಿ ಓದಿ
ಮೆಕ್ಸಿಕೋದ ಪಾರ್ಕ್ ಒಂದರಲ್ಲಿ ಖಾಲಿ ಬೆಂಚಿಗೆ ನಾಯಿಯೊಂದನ್ನು ಕಟ್ಟಲಾಗಿತ್ತು. ಒಂಟಿಯಾಗಿ ಸಪ್ಪೆಯಾಗಿ ಕುಳಿತಿದ್ದ ನಾಯಿಯ ಬಳಿ ಒಂದು ಪತ್ರವೂ ಇತ್ತು. ನಾಯಿಯ ಮೊದಲ ಮಾಲೀಕ ನಾಯಿಯನ್ನು ತಂದು ಕಟ್ಟಿ, ಆ ಬಗ್ಗೆ ಒಂದು ಪತ್ರವನ್ನೂ ಇಟ್ಟು ಹೋಗಿದ್ದ. ಬಹಳ ಬೇಸರದಿಂದ, ಒಲ್ಲದ ಮನಸಿನಿಂದ ನಾಯಿಯನ್ನು ಬಿಟ್ಟು ಹೋಗಿದ್ದ ಆತ ಅದರ ಬಗ್ಗೆ ಬರೆದಿದ್ದು ಹೀಗೆ..
ಈ ನಾಯಿಯನ್ನು ದತ್ತು ಸ್ವೀಕರಿಸಿ ಅದರ ಬಗ್ಗೆ ಕಾಳಜಿ ವಹಿಸಿ ಎಂದು ಕೆಳುತ್ತಿದ್ದೇನೆ. ನನ್ನ ನಾಯಿಯನ್ನು ಇಲ್ಲಿ ಬಿಟ್ಟು ಹೋಗಲು ಬೇಸರವಾಗುತ್ತದೆ. ಆದರೆ ನನ್ನ ಸಂಬಂಧಿಗಳು ನಾಯಿಯನ್ನು ಬಯ್ಯವುದರಿಂದ ನನಗೆ ಇದನ್ನು ಇಲ್ಲಿ ಬಿಡಬೇಕಾಗಿದೆ. ಅದನ್ನು ಬಯ್ಯುವುದನ್ನು ನೋಡಲು ನನ್ನಿಂದಾಗುತ್ತಿಲ್ಲ ಎಂದು ಬರೆಯಲಾಗಿದೆ.
undefined
ತನ್ನೆಲ್ಲ ಸೇವಿಂಗ್ಸ್ ಬೀದಿ ನಾಯಿಗಳಿಗಾಗಿ ವ್ಯಯಿಸಿದ ಮಹಿಳೆ..! ಇದಲ್ಲವೇ ಮಮತೆ
ನಿಮಗೆ ಇದನ್ನು ದತ್ತು ತೆಗೆದುಕೊಳ್ಳುವ ಮನಸ್ಸಾದರೆ ಇದನ್ನು ಕರೆದೊಯ್ದು ಸಾಕಿ. ಇಲ್ಲವಾದರೆ ಪತ್ರವನ್ನು ಅಲ್ಲೇ ಬಿಡಿ, ಬೇರೆ ಯಾರಾದರೂ ದತ್ತುತೆಗೆದುಕೊಳ್ಳಬಹುದು ಎಂದು ಬರೆದಿದ್ದಾರೆ. ಸ್ವಯಂ ಸೇವಕರು ಮತ್ತು ಪ್ರಾಣಿ ದಯಾ ಸಂಘಟನೆಯವರು ಬಂದು ನಾಯಿಯನ್ನು ರಕ್ಷಿಸಿದ್ದಾರೆ. ನಾಯಿಗೆ ಬಾಸ್ಟನ್ ಎಂದು ಹೆಸರನ್ನೂ ಇಡಲಾಗಿದೆ.