
ಇಸ್ಲಾಮಾಬಾದ್: ನೆರೆಯ ದೇಶ ಪಾಕಿಸ್ತಾನದಲ್ಲಿ ಹಿಂದೂಗಳು ಅಲ್ಪಸಂಖ್ಯಾತರಾಗಿದ್ದಾರೆ. ಪಾಕಿಸ್ತಾನದಲ್ಲಿ ಹಿಂದೂಗಳನ್ನು (Pakistan's Hindus) ಹೇಗೆ ನಡೆಸಿಕೊಳ್ಳಲಾಗುತ್ತೆ ಎಂಬುದರ ಕುರಿತಾದ ವಿಡಿಯೋ ಬೆಳಕಿಗೆ (Viral Video) ಬಂದಿದೆ. ಈ ವಿಡಿಯೋ ನೋಡಿದ್ಮೇಲೆ ಪಾಕಿಸ್ತಾದಲ್ಲಿ ಹಿಂದೂಗಳ ಸಾಮಾಜಿಕ ಸ್ಥಿತಿಗತಿ ಹೇಗಿದೆ ಎಂಬುದನ್ನು ತಿಳಿದುಕೊಳ್ಳಬಹುದಾಗಿದೆ. ಓರ್ವ ವ್ಲಾಗರ್ ಪಾಕಿಸ್ತಾನದ ಅಂಗಡಿಯೊಂದಕ್ಕೆ ತೆರಳಿ ಅಲ್ಲಿ ವಿಡಿಯೋ ಮಾಡಿದ್ದು, ಸದ್ಯ ಭಾರತದಲ್ಲಿ ವೈರಲ್ ಆಗುತ್ತಿದೆ. ಈ ಅಂಗಡಿಯಲ್ಲಿ ಮುಸ್ಲಿಮೇತರ ಗ್ರಾಹಕರೊಂದಿಗೆ ಹೇಗೆ ನಡೆದುಕೊಳ್ಳಲಾಗುತ್ತೆ ಎಂಬುದನ್ನು ಮಾಲೀಕ ಹೇಳಿದ್ದಾನೆ. ಅಂಗಡಿ ಮಾಲೀಕನ ಮಾತು ಕೇಳಿದ್ರೆ ಒಂದು ಕ್ಷಣ ನಿಮಗೂ ಶಾಕ್ ಆಗುತ್ತದೆ.
ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಓರ್ವ ವ್ಲಾಗರ್ ಪಾಕಿಸ್ತಾನದ ಗ್ರಾಮವೊಂದರ ಅಂಗಡಿಗೆ ಹೋಗುತ್ತಾನೆ. ಈ ಅಂಗಡಿಯಲ್ಲಿ ಸಿಗುವ ಸಮೋಸಾ ಮತ್ತು ಪಕೋಡಾ ತುಂಬಾ ರುಚಿಯಾಗಿರುತ್ತದೆ ಎಂದು ಹೇಳುತ್ತಾನೆ. ಈ ವಿಡಿಯೋದಲ್ಲಿ ಅಂಗಡಿಗೆ ಬರುವ ಮುಸ್ಲಿಮೇತರಿಗೆ ಪ್ರತ್ಯೇಕ ಪಾತ್ರೆಗಳನ್ನು ಬಳಸಲಾಗುತ್ತಿರುವ ವಿಷಯ ಗಮನಕ್ಕೆ ಬರುತ್ತದೆ. ಮುಸ್ಲಿಮೇತರಿಗೆ ಯಾಕೆ ಪ್ರತ್ಯೇಕ ತಟ್ಟೆಗಳನ್ನು ಬಳಸಲಾಗುತ್ತೆ ಎಂಬುದರ ಬಗ್ಗೆ ಅಂಗಡಿ ಮಾಲೀಕ ತನ್ನದೇ ರೀತಿಯಲ್ಲಿ ಸ್ಪಷ್ಟನೆಯನ್ನು ನೀಡಿದ್ದಾನೆ.
ವೈರಲ್ ಆಗಿರುವ ವಿಡಿಯೋವನ್ನು ಕೈಲಾಶ್ ರೀಲ್ ಹೆಸರಿನ ಫೇಸ್‌ಬುಕ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. 3 ನಿಮಿಷ 10 ಸೆಕೆಂಡಿನ ಈ ವಿಡಿಯೋ ಇದುವರೆಗೂ 4 ಲಕ್ಷಕ್ಕೂ ಅಧಿಕ ವ್ಯೂವ್, ಸಾವಿರಕ್ಕೂ ಅಧಿಕ ಕಮೆಂಟ್‌ಗಳನ್ನು ಪಡೆದುಕೊಂಡಿದೆ. 9.5 ಸಾವಿರಕ್ಕೂ ಅಧಿಕ ಲೈಕ್ಸ್ ಈ ವಿಡಿಯೋಗೆ ಸಿಕ್ಕಿದೆ. ಪಾಕಿಸ್ತಾನದಲ್ಲಿ ಇಷ್ಟೊಂದು ತಾರತಮ್ಯ ಮಾಡಲಾಗುತ್ತಾ? ಭಾರತದಲ್ಲಿಈ ಹಿಂದೆ ಅಸ್ಪಶೃತೆ ಎಂಬ ಸಾಮಾಜಿಕ ಪಿಡುಗು ಇತ್ತು. ಆದ್ರೆ ಈ ಅನಿಷ್ಠ ಪದ್ಧತಿ ಇನ್ನು ಪಾಕಿಸ್ತಾನದಲ್ಲಿ ಜೀವಂತವಾಗಿದೆ ಅಲ್ಲವಾ ಎಂದು ನೆಟ್ಟಿಗರು ಬೇಸರ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಬುರ್ಖಾದೊಳಗೆ ಕೈಹಾಕಿದಷ್ಟೂ ಉದುರಿದ ಲಕ್ಷಾಂತರ ಮೌಲ್ಯದ ಕದ್ದ ವಸ್ತು- ವಿಡಿಯೋ ನೋಡಿದವರು ಸುಸ್ತೋ ಸುಸ್ತು!
ವೈರಲ್ ವಿಡಿಯೋದಲ್ಲಿ ಏನಿದೆ?
ಅಂಗಡಿ ಮಾಲೀಕನ ಹೆಸರು ಜಾಫರ್ ಹುಸೇನ್. ಅಂಗಡಿಗೆ ಹೊರಗೆ ಮುಸ್ಲಿಮೇತರಿಗಾಗಿ ಪ್ರತ್ಯೇಕ ಪಾತ್ರೆಗಳನ್ನು ಇರಿಸಿದ್ದೇವೆ ಎಂದು ಹೇಳುತ್ತಾರೆ. ಇದಕ್ಕೆ ವ್ಲಾಗರ್ ಹೊರಗೆ ಹೋಗಿ ಪಾತ್ರೆಗಳನ್ನು ನೋಡುತ್ತಾನೆ. ಪಾತ್ರೆಗಳು ಸ್ವಚ್ಛವಾಗಿದ್ದು, ಇವುಗಳನ್ನು ನಮಗೆ ತೊಳೆದುಕೊಡ್ತೀರಾ ಎಂದು ಕೇಳುತ್ತಾರೆ. ಇದಕ್ಕೆ ಅಂಗಡಿ ಮಾಲೀಕ, ನೀವೇ ತೊಳೆದುಕೊಳ್ಳಬೇಕು ಮತ್ತು ತಿಂದ ನಂತರ ತೊಳೆದಿಟ್ಟು ಇಡಬೇಕು ಎಂದು ಅಂಗಡಿ ಮಾಲೀಕ ಜಾಫರ್ ಹುಸೇನ್ ಹೇಳುತ್ತಾನೆ.
ನಮ್ಮ ಅಂಗಡಿಗೆ ಬರುವ ಮುಸ್ಲಿಮೇತರ ಗ್ರಾಹಕರು ಸಮೋಸ, ಪಕೋಡ ತಿಂದ ಬಳಿಕ ತಮ್ಮ ತಟ್ಟೆಯನ್ನು ತೊಳೆದಿಟ್ಟು ಹೋಗುತ್ತಾರೆ. ಇಲ್ಲಿ ನೀವು ಏನೇ ತಿಂದರೂ ತಟ್ಟೆಯನ್ನು ನೀವೇ ತೊಳೆದಿಡಬೇಕು ಎಂದು ವ್ಲಾಗರ್‌ಗೆ ಅಂಗಡಿ ಮಾಲೀಕ ಹೇಳುತ್ತಾನೆ. ನಮ್ಮ ಮತ್ತು ಹಿಂದೂಗಳ ನಡುವಿನ ಆಚರಣೆಯಲ್ಲಿ ತುಂಬಾ ವ್ಯತ್ಯಾಸವಿದೆ. ಈ ವ್ಯತ್ಯಾಸದಿಂದಾಗಿ ನಾವು ಈ ರೀತಿ ನಡೆದುಕೊಳ್ಳುತ್ತವೆ. ಕೆಲವರು ಮುಸ್ಲಿಮೇತರೊಂದಿಗೆ ಜೊತೆಯಾಗಿ ಆಹಾರ ಸೇವಿಸುತ್ತಾರೆ. ಅದು ಅವರ ಇಷ್ಟ. ಆದ್ರೆ ನಮ್ಮ ಮನಸ್ಸು ಇದಕ್ಕೆ ಒಪ್ಪಲ್ಲ ಎಂದು ಜಾಫರ್ ಹುಸೇನ್ ಹೇಳುತ್ತಾರೆ. ಕೊನೆಗೆ ವ್ಲಾಗರ್ ನಾವು ಪಕೋಡ ತಿನ್ನುತ್ತೇವೆ ಎಂದು ಹೇಳುತ್ತಾನೆ. ಇಲ್ಲಿಗೆ ಬಂದ ಗ್ರಾಹಕ, ಜಾಫರ್ ಹುಸೇನ್ ಅವರ ಸಮೋಸ ಮತ್ತು ಪಕೋಡ ತುಂಬಾ ರುಚಿಯಾಗಿರುತ್ತವೆ ಎಂದು ಹೇಳುತ್ತಾರೆ.
ಇದನ್ನೂ ಓದಿ: ವಲ್‌ರಸ್‌ಗೆ ಬಿಗ್ ಬರ್ತ್‌ಡೇ ಬ್ಯಾಶ್: ಚೀನಾದ ಝೂ ವೀಡಿಯೋ ಸಖತ್ ವೈರಲ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ