3.5 ಲಕ್ಷ ಸೈನಿಕರ ಆಫ್ಘನ್‌ ಪಡೆ 75,000 ಉಗ್ರರಿಗೆ ಸೋತಿದ್ದೇಕೆ?

By Kannadaprabha NewsFirst Published Aug 17, 2021, 8:26 AM IST
Highlights

* ಅಫ್ಘಾನಿಸ್ತಾನದ ಸೈನಿಕ ಬಲ 2.5 ಲಕ್ಷ

* ಪೊಲೀಸರನ್ನೂ ಸೇರಿಸಿದರೆ ಅದರ ಸಂಖ್ಯೆ 3.5 ಲಕ್ಷ 

* 60 ಸಾವಿರದಿಂದ 75 ಸಾವಿದಷ್ಟಿರುವ ತಾಲಿಬಾನಿಗಳಿಗೆ ಸೇನೆಗೆ ಶರಣು

ಕಾಬೂಲ್‌(ಆ.17): ಅಫ್ಘಾನಿಸ್ತಾನದ ಸೈನಿಕ ಬಲ 2.5 ಲಕ್ಷದಷ್ಟಿದೆ. ಪೊಲೀಸರನ್ನೂ ಸೇರಿಸಿದರೆ ಅದರ ಸಂಖ್ಯೆ 3.5 ಲಕ್ಷ ಮೀರುತ್ತದೆ. ಆದರೂ 60 ಸಾವಿರದಿಂದ 75 ಸಾವಿದಷ್ಟಿರುವ ತಾಲಿಬಾನಿಗಳಿಗೆ ಸೇನೆ ಶರಣಾಗಿದೆ.

ಕಳೆದ 2 ದಶಕಗಳಿಂದ ಅಮೆರಿಕ ಆಫ್ಘನ್‌ ಸೇನೆಯ ಮೇಲೆ 65 ಲಕ್ಷ ಕೋಟಿಗಳನ್ನು ಖರ್ಚು ಮಾಡಿದೆ. ಆದರೆ 20 ವರ್ಷಗಳಿಂದ ತಾಲಿಬಾನಿಗಳನ್ನು ಸೋಲಿಸಲು ಆಫ್ಘನ್‌ ಸೇನೆಗೆ ಸಾಧ್ಯವಾಗಿಲ್ಲ ಇದಕ್ಕೆ ಕಾರಣ ಅಲ್ಲಿ ತುಂಬಿರುವ ಭ್ರಷ್ಟಾಚಾರ ಮತ್ತು ಸ್ವೇಚ್ಚೆ . ಬೇಕೆಂದಾಗ ಕೆಲಸ ತೊರೆದು ಹೋಗುವ ಸೈನಿಕರನನ್ನು ನಿಯಂತ್ರಿಸುವ ಶಕ್ತಿ ಆಫ್ಘನ್‌ ಸರ್ಕಾರಕ್ಕೆ ಇರಲಿಲ್ಲ.

ಅಫ್ಘಾನಿಸ್ತಾನದಲ್ಲಿದ್ದ ಭ್ರಷ್ಟಾಚಾರ ಮತ್ತು ಅರಾಜಕತೆ ಆಫ್ಘನ್‌ ಸೇನೆಯ ಸೋಲಿಗೆ ಕಾರಣವಾಗಿದೆ. ತಾಲಿಬಾನಿಗಳನ್ನು ಸೋಲಿಸಲು ಆಫ್ಘನ್‌ ವಾಯುಪಡೆ ಹೆಣಗಾಡುತ್ತಿತ್ತು. ಆಷ್ಘಾನಿಸ್ತಾನದಲ್ಲಿ ಅಧಿಕಾರ ಪಡೆಯುವ ಪ್ರೇರಣೆ ಹೊಂದಿದ್ದ ತಾಲಿಬಾನಿಗಳು ಆಫ್ಘನ್‌ ಸೇನೆಯ ವಿರುದ್ಧ ಜಯಗಳಿಸಿದರು.

Video: ಸ್ಮಶಾನಗಳ ಸಾಮ್ರಾಜ್ಯ ಅಫ್ಘಾನ್: ಕಾಬೂಲ್ ಏರ್‌ಪೋರ್ಟ್‌ನಲ್ಲಿ ಶವವಾದ ನಾಗರಿಕರು!

ಆಫ್ಘನ್‌ನಲ್ಲಿ ಆಗಿದ್ದೇನು?

2001ರಲ್ಲಿ ಅಮೆರಿಕದ ಮೇಲೆ ಉಗ್ರರು ಭೀಕರ ದಾಳಿ ನಡೆಸಿದ ನಂತರ ಅವರ ಹುಟ್ಟಡಗಿಸಲು ಅಮೆರಿಕವು ಅಷ್ಘಾನಿಸ್ತಾನಕ್ಕೆ ತನ್ನ ಸೇನೆ ಕಳುಹಿಸಿತ್ತು. ಕ್ರಮೇಣ ಅಲ್ಲಿದ್ದ ತಾಲಿಬಾನ್‌ ಉಗ್ರರ ಆಡಳಿತವನ್ನು ಅಂತ್ಯಗೊಳಿಸಿ ಪ್ರಜಾಪ್ರಭುತ್ವ ಸ್ಥಾಪಿಸಲು ನೆರವು ನೀಡಿತ್ತು. ಸತತ 20 ವರ್ಷ ಅಮೆರಿಕ ಸೇನೆ ಕಾರ್ಯಾಚರಣೆ ನಡೆಸಿದರೂ ಉಗ್ರರ ನಿರ್ನಾಮ ಸಾಧ್ಯವಾಗಲಿಲ್ಲ. ಈ ಹಿನ್ನೆಲೆಯಲ್ಲಿ ಅಮೆರಿಕ ಈ ವರ್ಷ ತನ್ನ ಸೇನೆಯನ್ನು ಸಂಪೂರ್ಣ ಹಿಂದಕ್ಕೆ ಕರೆಸಿಕೊಳ್ಳುತ್ತಿದೆ. ಕೆಲ ತಿಂಗಳ ಹಿಂದೆ ಆ ಬಗ್ಗೆ ಘೋಷಣೆ ಮಾಡಿದ ಬೆನ್ನಲ್ಲೇ ತಾಲಿಬಾನ್‌ ಉಗ್ರರು ಮತ್ತೆ ಚಿಗಿತುಕೊಂಡು, ಆಫ್ಘನ್‌ನ ಒಂದೊಂದೇ ಪ್ರಾಂತ್ಯ ವಶಪಡಿಸಿಕೊಂಡು, ಈಗ ಇಡೀ ದೇಶವನ್ನು ತೆಕ್ಕೆಗೆ ತೆಗೆದುಕೊಂಡಿದ್ದಾರೆ.
ಸ್ಥಳವಿಲ್ಲದಿದ್ದರೂ ವಿಮಾನವೇರಿದ ಅಫ್ಘನ್ನರು: ಟೇಕ್‌ ಆಫ್ ಆಗ್ತಿದ್ದಂತೆಯೇ ಮೂವರು ಕೆಳಕ್ಕೆ!

ಮುಂದೇನಾಗಲಿದೆ?

ಅಷ್ಘಾನಿಸ್ತಾನದ ಹಾಲಿ ಅಧ್ಯಕ್ಷ ಅಶ್ರಫ್‌ ಘನಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಿ, ಪಕ್ಕದ ತಜಿಕಿಸ್ತಾನಕ್ಕೆ ವಿಮಾನದಲ್ಲಿ ಪಲಾಯನ ಮಾಡಿದ್ದಾರೆ. ಹೀಗಾಗಿ ದೇಶದಲ್ಲಿ ಮಧ್ಯಂತರ ಸರ್ಕಾರ ರಚನೆ ಸಾಧ್ಯತೆ ಇದೆ. ಇಲ್ಲದೇ ಹೋದಲ್ಲಿ ತಾಲಿಬಾನ್‌ ಉಗ್ರರ ಕಮಾಂಡರ್‌ ಮುಲ್ಲಾ ಅಬ್ದುಲ್‌ ಘನಿ ನೇತೃತ್ವದಲ್ಲಿ ಪೂರ್ಣ ಪ್ರಮಾಣದ ಹೊಸ ಸರ್ಕಾರ ರಚನೆಯಾಗಬಹುದು. ಈ ಸರ್ಕಾರಕ್ಕೆ ಭಾರತ, ಅಮೆರಿಕ ಸೇರಿದಂತೆ ಜಗತ್ತಿನ ಪ್ರಮುಖ ದೇಶಗಳು ಮಾನ್ಯತೆ ನೀಡುವುದಿಲ್ಲ ಎಂದು ಈಗಾಗಲೇ ಘೋಷಿಸಿದೆ.

click me!