ವಾರ್ಷಿಕ ಆದಾಯ ಕನಿಷ್ಠ 12,000 ಕೋಟಿ ರು.: ತಾಲಿಬಾನಿಯರ ಹಣದ ಮೂಲ ಎಲ್ಲಿದೆ?

By Kannadaprabha NewsFirst Published Aug 17, 2021, 7:36 AM IST
Highlights

* ಮಾದಕ ವಸ್ತು, ಅಕ್ರಮ ಗಣಿಗಾರಿಕೆ, ಸುಲಿಗೆಯಿಂದ ಭಾರೀ ಹಣ

* ತಾಲಿಬಾನಿಗಳ ವಾರ್ಷಿಕ ಆದಾಯ ಕನಿಷ್ಠ 12000 ಕೋಟಿ ರು.

ಕಾಬೂಲ್‌(ಆ.17): ಒಂದು ದೇಶದ ಆಡಳಿತ ವ್ಯವಸ್ಥೆಯನ್ನೇ ಅಂತ್ಯಗೊಳಿಸಿ ಆ ದೇಶದ ಅಧಿಕಾರದ ಚುಕ್ಕಾಣಿ ಹಿಡಿಯುವಷ್ಟುಸಾಮಥ್ರ್ಯವನ್ನು ತಾಲಿಬಾನ್‌ ಸಂಪಾದಿಸಿದೆ. ಹಾಗಿದ್ದರೆ ಇಂಥ ಒಂದು ವ್ಯವಸ್ಥೆ ರೂಪಿಸಿಕೊಳ್ಳಲು ಅಗತ್ಯವಿರುವ ಸಂಪತ್ತು ತಾಲಿಬಾನ್‌ ಉಗ್ರ ಸಂಸ್ಥೆಗೆ ಎಲ್ಲಿಂದ ಬಂತು ಎಂಬ ಪ್ರಶ್ನೆ ಉದ್ಭವಿಸುತ್ತದೆ.

Video: ಸ್ಮಶಾನಗಳ ಸಾಮ್ರಾಜ್ಯ ಅಫ್ಘಾನ್: ಕಾಬೂಲ್ ಏರ್‌ಪೋರ್ಟ್‌ನಲ್ಲಿ ಶವವಾದ ನಾಗರಿಕರು!

ತಾಲಿಬಾನ್‌ ಭಯೋತ್ಪಾದಕ ಸಂಸ್ಥೆಯು ತನ್ನ ಸಂಪತ್ತಿನ ಕ್ರೋಢಿಕರಣಕ್ಕಾಗಿ ಜನ ಸಾಮಾನ್ಯರ ನಿಧಿಯ ಮೇಲೆ ಅವಲಂಬನೆಯಾಗಿಲ್ಲ. ಬದಲಾಗಿ ಅಕ್ರಮ ಗಣಿಗಾರಿಕೆ, ಅಕ್ರಮ ಮಾದಕ ದ್ರವ್ಯಗಳ ಮಾರಾಟ, ಸುಲಿಗೆ, ಅಪಹರಣ, ಖನಿಜ ಸಂಪತ್ತುಗಳ ಶೋಧನೆ ಮತ್ತು ಆಷ್ಘಾನಿಸ್ತಾನದಲ್ಲಿ ತಮ್ಮ ವ್ಯಾಪ್ತಿಯಲ್ಲಿರುವ ಜನರಿಂದ ತೆರಿಗೆ ಸಂಗ್ರಹದ ಮೂಲಕ ತಾಲಿಬಾನ್‌ ಸಂಪತ್ತು ಕ್ರೋಢಿಕರಿಸುತ್ತಿದೆ.

ದಶಕಗಳಿಂದ ತನ್ನ ವಶದಲ್ಲೇ ಇರುವ ಪ್ರಾಂತ್ಯಗಳಲ್ಲಿ ಸ್ವತಃ ತಾಲಿಬಾನಿಗಳೇ ಹೆರಾಯಿನ್‌ ಉತ್ಪಾದಿಸಲು ಅಗತ್ಯವಾದ ಕೃಷಿ ನಡೆಸುತ್ತಾರೆ. ಅಂದಾಜಿನ ಪ್ರಕಾರ, 2.24 ಲಕ್ಷ ಹೆಕ್ಟೇರ್‌ ಜಾಗದಲ್ಲಿ ತಾಲಿಬಾನಿಗಳು ಅಫೀಮು, ಹೆರಾಯಿನ್‌ ಉತ್ಪಾದನೆಗೆ ಅಗತ್ಯವಾದ ಗಿಡಗಳನ್ನು ಬೆಳೆಯುತ್ತಿದ್ದಾರೆ. ಈ ಅಕ್ರಮ ಚಟುವಟಿಕೆಗಳ ಮುಖಾಂತರ 2020ರಲ್ಲಿ ತಾಲಿಬಾನ್‌ ಉಗ್ರ ಸಂಸ್ಥೆ ವಾರ್ಷಿಕ 1.6 ಬಿಲಿಯನ್‌ ಡಾಲರ್‌(11,866 ಕೋಟಿ ರು.) ಎಂಬ ವಿಚಾರ ವಿಶ್ವಸಂಸ್ಥೆಯ ವರದಿಯೊಂದರಿಂದ ತಿಳಿದುಬಂದಿದೆ.

ಈ ಹಣದಿಂದಲೇ ತನ್ನ ಸೈನಿಕರಿಗೆ ವೇತನ ನೀಡುತ್ತಿರುವ ತಾಲಿಬಾನ್‌ ಸಂಸ್ಥೆಯಲ್ಲಿ ಪ್ರಸ್ತುತ 55,000-85000 ಉಗ್ರ ಸದಸ್ಯರಿದ್ದಾರೆ.

ಸ್ಥಳವಿಲ್ಲದಿದ್ದರೂ ವಿಮಾನವೇರಿದ ಅಫ್ಘನ್ನರು: ಟೇಕ್‌ ಆಫ್ ಆಗ್ತಿದ್ದಂತೆಯೇ ಮೂವರು ಕೆಳಕ್ಕೆ!

ಯಾವ ವಲಯದಿಂದ ಎಷ್ಟು ಹಣ ಸಂಗ್ರಹ?

ಅಕ್ರಮ ಗಣಿಗಾರಿಕೆಯಿಂದ ವಾರ್ಷಿಕ 3441 ಕೋಟಿ ರು.

ಅಕ್ರಮ ಅಫೀಮು ಮಾರಾಟದಿಂದ 3411 ಕೋಟಿ ರು.

ಅಪಹರಣ, ಸುಲಿಗೆ, ಖನಿಜ ಸಂಪತ್ತುಗಳಿಂದಲೂ ಹಣ

click me!