ನಡುನೀರಲ್ಲಿ ಕೈಬಿಟ್ಟ ಅಮೆರಿಕ: ಇಡೀ ದೇಶ ಉಗ್ರರಿಗೆ ಧಾರೆಯೆರೆದು ಕೊಟ್ಟ ದೊಡ್ಡಣ್ಣ!

By Kannadaprabha NewsFirst Published Aug 17, 2021, 7:29 AM IST
Highlights

* ಅಷ್ಘಾನಿಸ್ತಾನ ಮರಳಿ ತಾಲಿಬಾನ್‌ ಉಗ್ರರ ತೆಕ್ಕೆಗೆ

* ಅಮೆರಿಕದ ವಿರುದ್ಧ ಜಾಗತಿಕ ಮಟ್ಟದಲ್ಲಿ ಭಾರೀ ಆಕ್ರೋಶ

* ಇರಾಕ್‌ನಲ್ಲಿ ಮಾಡಿದ ತಪ್ಪನ್ನೇ ಅಷ್ಘಾನಿಸ್ತಾನದಲ್ಲೂ ಅಮೆರಿಕ ಮಾಡಿದೆ 

ವಾಷಿಂಗ್ಟನ್‌(ಆ.17): ಅಷ್ಘಾನಿಸ್ತಾನ ಮರಳಿ ತಾಲಿಬಾನ್‌ ಉಗ್ರರ ತೆಕ್ಕೆಗೆ ಸೇರಿದ ಬೆನ್ನಲ್ಲೇ ಅಮೆರಿಕದ ವಿರುದ್ಧ ಜಾಗತಿಕ ಮಟ್ಟದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ. ವಿಶ್ವ ವಾಣಿಜ್ಯ ಕಟ್ಟಡದ ಮೇಲಿನ 2011ರ ದಾಳಿಯ ಸೇಡು ತೀರಿಸಿಕೊಳ್ಳಲು ಏಕಾಏಕಿ ಅಷ್ಘಾನಿಸ್ತಾನದ ಮೇಲೆ ದಾಳಿ ಮಾಡಿ, ಸತತ 20 ವರ್ಷ ಅಲ್ಲೇ ಸೇನೆಯನ್ನು ಇರಿಸಿದ್ದ ಅಮೆರಿಕ ಇದೀಗ ಯಾವುದೇ ಪೂರ್ವ ಯೋಜನೆ ಇಲ್ಲದೆಯೇ ಹಿಂಪಡೆದಿದೆ. ತನ್ಮೂಲಕ ಬಡ ದೇಶವನ್ನು ಉಗ್ರರ ಕೈಗೆ ಒಪ್ಪಿಸಿ ಹೋಗುತ್ತಿರುವುದಕ್ಕೆ ಟೀಕೆ ವ್ಯಕ್ತವಾಗಿದೆ. ಈ ಹಿಂದೆ ಇರಾಕ್‌ನಲ್ಲಿ ಮಾಡಿದ ತಪ್ಪನ್ನೇ ಅಷ್ಘಾನಿಸ್ತಾನದಲ್ಲೂ ಅಮೆರಿಕ ಮಾಡಿದೆ ಎಂದು ವಿದೇಶಾಂಗ ನೀತಿ ನಿರೂಪಕರು ಛೀಮಾರಿ ಹಾಕಿದ್ದಾರೆ.

Video: ಸ್ಮಶಾನಗಳ ಸಾಮ್ರಾಜ್ಯ ಅಫ್ಘಾನ್: ಕಾಬೂಲ್ ಏರ್‌ಪೋರ್ಟ್‌ನಲ್ಲಿ ಶವವಾದ ನಾಗರಿಕರು!

ಕೇವಲ ಅಮೆರಿಕದ ಅಧ್ಯಕ್ಷರ ಹಿತಾಸಕ್ತಿಯನ್ನು ಮಾತ್ರವೇ ಕಾಪಾಡಬಹುದಾದ ಇಂಥ ನೀತಿಗಳು ಬಡ ದೇಶಗಳ ಪಾಲಿಗೆ ಅದೆಷ್ಟುಮಾರಕ ಎಂಬುದು ಎರಡೂ ಘಟನೆಗಳಲ್ಲಿ ಸಾಬೀತಾಗಿದೆ. ವಿಶ್ವದ ಅತ್ಯಂತ ಶಕ್ತಿಶಾಲಿ ದೇಶವೊಂದು, ತಾನು ತಾಳಕ್ಕೆ ತಕ್ಕಂತೆ ಕುಣಿಸಿ ದಯನೀಯ ಸ್ಥಿತಿಗೆ ತಳ್ಳಿದ ದೇಶವೊಂದನ್ನು ಹೀಗೆ ನಡುನೀರಿನಲ್ಲಿ ಬಿಟ್ಟು ಹೋಗುವುದು ಎಷ್ಟುಸರಿ ಎಂಬ ಪ್ರಶ್ನೆಗಳು ಇದೀಗ ಎದ್ದಿದೆ.

ಇರಾಕ್‌ ದಾಳಿಯ ವೈಫಲ್ಯ:

ವಿನಾಶಕಾರಿ ಅಸ್ತ್ರಗಳ ಅಭಿವೃದ್ಧಿ ತಡೆ ಮತ್ತು ಭಯೋತ್ಪಾದನೆಗೆ ಅಧ್ಯಕ್ಷ ಸದ್ದಾಂ ಹುಸೇನ್‌ನ ಬೆಂಬಲ ಖಂಡಿಸಿ, 2003ರಲ್ಲಿ ಅಂದಿನ ಅಮೆರಿಕದ ಅಧ್ಯಕ್ಷ ಜಾಜ್‌ರ್‍ ಡಬ್ಲ್ಯು ಬುಷ್‌ ತಮ್ಮ ಮಿತ್ರದೇಶಗಳ ಜೊತೆಗೂಡಿ ಇರಾಕ್‌ ಮೇಲೆ ಯುದ್ಧ ಸಾರಿದರು. ಈ ಹೋರಾಟ ಸುಮಾರು 8 ವರ್ಷ ನಡೆಯಿತು. ಅಂತಿಮವಾಗಿ 2011ರಲ್ಲಿ ಅಮೆರಿಕ ಸೇನೆ ಇರಾಕ್‌ನಿಂದ ತನ್ನ ಸೇನೆ ಹಿಂದಕ್ಕೆ ಪಡೆಯುವುದಾಗಿ ಘೋಷಿಸಿತು. ಆದರೆ ಈ ಹಂತದಲ್ಲಿ ಆಂತರಿಕ ಸಂಘರ್ಷದಿಂದ ಸಂಪೂರ್ಣ ಜರ್ಝರಿತವಾಗಿದ್ದ ಇರಾಕ್‌ ಆರ್ಥಿಕವಾಗಿ, ಸಾಮಾಜಿಕವಾಗಿ ಮೇಲೆಳುವ ಸ್ಥಿತಿಯಲ್ಲೇ ಇರಲಿಲ್ಲ. ಆದರೆ ಇದ್ಯಾವುದರ ಬಗ್ಗೆಯೂ ಯೋಚಿಸದ ಅಮೆರಿಕ ಏಕಾಏಕಿ ಅಲ್ಲಿಂದ ಹಿಂದೆ ಸರಿಯಿತು. ಅಂದು ಅಮೆರಿಕದ ಮಾಡಿದ ವಿನಾಶಕಾರಿ ನಡೆಗಳು ಇಂದಿಗೂ ಆ ದೇಶವನ್ನು ತಲೆ ಎತ್ತದಂತೆ ಮಾಡಿವೆ.

ಸ್ಥಳವಿಲ್ಲದಿದ್ದರೂ ವಿಮಾನವೇರಿದ ಅಫ್ಘನ್ನರು: ಟೇಕ್‌ ಆಫ್ ಆಗ್ತಿದ್ದಂತೆಯೇ ಮೂವರು ಕೆಳಕ್ಕೆ!

ಆಫ್ಘನ್‌ ದಾಳಿಯ ವೈಫಲ್ಯ:

2011ರಲ್ಲಿ ಅತ್ತ ಇರಾಕ್‌ನಿಂದ ಕಾಲು ಕೀಳುತ್ತಿದ್ದಂತೆ ಇತ್ತ ಅಮೆರಿಕದ ವಿಶ್ವ ವಾಣಿಜ್ಯ ಕಟ್ಟಡದ ಮೇಲೆ ಉಗ್ರರು ದಾಳಿ ಮಾಡಿದರು. ಸೇಡು ತೀರಿಸಿಕೊಳ್ಳಲು ಅಮೆರಿಕ ಅದೇ ವರ್ಷ ಅಷ್ಘಾನಿಸ್ತಾನದ ಮೇಲೆ ದಾಳಿ ನಡೆಸಿತು. ಹೀಗೆ ಅಲ್ಲಿಗೆ ಕಾಲಿಟ್ಟಅಮೆರಿಕ ಮುಂದೆ 20 ವರ್ಷ ಅಲ್ಲೇ ಬೀಡುಬಿಟ್ಟಿತ್ತು. ಈ ಅವಧಿಯಲ್ಲಿ ಒಂದಿಷ್ಟುಮಟ್ಟಿಗೆ ಉಗ್ರರನ್ನು ಮಟ್ಟಹಾಕಿದ್ದು ಬಿಟ್ಟರೆ ಪೂರ್ಣವಾಗಿ ನಿರ್ನಾಮ ಸಾಧ್ಯವಾಗಲಿಲ್ಲ. ಮತ್ತೆ ಇರಾಕ್‌ನಂತೆ ಇಲ್ಲಿಯೂ ಇದೀಗ ಯಾವುದೇ ಮುಂದಾಲೋಚನೆ ಇಲ್ಲದೆ ದೇಶ ಬಿಟ್ಟು ಅಮೆರಿಕ ಹೊರಟಿದೆ. ದೇಶವನ್ನು ಸುಸ್ಥಿತಿಗೆ ತರುವ ಭರವಸೆ ನೀಡಿದ್ದ ಅಮೆರಿಕ 20 ವರ್ಷಗಳಲ್ಲಿ ಅಂಥ ಯಾವುದೇ ಸಾಧನೆ ಮಾಡಲಿಲ್ಲ. ತಾನು ದೇಶ ಬಿಟ್ಟು ಹೊರಡುವ ಮುನ್ನ ದೇಶವನ್ನು ಭದ್ರವಾದ ಕೈಗಳಿಗೆ ನೀಡುವ ಬದಲು ಸೋವಿಯತ್‌ ಒಕ್ಕೂಟದ ವಿರುದ್ಧ ಹೋರಾಡಲು ತಾನೇ ಹುಟ್ಟುಹಾಕಿದ್ದ ತಾಲಿಬಾನ್‌ ಉಗ್ರರ ಕೈಗೆ ದೇಶವನ್ನು ಕೊಟ್ಟು ಹೊರಟಿದೆ. ಈ ಮೂಲಕ ಅಷ್ಘಾನಿಸ್ತಾವನ್ನು ನಡುನೀರಲ್ಲಿ ಬಿಟ್ಟು ಹೊರಟಿದೆ.

ಅಮೆರಿಕದಲ್ಲೇ ಪ್ರತಿಭಟನೆ:

ಪದೇ ಪದೇ ಇಂಥದ್ದೇ ಕೆಲಸ ಮಾಡುವ ಅಮೆರಿಕದ ವಿರುದ್ಧ ಜಾಗತಿಕ ಮಟ್ಟದಲ್ಲೂ ಭಾರೀ ಟೀಕೆ ಕೇಳಿಬಂದಿದೆ. ಮತ್ತೊಂದೆಡೆ ಅಮೆರಿಕದಲ್ಲೂ ಸ್ಥಳೀಯರು ಸರ್ಕಾರದ ವಿರುದ್ಧ ಆಕ್ರೋಶದ ಧ್ವನಿ ಎತ್ತಿದ್ದಾರೆ. ಹಲವೆಡೆ ಪ್ರತಿಭಟನೆ ಕೂಡ ನಡೆದಿದೆ.

click me!