ಕಳ್ಳ ಕದ್ದ ಐಪ್ಯಾಡ್‌ನಿಂದಲೇ ಖದೀಮನನ್ನು ಹಿಡಿದ ಪೊಲೀಸರು

Published : Dec 23, 2022, 01:29 PM IST
ಕಳ್ಳ ಕದ್ದ ಐಪ್ಯಾಡ್‌ನಿಂದಲೇ ಖದೀಮನನ್ನು ಹಿಡಿದ ಪೊಲೀಸರು

ಸಾರಾಂಶ

ಇಲ್ಲೊಬ್ಬ ಕಳ್ಳ ತಾನು ಕದ್ದ ಐಪ್ಯಾಡ್‌ನಿಂದಲೇ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಅಮೆರಿಕಾದಲ್ಲಿ ಈ ಘಟನೆ ನಡೆದಿದೆ. 

ಹೇಳಿ ಕೇಳಿ ಇದು ತಂತ್ರಜ್ಞಾನದ ಯುಗ ಎಷ್ಟೇ ಬುದ್ಧಿವಂತಿಕೆ ಉಪಯೋಗಿಸಿದರು ಮಾಡಿದ ಕರ್ಮಗಳು ನಿಮ್ಮ ಕೈ ಹಿಡಿಯದೇ ಬಿಡುವುದಿಲ್ಲ. ಅದೂ ಕಳ್ಳತನವಾದರೂ ಆಗಿರಬಹುದು. ಒಳ್ಳೆಯತನವಾದರೂ ಆಗಿರಬಹುದು. ತಂತ್ರಜ್ಞಾನದ ಪ್ರಭಾವ ಅಂತಹದ್ದು, ಹೀಗಾಗಿ ಕಳ್ಳರು ಏನೇನೋ ಬುದ್ಧಿವಂತಿಕೆ ಉಪಯೋಗಿಸಿ ಕಳವಿಗೆ ಇಳಿದರೂ ಪೊಲೀಸರು ತಂತ್ರಜ್ಞಾನದ ಸಹಾಯದಿಂದ ರಂಗೋಲಿ ಕೆಳಗೆ ನುಗ್ಗುವ ಮೂಲಕ ಕಳ್ಳರನ್ನು ಹೆಡೆಮುರಿ ಕಟ್ಟುತ್ತಿದ್ದಾರೆ. ಅದೇ ರೀತಿ ಇಲ್ಲೊಬ್ಬ ಕಳ್ಳ ತಾನು ಕದ್ದ ಐಪ್ಯಾಡ್‌ನಿಂದಲೇ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಅಮೆರಿಕಾದಲ್ಲಿ ಈ ಘಟನೆ ನಡೆದಿದೆ. 

ಅಮೆರಿಕಾದ (America) ಫ್ಲೋರಿಡಾ (Florida man) ವ್ಯಕ್ತಿಯೊಬ್ಬರ ಐಪ್ಯಾಡ್ ಎಗ್ಗರಿಸಿದ್ದ. ಆದರೆ ಐಪ್ಯಾಡ್‌ (IPAD) ಲೋಕೇಷನ್ (Location Tracker) ಅನ್ನು ಟ್ರ್ಯಾಕ್ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು, ಮಾಲು ಸಮೇತ ಕಳ್ಳನನ್ನು ಯಶಸ್ವಿಯಾಗಿ ಹೆಡೆಮುರಿ ಕಟ್ಟಿದ್ದಾರೆ. ಕಳ್ಳತನ ನಡೆದ ಬಗ್ಗೆ ಪಾಮ್ ಬೀಚ್ ಶೆರಿಫ್ ಕಚೇರಿಗೆ ಡಿಸೆಂಬರ್ 14ರಂದು ಕರೆಯೊಂದು ಬಂದಿತ್ತು. ಲೆಗಸಿ ಕಾಂಟ್ರಾಕ್ಟಿಂಗ್ ಸೊಲ್ಯೂಷನ್ಸ್ ನಿಂದ ಈ ಕರೆ ಬಂದಿತ್ತು. ಗಾರ್ಡನ್ ರಸ್ತೆಯಲ್ಲಿರುವ ಅವರ ಆಸ್ತಿಯಲ್ಲಿ ಕಳ್ಳತನ ನಡೆದ ಬಗ್ಗೆ ಕರೆ ಬಂದಿದ್ದು, ತಮ್ಮ ಕಂಪನಿಯ ನಾಲ್ಕು ವಾಹನಗಳ ಕಿಟಕಿಯನ್ನು ಯಾರೋ ಒಡೆದು ಐಪ್ಯಾಡ್ ಸೇರಿದಂತೆ ಹಲವು ಉಪಕರಣಗಳನ್ನು ಕದ್ದೊಯ್ದಿದ್ದಾರೆ ಎಂದು ಆಸ್ತಿಯ ಮೇಲ್ವಿಚಾರಕರು ದೂರಿದ್ದರು. 

ಇತ್ತ ಕಳ್ಳನ ಅದೃಷ್ಟ ಕೆಟ್ಟಿತ್ತು ಅನ್ಸುತ್ತೆ. ಈತ ಕದ್ದ ಐಪ್ಯಾಡ್ ಲೋಕೇಷನ್ ಅನ್ನು ಪೊಲೀಸರು ಟ್ರ್ಯಾಕ್ ಮಾಡಿದ್ದಾರೆ. ಇದಕ್ಕೆ ಅವರು ಫೈಂಡ್‌ ಮೈ ಆಪ್ ಎಂಬ ಸಾಫ್ಟ್‌ವೇರ್ ಅನ್ನು ಬಳಸಿದ್ದರು. ಈ ಆಪ್ ಮೂಲಕ ಇವರು ಐ ಪ್ಯಾಡ್ ಟ್ರಾಕ್ ಮಾಡಿದಾಗ ವೆಸ್ಟ್ 12 ಕೋರ್ಟ್ ಎಂಬಲ್ಲಿ ಐಪ್ಯಾಡ್ ಇರುವುದು ಪತ್ತೆಯಾಗಿದೆ. ಈ ಪ್ಯಾಡ್ ಕದ್ದವನನ್ನು 62 ವರ್ಷದ ಟ್ರೊಯಿ ಲೀ ಬೆಲ್ಲಮಿ ಎಂದು ಗುರುತಿಸಲಾಗಿದೆ. ಇನ್ನು ಪೊಲೀಸರು ಈ ಬಗ್ಗೆ ಆತನನ್ನು ವಿಚಾರಿಸಿದಾಗ ನನಗೆ ಅದು ನನ್ನನ್ನು ಟ್ರ್ಯಾಕ್ ಮಾಡುತ್ತಿದೆ ಎಂಬುದು ತಿಳಿದಿತ್ತು ಎಂದು ಹೇಳಿದ್ದಾನೆ. ಆತನ ವಿರುದ್ಧ ಪೊಲೀಸರು ಕಳ್ಳತನ ದರೋಡೆ ಪ್ರಕರಣ ದಾಖಲಿಸಿದ್ದಾರೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಆಕಾಶಕ್ಕೇ ಕನ್ನಡಿ ಹಾಕಿ ರಾತ್ರಿಗೆ ಗುಡ್‌ ಬೈ ಸಾಹಸ!
PUBG ಗೇಮ್​ನಿಂದ 6ನೇ ಮಗುವಿನತ್ತ ಪಯಣ: ಅಕ್ರಮವಾಗಿ ಭಾರತಕ್ಕೆ ಬಂದಿದ್ದಾಕೆ ಮತ್ತೊಮ್ಮೆ ಗರ್ಭಿಣಿ!