ಅಬಾಯಾ ಬ್ಯಾನ್, ಪರೀಕ್ಷೆಗೆ ಶಾಲಾ ಸಮವಸ್ತ್ರದಲ್ಲೇ ಹಾಜರಾಗಿ, ಸೌದಿ ಅರೆಬಿಯಾದಲ್ಲಿ ಹೊಸ ನಿಯಮ!

By Suvarna NewsFirst Published Dec 22, 2022, 8:24 PM IST
Highlights

ಸೌದಿ ಅರೆಬಿಯಾದಲ್ಲಿ ಹೊಸ ನಿಯಮ ಜಾರಿಗೆ ತರಲಾಗಿದೆ. ಈ ನಿಯಮ ವಿಶ್ವದಲ್ಲೇ ಭಾರಿ ಚರ್ಚೆಯಾಗುತ್ತಿದೆ. ನೂತನ ನಿಯಮದಲ್ಲಿ ಶಾಲಾ ಸಮವಸ್ತ್ರಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ. 

ಸೌದಿ ಅರೆಬಿಯಾ(ಡಿ.22): ಸೌದಿ ಅರೆಬಿಯಾ ಸರ್ಕಾರ ಶಾಲಾ ಕಾಲೇಜುಗಳಲ್ಲಿ ಹೊಸ ನಿಯಮ ಜಾರಿಗೆ ತಂದಿದೆ. ಶಾಲಾ ಕಾಲೇಜಿನ ಪರೀಕ್ಷೆ ಹಾಜರಾಗುವ ವಿದ್ಯಾರ್ಥಿನಿಯರು ಅಬಾಯಾ ಹಾಕಿ ಬರುವಂತಿಲ್ಲ. ಶಾಲಾ ಸಮವಸ್ತ್ರದಲ್ಲೇ ಪರೀಕ್ಷೆಗೆ ಹಾಜರಾಗಬೇಕು ಎಂದು ಕಟ್ಟು ನಿಟ್ಟಿನ ಆದೇಶ ಹೊರಡಿಸಿದೆ. ಎಲ್ಲಾ ಶಿಕ್ಷಣ ಸಂಸ್ಥೆಗಳಲ್ಲಿ ಈ ನಿಯಮ ಪಾಲಿಸಲು ಸೌದಿ ಅರೆಬಿಯಾ ಸರ್ಕಾರ ಸೂಚನೆ ನೀಡಿದೆ. ಶಾಲಾ ಪರೀಕ್ಷಾ ಕೊಠಡಿಗೆ ವಿದ್ಯಾರ್ಥಿನಿಯರು ಅಬಾಯಾ ಹಾಕಿ ಬರುವಂತಿಲ್ಲ. ಆಯಾ ಶಿಕ್ಷಣ ಸಂಸ್ಥೆಗಳ ಸಮವಸ್ತ್ರದಲ್ಲೇ ಹಾಜರಾಗಲು ಸೂಚಿಸಿದೆ. 

ಶೈಕ್ಷಣಿಕ ಸಂಸ್ಥೆಗಳಲ್ಲಿ ಸಮವಸ್ತ್ರಕ್ಕೆ ಮೊದಲ ಆದ್ಯತೆ. ಹೀಗಾಗಿ ಸಮವಸ್ತ್ರದ ಬದಲು ಧಾರ್ಮಿಕ ಉಡುಗೆ ತರವಲ್ಲ ಎಂಬ ಅಂಶಕ್ಕೆ ಒತ್ತು ನೀಡಿ ಈ ಆದೇಶ ಹೊರಡಿಸಲಾಗಿದೆ. ಸೌದಿ ರಾಜಕುವರ ಮೊಹಮ್ಮದ್‌ ಬಿನ್‌ ಸಲ್ಮಾನ್‌ ಅವರು ಮಹಿಳೆಯರಿಗೆ ಸಮಾನ ಹಕ್ಕು ಕಲ್ಪಿಸುವ ಧ್ಯೇಯ ಹೊಂದಿದ್ದು, ಅವರ ಸೂಚನೆ ಮೇರೆಗೆ ಆದೇಶ ಹೊರಬಿದ್ದಿದೆ ಎಂದು ಮಾಧ್ಯಮ ವರದಿಗಳು ಹೇಳಿವೆ. ಆದರೆ ಅಬಾಯಾಗೆ ಮಾತ್ರ ನಿಷೇಧ ಹೇರಲಾಗಿದ್ದು, ಹಿಜಾಬ್‌ ಬಗ್ಗೆ ಇಲ್ಲಿ ಪ್ರಸ್ತಾಪ ಇಲ್ಲ.

 

ಬುರ್ಖಾ ನಿಷೇಧ, ಸ್ವಿಸ್ ನಿಯಮ ಉಲ್ಲಂಘಿಸಿದರೆ 83,000 ರೂ ದಂಡ!

ಅಬಾಯಾ ಎಂಬುದು ಕುತ್ತಿಗೆಯಿಂದ ಕಾಲಿನ ವವರೆಗೆ ದೇಹ ಮುಚ್ಚುವ ಬುರ್ಖಾವನ್ನೇ ಹೋಲುವ ಉಡುಗೆಯಾಗಿದೆ. ಆದರೆ ಇದು ತಲೆಗೆ ಅನ್ವಯಿಸುವುದಿಲ್ಲ. ಇನ್ನು ಹಿಜಾಬ್‌ ಎಂಬುದು ತಲೆಯನ್ನು ಮುಚ್ಚುವ ವಸ್ತ್ರವಾಗಿದೆ.

2018ರಲ್ಲಿ ಸೌದಿ ಅರೆಬಿಯಾದಲ್ಲಿ ಮಹಿಳೆಯರಿಗೆ ಅಬಾಯಾವನ್ನು ಹೇರುವಂತಿಲ್ಲ ಎಂದಿತ್ತು. ಇದೀಗ ಪರೀಕ್ಷಾ ಕೊಠಡಿಯಿಂದ ಬುರ್ಖಾ ಬ್ಯಾನ್ ಮಾಡಲಾಗಿದೆ. ಬುರ್ಖಾ ಧರಿಸಿನಿಂದ ವಿದ್ಯಾರ್ಥಿಗಳು ನಕಲು ಮಾಡದಂತೆ ಪರೀಕ್ಷೆ ನಡೆಸುವುದು ಅತೀ ದೊಡ್ಡ ಸವಾಲಾಗಿತ್ತು. ಇದೀಗ ಬುರ್ಖಾ ಬ್ಯಾನ್ ಮಾಡಿ ಆದೇಶ ಹೊರಡಿಸಿದೆ. ಸೌದಿ ಅರೆಬಿಯಾ ಶಿಕ್ಷಣ ಮತ್ತು ತರಬೇತಿ ಮೌಲ್ಯ ಮಾಪನ ಆಯೋಗ, ಶೈಕ್ಷಣಿಕ ಮತ್ತ ತರಬೇತಿ ಅನುಮೋದನಾ ಸಂಸ್ಥೆ ಹಾಗೂ ಸೌದಿ ಅರೇಬಿಯಾದ ಶಿಕ್ಷಣ ಸಂಸ್ಥೆ ಮಹತ್ವದ ಸಭೆ ನಡೆಸಿ ಈ ನಿರ್ಧಾರ ತೆಗೆದುಕೊಂಡಿದೆ. 

ಸಾರ್ವಜನಿಕ ಸ್ಥಳಗಳಲ್ಲಿ ಅಡಿಯಿಂದ ಮುಡಿವರೆಗೆ ಮಹಿಳೆಯರಿಗೆ ಬುರ್ಖಾ ಕಡ್ಡಾಯ ಮಾಡಿದ ತಾಲಿಬಾನ್!

ಬುರ್ಖಾ ಧರಿಸಲು ಒಪ್ಪದ ಪತ್ನಿಯನ್ನು ಕೊಂದ ಟಾಕ್ಸಿ ಚಾಲಕ
ಟಾಕ್ಸಿ ಚಾಲಕನೊಬ್ಬ , ಮಗನ ಪಾಲನೆ ಮತ್ತು ಮುಸ್ಲಿಂ ಸಂಪ್ರದಾಯಗಳ ಅನುಸರಿಸದ ಪತ್ನಿಯನ್ನು ಚೂರಿಯಲ್ಲಿ ಇರಿದು ಕೊಂದ ಘಟನೆ ಮುಂಬೈನಲ್ಲಿ ನಡೆದಿದೆ. ಮೃತಪಟ್ಟಹಿಂದೂ ಮಹಿಳೆ ರೂಪಾಲಿ 2019 ರಲ್ಲಿ ಆರೋಪಿ ಇಕ್ಬಾಲ್‌ ಶೇಕ್‌ನನ್ನು ಮದುವೆಯಾಗಿದ್ದರು. ವಿವಾಹದ ಬಳಿಕೆ ಝಾರಾ ಎಂದು ಹೆಸರು ಬದಲಿಸಿಕೊಂಡಿದ್ದ ಅವಳಿಗೆ 2020ರಲ್ಲಿ ಮಗುವಾಗಿತ್ತು. ಗಂಡನ ಕುಟುಂಬದವರು ಬುರ್ಖಾ ಧರಿಸಲು ಒತ್ತಾಯಿಸಿದಕ್ಕೆ, ಕಳೆದ ಕೆಲವು ತಿಂಗಳುಗಳಿಂದ ಮಗನೊಂದಿಗೆ ಝಾರಾ ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ವಿಚ್ಛೇದನ ಮತ್ತು ಮಗನ ಪಾಲನೆಯ ಕುರಿತು ಮಾತನಾಡಲು ಭೇಟಿಯಾಗಿದ್ದ ಗಂಡ ಮತ್ತು ಹೆಂಡತಿಯ ನಡುವೆ ಮಾತಿಗೆ ಮಾತು ಬೆಳೆದು ಇಕ್ಬಾಲ್‌, ಝಾರಾಳಿಗೆ ಚೂರಿಯಲ್ಲಿ ಹಲವು ಬಾರಿ ಇರಿದಿದ್ದಾನೆ. ಆರೋಪಿಯನ್ನು ಪೋಲಿಸರು ಬಂಧಿಸಿದ್ದಾರೆ.

click me!