ಚೀನಾದಲ್ಲಿ ನಿತ್ಯ 1 ಮಿಲಿಯನ್ ಕೋವಿಡ್ ಕೇಸ್‌: 5 ಸಾವಿರ ಜನರ ಸಾವು..!

By BK AshwinFirst Published Dec 22, 2022, 8:51 PM IST
Highlights

ಈ ಸಂಸ್ಥೆ ಕೋವಿಡ್‌ ಸಾಂಕ್ರಾಮಿಕ ರೋಗವು ಮೊದಲು ಹೊರಹೊಮ್ಮಿದಾಗಿನಿಂದ ಅದನ್ನು ಟ್ರ್ಯಾಕ್‌ ಮಾಡುತ್ತಿದ್ದು, ಭವಿಷ್ಯಸೂಚಕ ಆರೋಗ್ಯ ವಿಶ್ಲೇಷಣೆಯ ಮೇಲೆ ಕೇಂದ್ರೀಕರಿಸುತ್ತದೆ.

ಚೀನಾ (China) ಪ್ರತಿದಿನ 1 ಮಿಲಿಯನ್ ಕೋವಿಡ್ ಸೋಂಕುಗಳು (COVID Cases) ಮತ್ತು ಈ ವೈರಸ್‌ಗೆ (Virus) 5,000 ಜನರು ಬಲಿಯಾಗುತ್ತಿದ್ದಾರೆ (Death). ಏಕೆಂದರೆ ಅದು ಜಗತ್ತು ಕಂಡ ಅತಿದೊಡ್ಡ ಕೊರೊನಾ ಏಕಾಏಕಿ ಹೆಚ್ಚಳ ಎಂದು ನಿರೀಕ್ಷಿಸಲಾಗಿದೆ ಎಂದು ಹೊಸ ವಿಶ್ಲೇಷಣೆಯೊಂದು ಹೇಳುತ್ತಿದೆ. 1.4 ಬಿಲಿಯನ್ ಜನರಿರುವ ದೇಶದಲ್ಲಿ ಪರಿಸ್ಥಿತಿ ಇನ್ನೂ ಹದಗೆಡಬಹುದು. ಈ ಪ್ರಸ್ತುತ ಕೋವಿಡ್‌ ಅಲೆಯು ಜನವರಿಯಲ್ಲಿ ದೈನಂದಿನ ಪ್ರಕರಣದ ಪ್ರಮಾಣ 3.7 ಮಿಲಿಯನ್‌ಗೆ ಏರಿಕೆಯಾಗಬಹುದು ಎಂದು ಲಂಡನ್ (London) ಮೂಲದ ಸಂಶೋಧನಾ ಸಂಸ್ಥೆಯಾದ ಏರ್‌ಫಿನಿಟಿ ಲಿಮಿಟೆಡ್ (Airfinity Ltd.) ಎಚ್ಚರಿಸಿದೆ. ಈ ಸಂಸ್ಥೆ ಕೋವಿಡ್‌ ಸಾಂಕ್ರಾಮಿಕ ರೋಗವು ಮೊದಲು ಹೊರಹೊಮ್ಮಿದಾಗಿನಿಂದ ಅದನ್ನು ಟ್ರ್ಯಾಕ್‌ ಮಾಡುತ್ತಿದ್ದು, ಭವಿಷ್ಯಸೂಚಕ ಆರೋಗ್ಯ ವಿಶ್ಲೇಷಣೆಯ ಮೇಲೆ ಕೇಂದ್ರೀಕರಿಸುತ್ತದೆ. ಇನ್ನು, ಮಾರ್ಚ್‌ನಲ್ಲಿ ದೈನಂದಿನ ಗರಿಷ್ಠ ಸೋಂಕುಗಳ ಸಂಖ್ಯೆ 4.2 ಮಿಲಿಯನ್‌ಗೆ ಹೆಚ್ಚಳವಾಗುವ ಮೂಲಕ ಮತ್ತೊಂದು ಉಲ್ಬಣವು ಕಂಡುಬರಬಹುದು ಎಂದೂ ಈ ಗುಂಪು ಅಂದಾಜಿಸಿದೆ.

ಇನ್ನು, ಪ್ರಾಂತೀಯ ಡೇಟಾವನ್ನು ಬಳಸುವ ಚೀನಾದ ಕೋವಿಡ್‌ ಪ್ರಮಾಣ ಮತ್ತು ಸಾವಿನ ಸಂಖ್ಯೆಯು ಚೀನಾದ ಕ್ಸಿ ಜಿನ್‌ಪಿಂಗ್‌ ಸರ್ಕಾರದ ಲೆಕ್ಕಾಚಾರವನ್ನು ಮೀರಿದೆ ಎಂದೂ  ತೋರಿಸುತ್ತದೆ. ಅಧಿಕೃತವಾಗಿ, ಚೀನಾ ಬುಧವಾರ 2,966 ಹೊಸ ಪ್ರಕರಣಗಳನ್ನು ವರದಿ ಮಾಡಿದೆ ಮತ್ತು ಡಿಸೆಂಬರ್ ಆರಂಭದಿಂದ 10 ಕ್ಕಿಂತ ಕಡಿಮೆ ಕೋವಿಡ್ ಸಾವುಗಳು ಸಂಭವಿಸಿವೆ ಎಂದು ತಿಳಿಸಿದೆ. ಆದರೆ ಆಸ್ಪತ್ರೆಗಳು ರೋಗಿಗಳಿಂದ ತುಂಬಿ ತುಳುಕುತ್ತಿವೆ ಮತ್ತು ಸ್ಮಶಾನಗಳಿಗೆ ಅವುಗಳ ಸಾಮರ್ಥ್ಯಕ್ಕಿಂತ ಹೆಚ್ಚು ಹೆಣಗಳನ್ನು ತೆಗೆದುಕೊಂಡು ಹೋಗಲಾಗುತ್ತಿದೆ ಎಂಬ ವರದಿಗಳು ಚೀನಾದ ಕಮ್ಯುನಿಸ್ಟ್‌ ಸರ್ಕಾರದ ಮಾಹಿತಿಗೆ ವ್ಯತಿರಿಕ್ತವಾಗಿದೆ.

ಇದನ್ನು ಓದಿ: ಡ್ರ್ಯಾಗನ್ ದೇಶದಲ್ಲಿ ಏನಾಗ್ತಿದೆ ? ಜಗತ್ತಿಗೂ ಕಾದಿದೆಯಾ ಅಪಾಯ? ಭಾರತದ ಸ್ಥಿತಿ ಏನು?

ಹಾಗೂ, ವೈರಸ್ ಅಂಕಿಅಂಶಗಳನ್ನು ಸರ್ಕಾರವು ಹೇಗೆ ವರದಿ ಮಾಡುತ್ತದೆ ಎಂಬುದರ ಬದಲಾವಣೆಗಳು ಸಹ ಒಂದು ಅಂಶವಾಗಿದೆ. ಚೀನಾ ತನ್ನ ವಿಶಾಲವಾದ ಸಮೂಹ-ಪರೀಕ್ಷಾ ಬೂತ್‌ಗಳ ಜಾಲವನ್ನು ಹೆಚ್ಚಾಗಿ ಸ್ಥಗಿತಗೊಳಿಸಿದೆ ಮತ್ತು ಪ್ರತಿದಿನದ ಲೆಕ್ಕದಲ್ಲಿ ಪ್ರತಿಯೊಂದು ಸೋಂಕನ್ನು ಸೇರಿಸುವ ಪ್ರಯತ್ನಗಳನ್ನು ರದ್ದುಗೊಳಿಸಿದೆ. ಈ ಹಿನ್ನೆಲೆ ನಿವಾಸಿಗಳು ರ್ಯಾಪಿಡ್‌ ಪರೀಕ್ಷೆಗಳನ್ನು ಅವಲಂಬಿಸುವಂತೆ ಮಾಡಿದ್ದು, ಈ ವರದಿಯ ಫಲಿತಾಂಶಗಳನ್ನು ವರದಿ ಮಾಡುವ ಬಾಧ್ಯತೆ ಇಲ್ಲ ಎಂದೂ ತಿಳಿದುಬಂದಿದೆ. 

ಅಲ್ಲದೆ, ಚೀನಾದ ಆರೋಗ್ಯ ನಿಯಂತ್ರಕವು ಕೋವಿಡ್ ಸಾವು ಎಂದು ಪರಿಗಣಿಸುವ ವಿಭಿನ್ನವಾದ ವ್ಯಾಖ್ಯಾನವನ್ನು ಸಹ ಅಳವಡಿಸಿಕೊಂಡಿದೆ. ಮತ್ತು ಅನೇಕ ಪಾಶ್ಚಿಮಾತ್ಯ ರಾಷ್ಟ್ರಗಳು ಬಳಸುವುದಕ್ಕಿಂತ ಹೆಚ್ಚು ಆಯ್ದ - ಪ್ರಸ್ತುತ ಸೋಂಕಿನ ನೀತಿ ಬಳಸುತ್ತಿದೆ. ಈ ಕಾರಣದಿಂದ ಕೋವಿಡ್‌ನಿಂದ ಸಾವುಗಳು ಹೆಚ್ಚಾಗುತ್ತಿದ್ದರೂ, ಅವುಗಳ ನಿಜವಾದ ಸಂಖ್ಯೆಯನ್ನು ಲೆಕ್ಕ ಹಾಕಲು ಕಷ್ಟವಾಗುತ್ತಿದೆ.

ಇದನ್ನೂ ಓದಿ: 5 ದೇಶಗಳಲ್ಲಿ ಕೋವಿಡ್‌ ಏರಿಕೆ: ಅಮೆರಿಕದಲ್ಲಿ 10 ಕೋಟಿ ದಾಟಿದ ಸೋಂಕಿತರು

ಒಟ್ಟಾರೆ, ಈ ಬದಲಾವಣೆಗಳ ಅರ್ಥ "ಅಧಿಕೃತ ಡೇಟಾ ದೇಶಾದ್ಯಂತ ಸೋಂಕಿಗೆ ಜನರು ಅನುಭವಿಸುತ್ತಿರುವ ನಿಜವಾದ ಪ್ರತಿಬಿಂಬವಾಗಿರಲು ಅಸಂಭವವಾಗಿದೆ" ಎಂದು ಏರ್‌ಫಿನಿಟಿಯ ಲಸಿಕೆ ಮತ್ತು ಸಾಂಕ್ರಾಮಿಕ ರೋಗಶಾಸ್ತ್ರದ ಮುಖ್ಯಸ್ಥ ಲೂಯಿಸ್ ಬ್ಲೇರ್ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಈ ಬದಲಾವಣೆಯು ಚೀನಾದಲ್ಲಿ ಕಂಡುಬರುವ ಸಾವಿನ ಪ್ರಮಾಣವನ್ನು ಕಡಿಮೆ ಮಾಡಬಹುದು ಎಂದೂ ಅವರು ಹೇಳಿದ್ದಾರೆ.

ಕೋವಿಡ್ ಪರಿಸ್ಥಿತಿಯನ್ನು ನಿಖರವಾಗಿ ಸೆರೆಹಿಡಿಯುವುದು ಪ್ರಪಂಚದಾದ್ಯಂತ ಕಷ್ಟಕರವಾಗಿದೆ. ಏಕೆಂದರೆ ಕಡಿಮೆ ದೇಶಗಳು ಮಾತ್ರ ಆಗಾಗ್ಗೆ ಪರೀಕ್ಷಿಸುತ್ತವೆ. ಹೆಚ್ಚು ಹರಡುವ ಓಮಿಕ್ರಾನ್ ರೂಪಾಂತರದ ಹೊರಹೊಮ್ಮುವಿಕೆಯು ಸೋಂಕಿನಲ್ಲಿ ಒಂದು ಜಿಗಿತವನ್ನು ಹುಟ್ಟುಹಾಕಿದ್ದು, ಇದು ಅಮೆರಿಕದಲ್ಲಿ ತನ್ನ ದೈನಂದಿನ ಪ್ರಕರಣಗಳ ಸಂಖ್ಯೆಯನ್ನು ಜನವರಿ 2022 ರಲ್ಲಿ ಸುಮಾರು 1.4 ಮಿಲಿಯನ್ ಸೋಂಕುಗಳಿಗೆ ಏರಿಕೆಯಾಗಿದೆ.  

ಇದನ್ನು ಓದಿ: ಚೀನಾದ ಕೋವಿಡ್ ಸ್ಫೋಟಕ್ಕೆ ಕಾರಣವಾದ ಒಮಿಕ್ರಾನ್ ತಳಿ ಭಾರತದಲ್ಲೂ ಪತ್ತೆ!

click me!