52ರ ವಯಸ್ಸಲ್ಲಿ 30ರ ಪಾಕಿ ಬಲೆಗೆ: ಭಾರತದ ಮಾಹಿತಿ ಸೋರಿಕೆ ಮಾಡಿ ಸಿಕ್ಕಿಬಿದ್ದ ಐಎಫ್​ಎಸ್​ ಅಧಿಕಾರಿ!

Published : May 20, 2025, 06:13 PM ISTUpdated : May 20, 2025, 06:34 PM IST
52ರ ವಯಸ್ಸಲ್ಲಿ 30ರ ಪಾಕಿ ಬಲೆಗೆ: ಭಾರತದ ಮಾಹಿತಿ ಸೋರಿಕೆ ಮಾಡಿ ಸಿಕ್ಕಿಬಿದ್ದ ಐಎಫ್​ಎಸ್​ ಅಧಿಕಾರಿ!

ಸಾರಾಂಶ

ಪಾಕಿಸ್ತಾನದ ಯುವಕನ ಪ್ರೇಮಪಾಶಕ್ಕೆ ಸಿಲುಕಿ ಭಾರತದ ಗುಪ್ತ ಮಾಹಿತಿಗಳನ್ನು ಸೋರಿಕೆ ಮಾಡಿದ ಐಎಫ್‌ಎಸ್ ಅಧಿಕಾರಿ ಮಾಧುರಿ ಗುಪ್ತಾ ಅವರ ಬೇಹುಗಾರಿಕೆ ಪ್ರಕರಣದ ವಿವರಗಳು. ಈ ಘಟನೆಯು 15 ವರ್ಷಗಳ ಹಿಂದೆ ನಡೆದಿದ್ದು, ಇದೀಗ ಮತ್ತೆ ಬೆಳಕಿಗೆ ಬಂದಿದೆ.

ಪಾಕಿಸ್ತಾನದ ಪರ ಬೇಹುಗಾರಿಕೆ ನಡೆಸುತ್ತಿದ್ದ ಆರೋಪದ ಮೇಲೆ ಯೂಟ್ಯೂಬರ್ ಜ್ಯೋತಿ ಮಲ್ಹೋತ್ರಾ ಅವರನ್ನು ಭಾನುವಾರ ರಾತ್ರಿ ಬಂಧಿಸಿದ ನಂತರ, 15 ವರ್ಷಗಳ ಹಿಂದೆ ನಡೆದ ಇದೇ ರೀತಿಯ ಘಟನೆಯೊಂದು ಇದೀಗ ರಿವೀಲ್​ ಆಗುತ್ತಿದೆ. ಈಗ ಜ್ಯೋತಿ ಮಲ್ಹೋತ್ರಾ ಆದರೆ, ಆಗ ಮಾಧುರಿ ಗುಪ್ತಾ. ಆದರೆ ಒಂದೇ ವ್ಯತ್ಯಾಸ ಎಂದರೆ  ಜ್ಯೋತಿ, ಯುಟ್ಯೂಬ್​ ವಿಡಿಯೋ ಹೆಸರಿನಲ್ಲಿ ಬೇಹುಗಾರಿಕೆ ನಡೆಸುತ್ತಿದ್ದರೆ, ಮಾಧುರಿ ಐಎಫ್​ಎಸ್​ ಅಧಿಕಾರಿಯಾಗಿದ್ದರು. ಅಂದರೆ  ಭಾರತೀಯ ವಿದೇಶಾಂಗ ಸೇವೆ (Indian foreign service) ಅಧಿಕಾರಿಯಾಗಿದ್ದರು.  ಅನುಭವಿ ರಾಜತಾಂತ್ರಿಕರಾಗಿದ್ದ ಮಾಧುರಿ ಗುಪ್ತಾ, 52ನೇ ವಯಸ್ಸಿನಲ್ಲಿ 30 ವರ್ಷದ ಪಾಕಿಸ್ತಾನದ ಯುವಕನ ಮೋಹನ ಬಲೆಗೆ ಬಿದ್ದು,   ಭಾರತಕ್ಕೆ ದ್ರೋಹ ಮಾಡಿ ಸಿಕ್ಕಿಹಾಕಿಕೊಂಡಿದ್ದ ಘಟನೆ ಇದು.
 
  ಮಾಧುರಿ ಗುಪ್ತಾ ಭಾರತದ ರಾಜತಾಂತ್ರಿಕ ಕಾರ್ಯಾಚರಣೆಗಳ ಕಾವಲು ಕಾರಿಡಾರ್‌ಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದರು.  ಅವರು ವೃತ್ತಿಯಲ್ಲಿ ರಾಜತಾಂತ್ರಿಕರಾಗಿದ್ದರು, ಇಸ್ಲಾಮಾಬಾದ್‌ನಲ್ಲಿರುವ ಭಾರತೀಯ ಹೈಕಮಿಷನ್‌ನಲ್ಲಿ ಎರಡನೇ ಕಾರ್ಯದರ್ಶಿ (ಪತ್ರಿಕಾ ಮತ್ತು ಮಾಹಿತಿ) ಆಗಿ ನಿಯೋಜಿಸಲಾದ ಭಾರತೀಯ ವಿದೇಶಾಂಗ ಸೇವೆ (ಐಎಫ್‌ಎಸ್) ಅಧಿಕಾರಿಯಾಗಿದ್ದರು.  ಈ ಅತ್ಯಂತ ಸೂಕ್ಷ್ಮ ಸ್ಥಾನದಿಂದಲೇ ಮಾಧುರಿ ಗುಪ್ತಾ ಭಾರತದ ಸೂಕ್ಷ್ಮ ಮಾಹಿತಿಗಳನ್ನು ಸೋರಿಕೆ ಮಾಡಲು ಪ್ರಾರಂಭಿಸಿದ್ದರು. ಇದು ಭಾರತೀಯ ಗುಪ್ತಚರವನ್ನು ದಿಗ್ಭ್ರಮೆಗೊಳಿಸಿತ್ತು.  2010 ರಲ್ಲಿ ದೆಹಲಿ ಪೊಲೀಸರ ವಿಶೇಷ ಶಾಖೆಯಿಂದ ಅಧಿಕೃತ ರಹಸ್ಯ ಕಾಯ್ದೆಯಡಿಯಲ್ಲಿ ಬಂಧಿಸಲ್ಪಟ್ಟಾಗ ಪಾಕಿಸ್ತಾನದ ಪರ ಮಾಧುರಿ ಗುಪ್ತಾ ಅವರ ಬೇಹುಗಾರಿಕೆ ಬೆಳಕಿಗೆ ಬಂದಿತ್ತು.  

Jyoti Malhotra: ದೇಶದ್ರೋಹದ ಬೆನ್ನಲ್ಲೇ ರಾತ್ರೋರಾತ್ರಿ ಸೂಪರ್​ಸ್ಟಾರ್​: ಪಾಕಿ ಗೆಳತಿ ಜ್ಯೋತಿ ಇನ್​ಸ್ಟಾ ಬ್ಲಾಕ್​...

ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ಹಳೆಯ ವಿದ್ಯಾರ್ಥಿನಿಯಾಗಿದ್ದ ಮಾಧುರಿ, ಯುಪಿಎಸ್‌ಸಿ ತೇರ್ಗಡೆಯಾಗಿದ್ದ ಪ್ರತಿಭಾನ್ವಿತೆ.  ಇರಾಕ್, ಲೈಬೀರಿಯಾ, ಮಲೇಷಿಯಾ ಮತ್ತು ಕ್ರೊಯೇಷಿಯಾ ಸೇರಿದಂತೆ ಭಾರತಕ್ಕಾಗಿ ವಿವಿಧ ಕಾರ್ಯಾಚರಣೆಗಳಲ್ಲಿ ಸೇವೆ ಸಲ್ಲಿಸಿದ್ದರು. 2007 ರಲ್ಲಿ ಇಸ್ಲಾಮಾಬಾದ್‌ಗೆ ಅವರ ನಿಯೋಜನೆಯಾಗಿತ್ತು. ಆಗ ಅವರು  ಉರ್ದು ಭಾಷೆಯಲ್ಲಿ ಸುಲಲಿತವಾಗಿ ಮಾತನಾಡುವುದನ್ನು ಕಲಿತರು.  ಇಸ್ಲಾಮಾಬಾದ್‌ನಲ್ಲಿ ನಡೆದ ರಾಜತಾಂತ್ರಿಕ ಸಭೆಯಲ್ಲಿ, ಅವರನ್ನು ಪಾಕಿಸ್ತಾನಿ ಪತ್ರಕರ್ತರೊಬ್ಬರು 'ಜಿಮ್' ಎಂದು ಸಾಮಾಜಿಕ ವಲಯಗಳಲ್ಲಿ ಕರೆಯಲ್ಪಡುವ ಜಮ್ಶೆಡ್ ಎಂಬ ವ್ಯಕ್ತಿಗೆ ಪರಿಚಯಿಸಿದರು. ಜೈಶ್-ಎ-ಮೊಹಮ್ಮದ್ ಮುಖ್ಯಸ್ಥ ಮೌಲಾನಾ ಮಸೂದ್ ಅಜರ್ ಬರೆದ ಪುಸ್ತಕದ ಬಗ್ಗೆ ಸಾಂದರ್ಭಿಕ ಸಂಭಾಷಣೆಯ ಸಂದರ್ಭದಲ್ಲಿ ಇವರ ಪರಿಚಯವಾಯಿತು.  

ಜಮ್ಶೆಡ್ ಈ ಪುಸ್ತಕವನ್ನು ಖರೀದಿಸಲು ಮುಂದಾದ. ಆ ಸಮಯದಲ್ಲಿ ಇಬ್ಬರ ನಡುವೆ ಪರಿಚಯ ಗಾಢವಾಗಿ ಪ್ರಣಯಕ್ಕೆ ತಿರುಗಿತು. ಕುತೂಹಲದ ವಿಷಯ ಎಂದರೆ, ಆ ಸಮಯದಲ್ಲಿ ಮಾಧುರಿಗೆ 52 ವರ್ಷವಾಗಿದ್ದರೆ, ಜಮ್ಶೆಡ್​ಗೆ 30 ವರ್ಷ. ಇವರಿಬ್ಬರ ನಡುವೆ ಅದ್ಯಾವ ಪರಿ ಲವ್​ ಆಯಿತು ಎಂದರೆ ಮಾಧುರಿ,  ಇಸ್ಲಾಂಗೆ ಮತಾಂತರಗೊಂಡು ಆತನನ್ನು ಮದುವೆಯಾಗಲು ಸಿದ್ಧರಾಗಿದ್ದರು! ಆದರೆ ಈ ಸಮಯದಲ್ಲಿ ಕೆಲಸದ ಒತ್ತಡ ಹೆಚ್ಚಾಗಿದ್ದರಿಂದ ಇಬ್ಬರೂ ಭೇಟಿಯಾಗಲು, ಪ್ರೇಮ ವಿಚಾರ ಮಾತನಾಡಲು ಸಾಧ್ಯವಾಗುತ್ತಿರಲಿಲ್ಲ. ಇದರಿಂದ ಮಾಧುರಿ ಖಿನ್ನತೆಗೆ ಒಳಗಾಗಿದ್ದರು.  ಭಾವನಾತ್ಮಕವಾಗಿ ದುರ್ಬಲರಾಗಿದ್ದರು. ಇದನ್ನು ಗ್ರಹಿಸಿದ್ದ ಜಮ್ಶೆಡ್, ಮುದಾಸರ್ ರಜಾ ರಾಣಾ ಎಂಬ ಮತ್ತೊಬ್ಬ ಐಎಸ್‌ಐ ನಿರ್ವಾಹಕನೊಂದಿಗೆ, ಮಾಧುರಿಯವರನ್ನು ಭಾರತದ ವಿರುದ್ಧ ಬಳಸಿಕೊಳ್ಳಲು ಸಿದ್ಧಗೊಳಿಸಿದ. 

ಪ್ರೇಮದ ಬಲೆಯಲ್ಲಿ ಬಿದ್ದ ಮಾಧುರಿ, ಪಾಕಿಸ್ತಾನದ ಪರ ಕೆಲಸ ಮಾಡಲು ಶುರು ಮಾಡಿದರು.  ಅವರು ಭಾರತೀಯ ಸೇನೆ, ರಾ ಕಾರ್ಯಾಚರಣೆಗಳು, ಭಾರತ- ಅಮೆರಿಕ ಗುಪ್ತಚರ ವಿನಿಮಯ ಮತ್ತು 26/11 ಮುಂಬೈ ದಾಳಿಯ ತನಿಖೆಗೆ ಸಂಬಂಧಿಸಿದ ಅತ್ಯಂತ ರಹಸ್ಯ ಮಾಹಿತಿಯನ್ನು ಐಎಸ್‌ಐಗೆ ಪೂರೈಸಲು ಪ್ರಾರಂಭಿಸಿದರು. ಅವರ ವಿಧಾನಗಳು ಅತ್ಯಾಧುನಿಕವಾಗಿದ್ದವು. ಅವರು ಬ್ಲ್ಯಾಕ್‌ಬೆರಿ ಸಾಧನ ಮತ್ತು ಹೋಮ್ ಕಂಪ್ಯೂಟರ್ ಮೂಲಕ ತಮ್ಮ ನಿರ್ವಾಹಕರೊಂದಿಗೆ ಸಂಪರ್ಕ ಸಾಧಿಸುತ್ತಿದ್ದರು.  2009 ರ ಅಂತ್ಯದ ವೇಳೆಗೆ, ಇಸ್ಲಾಮಾಬಾದ್ ಹೈಕಮಿಷನ್‌ನಿಂದ ಗೂಢಚಾರನೊಬ್ಬ ಕಾರ್ಯನಿರ್ವಹಿಸುತ್ತಿದ್ದಾನೆ ಎಂದು ಭಾರತೀಯ ಗುಪ್ತಚರ ಸಂಸ್ಥೆಗಳು ಈಗಾಗಲೇ ಅನುಮಾನಿಸಲು ಪ್ರಾರಂಭಿಸಿದ್ದವು. ಮಾಧುರಿ ಗುಪ್ತಾ ಅವರ ಡಿಜಿಟಲ್ ಹೆಜ್ಜೆಗುರುತು,  ಇ-ಮೇಲ್‌ಗಳು ಮತ್ತು ಅನುಮಾನಾಸ್ಪದ ಚಲನವಲನಗಳು ತನಿಖಾಧಿಕಾರಿಗಳ ಸಂಶಕ್ಕೆ ಎಡೆ ಮಾಡಿಕೊಟ್ಟಿತು. 2018 ರಲ್ಲಿ, ದೆಹಲಿ ನ್ಯಾಯಾಲಯವು ಅಧಿಕೃತ ರಹಸ್ಯ ಕಾಯ್ದೆಯ ಸೆಕ್ಷನ್ 3 ಮತ್ತು 5 ರ ಅಡಿಯಲ್ಲಿ ಮಾಧುರಿ ಗುಪ್ತಾ ಅವರನ್ನು ದೋಷಿ ಎಂದು ಘೋಷಿಸಿ ಶಿಕ್ಷೆ ನೀಡಿತು.  

ಪೆಹಲ್ಗಾಮ್​ ದಾಳಿಗೂ- ಈಕೆಗೂ ಇದೆಂಥ ಕನೆಕ್ಷನ್​? ಫೋಟೋದಿಂದ ಬಯಲಾಯ್ತು ಭಯಾನಕ ಸತ್ಯ?

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ವಿಶ್ವದ ಅತಿ ಬಲಿಷ್ಠ ಕರೆನ್ಸಿಗಳಿವು: ಭಾರತದ ರುಪಾಯಿ ಮುಂದೆ ಘರ್ಜಿಸುವ ಡಾಲರ್ ಈ ದೇಶದ ಕರೆನ್ಸಿ ಮುಂದೆ ಡಮ್ಮಿ!
ರಾಜಮೌಳಿ-ಜೇಮ್ಸ್ ಕ್ಯಾಮರೂನ್ ಹೊಸ ಹೆಜ್ಜೆ, ನಟ ಮಹೇಶ್ ಬಾಬುಗೆ ಪ್ಯಾನ್ ವರ್ಲ್ಡ್ ಪಟ್ಟ..!