ವಿಶ್ವಸಂಸ್ಥೆ ಮಾನವ ಹಕ್ಕು ಮಂಡಳಿಯಿಂದ ರಷ್ಯಾ ಅಮಾನತು, ಮತ ಹಾಕದ ಭಾರತ!

Published : Apr 07, 2022, 11:52 PM ISTUpdated : Apr 07, 2022, 11:59 PM IST
ವಿಶ್ವಸಂಸ್ಥೆ ಮಾನವ ಹಕ್ಕು ಮಂಡಳಿಯಿಂದ ರಷ್ಯಾ ಅಮಾನತು, ಮತ ಹಾಕದ ಭಾರತ!

ಸಾರಾಂಶ

ಯುಎನ್ ಮಾನವ ಹಕ್ಕುಗಳ ಮಂಡಳಿಯಿಂದ ರಷ್ಯಾವನ್ನು ಅಮಾನತುಗೊಳಿಸುವ ನಿರ್ಧಾರಕ್ಕೆ ನಾವು "ಕೃತಜ್ಞತೆ" ಸಲ್ಲಿಸುತ್ತೇವೆ ಎಂದು ಉಕ್ರೇನ್ ಹೇಳಿದೆ, "ಯುದ್ಧ ಅಪರಾಧಿಗಳು ಮಾನವ ಹಕ್ಕುಗಳ ಮಂಡಳಿಯಲ್ಲಿ ಇರಬಾರದು ಎಂದು ಉಕ್ರೇನ್ ಹೇಳಿದೆ.  

ನವದೆಹಲಿ (ಏ. 7): ಉಕ್ರೇನ್‌ನ ಬುಕಾದಲ್ಲಿ (Bucha) ನಡೆದ ಹತ್ಯೆಗಳ ನಂತರ ವಿಶ್ವಸಂಸ್ಥೆಯ ಸಾಮಾನ್ಯ ಸಭೆ (United Nations General Assembly) ಗುರುವಾರ ರಷ್ಯಾವನ್ನು (Russia) ಮಾನವ ಹಕ್ಕುಗಳ ಮಂಡಳಿಯಿಂದ (U.N. Human Rights Council) ಅಮಾನತುಗೊಳಿಸಿದೆ (suspend). ಕೈವ್ ಸುತ್ತಮುತ್ತಲಿನ ಬುಚಾ ಮತ್ತು ಇತರ ಪಟ್ಟಣಗಳಲ್ಲಿ ನಾಗರಿಕ ಹತ್ಯೆಗಳ ಪುರಾವೆಗಳು ದೊರೆತಿದ್ದು, ಇದನ್ನು ರಷ್ಯಾ ಸೇನಾಪಡೆಗಳೆ ಮಾಡಿವೆ ಎಂದು ಉಕ್ರೇನ್ ಆರೋಪಿಸಿತ್ತು. ಆದರೆ, ಉಕ್ರೇನ್ ನ ಆರೋಪವನ್ನು ಸಂಪೂರ್ಣವಾಗಿ ಮಾಸ್ಕೋ ನಿರಾಕರಿತ್ತು. ಬುಕಾದಲ್ಲಿ ನಾಗರೀಕರ ಹತ್ಯೆ ಜಗತ್ತನ್ನು ಬೆಚ್ಚಿ ಬೀಳಿಸಿದ್ದು ಮಾತ್ರವಲ್ಲದೆ, ರಷ್ಯಾ ಮೇಲೆ ಇನ್ನಷ್ಟು ನಿರ್ಬಂಧಗಳನ್ನು ಹೇರಬೇಕು ಎನ್ನುವ ಮಾತುಗಳು ಕೇಳಿ ಬಂದಿದ್ದವು.

ಸಾಮಾನ್ಯ ಸಭೆಯ 193 ಸದಸ್ಯರಲ್ಲಿ, ಯುನೈಟೆಡ್ ಸ್ಟೇಟ್ಸ್ ಪ್ರಸ್ತಾಪಿಸಿದ ನಿರ್ಣಯಕ್ಕೆ 93 ಸದಸ್ಯರು ಅಮಾನತು ಪರವಾಗಿ ಮತ ಹಾಕಿದರೆ 24 ಸದಸ್ಯರು ವಿರುದ್ಧವಾಗಿ ಮತ ಹಾಕಿದರು ಮತ್ತು 58 ಸದಸ್ಯರು ಗೈರುಹಾಜರಾದರು. ಇದು ವಿಶ್ವಸಂಸ್ಥೆಯಲ್ಲಿ ರಷ್ಯಾ ವಿರುದ್ಧ ಅಂತರರಾಷ್ಟ್ರೀಯ ಏಕತೆಯನ್ನು ದುರ್ಬಲಗೊಂಡಿದೆ ಎನ್ನುವ ಸೂಚನೆಯೂ ಅಗಿದೆ. ಎಂದಿನಂತೆ ಭಾರತ ಯಾರ ಪರವಾಗಿಯೂ ಮತಹಾಕದೆ, ಈ ನಿರ್ಣಯಕ್ಕೆ ಗೈರು ಹಾಜರಾಗಿದೆ.

ವಿಶ್ವಸಂಸ್ಥೆಯ ಮಾನವ ಹಕ್ಕು ಸಮಿತಿಯಿಂದ ಅಮಾನತುಗೊಂಡ 2ನೇ ದೇಶ ರಷ್ಯಾ ಎನಿಸಿದೆ. ಇದಕ್ಕೂ ಮುನ್ನ 2011ರಲ್ಲಿ ಲಿಬಿಯಾ ದೇಶವನ್ನು ಇದೇ ಕಾರಣಕ್ಕಾಗಿ ಅಮಾನತು ಮಾಡಲಾಗಿತ್ತು. ಯುಎನ್ ಮಾನವ ಹಕ್ಕುಗಳ ಮಂಡಳಿಯಿಂದ ರಷ್ಯಾವನ್ನು ಅಮಾನತುಗೊಳಿಸುವ ನಿರ್ಧಾರಕ್ಕೆ ನಾವು "ಕೃತಜ್ಞತೆ" ಸಲ್ಲಿಸುತ್ತೇವೆ ಎಂದು ಉಕ್ರೇನ್ ಹೇಳಿದೆ, "ಯುದ್ಧ ಅಪರಾಧಿಗಳು ಮಾನವ ಹಕ್ಕುಗಳ ಮಂಡಳಿಯಲ್ಲಿ ಇರಬಾರದು ಎಂದು ಉಕ್ರೇನ್ ಹೇಳಿದೆ.

"ಮಾನವ ಹಕ್ಕುಗಳನ್ನು ರಕ್ಷಿಸುವ ಗುರಿಯನ್ನು ಹೊಂದಿರುವ ಯುಎನ್ ಸಂಸ್ಥೆಗಳಲ್ಲಿ ಯುದ್ಧ ಅಪರಾಧಿಗಳಿಗೆ ಸ್ಥಾನವಿರಬಾರದು" ಎಂದು ವಿದೇಶಾಂಗ ಸಚಿವ ಡಿಮಿಟ್ರೋ ಕುಲೆಬಾ ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ. ಈ ಸಂಬಂಧಿತ UNGA (ಯುನೈಟೆಡ್ ನೇಷನ್ಸ್ ಜನರಲ್ ಅಸೆಂಬ್ಲಿ) ನಿರ್ಣಯವನ್ನು ಬೆಂಬಲಿಸಿದ ಮತ್ತು ಇತಿಹಾಸದ ಸರಿಯಾದ ಭಾಗವನ್ನು ಆಯ್ಕೆ ಮಾಡಿದ ಎಲ್ಲಾ ಸದಸ್ಯ ರಾಷ್ಟ್ರಗಳಿಗೆ ಕೃತಜ್ಞರಾಗಿರುತ್ತೇನೆ ಎಂದು ಹೇಳಿದ್ದಾರೆ.

Russia Ukraine Crisis: ರಷ್ಯಾ ಸೇನೆಯಿಂದ ಸಾಮೂಹಿಕ ಹತ್ಯಾಕಾಂಡ

ಮತದಾನದ ನಂತರ ಮಾತನಾಡಿದ ರಷ್ಯಾದ ಉಪ ಯು.ಎನ್ ರಾಯಭಾರಿ ಗೆನ್ನಡಿ ಕುಜ್ಮಿನ್ ( Russia's deputy U.N. Ambassador Gennady Kuzmin) ಈ ಕ್ರಮವನ್ನು "ಅಕ್ರಮ ಮತ್ತು ರಾಜಕೀಯ ಪ್ರೇರಿತ ಹೆಜ್ಜೆ" ಎಂದು ಹೇಳಿದ್ದಲ್ಲದೆ, ರಷ್ಯಾ ಮಾನವ ಹಕ್ಕುಗಳ ಮಂಡಳಿಯನ್ನು ಸಂಪೂರ್ಣವಾಗಿ ತೊರೆಯಲು ನಿರ್ಧರಿಸಿದೆ ಎಂದು ಘೋಷಿಸಿದರು. "ನಿಮ್ಮನ್ನು ವಜಾಗೊಳಿಸಿದ ನಂತರ ನೀವು ನಿಮ್ಮ ರಾಜೀನಾಮೆಯನ್ನು ಸಲ್ಲಿಸುವ ಅಗತ್ಯವಿಲ್ಲ" ಎಂದು ಉಕ್ರೇನ್‌ನ U.N ರಾಯಭಾರಿ ಸರ್ಗಿ ಕಿಸ್ಲಿಟ್ಯಾ (Ukraine's U.N. Ambassador Sergiy Kyslytsya), ರಷ್ಯಾದ ಯುಎನ್ ರಾಯಭಾರಿಯ ಮಾತನ್ನು ಲೇವಡಿ ಮಾಡಿದ್ದಾರೆ.

Vladimir Putin: ಸಂಭಾವ್ಯ ದಾಳಿಯಿಂದ ರಕ್ಷಣೆಗೆ ಪುಟಿನ್‌ ಬಾಡಿ ಡಬಲ್‌ ನೇಮಕ

ಉಕ್ರೇನ್‌ನ ಮೇಲೆ ರಷ್ಯಾದ ಆಕ್ರಮಣದ ಕುರಿತು ವಿಶ್ವಸಂಸ್ಥೆಯ ಮತದಾನದಿಂದ ದೂರವಿರುವ ಭಾರತದ ನಿರ್ಧಾರದಿಂದ ತಾನು "ನಿರಾಶೆಗೊಂಡಿದ್ದೇನೆ" ಎಂದು ಯುಎಸ್ ಕಾಂಗ್ರೆಸ್‌ನ ಸದಸ್ಯರೊಬ್ಬರು ಗುರುವಾರ ಹೇಳಿದ್ದಾರೆ. ಪೆನ್ಸಿಲ್ವೇನಿಯಾದ ರಿಪಬ್ಲಿಕನ್ ಕಾಂಗ್ರೆಸ್ಸಿಗ ಬ್ರಿಯಾನ್ ಫಿಟ್ಜ್‌ಪ್ಯಾಟ್ರಿಕ್ ಸಂದರ್ಶನದಲ್ಲಿ ಮಾತನಾಡಿದ್ದು,ರಷ್ಯಾದ ಮೇಲೆ ತಮ್ಮ ಸಂಬಂಧಗಳನ್ನು ಉಳಿಸಿಕೊಳ್ಳುವ ದೇಶಗಳನ್ನು ಹೊಣೆಗಾರರನ್ನಾಗಿ ಮಾಡುವುದು ಅವಶ್ಯಕ ಎಂದು ಹೇಳಿದರು. "ನಾನು ನಿನ್ನೆಯಷ್ಟೇ ಭಾರತದ ರಾಯಭಾರಿಯನ್ನು ಭೇಟಿಯಾದೆ, ಯುಎನ್‌ನಲ್ಲಿ ಅವರು ಗೈರುಹಾಜರಾದ ಬಗ್ಗೆ, ನಾವು ತುಂಬಾ ನಿರಾಶೆಗೊಂಡಿದ್ದೇವೆ" ಎಂದು ಫಿಟ್ಜ್‌ಪ್ಯಾಟ್ರಿಕ್ ಇಲ್ಲಿ ನವದೆಹಲಿಯ ರಾಯಭಾರಿ ತರಂಜಿತ್ ಸಿಂಗ್ ಸಂಧು ಅವರೊಂದಿಗಿನ ಭೇಟಿಯನ್ನು ಉಲ್ಲೇಖಿಸಿ ಹೇಳಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮುದ್ದಿನ ಶ್ವಾನಗಳಿಗಾಗಿ ಅನಿಮೇಟೆಡ್ ಸಿನಿಮಾ ಶೋ ಆಯೋಜಿಸಿದ ಥಿಯೇಟರ್: ರೆಡ್ ಕಾರ್ಪೆಟ್ ಹಾಸಿ ಸ್ವಾಗತ
sculptor makeup: ಹುಡುಗರೇ ಆಹಾ ಚೂಪಾದ ಮೂಗು ಎಂಥಾ ಬ್ಯೂಟಿ ಅಂತ ಮರುಳಾಗದಿರಿ ಜೋಕೆ..!