ಪಿಒಕೆ, ಅಕ್ಸಾಯ್‌ಚಿನ್‌ ಭಾರತದ್ದೆಂದು ಚಿತ್ರಿಸಿದ ರಷ್ಯಾ, ಭೂಪಟ ಬಿಡುಗಡೆ

By Kannadaprabha NewsFirst Published Oct 21, 2022, 10:15 AM IST
Highlights

ಶಾಂಗೈ ಸಹಕಾರ ಶೃಂಗದ ಸದಸ್ಯ ರಾಷ್ಟ್ರಗಳ ಹೊಸ ನಕ್ಷೆಯೊಂದನ್ನು ರಷ್ಯಾ ಸರ್ಕಾರದ ಮುಖವಾಣಿ ಸುದ್ದಿಸಂಸ್ಥೆಯಾದ ಸ್ಪುಟ್ನಿಕ್‌ ಬಿಡುಗಡೆ ಮಾಡಿದೆ. ಈ ಹೊಸ ನಕ್ಷೆಯಲ್ಲಿ ಪಾಕ್‌ ಆಕ್ರಮಿತ ಕಾಶ್ಮೀರ ಮತ್ತು ಚೀನಾ ವಶದಲ್ಲಿರುವ ಅಕ್ಸಾಯ್‌ಚಿನ್‌ ಪ್ರದೇಶಗಳನ್ನು ಭಾರತದ್ದೆಂದು ತೋರಿಸಲಾಗಿದೆ.

ಮಾಸ್ಕೋ: ಶಾಂಗೈ ಸಹಕಾರ ಶೃಂಗದ ಸದಸ್ಯ ರಾಷ್ಟ್ರಗಳ ಹೊಸ ನಕ್ಷೆಯೊಂದನ್ನು ರಷ್ಯಾ ಸರ್ಕಾರದ ಮುಖವಾಣಿ ಸುದ್ದಿಸಂಸ್ಥೆಯಾದ ಸ್ಪುಟ್ನಿಕ್‌ ಬಿಡುಗಡೆ ಮಾಡಿದೆ. ಈ ಹೊಸ ನಕ್ಷೆಯಲ್ಲಿ ಪಾಕ್‌ ಆಕ್ರಮಿತ ಕಾಶ್ಮೀರ ಮತ್ತು ಚೀನಾ ವಶದಲ್ಲಿರುವ ಅಕ್ಸಾಯ್‌ಚಿನ್‌ ಪ್ರದೇಶಗಳನ್ನು ಭಾರತದ್ದೆಂದು ತೋರಿಸಲಾಗಿದೆ. ಇದು ಈ ಎರಡೂ ಪ್ರದೇಶಗಳ ಮೇಲಿನ ಭಾರತದ ಹಕ್ಕನ್ನು ಮತ್ತಷ್ಟು ಬಲಗೊಳಿಸಿದೆ. ಚೀನಾ ಮತ್ತು ಪಾಕಿ​ಸ್ತಾನ ಎಸ್‌​ಸಿಒ ಸದಸ್ಯ ರಾಷ್ಟ್ರ​ಗ​ಳಾ​ಗಿ​ದ್ದರೂ ರಷ್ಯಾ ಈ ನಿರ್ಧಾರ ಕೈಗೊಂಡಿ​ದ್ದು, ಈ ಮೂಲಕ ಚೀನಾ ಮತ್ತು ಪಾಕ್‌ಗೆ ಟಾಂಗ್‌ ನೀಡಿದೆ.

ರಷ್ಯಾದ ಮಾಧ್ಯಮ ಬಿಡುಗಡೆ ಮಾಡಿದ ಈ ನಕಾಶೆಯು  ಜಮ್ಮು ಕಾಶ್ಮೀರದ (J&K) ವಿಚಾರದಲ್ಲಿ ಅಂತಾರಾಷ್ಟ್ರೀಯವಾಗಿ ಮತ್ತು ಶಾಂಗೈ ಸಹಕಾರ ಶೃಂಗದ ಒಳಗೆ ಭಾರತದ ಸ್ಥಾನವನ್ನು ಹೆಚ್ಚಿಸಿದೆ. ಪಾಕ್ ಆಕ್ರಮಿತ ಕಾಶ್ಮೀರಕ್ಕೆ ಅಮೆರಿಕಾದ ರಾಯಭಾರಿ ಭೇಟಿಯ ನಂತರದಲ್ಲಿಈ ಬೆಳವಣಿಗೆ ನಡೆದಿದೆ. ಅಮೆರಿಕಾದ ರಾಯಭಾರಿ ಇದನ್ನು 'ಆಜಾದ್ ಕಾಶ್ಮೀರ' (Azad Kashmir) ಎಂದು ಕರೆದಿದ್ದರು. ಭಾರತ ಮತ್ತು ಪಾಕಿಸ್ತಾನ ನಡುವಿನ ಕಾಶ್ಮೀರ ವಿವಾದವನ್ನು ಬಗೆಹರಿಸುವಲ್ಲಿ ವಿಶ್ವಸಂಸ್ಥೆ ಮುಂದಾಳತ್ವ ವಹಿಸುವಂತೆ ಜರ್ಮನಿಯ ವಿದೇಶಾಂಗ ಸಚಿವರು ಇತ್ತೀಚೆಗೆ ಸೂಚಿಸಿದ್ದರು.

ಭಾರತದ 2ನೇ ಅತಿದೊಡ್ಡ ಕಚ್ಚಾ ತೈಲ ಪೂರೈಕೆದಾರನಾದ Russia: 5ನೇ ಸ್ಥಾನಕ್ಕೆ ಕುಸಿದ ಅಮೆರಿಕ

ಇದಕ್ಕೂ ಮೊದಲು ಶಾಂಗೈ ಸಹಕಾರ ಶೃಂಗಕ್ಕಾಗಿ (SCO) ಬಿಡುಗಡೆ ಮಾಡಲಾದ ನಕ್ಷೆಯಲ್ಲಿ ಭಾರತದ ಕೆಲವು ಪ್ರದೇಶಗಳನ್ನು ತನ್ನ ಭೂಪ್ರದೇಶದ ಭಾಗವಾಗಿ ತೋರಿಸುವ ಮೂಲಕ ಚೀನಾ ಭಾರತದ ನೆಮ್ಮದಿ ಕೆಡಿಸಲು ಯತ್ನಿಸಿತ್ತು. ಆದರೆ ಈಗ ಶಾಂಗೈ ಸಹಕಾರ ಶೃಂಗದ ಸಂಸ್ಥಾಪಕ ಸದಸ್ಯರಲ್ಲಿ ಒಂದಾದ ರಷ್ಯಾ, ಭಾರತದ ನಕ್ಷೆಯನ್ನು ಸರಿಗೊಳಿಸಿದೆ ಎಂದು ಸರ್ಕಾರದ ಒಳಗಿದ್ದವರು ಹೇಳುತ್ತಿದ್ದಾರೆ.

ಸೋವಿಯತ್ ಯೂನಿಯನ್ (Soviet Union) ಮತ್ತು ರಷ್ಯಾ (Russia) 1947 ರಿಂದಲೂ ಭಾರತದ ಕಾಶ್ಮೀರ ನಿಲುವನ್ನು ಬೆಂಬಲಿಸಿವೆ ಮತ್ತು ಭಾರತ ವಿರೋಧಿ ನಿರ್ಣಯಗಳನ್ನು ತಡೆಯಲು UNSC ಯಲ್ಲಿ ವೀಟೋವನ್ನು ಬಳಸಿದೆ. ಕಾಶ್ಮೀರವು, ಭಾರತ (India) ಮತ್ತು ಪಾಕಿಸ್ತಾನದ (Pakistan) ನಡುವಿನ ದ್ವಿಪಕ್ಷೀಯ ಸಮಸ್ಯೆ (bilateral issue) ಎಂದು ಮಾಸ್ಕೋ ಪದೇ ಪದೇ ಹೇಳಿದ್ದು, ವಿವಾದದಲ್ಲಿ ಯಾವುದೇ ಅಂತರಾಷ್ಟ್ರೀಯ ಮಧ್ಯಸ್ಥಿಕೆಯನ್ನು ತಡೆಯುತ್ತಲೇ ಬಂದಿದೆ. 
ರಷ್ಯಾದಿಂದ ತೈಲ ಖರೀದಿ: ಭಾರತದ ನಡೆಗೆ ಅಮೆರಿಕ ಆಕ್ಷೇಪ

click me!