ಈ ಹಕ್ಕಿಯ ಒಂದೇ ಒಂದು ಗರಿ 230000 ರೂಪಾಯಿಗೆ ಹರಾಜು: ಏನಿದರ ವಿಶೇಷತೆ

Published : Oct 13, 2025, 10:37 AM IST
Most Expensive Feather

ಸಾರಾಂಶ

Most Expensive Feather: ನ್ಯೂಜಿಲ್ಯಾಂಡ್‌ನಲ್ಲಿ, ಅಳಿದುಹೋದ ಹುಯಿಯಾ ಹಕ್ಕಿಯೊಂದರ ಗರಿಯು ಹರಾಜಿನಲ್ಲಿ ಸುಮಾರು 23 ಲಕ್ಷ ರೂಪಾಯಿಗೆ ಮಾರಾಟವಾಗಿ ವಿಶ್ವದಾಖಲೆ ನಿರ್ಮಿಸಿದೆ. ಈ ಹಕ್ಕಿಯ ಗರಿಗೆ ಇಷ್ಟೊಂದು ಬೆಲೆ ಏಕೆ ಏನಿದರ ವಿಶೇಷತೆ ಇಲ್ಲಿದೆ ಡಿಟೇಲ್ ಸ್ಟೋರಿ…

ಜಗತ್ತಿನಲ್ಲಿ ಕೆಲವು ವಸ್ತುಗಳಿಗೆ ನಾವು ಊಹೆಯೂ ಮಾಡಲಾಗದಷ್ಟು ಅಮೂಲ್ಯವಾದ ಬೆಲೆ ಇದೆ. ಬಹುತೇಕರಿಗೆ ಆ ವಸ್ತುಗಳಿಗೆ ಅಷ್ಟೊಂದು ಮೌಲ್ಯ ಇರುತ್ತದೆ ಎಂಬ ಕಲ್ಪನೆಯೂ ಇರುವುದಿಲ್ಲ, ಈ ಹಿಂದೆ ಸಾರಂಗ ಜೀರುಂಡೆ ಅಥವಾ ಸ್ಟಾಗ್ ಬೀಟೆಲ್ ಹೆಸರಿನ ಕೀಟವೊಂದು ಕೋಟ್ಯಾಂತರ ರೂಪಾಯಿ ಮೌಲ್ಯಕ್ಕೆ ಮಾರಾಟವಾಗಿದ್ದ ವಿಚಾರ ಸುದ್ದಿಯಾಗಿತ್ತು. ಇಂತಹ ಅಮೂಲ್ಯ ವಸ್ತುಗಳನ್ನು ಕೆಲವು ಸಂಗ್ರಹಕಾರರು ಅದೃಷ್ಟದ ಸಂಕೇತವೆಂದು ದುಬಾರಿ ಬೆಲೆ ನೀಡಿ ಖರೀದಿಸುತ್ತಾರೆ. ಹಾಗೆಯೇ ಈಗ ಇಲ್ಲೊಂದು ಕಡೆ ಹಕ್ಕಿಯೊಂದರ ಒಂದು ಸಣ್ಣ ಗರಿ ಲಕ್ಷಾಂತರ ಮೌಲ್ಯಕ್ಕೆ ಮಾರಾಟವಾದ ಸುದ್ದಿ ವೈರಲ್ ಆಗ್ತಿದೆ. ಅಂದಹಾಗೆ ಈ ಘಟನೆ ನಡೆದಿರುವುದು ನ್ಯೂಜಿಲ್ಯಾಂಡ್‌ನಲ್ಲಿ.

23 ಲಕ್ಷಕ್ಕೆ ಹರಾಜಾಯ್ತು ಹಕ್ಕಿಯ ಸಣ್ಣದೊಂದು ಗರಿ

ಜಗತ್ತಿನಲ್ಲಿರುವ ವಸ್ತುಗಳ ಮೌಲ್ಯವನ್ನು ಅವುಗಳ ಸೌಂದರ್ಯದಿಂದ ನಿರ್ಧರಿಸಲಾಗುತ್ತದೆ. ಪೂರೈಕೆ ಕೊರತೆ ಇದ್ದು ಬೇಡಿಕೆ ಜಾಸ್ತಿ ಇದ್ದಾಗ ವಸ್ತುಗಳ ಮೌಲ್ಯ ಏರಿಕೆ ಆಗುತ್ತದೆ. ಆದರೂ ಹಕ್ಕಿಯೊಂದರ ಗರಿ ಬರೋಬ್ಬರಿ 23 ಲಕ್ಷ ರೂಪಾಯಿಗೆ ಹರಾಜಾಗಿದೆ ಎಂದರೆ ನೀವು ಅಚ್ಚರಿಪಡಲೇಬೇಕು. ಹೌದು ಹುಯಿಯಾ ಎಂದು ಕರೆಯಲ್ಪಡುವ ಹಕ್ಕಿಯ ಅತ್ಯಂತ ಹಳೆಯ ಮತ್ತು ಸುಂದರವಾದ ಗರಿಯೊಂದು ಇತ್ತೀಚೆಗೆ ನ್ಯೂಜಿಲೆಂಡ್‌ನ ಹರಾಜು ಮನೆಯಲ್ಲಿ ಸುಮಾರು US$28,000 ಡಾಲರ್ ಎಂದರೆ ಸುಮಾರು ರೂ. 23 ಲಕ್ಷ ಭಾರತೀಯ ರೂಪಾಯಿಗೆ ಮಾರಾಟವಾಯಿತು. ಇದು ವಿಶ್ವದ ಅತ್ಯಂತ ದುಬಾರಿ ಗರಿಯಾಗಿದೆ. ಈ ಗರಿ ಅದರ ಬೆಲೆಗೆ ಮಾತ್ರವಲ್ಲದೆ ಅದರ ಆಕರ್ಷಕ ಕಥೆಯ ಕಾರಣಕ್ಕೂ ಸುದ್ದಿಯಲ್ಲಿದೆ. ಏಕೆಂದರೆ ಈ ಹಕ್ಕಿ ಭೂಮಿಯಿಂದ ಅಳಿದು ಹೋಗಿದ್ದು ಅಸ್ತಿತ್ವದಲ್ಲಿ ಇಲ್ಲ ಇದೇ ಕಾರಣಕ್ಕೆ ಈ ಹಕ್ಕಿಯ ಹಳೆಯ ರೆಕ್ಕೆಯೊಂದಕ್ಕೆ ಈಗ ಭಾರಿ ಬೆಲೆ ಬಂದಿದೆ.

ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಮೂಡಿಸಿತ್ತು ಗರಿಯ ಬೆಲೆ

ನ್ಯೂಜಿಲೆಂಡ್‌ನಲ್ಲಿ ಅಳಿದುಳಿದ ಹುಯಿಯಾ ಹಕ್ಕಿಯ ಈ ಗರಿ ಭಾರಿ ಮೊತ್ತಕ್ಕೆ ಮಾರಾಟವಾದ ವಿಚಾರ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಸೃಷ್ಟಿಸಿದೆ. ಹಳೆಯದಾದರು ಈ ಗರಿ ಉತ್ತಮ ಸ್ಥಿತಿಯಲ್ಲಿ ಇರುವುದಕ್ಕೆ ನೋಡುಗರು ಸಹ ಆಶ್ಚರ್ಯಪಟ್ಟಿದ್ದಾರೆ. ಹರಾಜಿನಲ್ಲಿ ಈ ಹಕ್ಕಿಯ ಅತೀ ಅಪರೂಪದ ಗರಿಗೆ ಆರಂಭಿಕ ಬೆಲೆ ಸುಮಾರು $3,000 ಡಾಲರ್ ಎಂದು ನಿಗದಿಪಡಿಸಲಾಗಿತ್ತು, ಆದರೆ ಹರಾಜು ಮುಂದುವರೆದಂತೆ ಹರಾಜಿನಲ್ಲಿ ಭಾಗಿಯಾದವರ ಮಧ್ಯೆ ಸ್ಪರ್ಧೆ ಹೆಚ್ಚಾಗಿದ್ದು, ಒಬ್ಬರಾದ ಮೇಲೆ ಒಬ್ಬರು ಹೆಚ್ಚು ಹೆಚ್ಚು ಬೆಲೆಗ ಈ ಗರಿಯ ಬೆಲೆಯನ್ನು ಹೆಚ್ಚಿಸುತ್ತಾ ಹೋಗಿದ್ದು, ಅಂತಿಮವಾಗಿ ಗರಿ $28,365 (ಸುಮಾರು ರೂ. 23.7 ಲಕ್ಷ) ಗೆ ಮಾರಾಟವಾಗಿದೆ. ಇತ್ತ ಸಾಮಾಜಿಕ ಜಾಲತಾಣಗಳಲ್ಲಿ ಈ ವಿಚಾರ ವೈರಲ್ ಆಗಿ ಸಂಚಲನ ಸೃಷ್ಟಿಸಿತು. ಕೆಲವರು ಇದನ್ನು ಇದುವರೆಗಿನ ಅತ್ಯಂತ ವಿಚಿತ್ರ ಸುದ್ದಿ ಎಂದು ಕರೆದರೆ ಇನ್ನು ಕೆಲವರು ಈ ಜಗತ್ತಿನಲ್ಲಿ ಏನೂ ಬೇಕಾದರೂ ಡೆಯುತ್ತದೆ. ಯಾವುದೇ ವಸ್ತುವಿಗೂ ಕಾಲ ಕಳೆಯುತ್ತಿದ್ದಂತೆ ಬೆಲೆ ಬರಬಹುದು ಎಂದು ಆಶ್ಚರ್ಯಪಟ್ಟರು.

ಈ ಹಕ್ಕಿಯ ಗರಿ ಇಷ್ಟು ದುಬಾರಿಯಾಗಲು ಕಾರಣ ಏನು?

ಈ ಗರಿ ಇಷ್ಟು ದುಬಾರಿ ಮೊತ್ತಕ್ಕೆ ಹರಾಜಾದ ಬಗ್ಗೆ ಪ್ರತಿಕ್ರಿಯಿಸಿದ ಹರಾಜನ್ನು ಆಯೋಜಿಸಿದ್ದ ವೆಬ್ಸ್ ಹರಾಜು ಮನೆಯ ಕಲಾ ತಜ್ಞೆ ಲಿಯಾ ಮೋರಿಸ್, ಹುಯಿಯಾ ಪಕ್ಷಿಯನ್ನು ನ್ಯೂಜಿಲೆಂಡ್‌ನ ಸಂಕೇತವೆಂದು ಪರಿಗಣಿಸಲಾಗಿದೆ. ಈ ಹಕ್ಕಿಯ ಗರಿಗಳು ವಿಶಿಷ್ಟವಾಗಿದ್ದವು ಏಕೆಂದರೆ ಅವು ಆಳವಾದ ಕಂದು ಬಣ್ಣದ್ದಾಗಿದ್ದವು ಮತ್ತು ಸ್ವಲ್ಪ ವರ್ಣವೈವಿಧ್ಯದ ಹೊಳಪನ್ನು ಹೊಂದಿದ್ದವು. ಈ ಗರಿಯನ್ನು ಎಷ್ಟು ಚೆನ್ನಾಗಿ ಸಂರಕ್ಷಿಸಲಾಗಿದೆಯೆಂದರೆ ಅದು ಕೀಟಗಳ ಬಾಧೆ ಅಥವಾ ಸವೆತದ ಯಾವುದೇ ಲಕ್ಷಣಗಳನ್ನು ತೋರಿಸಲಿಲ್ಲ, ಅದಕ್ಕಾಗಿಯೇ ಸಂಗ್ರಹಕಾರರು ಅದರ ಬಳಿಗೆ ಬಂದರು ಎಂದು ಮೋರಿಸ್ ಹೇಳಿದ್ದಾರೆ.

ಇದನ್ನೂ ಓದಿ: 100 ರೋಗಿಗಳ ಸಾವನ್ನು ಮೊದಲೇ ಸೂಚಿಸಿದ್ದ ಬೆಕ್ಕು: ಆಸ್ಕರ್ ನೀಡ್ತಿದ್ದ ಮುನ್ಸೂಚನೆ ಏನು?
ಇದನ್ನೂ ಓದಿ:  ಸಂಗಾತಿಯ ಸಾವಿನ ಅರಿವಿಲ್ಲದೇ ಹುಡುಕಾಟ ನಡೆಸಿ ರೋಧಿಸಿದ ಹೆಣ್ಣು ಹುಲಿ ಬಘಾನಿ 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ವಿಶ್ವದ ಅತಿ ಬಲಿಷ್ಠ ಕರೆನ್ಸಿಗಳಿವು: ಭಾರತದ ರುಪಾಯಿ ಮುಂದೆ ಘರ್ಜಿಸುವ ಡಾಲರ್ ಈ ದೇಶದ ಕರೆನ್ಸಿ ಮುಂದೆ ಡಮ್ಮಿ!
ರಾಜಮೌಳಿ-ಜೇಮ್ಸ್ ಕ್ಯಾಮರೂನ್ ಹೊಸ ಹೆಜ್ಜೆ, ನಟ ಮಹೇಶ್ ಬಾಬುಗೆ ಪ್ಯಾನ್ ವರ್ಲ್ಡ್ ಪಟ್ಟ..!