
ಟೋಕಿಯೊ (ಸೆ. 06): ಹಣ ಸಂಪಾದಿಸುವುದು ತುಂಬಾ ಕಷ್ಟ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಕಠಿಣ ಪರಿಶ್ರಮವಿಲ್ಲದೆ ಅಥವಾ ಏನನ್ನೂ ಮಾಡದೆ ನೀವು ಹಣವನ್ನು ಗಳಿಸಲು ಸಾಧ್ಯವಿಲ್ಲ. ಆದರೆ ಇಲ್ಲೊಬ್ಬ ಯುವಕ ಏನನ್ನೂ ಮಾಡದೆ ಪ್ರತಿ ಗಂಟೆಗೆ 5 ಸಾವಿರ ರೂಪಾಯಿಗಳಿಗಿಂತ ಹೆಚ್ಚು ಆದಾಯವನ್ನು ಗಳಿಸುತ್ತಿದ್ದಾನೆ. ಇದು ಜಪಾನ್‌ನ ಟೋಕಿಯೊ ನಿವಾಸಿ ಶೋಜಿ ಮೊರಿಮೊಟೊ (Shoji Morimoto) ಕಥೆ. ಈ ಯುವಕ ಪ್ರತಿದಿನ ಗಂಟೆಗೆ ₹5,679 (10,000 ಯೆನ್) ಗಳಿಸುತ್ತಾನೆ. ಆದರೆ ಈತ ಮಾಡುವ ಕೆಲಸವೇನು ಎಂದು ಯಾರಾದರೂ ಕೇಳಿದರೆ, ಉತ್ತರ "ಏನೂ ಇಲ್ಲ". ಏನೂ ಮಾಡದೇ ಹಣ ಗಳಿಸುವ ಟೋಕಿಯೋದ ಈ ಯುವಕನ ಇಂಟರಸ್ಟಿಂಗ್ ಸ್ಟೋರಿ ಇಲ್ಲಿದೆ ನೋಡಿ
38 ವರ್ಷದ ಶೋಜಿ ಮಾಡುವ ಕೆಲಸ ಬಹಳ ಕುತೂಹಲಕಾರಿಯಾಗಿದೆ. ವಾಸ್ತವವಾಗಿ, ಜನರು ತಮ್ಮೊಂದಿಗೆ ನಡೆದಾಡಲು, ಕುಳಿತುಕೊಳ್ಳು, ಕೆಲ ಕಾಲ ಸಮಯ ಕಳೆಯಲು ಗಂಟೆಯ ಲೆಕ್ಕದಲ್ಲಿ ಈ ಯುವಕನನ್ನು ಬಾಡಿಗೆಗೆ ಪಡೆಯುತ್ತಾರೆ. ಹೀಗೆ ಬಾಡಿಗೆ ಪಡೆದಾಗ ಯುವಕ ಆ ಜನರೊಂದಿಗೆ ಮಾತ್ರ ಹೋಗಬೇಕು. ಅದನ್ನೂ ಬಿಟ್ಟರೆ ಏನನ್ನೂ ಮಾಡುವಂತಿಲ್ಲ. ಜನರಿಗಾಗಿ ಯುವಕ ನೀಡಿದ ಸಮಯಕ್ಕಾಗಿ ಆತನಿಗೆ ಹಣ ನೀಡಲಾಗುತ್ತದೆ.
ಏಕೈಕ ಆದಾಯದ ಮೂಲ: ಕಳೆದ ನಾಲ್ಕು ವರ್ಷಗಳಲ್ಲಿ ತಾನು ಸುಮಾರು 4,000 ಹೀಗೆ ಬಾಡಿಗೆ ಕೆಲಸ ಮಾಡಿದ್ದೇನೆ ಎಂದು ಶೋಜಿ ಹೇಳಿಕೊಂಡಿದ್ದಾನೆ. ಅವರ ಗ್ರಾಹಕರಲ್ಲಿ ಒಬ್ಬರು ಅವನನ್ನು ಸುಮಾರು 270 ಬಾರಿ ನೇಮಿಸಿಕೊಂಡಿದ್ದಾರೆ. ಶೋಜಿ ತನ್ನ ಹೆಂಡತಿ ಮತ್ತು ಮಗುವಿನ ಪೋಷಣೆಗಾಗಿ ಈ ಕೆಲಸವನ್ನು ಸಂಪೂರ್ಣವಾಗಿ ಅವಲಂಬಿಸಿದ್ದಾನೆ. ಒಡನಾಟದ ವ್ಯವಹಾರವು ಈಗ ಮೊರಿಮೊಟೊ ಏಕೈಕ ಆದಾಯದ ಮೂಲವಾಗಿದೆ. ಆದರೆ ಈತ ಎಷ್ಟು ಸಂಪಾದಿಸುತ್ತಾನೆ ಎಂಬುದನ್ನು ಬಹಿರಂಗಪಡಿಸಲು ನಿರಾಕರಿಸಿದ್ದಾನೆ.
ಇದ್ದಕ್ಕಿದ್ದಂತೆ ಅಕೌಂಟ್‌ಗೆ ಬಿತ್ತು ಕೋಟಿ ರೂ. ಸ್ಯಾಲರಿ: ಕೆಲಸಕ್ಕೆ ರಾಜೀನಾಮೆ ನೀಡಿ ಉದ್ಯೋಗಿ ಪರಾರಿ
ಪ್ರತಿದಿನ ಎರಡು ಅಥವಾ ಮೂರು ಇಂತಹ ಗ್ರಾಹಕರನ್ನು ಯುವಕ ಪಡೆಯುತ್ತಾನೆ. ಶೋಜಿ ಈ ಕೆಲಸ ಮಾಡುವ ಮೊದಲು ಪ್ರಕಾಶನ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಮೂಲತಃ ತನ್ನನ್ನು ತಾನು ಬಾಡಿಗೆಗೆ ನೀಡುತ್ತೇನೆ ಎಂದು ಶೋಜಿ ಹೇಳಿದ್ದಾನೆ. ಬೇರೇನೂ ಮಾಡದೇ ಕೇವಲ ಗ್ರಾಹಕರ ಜತೆಗೆ ಎಲ್ಲಿ ಬೇಕಾದರೂ ಹೋಗುವುದು ನನ್ನ ಕೆಲಸವಾಗಿದೆ ಎಂದು ಯುವಕ ಹೇಳಿದ್ದಾನೆ.
ಯುವಕನ್ನು ಬಾಡಿಗೆಗೆ ಪಡೆಯುವ ಗ್ರಾಹಕರು: ಇನ್ನು ಕೆಲವರು ಯುವಕನಿಗೆ ತಮ್ಮೊಂದಿಗೆ ಗೇಮ್ ಪಾರ್ಕ್‌ಗೆ ಕರೆದುಕೊಂಡು ಹೋಗಲು ಬಾಡಿಗೆಗೆ ಪಡೆದರೇ ಇನ್ನೂ ಕೆಲವರು ರೈಲಿನಲ್ಲಿ ಪ್ರಯಾಣಿಸುವಾಗ ಗುಡ್ ಬೈ ಹೇಳಿ ಅವರಿಗಾಗಿ ಮುಗುಳ್ನಗೆ ಬೀರಲು ಈ ಯುವಕನ್ನು ಬಾಡಿಗೆ ಪಡೆಯುತ್ತಾರೆ.
ಇನ್ನು ಈತ ಕೆಲವೊಂದು ಬಾರಿ ಕೆಲಸ ಮಾಡಲು ನಿರಾಕರಿಸಿದ ಉದಾಹರಣೆಗಳು ಕೂಡ ಇವೆ. ಗ್ರಾಹಕರೊಬ್ಬರು ರೆಫ್ರಿಜರೇಟರನ್ನು ಎತ್ತುವಂತೆ ಕೇಳಿದಾಗ ನಿರಾಕರಿಸಿದ್ದರಂತೆ. ಅಲ್ಲದೇ ಕಾಂಬೋಡಿಯಾಕ್ಕೆ ಪ್ರಯಾಣಕ್ಕೆ ಬಾಡಿಗೆಗೆ ಕೇಳಿದಾಗ ನಿರಾಕರಿಸಿದ್ದು, ಯುವಕ ಸೆಕ್ಸ್ ವರ್ಕ್ ಕೂಡ ಮಾಡುವುದಿಲ್ಲ ಎಂದು ತಿಳಿಸಿದ್ದಾನೆ.
ತನ್ನ 1000 ಸೆಲ್ಫಿ ಮಾರಾಟ ಮಾಡಿ ಕೋಟ್ಯಧಿಪತಿಯಾದ ಇಂಡೋನೇಷಿಯನ್ ವಿದ್ಯಾರ್ಥಿ!
ಇನ್ನು ಕಳೆದ ವಾರ, ಮೊರಿಮೊಟೊ 27 ವರ್ಷದ ಡೇಟಾ ವಿಶ್ಲೇಷಕಿ (Data Analyst) ಅರುಣಾ ಚಿದಾ ಅವರ ಎದುರು ಬಾಡಿಗೆಗಾಗಿ ಕುಳಿತುಕೊಂಡಿದ್ದ. ಈ ವೇಳೆ ಅರುಣಾ ಚಿದಾ ಸೀರೆಯನ್ನು ಧರಿಸಿದ್ದು ಚಹಾ ಮತ್ತು ಕೇಕ್ ಸವಿಯುತ್ತಾ ಸಂಭಾಷಣೆ ನಡೆಸಿದ್ದಾರೆ. ಚಿದಾ ಅವರು ಭಾರತೀಯ ಉಡುಪನ್ನು ಸಾರ್ವಜನಿಕವಾಗಿ ಧರಿಸಲು ಬಯಸಿದ್ದರು ಆದರೆ ಅದು ತನ್ನ ಸ್ನೇಹಿತರನ್ನು ಮುಜುಗರಕ್ಕೀಡುಮಾಡಬಹುದೆಂದು ಎಂಬ ಚಿಂತೆ ಅವರಲ್ಲಿತ್ತು. ಆದ್ದರಿಂದ ಅವಳು ಒಡನಾಟಕ್ಕಾಗಿ ಮೊರಿಮೊಟೊನನ್ನು ಬಾಡಿಗೆಗೆ ಪಡೆದಿದ್ದಳು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ