
ಬೀಜಿಂಗ್ (ಸೆ.6): ಚೀನಾದ ಸಿಚುವಾನ್ ಪ್ರಾಂತ್ಯದ ನೈರುತ್ಯದಲ್ಲಿರುವ ಲೌಡಿಂಗ್ ಕೌಂಟಿಯಲ್ಲಿ ಭಾರೀ ಪ್ರಮಾಣದ ಭೂಕಂಪ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 6.8ರ ತೀವ್ರತೆ ದಾಖಲಾಗಿದೆ. ಈ ಭೂಕಂಪದಲ್ಲಿ ಈವರೆಗೂ 46 ಮಂದಿ ಸಾವಿಗೀಡಾಗಿರುವ ಬಗ್ಗೆ ವರದಿಯಾಗಿದ್ದು, ಸಾಕಷ್ಟು ಜನರು ಗಾಯಾಳುವಾಗಿರುವ ನಿರೀಕ್ಷೆ ಇದೆ. ಕೋವಿಡ್-19 ಪ್ರಕರಣಗಳು ಹಾಗೂ ವಿಪರೀತ ಬರಗಾಲದಿಂದಾಗಿ ಈ ಪ್ರದೇಶದ ಜನತೆ ಸಂಕಷ್ಟ ಎದುರಿಸುತ್ತಿರುವ ನಡುವೆಯೇ ಭೂಕಂಪ ಕೂಡ ಆಗಿದ್ದು ಇನ್ನಷ್ಟು ಕಷ್ಟಕ್ಕೆ ಕಾರಣವಾಗಿದೆ. ಕ್ಸಿನುವಾ ಸುದ್ದಿಸಂಸ್ಥೆಯ ಪ್ರಕಾರ, ಚೀನಾ ಭೂಕಂಪ ನೆಟ್‌ವರ್ಕ್ ಕೇಂದ್ರವು ಸ್ಥಳೀಯ ಕಾಲಮಾನ ಮಧ್ಯಾಹ್ನ 12:25 ಕ್ಕೆ ಸಂಭವಿಸಿದ ಭೂಕಂಪದ ಕೇಂದ್ರಬಿಂದುವನ್ನು 29.59 ಡಿಗ್ರಿ ಉತ್ತರ ಅಕ್ಷಾಂಶ ಮತ್ತು 102.08 ಡಿಗ್ರಿ ಪೂರ್ವ ರೇಖಾಂಶದಲ್ಲಿ 16 ಕಿಮೀ ಆಳದಲ್ಲಿ ಗಮನಿಸಲಾಗಿದೆ ಎಂದು ಉಲ್ಲೇಖ ಮಾಡಿದೆ. ಭೂಕಂಪದ ಕೇಂದ್ರವು ಲುಡಿಂಗ್‌ನ ಕೌಂಟಿ ಸೀಟ್‌ನಿಂದ 39-ಕಿಮೀ ದೂರದಲ್ಲಿದೆ ಮತ್ತು ಅಧಿಕೇಂದ್ರದ ಸುತ್ತಲೂ 5-ಕಿಮೀ ವ್ಯಾಪ್ತಿಯಲ್ಲಿ ಹಲವಾರು ಹಳ್ಳಿಗಳಿವೆ. ಚೀನಾದ ಅಧಿಕೃತ ಸುದ್ದಿ ಮಾಧ್ಯಮಗಳ ಪ್ರಕಾರ, ಭೂಕಂಪದ ಸ್ಥಳದಲ್ಲಿರುವ ಅಧಿಕಾರಿಗಳು ಈವರೆಗೂ 46 ಮಂದಿ ಸಾವು ಕಂಡಿರುವುದನ್ನು ಗುರುತಿಸಿದ್ದಾರೆ. 50ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ ಎಂದು ಹೇಳಿದ್ದಾರೆ.
ಗಾಯಾಳುಗಳು ಹಾಗೂ ಸಾವಿನ ಪ್ರಮಾಣ ಇನ್ನಷ್ಟು ಏರಿಕೆಯಾಗುವ ಸಾದ್ಯತೆ ಇದ್ದು, ರಕ್ಷಣಾ ತಂಡಗಳನ್ನು ಕಾರ್ಯಾಚರಣೆಗಾಗಿ ನಿಯೋಜನೆ ಮಾಡಲಾಗಿದೆ. ಸಾವು ಕಂಡವರ ಪೈಕಿ 29 ಮಂದಿ, ಲೌಡಿಂಗ್ ಕೌಂಟಿಯ (Luding County) ಆಡಳಿತ ನಡೆಸುತ್ತಿರುವ ಗಂಜಿ ಟಿಬೇಟಿಯನ್ ಅಟೋನಮಸ್ ಫ್ರಿಫೇಚರ್‌ನವರಾಗಿದ್ದಾರೆ. ಇನ್ನೂ 17 ಮಂದಿ ಯಾನ್ ಸಿಟಿಯ (Yaan City) ನಿವಾಸಿಗಳಾಗಿದ್ದಾರೆ ಎಂದು ಹೇಳಲಾಗಿದೆ. 21 ಮಿಲಿಯನ್‌ಗಿಂತ ಹೆಚ್ಚು ಜನಸಮಖ್ಯೆಯನ್ನು ಹೊಂದಿರುವ ಚೆಂಗ್ಡು ಪ್ರಾಂತ್ಯದ ಬಹುತೇಕ ಜನರು ಇಡೀ ದಿನವನ್ನು ಮನೆಯಿಂದ ಹೊರಗಡೆ ಕಳೆದಿದ್ದಾರೆ. ಭೂಕಂಪದ ಪರಿಣಾಮವು ಈ ಪ್ರದೇಶದಲ್ಲಿ ಕೂಡ ವ್ಯಾಪಿಸಿತ್ತು. ರಸ್ತೆ ಸಂಪರ್ಕ, ವಿದ್ಯುತ್, ನೀರು, ಸಾರಿಗೆ ಹಾಗೂ ದೂರವಾಣಿ ಸೇವೆಗಳು ಕೂಡ ಸಂಪೂರ್ಣವಾಗಿ ಕಡಿತವಾಗಿದೆ. 'ಸೆಪ್ಟೆಂಬರ್ 5 ರಂದು ಇಲ್ಲಿನ ಸಿಚುವಾನ್ ಪ್ರಾಂತ್ಯದಲ್ಲಿ (Sichuan province) ಸಂಭವಿಸಿದ ಭೀಕರ ಭೂಕಂಪದಲ್ಲಿ (china earthquake) ಸಾವು ಕಂಡವರಿಗೆ ಸಂತಾಪಗಳು. ಗಾಯಾಗಳು ಅದಷ್ಟು ಬೇಗ ಚೇತರಿಕೆ ಕಾಣಲಿ ಎಂದು ಹಾರೈಸುತ್ತೇವೆ' ಎಂದು ಭಾರತದ ರಾಯಭಾರ ಕಚೇರಿ ಟ್ವೀಟ್ ಮಾಡಿದೆ.
ಸಾವಿನ ಪ್ರಮಾಣವನ್ನು ಕಡಿಮೆ ಮಾಡುವ ನಿಟ್ಟನಲ್ಲಿ ಆದಷ್ಟು ಶೀಘ್ರವಾಗಿ ಹಾಗೂ ಅತ್ಯಂತ ವೇಗವಾಗಿ ರಕ್ಷಣಾ ಕಾರ್ಯಾಚರಣೆಗಳು ನಡೆಯಬೇಕು ಎಂದು ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಹೇಳಿದ್ದಾರೆ. ರಕ್ಷಣಾ ಕಾರ್ಯಾಚರಣೆಯಲ್ಲಿ ಜನರ ಜೀವ ಉಳಿಸುವುದೇ ಮೊದಲ ಆದ್ಯತೆಯಾಗಿರಬೇಕು ಎಂದಿದ್ದಾರೆ. ಭೂಕಂಪದ ಮೇಲ್ವಿಚಾರಣೆಯನ್ನು ಬಲಪಡಿಸುವುದು, ದ್ವಿತೀಯ ವಿಪತ್ತುಗಳ ವಿರುದ್ಧ ಕಾವಲು ಕಾಯುವುದು ಮತ್ತು ಪೀಡಿತರಿಗೆ ಸರಿಯಾಗಿ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಜಿನ್‌ಪಿಂಗ್ (Chinese President Xi Jinping ) ಹೇಳಿದ್ದಾರೆ.
ವಿಜಯಪುರದಲ್ಲಿ ಸರಣಿ ಭೂಕಂಪನ: ವಿಜ್ಞಾನಿಗಳು ಬಂದಾಗಲೇ ಕಂಪಿಸಿದ ಭೂಮಿ..!
ಜನರ ಜೀವನ ಮತ್ತು ಆಸ್ತಿಯ ಸುರಕ್ಷತೆಯನ್ನು ಖಾತ್ರಿಪಡಿಸಲು ಹೆಚ್ಚಿನ ಪ್ರಯತ್ನಗಳಿಗೆ ಕರೆ ನೀಡಿದ ಕ್ಸಿ, ಪರಿಹಾರ ಕಾರ್ಯಗಳಿಗೆ ಮಾರ್ಗದರ್ಶನ ನೀಡಲು ಸಿಚುವಾನ್‌ಗೆ ತಂಡಗಳನ್ನು ಕಳುಹಿಸಲು ತುರ್ತು ನಿರ್ವಹಣಾ ಸಚಿವಾಲಯ ಮತ್ತು ಇತರ ಇಲಾಖೆಗಳನ್ನು ಕೇಳಿದರು ಮತ್ತು ಪೀಪಲ್ಸ್ ಲಿಬರೇಶನ್ ಆರ್ಮಿ ಮತ್ತು ಪೀಪಲ್ಸ್ ಆರ್ಮ್ಡ್ ಪೋಲೀಸ್ ಫೋರ್ಸ್ ಅನ್ನು ಸಕ್ರಿಯವಾಗಿ ಕಾರ್ಯನಿರ್ವಹಿಸುವಂತೆ ಆದೇಶಿಸಿದರು.
ಅಫ್ಘನ್ ಭೂಕಂಪದಲ್ಲಿ ತನ್ನವರನ್ನೆಲ್ಲಾ ಕಳೆದುಕೊಂಡ 3 ವರ್ಷದ ಮಗುವಿಗೆ ಮರುಗಿದ ಜನ!
ಚೀನಾದ ಪ್ರೀಮಿಯರ್ ಲಿ ಕಿಕ್ವಿಯಾಂಗ್ ಕೂಡ, ಶೀಘ್ರವಾಗಿ ಪರಿಸ್ಥಿತಿಯನ್ನು ಹತೋಟಿಗೆ ತಂದುಕೊಳ್ಳಬೇಕು ಎಂದು ಹೇಳಿದ್ದು, ಆದಷ್ಟು ಶೀಘ್ರವಾಗಿ ವೈದ್ಯಕೀಯ ಸಹಾಯವನ್ನು ಗಾಯಾಳುಗಳಿಗೆ ನೀಡುವಂಯೆ ಸೀಚಿಸಿದ್ದಾರೆ. ಭೂಕಂಪದ ಬಳಿಕ ಚೀನಾದ ರೆಡ್ ಕ್ರಾಸ್ ಸೊಸೈಟಿ ಕೂಡ ಲೆವಲ್-3 ತುರ್ತು ಪ್ರತಿಕ್ರಿಯೆಯನ್ನು ಘಫಷಣೆ ಮಾಡಿದೆ. ಮೊದಲ ಬ್ಯಾಚ್‌ನ ರಕ್ಷಣಾ ಕಿಟ್‌ನಲ್ಲಿ 320 ಟೆಂಟ್‌ಗಳು, 2200 ರಿಲೀಫ್ ಪ್ಯಾಕೇಜ್‌ಗಳು, 1200 ಬೆಡ್‌ಶೀಟ್‌ಗಳು ಹಾಗೂ 300 ಫೋಲ್ಡಿಂಗ್ ಬೆಡ್‌ಗಳನ್ನು ಭೂಕಂಪ ಪೀಡಿತ ಪ್ರದೇಶಕ್ಕೆ ಕಳುಹಿಸಿಕೊಟ್ಟಿದೆ. 2008 ರಲ್ಲಿ ಪ್ರಾಂತ್ಯದಲ್ಲಿ 8.2 ತೀವ್ರತೆಯ ಭೂಕಂಪ ಸಂಭವಿಸಿದಾಗ 69,000 ಕ್ಕೂ ಹೆಚ್ಚು ಜನರು ಸಾವು ಕಂಡಿದ್ದರು.2013 ರಲ್ಲಿ 7 ರ ತೀವ್ರತೆಯ ಭೂಕಂಪವು 200 ಜನರನ್ನು ಬಲಿ ತೆಗೆದುಕೊಂಡಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ