ರಾಷ್ಟ್ರೀಯ ಆನೆ ದಿನ : ಹಣ್ಣು ತರಕಾರಿಗಳ ಬಪೆ ಆಯೋಜಿಸಿ ಗಜಪಡೆಗೆ ಸನ್ಮಾನ

By Suvarna News  |  First Published Mar 14, 2022, 12:50 PM IST
  • ರಾಷ್ಟ್ರೀಯ ಆನೆ ದಿನ ಆಯೋಜಿಸಿ ಥೈಲ್ಯಾಂಡ್
  • ಆನೆಗಳಿಗೆ ಹಣ್ಣು ತರಕಾರಿ ನೀಡಿ ಪುರಸ್ಕಾರ
  • 60 ಆನೆಗಳಿಗೆ 26 ಅಡಿ ಅಗಲದ ಮೇಜಿನ ಮೇಲೆ ಬಪೆ

ಥೈಲ್ಯಾಂಡ್ ದೇಶವೂ ಆನೆಗಳಿಗೂ ಒಂದು ದಿನವನ್ನು ಮೀಸಲಿಟ್ಟಿದೆ. ನಿನ್ನೆ ಮಾರ್ಚ್‌ 13 ರಂದು ರಾಷ್ಟ್ರೀಯ ಆನೆ ದಿನವನ್ನು ಥೈಲ್ಯಾಂಡ್ ಆಯೋಜಿಸಿದೆ. ಈ ದಿನದ ಅಂಗವಾಗಿ ಆನೆಗಳನ್ನು ಗೌರವಿಸಲು ಥೈಲ್ಯಾಂಡ್ ಸರ್ಕಾರ ಆನೆಗಳಿಗೆ ಹಣ್ಣಿನ ಬಫೆಯನ್ನು ಆಯೋಜಿಸಿತ್ತು. ಚೋನ್ ಬುರಿ ಪ್ರಾಂತ್ಯದ ನಾಂಗ್ ನೂಚ್ ಟ್ರಾಪಿಕಲ್ ಗಾರ್ಡನ್‌ನಲ್ಲಿ 60 ಆನೆಗಳಿಗೆ 26 ಅಡಿ ಅಗಲದ ಮೇಜಿನ ಮೇಲೆ ಎರಡು ಟನ್ ಹಣ್ಣುಗಳು ಮತ್ತು ತರಕಾರಿಗಳನ್ನು ನೀಡಲು ವ್ಯವಸ್ಥೆ ಮಾಡಲಾಗಿತ್ತು ಎಂದು ವರದಿಯೊಂದು ತಿಳಿಸಿದೆ. ಆಗ್ನೇಯ ಏಷ್ಯಾದ ರಾಷ್ಟ್ರ ಥೈಲ್ಯಾಂಡ್‌ ತನ್ನ ರಾಷ್ಟ್ರೀಯ ಚಿಹ್ನೆಯಾಗಿರುವ ಥಾಯ್ ಆನೆಗಳನ್ನು ಗೌರವಿಸಲು ವಾರ್ಷಿಕವಾಗಿ ಈ ಆಚರಣೆಯನ್ನು ಆಯೋಜಿಸುತ್ತಿದೆ. 

ಹಾಗೆಯೇ ಈ ವರ್ಷವೂ ಥಾಯ್ ರಾಷ್ಟ್ರೀಯ ಆನೆ ದಿನದಂದು ಥಾಯ್ಲೆಂಡ್‌ನ ಬೊಟಾನಿಕಲ್ ಪಾರ್ಕ್‌ನಲ್ಲಿ ಸುಮಾರು 60 ಆನೆಗಳಿಗೆ ಬೃಹತ್ ಹಣ್ಣಿನ ಔತಣವನ್ನು ಏರ್ಪಡಿಸಲಾಗಿತ್ತು. ಚೋನ್ ಬುರಿ ಪ್ರಾಂತ್ಯದ (Chon Buri province) ನಾಂಗ್ ನೂಚ್ ಟ್ರಾಪಿಕಲ್ ಗಾರ್ಡನ್‌ನಲ್ಲಿ (Nong Nooch Tropical Garden) ಈ ದೈತ್ಯ ಆನೆಗಳಿಗೆ 26 ಅಡಿ ಅಗಲದ ಮೇಜಿನ ಮೇಲೆ ಎರಡು ಟನ್ ಹಣ್ಣುಗಳು ಮತ್ತು ತರಕಾರಿಗಳನ್ನು ಹಾಕಲಾಗಿದೆ ಎಂದು ರಾಯಿಟರ್ಸ್ ವರದಿ ಮಾಡಿದೆ.

Thailand lays out buffet for elephants in national celebration https://t.co/mprEwhdQQa pic.twitter.com/JZTe7kdkPp

— Reuters World (@ReutersWorld)

Tap to resize

Latest Videos

 

ಥಾಯ್ ಸಂಸ್ಕೃತಿಯಲ್ಲಿ ಆನೆಯ ಮಹತ್ವವನ್ನು ಎತ್ತಿ ತೋರಿಸಲು ಮತ್ತು ವೇಗವಾಗಿ ಕ್ಷೀಣಿಸುತ್ತಿರುವ  ಈ ಆನೆ ಜಾತಿಗಳ ಸಂರಕ್ಷಣೆಗಾಗಿ ಜಾಗೃತಿ ಮೂಡಿಸಲು ಮಾರ್ಚ್ 13 ರಂದು 34 ವರ್ಷಗಳ ಹಿಂದೆ ಈ ದಿನದ ಆಚರಣೆಯನ್ನು ಆರಂಭಿಸಲಾಯಿತು. ಸಾಮಾನ್ಯವಾಗಿ, ಥೈಲ್ಯಾಂಡ್‌ ದೇಶದ ಹಲವು ಭಾಗಗಳಲ್ಲಿ ರಾಷ್ಟ್ರೀಯ ಆನೆ ದಿನವನ್ನು ಆಚರಿಸಲಾಗುತ್ತದೆ. ಆದರೆ ಕೋವಿಡ್‌ ಸಾಂಕ್ರಾಮಿಕದ ಪರಿಣಾಮವಾಗಿ ಉಂಟಾದ ಆರ್ಥಿಕ ಸಂಕಷ್ಟಗಳು ಈ ಬಾರಿ ಆಚರಣೆಗಳನ್ನು ಕಡಿಮೆಗೊಳಿಸಿವೆ.

Emotional Video : ಆನೆ ಹಾಗೂ ಸಾಕಿದಾತನ ಅಪೂರ್ವ ಸಮ್ಮಿಲನ... ಮತ್ತೆ ಮತ್ತೆ ನೋಡುವಂತೆ ಮಾಡುವ ವಿಡಿಯೋ
 

ಆದಾಗ್ಯೂ, ಆನೆಗಳಿಗಾಗಿ ಆಯೋಜಿಸಿದ ಈ ಬಫೆ ಕಾರ್ಯಕ್ರಮ ಆನೆ ಹಾಗೂ ಈ ಕಾರ್ಯಕ್ರಮದ ವೀಕ್ಷಣೆಗೆ ಪಾರ್ಕ್‌ಗೆ ಬಂದ ಸಂದರ್ಶಕರಿಗೆ ಖುಷಿ ನೀಡಿತ್ತು. ಸಹಜವಾಗಿ, ಆನೆಗಳು ಬೇಸರಗೊಳ್ಳುತ್ತವೆ (ಸಂದರ್ಶಕರ ಅನುಪಸ್ಥಿತಿಯಲ್ಲಿ) ಏಕೆಂದರೆ ಆನೆಗಳು ಜನರೊಂದಿಗೆ ಇರಲು ಬಯಸುತ್ತವೆ. ಅದಕ್ಕಾಗಿಯೇ ನಮ್ಮ ಆನೆಗಳು ಎಲ್ಲರಿಗೂ ತುಂಬಾ ಸ್ನೇಹಪರವಾಗಿವೆ ಎಂದು ನಾಂಗ್ ನೂಚ್ ಟ್ರಾಪಿಕಲ್ ಗಾರ್ಡನ್‌ನ ಅಧ್ಯಕ್ಷ ಕಾಂಪೊನ್ ತಾನ್ಸಾಚಾ ಸುದ್ದಿಸಂಸ್ಥೆ ರಾಯಿಟರ್ಸ್‌ಗೆ (Reuters) ತಿಳಿಸಿದ್ದಾರೆ.

ಇಲ್ಲಿಗೆ ಬರುವ ಜನರು ಆನೆಗಳನ್ನು ನೋಡುವುದನ್ನು ಆನಂದಿಸುತ್ತಾರೆ, ಆನೆಗಳಿಗೆ ಆಹಾರವನ್ನು ನೀಡುತ್ತಾರೆ, ವಿಶೇಷವಾಗಿ ಆನೆಗಳು ಇಷ್ಟಪಡುವ ಬಾಳೆಹಣ್ಣುಗಳನ್ನು ನೀಡುತ್ತಾರೆ ಮತ್ತು ಆನೆಗಳನ್ನು ಆರೋಗ್ಯಕರವಾಗಿ ಮತ್ತು ಸಂತೋಷದಿಂದ ಕಾಣುತ್ತಾರೆ. ಆದಾಗ್ಯೂ, ಆನೆಗಳು ನೈಸರ್ಗಿಕವಾಗಿ ಮನುಷ್ಯರೊಂದಿಗೆ ಸ್ನೇಹ ಹೊಂದಿಲ್ಲ. ಇಲ್ಲಿನ ಅನೇಕ ಉದ್ಯಾನವನಗಳು ತಮ್ಮನ್ನು ಅಭಯಾರಣ್ಯವೆಂದು ಬ್ರಾಂಡ್ ಮಾಡಿಕೊಂಡಿವೆ. ಪ್ರವಾಸಿಗರು  ದೈತ್ಯ ಆನೆಗಳೊಂದಿಗೆ ಬಹಳ ನಿಕಟವಾಗಿ ಸಂವಹನ ನಡೆಸಲು ಈ ಅಭಯಾರಣ್ಯಗಳು ಅನುವು ಮಾಡಿಕೊಟ್ಟಿವೆ. ಆನೆಗಳ ಸ್ಪರ್ಶ, ಸಂವಹನ, ಆಹಾರ, ಸ್ನಾನ ಮತ್ತು ಸವಾರಿಗೂ ಕೆಲ ಅಭಯಾರಣ್ಯದಲ್ಲಿ ಅವಕಾಶವಿದೆ.

ತಾಯಾನೆ ಹಾಲಿಗೆ ಮರಿಗಳೆರಡರ ಕಿತ್ತಾಟ... ಅಮ್ಮ ಏನ್ಲಾಡಿದ್ಲು ನೋಡಿ...!
ಅದಾಗ್ಯೂ ಹಾನಿಕರವಲ್ಲದ ಈ ಅಭ್ಯಾಸಗಳು ವಾಸ್ತವವಾಗಿ ಅನೈತಿಕವಾಗಿವೆ ಏಕೆಂದರೆ ಆನೆಗಳು ಮಾನವನ ಆದೇಶಗಳನ್ನು ಪಾಲಿಸಲು ಅಥವಾ ಆಟವಾಡಲು ತೀವ್ರವಾದ ಟ್ರೈನಿಂಗ್‌ ಮೂಲಕ ಹೋಗಬೇಕಾಗುತ್ತದೆ. ಈ ಪ್ರಕ್ರಿಯೆಯು ನೋವಿನಿಂದ ಕೂಡಿದೆ ಮತ್ತು ಆಘಾತಕಾರಿಯಾಗಿದೆ ಮತ್ತು ಆನೆಯನ್ನು ಅವುಗಳ ಹಿಂಡಿನಿಂದ ಪ್ರತ್ಯೇಕಿಸುತ್ತದೆ.
 

click me!