21 ವರ್ಷಗಳ ಕಾಲ ಪತ್ನಿಯ ಶವದೊಂದಿಗೆ ವಾಸಿಸಿದ ವ್ಯಕ್ತಿ

Published : May 09, 2022, 10:15 AM IST
21 ವರ್ಷಗಳ ಕಾಲ ಪತ್ನಿಯ ಶವದೊಂದಿಗೆ ವಾಸಿಸಿದ ವ್ಯಕ್ತಿ

ಸಾರಾಂಶ

  ಪತ್ನಿಯ ಶವದೊಂದಿಗೆ 21 ವರ್ಷಗಳ ಕಾಲ ಬದುಕಿದ ವ್ಯಕ್ತಿ ಕಡೆಗೂ ಪತ್ನಿಯ ಶವ ಸಂಸ್ಕಾರಕ್ಕೆ ನಿರ್ಧರಿಸಿದ 72ರ ವೃದ್ಧ ಶವಸಂಸ್ಕಾರಕ್ಕೆ ಸ್ಥಳೀಯ ಸಂಸ್ಥೆ ನೆರವು ಕೇಳಿದಾಗ ವಿಚಾರ ಬಯಲು

ಥೈಲ್ಯಾಂಡ್‌ನ (Thailand) ವ್ಯಕ್ತಿಯೊಬ್ಬ  21 ವರ್ಷಗಳಿಂದ ತನ್ನ ಪತ್ನಿಯ ಶವದೊಂದಿಗೆ ವಾಸಿಸುತ್ತಿದ್ದ ವಿಚಿತ್ರ ಘಟನೆಯೊಂದು ಬೆಳಕಿಗ ಬಂದಿದೆ. ಆದರೆ ಆತನೇ ಇತ್ತೀಚೆಗೆ ತನ್ನ ಮೃತ ಹೆಂಡತಿಯ ಶವವನ್ನು ಅಂತ್ಯಸಂಸ್ಕಾರ ಮಾಡುವ ಮೂಲಕ ಈ ವಿಚಾರಕ್ಕೆ'ವಿದಾಯ' ಹೇಳಿದ್ದಾನೆ. ಆದರೆ ಇದನ್ನು ಗಮನಿಸಿದ ಓರ್ವನಿಗೆ ಈತನ ಹೆಂಡತಿ 20 ವರ್ಷಗಳ ಹಿಂದೆಯೇ ತೀರಿ ಹೋಗಿರುವುದು ನೆನಪಿಗೆ ಬಂದಿದೆ ಇದರಿಂದ ಆತನಿಗೆ ಇದು ವಿಚಿತ್ರವೆನಿಸಿ ಘಟನೆ ವ್ಯಾಪಕವಾಗಿ ಹಬ್ಬಿದೆ. 

ಸ್ಥಳೀಯವಾಗಿ ಇದನ್ನು'ಶಾಶ್ವತ ಪ್ರೇಮ'ದ ಪ್ರಕರಣವೆಂದು ಪರಿಗಣಿಸಲಾಗಿದೆ. 72 ವರ್ಷದ ಚಾರ್ನ್ ಜನವಾಚ್ಚಕಲ್ (Charn Janwatchakal) ಸ್ಪಷ್ಟವಾಗಿ ಎರಡು ದಶಕಗಳಿಗೂ ಹೆಚ್ಚು ಕಾಲ ತನ್ನ ಹೆಂಡತಿಯ ಶವದೊಂದಿಗೆ ತನ್ನ ಮನೆಯಲ್ಲಿ ವಾಸಿಸಿದ್ದಾನೆ. ಅಲ್ಲದೇ ಆತ ತನ್ನ ಅಂತಿಮ ವಿದಾಯವನ್ನು ಹೊಂದಲು ಬಯಸಿದ ಆತ ತನ್ನ ಮರಣಕ್ಕೂ ಮೊದಲು ಪತ್ನಿಗೆ ಸರಿಯಾದ ಅಂತ್ಯಕ್ರಿಯೆ ಮಾಡಲು ನಿರ್ಧರಿಸಿದ.

Lived with dead body:ಮೂರು ತಿಂಗಳು ತಂದೆ ಶವದೊಂದಿಗೆ ಮಗನ ವಾಸ, ಮೌನಕ್ಕೆ ಶರಣಾದ ತಾಯಿ!
 

ಜನವಾಚ್ಚಕಲ್ ತನ್ನ ಹೆಂಡತಿಯ ಅವಶೇಷವನ್ನು (ಶವಪೆಟ್ಟಿಗೆಯಲ್ಲಿ) ತನ್ನ ಪಕ್ಕದಲ್ಲಿ ಒಂದು ಸಣ್ಣ ಕೋಣೆಯಲ್ಲಿ ಇರಿಸಿದ್ದ, ಅಲ್ಲೇ ಆತನೂ ಮಲಗುತ್ತಿದ್ದ ಹಾಗೂ ಆತ ಪತ್ನಿ ಇನ್ನೂ ಜೀವಂತವಾಗಿದ್ದಾಳೆ ಎಂಬಂತೆ ಆತ ಆಕೆಯೊಂದಿಗೆ ಹರಟೆ ಹೊಡೆಯುತ್ತಿದ್ದ ಎಂದು ಹಲವು ಮಾಧ್ಯಮಗಳು ವರದಿ ಮಾಡಿವೆ. ಹಿರಿಯ ವ್ಯಕ್ತಿಯು ಶವಸಂಸ್ಕಾರಕ್ಕೆ ನೆರವಿಗಾಗಿ ಸ್ಥಳೀಯ ಸಂಸ್ಥೆಯನ್ನು ಸಂಪರ್ಕಿಸಿದ ನಂತರ ಈ ವಿಷಯವು ಬೆಳಕಿಗೆ ಬಂದಿದೆ. ತನಗೆ ವಯಸ್ಸಾಗುತ್ತಿದ್ದಂತೆ ಆತನಿಗೆ ತಾನಿನ್ನು ಸತ್ತರೆ ತನ್ನ ಪತ್ನಿಗೆ ಸರಿಯಾದ ಸಂಸ್ಕಾರವಿಲ್ಲದೇ ಹೋಗಬಹುದು ಎಂದು ಭಯಪಟ್ಟ ಆತ ಕಡೆಗೂ ಪತ್ನಿಗೆ ಅಂತ್ಯ ಸಂಸ್ಕಾರ ಮಾಡಲು ನಿರ್ಧರಿಸಿದ್ದಾನೆ. 

ಮಗನೆದುರೇ ತಾಯಿಗೆ 16 ಬಾರಿ ಚೂರಿ ಇರಿದ ಪ್ರೇಮಿ, ಶಾಕ್‌ನಿಂದ ಕಪಾಟಿನಲ್ಲಿ ಬಂಧಿಯಾದ ಕಂದ!
ಈ ವಿಚಾರ ಈಗ ಭಯಾನಕವೆನಿಸಿದರೂ ಈ ಹಿಂದೆಯೂ ಇಂತಹ ಹಲವು ವಿಚಾರಗಳು ನಡೆದಿವೆ. ಈ ಘಟನೆಯೂ ಕಾರ್ಲ್ ಟಾಂಜ್ಲರ್‌ ಅವರ ಘಟನೆಯನ್ನು ನೆನಪಿಸುತ್ತದೆ. ಕಾರ್ಲ್ ಟಾಂಜ್ಲರ್‌  ಅವರನ್ನು  ಕೌಂಟ್ ಕಾರ್ಲ್ ವಾನ್ ಕೋಸೆಲ್ ಎಂದೂ ಕರೆಯುತ್ತಾರೆ. ಅವರು ಫ್ಲೋರಿಡಾದ ನೌಕಾ ಆಸ್ಪತ್ರೆಯಲ್ಲಿ ಹಾಸ್ಪಿಟಲ್ ಸೇವೆಯಲ್ಲಿ ಜರ್ಮನ್ ಮೂಲದ ರೇಡಿಯಾಗ್ರಫಿ ತಂತ್ರಜ್ಞರಾಗಿದ್ದರು. ಇವರು ಫೆಬ್ರವರಿ 8, 1877 ರಿಂದ ಜುಲೈ 3, 1952 ರವರೆಗೆ ಆಸ್ಪತ್ರೆಯಲ್ಲಿ ಕೆಲಸ ಮಾಡಿದರು. ಇವರು ಎಲೆನಾ "ಹೆಲೆನ್" ಮಿಲಾಗ್ರೊ ಡಿ ಹೊಯೊಸ್ (Elena “Helen" Milagro de Hoyos) ಎಂಬ ಯುವ ಕ್ಯೂಬನ್-ಅಮೆರಿಕನ್ ಕ್ಷಯರೋಗ ರೋಗಿಯೊಂದಿಗೆ (young Cuban-American tuberculosis patient) ಭಾರಿ ಆತ್ಮೀಯತೆಯನ್ನು ಹೊಂದಿದ್ದರು.

ಆಕೆಯ ಬಗ್ಗೆ ಅವರು ಎಷ್ಟು ಗೀಳು ಹೊಂದಿದ್ದರೆಂದರೆ ಅವರು ಆಕೆಯ ಆರೈಕೆ ಮಾಡಿದರು ಆದರೆ ಅವಳನ್ನು ಉಳಿಸಿಕೊಳ್ಳಲು ಅವರಿಗೆ ಸಾಧ್ಯವಾಗಿರಲಿಲ್ಲ. ಆದರೆ ಅವಳ ಸಾವಿನ ನಂತರ ಶವ ಸಂಸ್ಕಾರ ನಡೆಸಿ ಎರಡು ವರ್ಷದ ಬಳಿಕ 1933ರಲ್ಲಿ ಅವಳ ಸಮಾಧಿಯಿಂದ ದೇಹವನ್ನು ಹೊರ ತೆಗೆದ ಅವರು ಸುಮಾರು ಏಳು ವರ್ಷಗಳ ಕಾಲ ಅದನ್ನು ತಮ್ಮ ಮನೆಯಲ್ಲಿ ಇಟ್ಟುಕೊಂಡಿದ್ದರು. 1940 ರಲ್ಲಿ ಈ ವಿಚಾರ ಅವರ ಸ್ನೇಹಿತರು ಹಾಗೂ ಬಂಧುಗಳ ಗಮನಕ್ಕೆ ಬಂದ ನಂತರ ಹೊರ ಪ್ರಪಂಚಕ್ಕೆ ಈ ವಿಚಾರ ತಿಳಿದಿತ್ತು. ನಂತರ ಎಲೆನಾಳ ದೇಹವನ್ನು ಯಾರಿಗೂ ತಿಳಿಯದ ಸ್ಥಳದಲ್ಲಿ ಮತ್ತೆ ಅಂತ್ಯ ಸಂಸ್ಕಾರ ಮಾಡಲಾಗಿತ್ತು.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮುದ್ದಿನ ಶ್ವಾನಗಳಿಗಾಗಿ ಅನಿಮೇಟೆಡ್ ಸಿನಿಮಾ ಶೋ ಆಯೋಜಿಸಿದ ಥಿಯೇಟರ್: ರೆಡ್ ಕಾರ್ಪೆಟ್ ಹಾಸಿ ಸ್ವಾಗತ
sculptor makeup: ಹುಡುಗರೇ ಆಹಾ ಚೂಪಾದ ಮೂಗು ಎಂಥಾ ಬ್ಯೂಟಿ ಅಂತ ಮರುಳಾಗದಿರಿ ಜೋಕೆ..!