ಆಫ್ಘನ್‌ನಲ್ಲಿ ಪತ್ರಕರ್ತ ಸಿದ್ಧಿಖಿ ಸಾವು: ತಾಲಿಬಾನ್‌ ವಿಷಾದ!

By Suvarna NewsFirst Published Jul 18, 2021, 8:40 AM IST
Highlights

* ಗುಂಡಿನ ಕಾಳಗದಲ್ಲಿ ಭಾರತದ ಪತ್ರಕರ್ತ ಗುಂಡಿನ ದಾಳಿಗೆ ಬಲಿಯಾಗಿರುವುದು ತಿಳಿದಿದೆ

* ಡ್ಯಾನಿಷ್ ಸಿದ್ಧಿಖಿ ಹೇಗೆ ಸಾವನ್ನಪ್ಪಿದ ಎಂದು ಗೊತ್ತಿಲ್ಲ

* ಆಫ್ಘನ್‌ನಲ್ಲಿ ಪತ್ರಕರ್ತ ಸಿದ್ಧಿಖಿ ಸಾವು: ತಾಲಿಬಾನ್‌ ವಿಷಾದ

ಕಾಬೂಲ್‌(ಜು.18): ಆಷ್ಘಾನಿಸ್ತಾನ ಮತ್ತು ತಾಲಿಬಾನ್‌ ಉಗ್ರರ ನಡುವಿನ ವರದಿಗಾರಿಕೆ ವೇಳೆ ಗುಂಡಿನ ದಾಳಿಗೆ ಬಲಿಯಾದ ಪ್ರತಿಷ್ಠಿತ ಪುಲಿಟ್ಜರ್‌ ಪ್ರಶಸ್ತಿ ವಿಜೇತರಾದ ಭಾರತದ ಛಾಯಾಗ್ರಾಹಕ ಡ್ಯಾನಿಷ್‌ ಸಿದ್ಧಿಖಿ (40) ಅವರ ಸಾವಿನ ಬಗ್ಗೆ ತಾಲಿಬಾನ್‌ ಉಗ್ರ ಸಂಘಟನೆ ಮರುಕ ವ್ಯಕ್ತಪಡಿಸಿದೆ.

ಆಷ್ಘಾನಿಸ್ತಾನದ ಕಂದಾಹಾರ್‌ನಲ್ಲಿ ಆಷ್ಘಾನಿಸ್ತಾನದ ಪಡೆಗಳು ಮತ್ತು ತಮ್ಮ ಸೇನಾನಿ (ತಾಲಿಬಾನ್‌ ಉಗ್ರರು)ಗಳ ನಡುವಿನ ಗುಂಡಿನ ಕಾಳಗದಲ್ಲಿ ಭಾರತದ ಪತ್ರಕರ್ತ ಗುಂಡಿನ ದಾಳಿಗೆ ಬಲಿಯಾಗಿರುವುದು ತಿಳಿದಿದೆ. ಅವರ ಸಾವಿನ ಬಗ್ಗೆ ನಮಗೆ ವಿಷಾದವಿದೆ ಎಂದು ತಾಲಿಬಾನ್‌ ವಕ್ತಾರ ಝಬಿಯುಲ್ಲಾ ಮುಜಾಹಿದ್‌ ಹೇಳಿದ್ದಾನೆ.

‘ಜೊತೆಗೆ ಯಾವುದೇ ಪತ್ರಕರ್ತ ಯುದ್ಧದ ವಲಯಗಳಿಗೆ ಬರುತ್ತಿದ್ದರೆ, ಈ ಬಗ್ಗೆ ನಮಗೆ ಮಾಹಿತಿ ನೀಡಬೇಕು. ಆದರೆ ಸಿದ್ದಿಖಿ ಬಂದ ಬಗ್ಗೆ ನಮಗೆ ಮಾಹಿತಿ ಇರಲಿಲ್ಲ. ಹೀಗಾಗಿ ಭಾರತದ ಪತ್ರಕರ್ತ ಡ್ಯಾನಿಷ್‌ ಸಿದ್ಧಿಖಿ ಅವರ ಸಾವಿನ ಬಗ್ಗೆ ವಿಷಾದವಿದೆ ಎಂದಿದ್ದಾನೆ.

click me!