
ಲಂಡನ್(ಜು.17): ವಿಂಬಲ್ಡನ್ ಪಂದ್ಯ ಸದ್ಯ ಟೆನ್ನಿಸ್ ಪ್ರಿಯರ ನೆಚ್ಚಿನ ವಿಚಾರ. ಟೆನಿಸ್ ಪ್ರಿಯರಿಗೆ ಸದ್ಯ ಇದುವೇ ಹಾಟ್ ಟಾಪಿಕ್. ಇಂತಹ ರೋಚಕ ಪಂದ್ಯ ನೋಡಲು ಜನ ಆಸಕ್ತಿಯಲ್ಲಿ ಸೇರಿದ್ದಾರೆ.
ಆದರೆ ಸಹಸ್ರ ಜನ ಕುತೂಹಲದಿಂದ ವೀಕ್ಷಿಸುತ್ತಿದ್ದ ವಿಂಬಲ್ಡನ್ ಪಂದ್ಯ ತಟ್ಟನೆ ನಿಲ್ಲಿಸಲಾಯಿತು. ಆಗ ಒಂದು ಮೈಕ್ ಎನೌನ್ಸ್‌ಮೆಂಟ್ ಕೇಳಿತು. ಗ್ಯಾಲರಿಯಲ್ಲಿದ್ದ ಅಷ್ಟೂ ಜನರ ದೃಷ್ಟಿ ಕೆಂಪು ಕೋಟ್ ಧರಿಸಿದ್ದ ಮಹಿಳೆಯತ್ತ ಸಾಗಿತು.
ವಿಂಬಲ್ಡನ್ ಟೆನಿಸ್ ಟೂರ್ನಿಯಲ್ಲಿ ಮ್ಯಾಚ್ ಫಿಕ್ಸಿಂಗ್ ಶಂಕೆ!
ಬಿಳಿ ಡ್ರೆಸ್ ಮೇಲೆ ಕೆಂಪು ಕೋಟ್ ಧರಿಸಿದ ಮಹಿಳೆ ಕೋವಿಶೀಲ್ಡ್ ಲಸಿಕೆ ವಿನ್ಯಾಸಗೊಳಿಸಿದ ಸಾರಾ ಗಿಲ್ಬರ್ಟ್. ಅವರೂ ಜನರ ಮಧ್ಯೆ ಕುಳಿತು ಆಸಕ್ತಿಯಿಂದ ಪಂದ್ಯ ವೀಕ್ಷಿಸುತ್ತಿದ್ದರು.
ವಿಂಬಲ್ಡನ್ ಪಂದ್ಯವನ್ನು ವೀಕ್ಷಿಸಲು ಬಂದಿರುವುದನ್ನು ಗಮನಿಸಿದ ಸಂಘಟಕರು ಅವರಿಗೆ ಗೌರವವನ್ನು ನೀಡಲು ಒಂದು ಕ್ಷಣ ಆಟವನ್ನು ನಿಲ್ಲಿಸಿದರು. ಆ ಕ್ಷಣ ಪ್ರತಿಯೊಬ್ಬ ವೀಕ್ಷಕ ಎದ್ದುನಿಂತು ಸಾರಾಗೆ ಚಪ್ಪಾಳೆಯ ಗೌರವ ಸಲ್ಲಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ