ಆಫ್ಘಾನ್ ರಾಯಭಾರ ಅಧಿಕಾರಿ ಮಗಳನ್ನೇ ಕಿಡ್ನಾಪ್; ಪಾಕಿಸ್ತಾನದ ಅಭದ್ರತೆಗೆ ಆಕ್ರೋಶ!

By Suvarna NewsFirst Published Jul 17, 2021, 6:03 PM IST
Highlights
  • ಆಫ್ಘಾನ್ ರಾಯಭಾರ ಕಚೇರಿ ಅಧಿಕಾರಿ ಪುತ್ರಿಯ ಕಿಡ್ನಾಪ್
  • ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿ ಘಟನೆ, ತೀವ್ರ ಆಕ್ರೋಶ
  • ಚಿತ್ರ ಹಿಂಸೆ ನೀಡಿದ ಅಪಹರಣಕಾರರು, ತಕ್ಷಣ ಕ್ರಮಕ್ಕೆ ಆಗ್ರಹ

ಇಸ್ಲಾಮಾಬಾದ್(ಜು.17):  ಪಾಕಿಸ್ತಾನದಲ್ಲಿ ಭದ್ರತೆ ಕುರಿತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಲವು ಭಾರಿ ಚರ್ಚೆಯಾಗಿದೆ. ಹಲುವು ಭಾರಿ ಪಾಕಿಸ್ತಾನ ಛೀಮಾರಿ ಹಾಕಿಸಿಕೊಂಡಿದೆ. ಇದೀಗ ಪಾಕಿಸ್ತಾನದಲ್ಲಿರುವ ಆಫ್ಘಾನಿಸ್ತಾನ ರಾಯಭಾರ ಕಚೇರಿ ಅಧಿಕಾರಿ ಮಗಳನ್ನೇ ಕಿಡ್ನಾಪ್ ಮಾಡಿ ಚಿತ್ರ ಹಿಂಸೆ ನೀಡಿ ಕಳುಹಿಸಿದ ಘಟನೆ ನಡೆದಿದೆ. ಈ ಘಟನೆ ಬಳಿಕ ಪಾಕಿಸ್ತಾನ ವಿರುದ್ಧ ಆಕ್ರೋಶ ಹೆಚ್ಚಾಗಿದೆ.

ಅಪ್ಘಾನಿಸ್ತಾನದಲ್ಲಿ ತಾಲಿಬಾನಿಯರ ಅಟ್ಟಹಾಸ, ಅಮೆರಿಕದ ಸೇನೆ ಸೋತಿದ್ದೇಕೆ?

ಪಾಕಿಸ್ತಾನದ ಆಫ್ಘನ್ ರಾಯಭಾರ ಕಚೇರಿ ಅಧಿಕಾರಿ ನಜಿಬುಲ್ಹ ಅಲಿಖಿಲ್ ಪುತ್ರಿ ಸಿಲ್ಸಿಲಾ ಅಲಿಖಿಲ್‌ಳನ್ನು ಅಪಹರಣಕಾರರು ಅಪಹರಿಸಿದ್ದಾರೆ.  ಬಳಿಕ 6 ಗಂಟೆಗಳಿಗೂ ಹೆಚ್ಚು ಕಾಲ ಬಂಧನದಟ್ಟಿದ್ದ ಅಪಹರಣಕಾರರು ಚಿತ್ರ ಹಿಂಸೆ ನೀಡಿ ಬಿಟ್ಟು ಬಿಟ್ಟಿದ್ದಾರೆ. ಈ ಘಟನೆಯಿಂದ ಕೆರಳಿರುವ ಆಫ್ಘಾನಿಸ್ತಾನ ವಿದೇಶಾಂಗ ಸಚಿವಾಲಯ, ಪಾಕಿಸ್ತಾನದಲ್ಲಿರು ಅಫ್ಘಾನಿಸ್ತಾನದ ರಾಜತಾಂತ್ರಿಕ ಅಧಿಕಾರಿಗಳು, ಅವರ ಕುಟುಂಬಸ್ಥರನ್ನು ರಕ್ಷಿಸುವ ಜವಾಬ್ದಾರಿ ಪಾಕಿಸ್ತಾನಕ್ಕಿದೆ. ಹೇಡಿಗಳ ರೀತಿ ವರ್ತಿಸಬಾರದು ಎಂದಿದೆ.

ಜುಲೈ 16 ರಂದು ಸಿಲ್ಸಿಲಾ ಅಲಿಖಿಲಿ ಮನೆಗೆ ಮರಳುತ್ತಿದ್ದ ವೇಳೆ ಇಸ್ಲಾಮಾಬಾದ್‌ನಲ್ಲಿ ಅಪರಿಹರಿಸಲಾಗಿತ್ತು. ಚಿತ್ರ ಹಿಂಸೆ ನೀಡಿದ ಸಿಲ್ಸಿಲಾಳನ್ನು ಆಸ್ಪತ್ರೆ ದಾಖಲಿಸಲಾಗಿದೆ. ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿರುವ ಸಿಲ್ಸಿಲಾಗೆ ಆಫ್ಘಾನಿಸ್ತಾನ ಎಲ್ಲಾ ನೆರವು ನೀಡಲಿದೆ ಎಂದು ಆಫ್ಘಾನ್ ವಿದೇಶಾಂಗ ಸಚಿವಾಲಯ ಹೇಳಿದೆ. ಇದುವರೆಗೆ ಪಾಕಿಸ್ತಾನ ಸರ್ಕಾರ ಒಂದು ಸಾಂತ್ವನ ಮಾತು ಆಡಿಲ್ಲ. ಇದರ ಹಿಂದೆ ಪಾಕಿಸ್ತಾನ ಸರ್ಕಾರದ ಕೈವಾಡವಿರುವ ಶಂಕೆಯನ್ನು ಆಫ್ಘಾನ್ ವಿದೇಶಾಂಗ ಸಚಿವಾಲಯ ವ್ಯಕ್ತಪಪಡಿಸಿದೆ.

ಪಾಕಿಸ್ತಾನದಲ್ಲಿ ಬಸ್ ಸ್ಫೋಟ: ಚೀನೀ ಪ್ರಜೆಗಳು ಸೇರಿ ಕನಿಷ್ಠ 13 ಸಾವು!

ಪಾಕಿಸ್ತಾನ ಸರ್ಕಾರ ತಕ್ಷಣವೇ ಕ್ರಮ ಕೈಗೊಳ್ಳಬೇಕು ಎಂದು ಖಡಕ್ ವಾರ್ನಿಂಗ್ ನೀಡಿದೆ. ತಾಲಿಬಾನ್‌ಗೆ ಪ್ರತ್ಯಕ್ಷ ಹಾಗೂ ಪರೋಕ್ಷ ಬೆಂಬಲ ನೀಡಿ ಆಫ್ಘಾನ್ ಶಾಂತಿ ಕದಡುತ್ತಿರುವ ಪಾಕಿಸ್ತಾನದಿಂದ ಇದಕ್ಕಿಂತ ಹೆಚ್ಚು ನಿರೀಕ್ಷಿಸಲು ಸಾಧ್ಯವಿಲ್ಲ ಎಂದು ಆಫ್ಘಾನ್ ಜನತೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪಾಕಿಸ್ತಾನದಿಂದ 10,000 ಜಿಹಾದಿ ಉಗ್ರರು ಆಫ್ಘಾನಿಸ್ತಾನ ಗಡಿಯೊಳಕ್ಕೆ ನುಸುಳಿದ್ದಾರೆ ಎಂದು ಆಫ್ಘಾನ್ ಆಧ್ಯಕ್ಷ ಆಶ್ರಫ್ ಘಾನಿ ಆತಂಕ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಉಗ್ರರಿಗೆ ಪೋಷಣೆ ನೀಡುವ ಪಾಕಿಸ್ತಾನದ ವಿರುದ್ಧ ಕಿಡಿ ಕಾರಿದ್ದಾರೆ.

click me!