ಇಸ್ರೇಲ್‌ ಮೇಲೆ ಲೆಬನಾನ್‌ನಿಂದಲೂ ದಾಳಿ: ಇಸ್ರೇಲ್ ದಾಳಿಗೆ ಹಮಾಸ್‌ ಮುಖ್ಯಸ್ಥನ ಕುಟುಂಬವೂ ಫಿನಿಶ್

Published : Oct 12, 2023, 06:49 AM ISTUpdated : Oct 12, 2023, 12:23 PM IST
ಇಸ್ರೇಲ್‌ ಮೇಲೆ ಲೆಬನಾನ್‌ನಿಂದಲೂ ದಾಳಿ: ಇಸ್ರೇಲ್ ದಾಳಿಗೆ ಹಮಾಸ್‌ ಮುಖ್ಯಸ್ಥನ ಕುಟುಂಬವೂ ಫಿನಿಶ್

ಸಾರಾಂಶ

ಹಮಾಸ್‌ ಉಗ್ರರ ಹುಟ್ಟಡಗಿಸಲು ಗಾಜಾ ಪಟ್ಟಿ ಮೇಲೆ ಕ್ಷಿಪಣಿ ಮಳೆ ಸುರಿಸುತ್ತಿರುವ ಇಸ್ರೇಲ್‌ ಮೇಲೆ ಈಗ ಸಿರಿಯಾ ಹಾಗೂ ಲೆಬನಾನ್‌ನಿಂದಲೂ ಕ್ಷಿಪಣಿ ದಾಳಿ ಆರಂಭವಾಗಿದೆ.

ನವದೆಹಲಿ: ಹಮಾಸ್‌ ಉಗ್ರರ ಹುಟ್ಟಡಗಿಸಲು ಗಾಜಾ ಪಟ್ಟಿ ಮೇಲೆ ಕ್ಷಿಪಣಿ ಮಳೆ ಸುರಿಸುತ್ತಿರುವ ಇಸ್ರೇಲ್‌ ಮೇಲೆ ಈಗ ಸಿರಿಯಾ ಹಾಗೂ ಲೆಬನಾನ್‌ನಿಂದಲೂ ಕ್ಷಿಪಣಿ ದಾಳಿ ಆರಂಭವಾಗಿದೆ. ಇಸ್ರೇಲ್‌ ಮೇಲೆ ಸಿರಿಯಾ ಹಾಗೂ ಲೆಬನಾನ್‌ಗೆ ಐತಿಹಾಸಿಕ ದ್ವೇಷವಿದೆ. ಹೀಗಾಗಿ ಹಮಾಸ್‌ ಉಗ್ರರು ಇಸ್ರೇಲ್‌ ಮೇಲೆ ದಾಳಿ ನಡೆಸಿದ ಹೊತ್ತಿನಲ್ಲೇ ಹೊಂಚುಹಾಕಿ ಈ ಎರಡೂ ದೇಶಗಳು ದಾಳಿ ಆರಂಭಿಸಿವೆ.

ಹಮಾಸ್‌ ಮುಖ್ಯಸ್ಥನ ತಂದೆ, ಮಕ್ಕಳು ಬಲಿ

ಟೆಲ್‌ ಅವಿವ್‌: ಹಮಾಸ್‌ ಉಗ್ರ ಸಂಘಟನೆ ಹಾಗೂ ಇಸ್ರೇಲ್‌ ನಡುವಿನ ಕದನದಲ್ಲಿ ಬುಧವಾರ ಹಮಾಸ್‌ ಮುಖ್ಯಸ್ಥ ಮೊಹಮ್ಮದ್‌ ದೈಫ್‌ನ ತಂದೆ ಮನೆಗೆ ಇಸ್ರೇಲ್‌ ದಾಳಿ ನಡೆಸಿದೆ. ದಾಳಿಯಲ್ಲಿ ದೈಫ್‌ ತಂದೆ, ಮಕ್ಕಳು, ಸೋದರ ಸೇರಿ ಕುಟುಂಬಸ್ಥರು ಬಲಿಯಾಗಿದ್ದಾರೆ ಎನ್ನಲಾಗಿದೆ. ಯುದ್ಧದ ಐದನೇ ದಿನದ ದಾಳಿಯಲ್ಲಿ ಇಸ್ರೇಲ್‌ ಗಾಜಾ ಪಟ್ಟಿಯ 200 ಕಡೆ ಗುರಿ ಇಟ್ಟು ದಾಳಿ ನಡೆಸಿದೆ. ಹೀಗಾಗಿ ಇಲ್ಲಿನ ಖಾನ್‌ ಯುನಿಸ್‌ನಲ್ಲಿನ ದೈಫ್‌ ಮನೆಯವರು ಸಾವಿಗೀಡಾಗಿದ್ದಾರೆ. ಮೊಹಮ್ಮದ್‌ ದೈಫ್‌ನನ್ನು ಹತ್ಯೆ ಮಾಡಲೆಂದು ಇಸ್ರೇಲ್‌ ಗುಪ್ತಚರ ಸಂಸ್ಥೆ ಮೊಸಾದ್‌ ಹಲವು ಬಾರಿ ಯತ್ನಿಸಿತ್ತು. ಆದರೆ ಕೂದಲೆಳೆಯಲ್ಲಿ ಆತ ತಪ್ಪಿಸಿಕೊಂಡಿದ್ದ. ಆದರೆ ಈ ಬಾರಿ ಅವರ ಮನೆಯವರು ಬಲಿಯಾಗಿದ್ದಾರೆ. 

ಹಮಾಸ್ ಬಳಿಕ ಉತ್ತರ ಇಸ್ರೇಲ್ ಗಡಿ ಸ್ಫೋಟಿಸಿ ಒಳನುಗ್ಗಿದ ಲೆಬೆನಾನ್ ಹೆಝ್‌ಬೊಲ್ಹಾ ಉಗ್ರರು!

ಶನಿವಾರ ಆಕ್ಟೋಬರ್‌ 7 ರಂದು ಇಸ್ರೇಲ್‌ ಕಾಲಮಾನ ಬೆಳಗ್ಗೆ 6 ಗಂಟೆ ಸುಮಾರಿಗೆ ಹಮಾಸ್‌ ಉಗ್ರರು ಏಕಾಏಕಿ ಇಸ್ರೇಲ್ ಪಟ್ಟಣಗಳ ಮೇಲೆ ರಾಕೆಟ್‌ ದಾಳಿ ನಡೆಸಿ ಬಳಿಕ ಭೂಮಿ, ಆಗಸ, ಸಮುದ್ರ ಮಾರ್ಗಗಳ ಮೂಲಕವೂ ಇಸ್ರೇಲ್‌ನೊಳಗೆ ಪ್ರವೇಶಿಸಿ ಜನರನ್ನು ಒತ್ತೆಯಾಳುಗಳಾಗಿರಿಸಿಕೊಂಡು ಮತ್ತೆ ಅನೇಕರುನ್ನು ಹತ್ಯೆ ಮಾಡಿದ್ದರು. ಇದಾದ ನಂತರ ಇಸ್ರೇಲ್‌ ಗಾಜಾಪಟ್ಟಿಯಲ್ಲಿ ಮರುದಾಳಿ ನಡೆಸಿದ್ದು, ಸಾವಿನ ಸಂಖ್ಯೆ ನಾಲ್ಕಂಕಿ ದಾಟಿದೆ. ತನ್ನ ಕೆಣಕಿದ ಹಮಾಸ್ ಉಗ್ರರನ್ನು ನೆಲಸಮ ಮಾಡುವ ಪಣ ತೊಟ್ಟಿರುವ ಇಸ್ರೇಲ್‌ ಗಾಜಾಪಟ್ಟಿಯಲ್ಲಿ ದಾಳಿ ಮುಂದುವರೆಸಿದೆ. ಈ ಯುದ್ಧ ನಾವು ಶುರು ಮಾಡಿಲ್ಲ ಆದರೆ ಇದನ್ನು ಮುಗಿಸುವುದು ಮಾತ್ರ ನಾವೇ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೇಳಿದ್ದಾರೆ. 

ದೇಶ ಮೊದಲು.. ಮಗನನ್ನೂ ಸಮರ ಭೂಮಿಗೆ ಕಳುಹಿಸಿದ್ರಾ ಇಸ್ರೇಲ್ ಪ್ರಧಾನಿ?

ಏನಿದು ವಿವಾದ: ಗಾಜಾಪಟ್ಟಿ ವಶ ಏಕೆ ಮಹತ್ವ?

ವೆಸ್ಟ್‌ಬ್ಯಾಂಕ್‌ ಮತ್ತು ಗಾಜಾಪಟ್ಟಿ ಎರಡೂ ಸೇರಿ ಪ್ಯಾಲೆಸ್ತೀನ್‌ (Palestien) ದೇಶ ಎನ್ನಲಾಗುತ್ತದೆ. ಆದರೆ ಇವರೆಡೂ ಪ್ರತ್ಯೇಕ ಭಾಗಗಳು. ಪಾಲೆಸ್ತೀನ್‌ನಲ್ಲಿ ಪ್ರತ್ಯೇಕ ಸರ್ಕಾರವಿದೆ. ಆದರೆ ಅಲ್ಲಿಂದ 100 ಕಿ.ಮೀ ದೂರದ ಗಾಜಾಪಟ್ಟಿ ಪ್ರದೇಶ 365 ಚದರ ಕಿ.ಮೀ ವ್ಯಾಪ್ತಿಯ (41 ಕಿ.ಮೀ ಉದ್ದ- 6ರಿಂದ 12 ಕಿ.ಮೀ ಅಗಲದ ಪ್ರದೇಶ) ಸಣ್ಣ ಪ್ರದೇಶದಲ್ಲಿ 2.30 ಲಕ್ಷ ಜನರು ವಾಸಿಸುತ್ತಾರೆ. ಇದು ವಿಶ್ವದಲ್ಲೇ 3ನೇ ಅತಿದೊಡ್ಡ ಜನದಟ್ಟಣೆ ಪ್ರದೇಶ. 2007ರಲ್ಲಿ ನಡೆದ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಹಮಾಸ್‌ ಉಗ್ರರು ಅಧಿಕಾರ ಪಡೆದುಕೊಂಡಿದ್ದಾರೆ. ದೇಶದ ಶೇ.70ರಷ್ಟು ಜನರು ಕಡುಬಡವರು. ಈ ಪ್ರದೇಶ ಇಸ್ರೇಲ್‌ನೊಂದಿಗೆ 51 ಕಿ.ಮೀ ಮತ್ತು ಈಜಿಪ್ಟ್‌ನೊಂದಿಗೆ 14 ಕಿ.ಮೀ ಗಡಿ ಹಂಚಿಕೊಂಡಿದೆ. 2007ರಲ್ಲೇ ಗಾಜಾಗೆ ಇಸ್ರೇಲ್‌ ಮತ್ತು ಈಜಿಪ್ಟ್‌ ಹಲವು ನಿರ್ಬಂಧ ಹೇರಿವೆ. ಆದರೆ ಮಾನವೀಯ ನೆಲೆಯಲ್ಲಿ ಅಲ್ಲಿಗೆ ಇಂಧನ, ವಿದ್ಯುತ್‌ ಮತ್ತು ಆಹಾರ ವಸ್ತುಗಳನ್ನು ಇಸ್ರೇಲ್‌ ಪೂರೈಸುತ್ತಿತ್ತು. ಆದರೆ ಈ ದಾಳಿಯ ನಂತರ ಇಸ್ರೇಲ್ ಕೂಡ ಈಗ ಅಲ್ಲಿಗೆ ಎಲ್ಲಾ ಪೂರೈಕೆಗಳನ್ನು ಸ್ಥಗಿತಗೊಳಿಸಿದೆ. ಇದು ಹಮಾಸ್‌ ಉಗ್ರರ ಪ್ರಮುಖ ನೆಲೆ. ಇಲ್ಲಿಂದ ಹಮಾಸ್‌ ಉಗ್ರರು ನಾಮಾವಶೇ಼ಷವಾದರೆ ದಶಕಗಳ ಸಂಘರ್ಷ ಅಂತ್ಯವಾದಂತೆ ಎಂಬುದು ಇಸ್ರೇಲ್‌ ಲೆಕ್ಕಾಚಾರ. ಹೀಗಾಗಿಯೇ ಈ ಬಾರಿ ಅದು ಅಂತಿಮ ಯುದ್ಧಕ್ಕೆ ಸಜ್ಜಾಗಿದೆ.

ತಾಯ್ನಾಡಿಗೆ ಸಂಕಷ್ಟ ಕಾಲ: ತವರಿಗೆ ಮರಳಿದ ಸಾವಿರಾರು ಇಸ್ರೇಲಿಗರು

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಮದ್ಯಪ್ರಿಯರಿಗೆ ಶಾಕ್.. ಮಧ್ಯಾಹ್ನ 2 ರಿಂದ 5 ರವರೆಗೆ ಮದ್ಯ ಮಾರಾಟ ಬಂದ್: ಏನಿದು ಥಾಯ್‌ ವಿಚಿತ್ರ ನಿಯಮ!
ಮುದ್ದಿನ ಶ್ವಾನಗಳಿಗಾಗಿ ಅನಿಮೇಟೆಡ್ ಸಿನಿಮಾ ಶೋ ಆಯೋಜಿಸಿದ ಥಿಯೇಟರ್: ರೆಡ್ ಕಾರ್ಪೆಟ್ ಹಾಸಿ ಸ್ವಾಗತ