
ಇತ್ತೀಚೆಗೆ ಡಾನ್ಸ್ ಮಾಡುವುದು, ಅದನ್ನು ವೀಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಾಕಿ ಲೈಕ್ ಕಾಮೆಂಟ್‌ಗಾಗಿ ಕಾಯುವುದು ಸಾಮಾನ್ಯವಾಗಿದೆ. ಅದರಲ್ಲೂ ಕೆಲವರು ದೇವಸ್ಥಾನ, ರಸ್ತೆ ರೈಲು, ವಿಮಾನ ನಿಲ್ದಾಣ ಹೀಗೆ ಯಾವುದನ್ನು ನೋಡದೇ ಕಂಡ ಕಂಡಲೆಲ್ಲಾ ಕುಣಿದು ವೀಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುತ್ತಿರುತ್ತಾರೆ. ಅದೇ ರೀತಿ ಇಲ್ಲೊಂದು ಕಡೆ ಗಗನಸಖಿಯೊಬ್ಬರು ವಿಮಾನದ ರೆಕ್ಕೆ ಮೇಲೆ ನಿಂತು ಡಾನ್ಸ್ ಮಾಡಿದ್ದಾಳೆ. ಈ ದೃಶ್ಯವನ್ನು ಪ್ರಯಾಣಿಕರೊಬ್ಬರು ವೀಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು, ಇದರಿಂದ ಗಗನಸಖಿಗೀಗ ಸಂಕಟ ಎದುರಾಗಿದೆ.
ಸ್ವಿಸ್ ಇಂಟರ್‌ನ್ಯಾಷನಲ್ ಏರ್‌ಲೈನ್ಸ್‌ಗೆ ಸೇರಿದ ಗಗನಸಖಿಗೆ ಅದೇ ವಿಮಾನದ ರೆಕ್ಕೆ ಮೇಲೆ ನಿಂತು ಡಾನ್ಸ್ ಮಾಡಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿವೈರಲ್ ಆಗುತ್ತಿದ್ದಂತೆ ಈಗ ಆಕೆ ವಿರುದ್ಧ ಏರ್‌ಲೈನ್ಸ್ ಆಂತರಿಕ ತನಿಖೆಗೆ ಆದೇಶಿಸಿದೆ. ಸ್ವಿಸ್ ಇಂಟರ್‌ನ್ಯಾಷನಲ್ ಏರ್‌ಲೈನ್ಸ್‌ನ ಬೋಯಿಂಗ್ 777 ವಿಮಾನದ ರೆಕ್ಕೆ ಮೇಲೆ ನಿಂತು ಗಗನಸಖಿ ಡಾನ್ಸ್ ಮಾಡಿದ್ದಾಳೆ.
ಗಗನಸಖಿ ಶವ ಪತ್ತೆ ಕೇಸ್‌ಗೆ ಟ್ವಿಸ್ಟ್: ಲೈಂಗಿಕ ದೌರ್ಜನ್ಯ ಎಸಗಿ ಕತ್ತು ಸೀಳಿ ಬರ್ಬರ ಹತ್ಯೆ!
ಏರ್‌ಪೋರ್ಟ್‌ನ ಟರ್ಮಿನಲ್‌ನಲ್ಲಿ ಕುಳಿತಿದ್ದ ಪ್ರಯಾಣಿಕರಲ್ಲಿ ಯಾರೋ ಇದನ್ನು ವೀಡಿಯೋ ಮಾಡಿದ್ದಾರೆ, ಗಗನಸಖಿ ಡಾನ್ಸ್ ಮಾಡ್ತಿದ್ರೆ ಅಲ್ಲಿಗೆ ಆಕೆಯ ಪುರುಷ ಸಹೋದ್ಯೋಗಿ ಕೂಡ ಬಂದಿದ್ದು, ಆತ ಕೂಡ ಅಲ್ಲಿ ಫೋಟೋಗಳಿಗೆ ಪೋಸ್ ನೀಡಿದ್ದಾನೆ. ಕಳೆದ ತಿಂಗಳ ಆರಂಭದಲ್ಲಿ ಈ ವೀಡಿಯೋ ರೆಕಾರ್ಡ್ ಆಗಿದ್ದು, ನಂತರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಸ್ವಿಸ್ ಏರ್‌ಲೈನ್ಸ್ ತನ್ನ ಸಿಬ್ಬಂದಿ ವಿರುದ್ಧ ಕ್ರಮಕ್ಕೆ ಮುಂದಾಗಿದೆ. ಘಟನೆಯನ್ನು ಖಂಡಿಸಿ ಏರ್‌ಲೈನ್ಸ್ ಪ್ರಕಟಣೆ ಬಿಡುಗಡೆ ಮಾಡಿದ್ದು, ಇಂತಹ ಅಶಿಸ್ತನ್ನು ಎಂದಿಗೂ ಸಹಿಸಲಾಗದು ಎಂದು ಹೇಳಿದೆ. ಸ್ವಿಸ್ ಇಂಟರ್‌ನ್ಯಾಷನಲ್ ವಕ್ತಾರ ಮೈಕೆಲ್ ಪೆಲ್ಜರ್, ಇಂತಹ ವರ್ತನೆ ಸ್ವತಃ ಅವರಿಗೆ ಅಪಾಯಕಾರಿ ವಿಮಾನದ ರೆಕ್ಕೆಯ ಮೇಲಿಂದ ಬಿದ್ದರೆ ತೀವ್ರವಾದ ಪರಿಣಾಮಗಳುಂಟಾಗಬಹುದು ಎಂದು ಹೇಳಿದ್ದಾರೆ.
ಸ್ವಿಸ್ ಏರ್‌ಲೈನ್ಸ್‌ನ ಉಪಾಧ್ಯಕ್ಷ ಮಾರ್ಟಿನ್ ಕ್ನುಚೆಲ್ ಮತ್ತು ಇತರ ಏರ್‌ಲೈನ್ ಕಾರ್ಯನಿರ್ವಾಹಕರು ಕೂಡ ಈ ಘಟನೆಯ ಬಗ್ಗೆ ಕೋಪ ವ್ಯಕ್ತಪಡಿಸಿದ್ದಾರೆ. ಇಂತಹ ವರ್ತನೆಗಳನ್ನು ನಿಲ್ಲಿಸುವಂತೆ ಅವರು ಹೇಳಿದ್ದಾರೆ. ಭಯಾನಕ ತುರ್ತು ಸಂದರ್ಭಗಳಲ್ಲಿ ಮಾತ್ರ ವಿಮಾನದ ರೆಕ್ಕೆಗಳ ಮೇಲೆ ಹೆಜ್ಜೆ ಇಡಲಾಗುತ್ತದೆ. ಆದರೆ ಡಾನ್ಸ್ ವೀಡಿಯೋಗಾಗಿ ರೆಕ್ಕೆ ಮೇಲೆ ನಿಂತಿದ್ದು, ಆಕ್ರೋಶಕ್ಕೆ ಕಾರಣವಾಗಿದೆ.
ಕನಸು ಕಟ್ಟಿಕೊಂಡು ಮಹಾನಗರಕ್ಕೆ ಬಂದ 24ರ ಹರೆಯದ ಗಗನಸಖಿ ಶವವಾಗಿ ಪತ್ತೆ!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ