
ಪೆರು: ಶೂ ಆಗಲಿ ಚಪ್ಪಲಿ ಆಗಲಿ ಅವುಗಳನ್ನು ಕದ್ದರೆ ದರಿದ್ರವನ್ನು ಮೈ ಮೇಲೆ ಎಳೆದುಕೊಂಡಂತೆ ಎಂಬ ನಂಬಿಕೆ ಭಾರತೀಯರಲ್ಲಿದೆ. ಹೀಗಾಗಿ ಚಪ್ಪಲಿಗೆ ಕನ್ನ ಹಾಕುವವರು ತೀರಾ ಕಡಿಮೆ. ಚಪ್ಪಲಿ ಕಳೆದುಹೋದರೆ ಶುಭವೆಂದೇ ಭಾವಿಸುವರೂ ಇದ್ದಾರೆ. ಆದಾಗ್ಯೂ ಚಪ್ಪಲಿಗಳನ್ನು ಅದೂ ಕೇವಲ ಒಂದು ಕಾಲಿನ ಚಪ್ಪಲಿಯನ್ನು ಯಾರೂ ಕದಿಯುವುದಿಲ್ಲ. ಕದ್ದರೆ ಎರಡೂ ಕಾಲಿಗೂ ಹೊಂದಿಕೆಯಾಗುವಂತೆ ಚಪ್ಪಲಿಯನ್ನು ಕದಿಯುತ್ತಾರೆ. ಆದರೆ ಇಲ್ಲೊಂದು ಕಡೆ ಕಳ್ಳರು ಬರೋಬ್ಬರಿ 200 ಒಂದೇ ಕಾಲಿನ ಶೂಗಳನ್ನು ಕದ್ದು ಅಚ್ಚರಿ ಮೂಡಿಸಿದ್ದಾರೆ. ಅಂದಹಾಗೆ ಈ ಘಟನೆ ನಡೆದಿರುವುದು ಪೆರು ದೇಶದ ಹುವಾನ್ಕಾಯೊ ಎಂಬಲ್ಲಿ.
ಒಂದೇ ಕಾಲಿನ 200 ಶೂಗಳನ್ನು ಕಳ್ಳರು ಕದ್ದಿದ್ದು, ಇವುಗಳ ಮೌಲ್ಯ 10 ಲಕ್ಷ ಎಂದು ಅಂದಾಜಿಸಲಾಗಿದೆ. ಅಲ್ಲದೇ ಬಲಗಾಲಿನ ಶೂಗಳನ್ನು ಮಾತ್ರ ಕದ್ದಿದ್ದು, ಕಳ್ಳರ ಈ ಕೃತ್ಯ ಅಂಗಡಿ ಮಾಲೀಕರಿಗೆ ಅಚ್ಚರಿ ಮೂಡಿಸಿದೆ.
ಮೂವರು ಖದೀಮರ ತಂಡ ಈ ಕೃತ್ಯವೆಸಗಿದ್ದು, ಅಂಗಡಿಯಲ್ಲಿ ಡಿಸ್‌ಪ್ಲೇ ಇರಿಸಿದ್ದ 200 ಶೂಗಳನ್ನು ಕದ್ದಿದ್ದಾರೆ. ಪೆರುವಿನ (Peru) ಹುವಾನ್ಕಾಯೊದಲ್ಲಿ (Huancayo) ಈ ವಿಲಕ್ಷಣ ಘಟನೆ ನಡೆದಿದ್ದು, ಕದ್ದರೆ ಎರಡು ಕಾಲಿನ ಶೂ ಕದಿಯಬೇಕು ಈ ಒಂದು ಕಾಲಿನ ಶೂ ಕದ್ದು ಇವರೇನು ಮಾಡುವರು ಎಂದು ಸ್ವತಃ ಅಂಗಡಿ ಮಾಲೀಕನು ತಲೆ ಚಚ್ಚಿಕೊಳ್ಳುವಂತೆ ಮಾಡಿದೆ ಖದೀಮರ ಈ ನಡೆ. ಶೂ ಶಾಪ್ ಮಾಲೀಕರ ಪ್ರಕಾರ, ಕದ್ದ ಶೂಗಳ ಒಟ್ಟು ಮೌಲ್ಯ 13 ಸಾವಿರ ಡಾಲರ್ ಅಂದರೆ 10 ಲಕ್ಷ ರೂಪಾಯಿಗಳಾಗಿದ್ದು, ಕಳ್ಳರು ಈ ಶೂಗಳನ್ನು ಮಾರಲು ಸಂಕಷ್ಟ ಪಡಬೇಕಿದೆ. ಅಲ್ಲದೇ ಈ ಕಳ್ಳತನ ಕೃತ್ಯ ಸಿಸಿ ಕ್ಯಾಮರಾದಲ್ಲಿ (CCTV camera) ಸೆರೆಯಾಗಿದೆ ಎಂದು ಬಿಬಿಸಿ ವರದಿ ಮಾಡಿದೆ.
ಒಲಿಂಪಿಕ್ಸ್‌ಗೆ ತಯಾರಾಗಲು ಆಥ್ಲೀಟ್‌ಗೆ ಶೂ ಕೊಡಿಸಿದ ಸೋನು ಸೂದ್
ಕಳ್ಳರು ಮಧ್ಯರಾತ್ರಿ ಶೂ ಶಾಪ್ ಗೆ ನುಗ್ಗಿದ್ದು, ಕಳ್ಳರಿಗೆ ತಾವು ಏನು ಕದ್ದೆವು ಎಂಬುದರ ಅರಿವಿಲ್ಲದೆಯೇ ಈ ಕೃತ್ಯವೆಸಗಿದ್ದಾರೋ ಎಂಬ ಶಂಕೆ ಮೂಡಿದೆ. ಅಲ್ಲಿರುವುದು ಕೇವಲ ಬಲಗಾಲಿನ ಶೂ ಎಂಬುದರ ಅರಿವಿಲ್ಲದೆಯೇ ಕದ್ದರೋ ಎಂದು ಶಾಪ್ ಮಾಲೀಕರು ಶಂಕೆ ವ್ಯಕ್ತಪಡಿಸಿದ್ದಾರೆ. ನಾವು ಘಟನೆಗೆ ಸಂಬಂಧಿಸಿದಂತೆ ಸ್ಥಳದಿಂದ ಸಾಕ್ಷ್ಯ (evidence) ಸಂಗ್ರಹಿಸಿದ್ದೇವೆ. ಆದರೆ ವಿಚಿತ್ರ ಎಂದರೆ ಕೇವಲ ಒಂದು ಕಾಲಿನ ಅದರಲ್ಲೂ ಬಲ ಕಾಲಿನ ಶೂ ಮಾತ್ರ ಕದಿಯಲಾಗಿದೆ. ಘಟನೆಯ ದೃಶ್ಯಾವಳಿ ಹಾಗೂ ಬೆರಳಚ್ಚುಗಳನ್ನು (fingerprints) ಆಧರಿಸಿ ನಾವು ಕಳ್ಳರನ್ನು ಪತ್ತೆ ಮಾಡಲಿದ್ದೇವೆ ಎಂದು ಅಲ್ಲಿನ ಪೊಲೀಸ್ ಮುಖ್ಯಸ್ಥ ಇಡುನ್ ಡಿಯಾಜ್ ಹೇಳಿದ್ದಾರೆ.
ಮಕ್ಕಳ ಶೂನಲ್ಲಿ ರಾಜಕೀಯ ಎಂಟ್ರಿ: ಇಕ್ಕಟ್ಟಿಗೆ ಸಿಲುಕಿದ ಮುಖ್ಯೋಪಾಧ್ಯಾಯರು
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ