
ನ್ಯೂಯಾರ್ಕ್: ಕೆಲ ತಿಂಗಳಿಂದ ವಿಮಾನಯಾನ ಸಂಸ್ಥೆಗಳು ಹಾಗೂ ವಿಮಾನ ಪ್ರಯಾಣಿಕರು ಬೇಡದ ಕಾರಣಕ್ಕೆ ಸುದ್ದಿಯಾಗುತ್ತಿದ್ದಾರೆ. ವಿಮಾನದಲ್ಲಿ ಪ್ರಯಾಣಿಸುವ ಪ್ರಯಾಣಿಕರು ಕುಡಿದು ಉಪಟಳ ಮಾಡುವುದು ಸಹ ಪ್ರಯಾಣಿಕರ ಮೇಲೆ ಹಲ್ಲೆ ಮಾಡುವುದು, ಗಗನಸಖಿಯರನ್ನು ತಬ್ಬಿಕೊಳ್ಳಲು ಹೋಗುವುದು ಕಂಠಪೂರ್ತಿ ಕುಡಿದು ವಾಂತಿ ಮಾಡುವುದು ಇತ್ಯಾದಿ ಹಲವು ಕಾರಣಕ್ಕೆ ಸುದ್ದಿಯಾಗಿದೆ. ಆದರೆ ಈಗ ವಿಮಾನಯಾನ ಸಂಸ್ಥೆಯೊಂದು ದೇಶಿಯ ಪ್ರಯಾಣಿಕನನ್ನು, ಅದೂ ಪಾಸ್‌ಪೋರ್ಟ್ ಇಲ್ಲದ ಪ್ರಯಾಣಿಕನನ್ನು ವಿದೇಶಕ್ಕೆ ಕರೆದೊಯ್ದು ಸುದ್ದಿಯಾಗಿದೆ. ಅಮೆರಿಕಾದ ಏರ್‌ಲೈನ್ಸ್ ಸಂಸ್ಥೆ ಈ ಎಡವಟ್ಟು ಮಾಡಿದೆ. ದೇಶಿಯವಾಗಿ ವಿಮಾನದಲ್ಲಿ ಪ್ರಯಾಣಿಸಲು ಹೊರಟಿದ್ದ ಪ್ರಯಾಣಿಕರೊಬ್ಬರನ್ನು ವಿದೇಶಿ ನೆಲದಲ್ಲಿ ಕರೆದೊಯ್ದು ಇಳಿಸಿದ್ದು, ವಿಮಾನಯಾನ ಸಂಸ್ಥೆಯ ಎಡವಟ್ಟಿನಿಂದ ಪ್ರಯಾಣಿಕ ಪರದಾಡುವಂತಾಗಿತ್ತು.
ನ್ಯೂಜೆರ್ಸಿಯ (New Jersey) ಮಹಿಳೆ ಇಲ್ಲೀಸ್ ಹೆಬರ್ಡ್ (Ellis-Hebard) ಎಂಬಾಕೆ ಫ್ಲೋರಿಡಾದ ಜಾಕ್ಸನ್‌ಗೆ ತೆರಳಲು ವಿಮಾನ ನಿಲ್ದಾಣಕ್ಕೆ ಬಂದಿದ್ದರು. ಆದರೆ ವಿಮಾನ ನಿಲ್ದಾಣದ ಗೇಟ್ ಬದಲಾವಣೆಯೂ ಆಕೆಯನ್ನು ಫ್ಲೋರಿಡಾದ ಜಾಕ್ಸನ್ ವಿಲ್ಲೆ ಬದಲು ಉತ್ತರ ಅಮೆರಿಕಾ ಖಂಡದ ಜಮೈಕಾ ದೇಶಕ್ಕೆ ಕರೆದೊಯ್ದು ಇಳಿಸಿದೆ. ಈ ಬಗ್ಗೆ ಮಾಧ್ಯಮಗಳಿಗೆ ಆಕೆ ಮಾಹಿತಿ ನೀಡಿದ್ದು, ತಾನು ನಿಯಮಿತವಾಗಿ ಫಿಲಡೆಲ್ಫಿಯಾದಿಂದ ತನ್ನ ಎರಡನೇ ಮನೆಯಾದ ಫ್ಲೋರಿಡಾದ ಜಾಕ್ಸನ್‌ವಿಲ್ಲೆಗೆ ವಿಮಾದಲ್ಲಿ ಹೋಗುತ್ತಿದ್ದೆ. ನವಂಬರ್ 6 ರಂದು ವಿಮಾನ ನಿಲ್ದಾಣದ ಗೇಟ್ ಬಳಿ ಬಂದಾಗ ಅಲ್ಲಿ PHL to JAX ಎಂದು ಬರೆದಿದ್ದ ವಿಮಾನವಿತ್ತು. ಪ್ರತಿ ಆರು ವಾರಗಳಿಗೊಮ್ಮೆ ನಾನು ಅಲ್ಲಿಗೆ ತೆರಳುತ್ತಿದ್ದೆ. ಹೀಗಾಗಿ ಪ್ರಯಾಣಕ್ಕೆ ಫ್ರಾಂಟಿಯರ್ ವಿಮಾನವನ್ನು ಆಯ್ಕೆ ಮಾಡಿಕೊಂಡಿದ್ದೆ ಎಂದಿದ್ದಾರೆ.
Air India ವಿಮಾನದಲ್ಲಿ ಮುರಿದ ಸೀಟು, ಜಿರಳೆಗಳ ಹಾವಳಿ..! ಟ್ವಿಟ್ಟರ್‌ನಲ್ಲಿ ವಿಶ್ವಸಂಸ್ಥೆ ಅಧಿಕಾರಿ ಕಿಡಿ
ವಿಮಾನ ನಿಲ್ದಾಣಕ್ಕೆ ಬಂದ ನಂತರ ಆಕೆಗೆ ಮೂತ್ರ ವಿಸರ್ಜನೆಗೆ ಅರ್ಜೆಂಟ್ ಆಗಿದ್ದು, ಆಕೆ ಗೇಟ್ ಏಜೆಂಟ್‌ಗೆ ಈ ಬಗ್ಗೆ ಮನವಿ ಮಾಡಿ ಶೌಚಾಲಯಕ್ಕೆ ಹೋಗಿದ್ದಳು. ಆಕೆ ಮರಳಿ ಬಂದಾಗ ವಿಮಾನ ಫುಲ್ ಆಗಿತ್ತು. ಆಕೆ ತರಾತುರಿಯಲ್ಲಿ ವಿಮಾನವೇರಿದ್ದಾಳೆ. ಈ ವೇಳೆ ಗೇಟ್ ಏಜೆಂಟ್ ಬೇಗ ಬೇಗ ಬನ್ನಿ ಬೋರ್ಡಿಂಗ್ ಪಾಸ್ ತೋರಿಸಿ ಎಂದಿದ್ದಾರೆ. ಬೋರ್ಡಿಂಗ್ ಪಾಸ್ ನೋಡುತ್ತಿದ್ದಂತೆ ಹೊರಟು ಹೋಗುವಂತೆ ಹೇಳಿದ್ದಾಳೆ.
ಇದಾದ ಬಳಿಕ ಜಾಕ್ಸನ್‌ವಿಲ್ಲೆ (Jacksonville) ವಿಮಾನವು ಗೇಟ್ ಬದಲಾವಣೆ ಮಾಡಿದೆ. ಆ ವಿಮಾನವು ಜಮೈಕಾಕ್ಕೆ ಹೋಗುವ ಮಾರ್ಗದಲ್ಲಿದೆ ಎಂದು ವಿಮಾನ ಸಿಬ್ಬಂದಿ ವಿಮಾನವೇರಿದ ನಂತರ ಹೆಬಾರ್ಡ್‌ಗೆ ತಿಳಿಸಿದ್ದಾರೆ. ಈ ವೇಳೆ ನಕ್ಕ ನಾನು, ನಾನೂ ಅಲ್ಲಿಗೆ ಹೋಗಲು ಇಷ್ಟಪಡುತ್ತೇನೆ ಎಂದು ತಮಾಷೆಯಾಗಿ ಹೇಳಿದ್ದಾಳೆ. ಈ ವೇಳೆ ವಿಮಾನ ಸಿಬ್ಬಂದಿ ಆಕೆಯನ್ನು ನೋಡಿ ಈ ವಿಮಾನವೂ ಜಮೈಕಾಗೆ (Jamaica) ಹೋಗುತ್ತಿದೆ ಎಂದು ಮತ್ತೆ ಗಂಭೀರವಾಗಿ ಹೇಳಿದ್ದಾರೆ. ಈ ವೇಳೆ ಆಕೆಯ ಮುಖದ ಭಾವನೆಯಿಂದ ಆಕೆ ತಮಾಷೆ ಮಾಡುತ್ತಿಲ್ಲ ಎಂಬುದು ತಿಳಿಯಿತು ಎಂದು ಇಲ್ಲೀಸ್ ಹೆಬರ್ಡ್ ಹೇಳಿಕೊಂಡಿದ್ದಾರೆ.
ಏರ್ಪೋಟಲ್ಲಿ ಮಲಗಲು ಒತ್ತಾಯಿಸಿದ ಜರ್ಮನ್ ವಿಮಾನ ಸಂಸ್ಥೆ ವಿರುದ್ಧ ದಾವೆ ಹೂಡಿ 10 ಲಕ್ಷ ಗೆದ್ದ ಬೆಂಗಳೂರು ವೈದ್ಯ!
ಆದರೆ ಇಲ್ಲೀಸ್‌ಗೆ ತಾನು ಪಾಸ್‌ಪೋರ್ಟ್ (passport) ಹೊಂದಿಲ್ಲ ಎಂಬುವುದು ಮನದಟ್ಟಾಯಿತು. ಯಾವಾಗಲೂ ದೇಶಿಯವಾಗಿ ಪ್ರಯಾಣಿಸುತ್ತಿದ್ದ ಆಕೆ ಈ ಬಗ್ಗೆ ಯೋಚನೆ ಮಾಡಿರಲಿಲ್ಲ. ಆದರೆ ಅಲ್ಲಿಗೆ ತಲುಪಿದ ನಂತರ ಆಕೆಯನ್ನು ಜೆಟ್‌ವೇ ಬಳಿ ನಿಲ್ಲಿಸಲಾಯಿತು. (ಜೇಟ್‌ವೇಯನ್ನು ಅಮೆರಿಕಾದ ವಸಾಹತು ಎಂದು ಪರಿಗಣಿಸಲಾಗುತ್ತದೆ) ನಂತರ ವಿಮಾನ ಫಿಲಡೆಲ್ಫಿಯಾಗೆ (Philadelphia) ಟೇಕಾಫ್ ಆಗುವವರೆಗೆ ಆಕೆಯ ಜೊತೆಯೇ ವಿಮಾನದ ಸಿಬ್ಬಂದಿ ಹಲವು ಗಂಟೆಗಳ ಕಾಲ ನಿಂತಿದ್ದರು ಎಂದು ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ. ತಪ್ಪಾದ ವಿಮಾನವೇರುವಂತೆ ಮಾಡಿದ್ದಕ್ಕೆ ನಾವು ಗ್ರಾಹಕರಲ್ಲಿ ಕ್ಷಮೆ ಯಾಚಿಸುತ್ತೇವೆ. ಅಲ್ಲದೇ ಈ ಬಗ್ಗೆ ನಾವು ಆಕೆಗೆ ಹಣ ರೀಫಂಡ್ ಮಾಡುತ್ತೇವೆ ಹಾಗೂ ಪರಿಹಾರ ನೀಡುತ್ತೇವೆ ಎಂದು ವಿಮಾನಯಾನ ಸಿಬ್ಬಂದಿ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ