ಶ್ರೀಲಂಕಾದಲ್ಲಿ ಮಧ್ಯರಾತ್ರಿಯಿಂದಲೇ ಮತ್ತೆ ತುರ್ತು ಪರಿಸ್ಥಿತಿ ಜಾರಿ!

Published : May 07, 2022, 12:40 AM ISTUpdated : May 07, 2022, 12:41 AM IST
ಶ್ರೀಲಂಕಾದಲ್ಲಿ ಮಧ್ಯರಾತ್ರಿಯಿಂದಲೇ ಮತ್ತೆ ತುರ್ತು ಪರಿಸ್ಥಿತಿ ಜಾರಿ!

ಸಾರಾಂಶ

ಕಳೆದ ಐದು ವಾರಗಳಲ್ಲಿ 2ನೇ ಬಾರಿಗೆ ಶ್ರೀಲಂಕಾದಲ್ಲಿ ತುರ್ತುಪರಿಸ್ಥಿತಿ ಘೋಷಣೆಯಾಗಿದೆ. ಶುಕ್ರವಾರ ಮಧ್ಯರಾತ್ರಿಯಿಂದಲೇ ತುರ್ತುಪರಿಸ್ಥಿತಿ ಜಾರಿಯಾಗಲಿದೆ ಎಂದು ಶ್ರೀಲಂಕಾ ಅಧ್ಯಕ್ಷ ಗೋಟಾಬಯ ರಾಜಪಕ್ಸೆ ಘೋಷಿಸಿದ್ದು, ಸೇನೆಗೆ ಸಂಪೂರ್ಣ ಅಧಿಕಾರವನ್ನು ನೀಡಲಾಗಿದೆ.  

ಕೋಲಂಬೋ (ಮೇ. 7): ಹೆಚ್ಚುತ್ತಿರುವ ಸರ್ಕಾರಿ ವಿರೋಧಿ ಪ್ರತಿಭಟನೆಗಳನ್ನು (anti-government protests)ಎದುರಿಸಲು ಐದು ವಾರಗಳಲ್ಲಿ ಎರಡನೇ ಬಾರಿಗೆ ಭದ್ರತಾ ಪಡೆಗಳಿಗೆ ವ್ಯಾಪಕ ಅಧಿಕಾರವನ್ನು (giving security forces sweeping powers ) ನೀಡುವ ಮೂಲಕ ಶ್ರೀಲಂಕಾ ಅಧ್ಯಕ್ಷ ಗೋಟಾಬಯ ರಾಜಪಕ್ಸೆ ( Sri Lanka President Gotabaya Rajapaksa) ಶುಕ್ರವಾರ ತುರ್ತು ಪರಿಸ್ಥಿತಿಯನ್ನು ಘೋಷಿಸಿದ್ದಾರೆ. ಹದಗೆಡುತ್ತಿರುವ ಆರ್ಥಿಕ ಬಿಕ್ಕಟ್ಟಿನ (economic crisis) ಬಗ್ಗೆ ಅವರ ರಾಜೀನಾಮೆಗೆ ಒತ್ತಾಯಿಸಿ ಕಾರ್ಮಿಕ ಸಂಘಟನೆಗಳು ಶುಕ್ರವಾರ ರಾಷ್ಟ್ರವ್ಯಾಪಿ ಮುಷ್ಕರವನ್ನು ನಡೆಸಿದ ನಂತರ ಅವರು "ಸಾರ್ವಜನಿಕ ಸುವ್ಯವಸ್ಥೆಯನ್ನು ಖಚಿತಪಡಿಸಿಕೊಳ್ಳಲು" ಕಠಿಣ ಕಾನೂನುಗಳನ್ನು ಜಾರಿಗೆ ತಂದಿದ್ದಾರೆ ಎಂದು ವಕ್ತಾರರು ತಿಳಿಸಿದ್ದಾರೆ.

ಇಂದು ಮುಂಜಾನೆ, ಶ್ರೀಲಂಕಾದ ಸಂಸತ್ತಿಗೆ ( Sri Lanka's parliament ) ಮುತ್ತಿಗೆ ಹಾಕಲು ಪ್ರಯತ್ನಿಸಿದ ವಿದ್ಯಾರ್ಥಿಗಳ ಮೇಲೆ ಪೊಲೀಸರು ಮತ್ತೆ ಅಶ್ರುವಾಯು (Tear Gas) ಮತ್ತು ಜಲಫಿರಂಗಿಯನ್ನು (water cannon) ಹಾರಿಸಿದರು, ಸರ್ಕಾರವು ಅಧಿಕಾರದಿಂದ ಕೆಳಗಿಳಿಯುವಂತೆ ಒತ್ತಾಯಿಸಿ ಟ್ರೇಡ್ ಯೂನಿಯನ್ ಇಡೀ ದೇಶಾದ್ಯಂತ ಮುಷ್ಕರ ನಡೆಸಿದೆ.

ತಿಂಗಳುಗಳ ಕಾಲ ಕತ್ತಲೆ ಮತ್ತು ಆಹಾರ, ಇಂಧನ ಮತ್ತು ಔಷಧಗಳ ತೀವ್ರ ಕೊರತೆಯು 22 ಮಿಲಿಯನ್ ಜನರಿರುವ ದ್ವೀಪ ರಾಷ್ಟ್ರದಾದ್ಯಂತ ವ್ಯಾಪಕವಾದ ನೋವನ್ನು ಉಂಟುಮಾಡಿದೆ. 1948ರಲ್ಲಿ ಶ್ರೀಲಂಕಾ ಸ್ವಾತಂತ್ರ್ಯ ಪಡೆದುಕೊಂಡ ಬಳಿಕ, ಅತ್ಯಂತ ದೊಡ್ಡ ಬಿಕ್ಕಟ್ಟು ಇದಾಗಿದ್ದು, ಬಿಕ್ಕಟ್ಟನ್ನು ಬಗೆಹರಿಸುವಲ್ಲಿ ಸರ್ಕಾರದ ಅವ್ಯವಸ್ಥೆಯ ವಿರುದ್ಧ ಇಡೀ ಅಧಿಕಾರಿಗಳು ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿ ನಿರಂತರವಾಗಿ ಪ್ರತಿಭಟನೆಗಳು ನಡೆಯುತ್ತಿವೆ.

ಗುರುವಾರದಿಂದ ರಾಜಧಾನಿ ಕೊಲಂಬೊದ ಸರೋವರದ ಮೇಲೆ ಮಾನವ ನಿರ್ಮಿತ ದ್ವೀಪದಲ್ಲಿರುವ ಶಾಸಕಾಂಗಕ್ಕೆ ಹೋಗುವ ರಸ್ತೆಯಲ್ಲಿ ಸಾವಿರಾರು ವಿದ್ಯಾರ್ಥಿ ಪ್ರತಿಭಟನಾಕಾರರು ಮೊಕ್ಕಾಂ ಹೂಡಿದ್ದರು. ಅಧಿಕಾರಿಗಳು ಎರಡು ಟ್ರಕ್‌ಗಳಿಂದ ಜಲಫಿರಂಗಿ ಹಾಗೂ ಅಶ್ರುವಾಯುವನ್ನು ಸಿಡಿಸಿದರು, ಆದರೆ ಸಂಸತ್ತಿಗೆ ಪ್ರವೇಶವನ್ನು ನಿರ್ಬಂಧಿಸಲು ಸ್ಥಾಪಿಸಲಾದ ಪೊಲೀಸ್ ಬ್ಯಾರಿಕೇಡ್‌ಗಳ ಹಿಂದೆ ಜನಸಮೂಹವು ತ್ವರಿತವಾಗಿ ಪುನಃ ಸೇರಿತು.

ಗುರುವಾರ ಮಧ್ಯಾಹ್ನ ಮೊದಲು ವಿಫಲ ಪ್ರಯತ್ನದ ನಂತರ ಪೊಲೀಸರು ಅಶ್ರುವಾಯು ಮೂಲಕ ಗುಂಪನ್ನು ಚದುರಿಸಲು ಎರಡನೇ ಬಾರಿಗೆ ಪ್ರಯತ್ನಿಸಿದರು. ದೇಶದ ಟ್ರೇಡ್ ಯೂನಿಯನ್ ಆಂದೋಲನದಿಂದ ಆಯೋಜಿಸಲಾದ ಮುಷ್ಕರದಲ್ಲಿ ಲಕ್ಷಾಂತರ ಕಾರ್ಮಿಕರು ಕೆಲಸದಿಂದ ಹೊರಬಿದ್ದಿದ್ದಾರೆ. ಒಂದು ನಿಗದಿತ ರೈಲು ಸೇವೆಯನ್ನು ಹೊರತುಪಡಿಸಿ ಉಳಿದೆಲ್ಲವೂ ರದ್ದಾಗಿದೆ. ಖಾಸಗಿ ಒಡೆತನದ ಬಸ್‌ಗಳು ರಸ್ತೆಗಿಳಿದಿದ್ದು, ಕೈಗಾರಿಕಾ ಕಾರ್ಮಿಕರು ತಮ್ಮ ಕಾರ್ಖಾನೆಗಳ ಹೊರಗೆ ಪ್ರತಿಭಟನೆ ನಡೆಸಿದರು ಮತ್ತು ಸರ್ಕಾರದ ವಿರುದ್ಧ ಕೋಪವನ್ನು ತೋರಿಸುವ ಸಲುವಾಗಿ ದೇಶದಾದ್ಯಂತ ರಸ್ತೆಗಳಲ್ಲಿ ಕಪ್ಪು ಬಾವುಟಗಳನ್ನು ಪ್ರದರ್ಶನ ಮಾಡಲಾಗಿದೆ.

"ನಮ್ಮ ಆರ್ಥಿಕತೆಯ ಈ ಶೋಚನೀಯ ಸ್ಥಿತಿಗೆ ಕಾರಣವಾದ ಅಧ್ಯಕ್ಷರ ನೀತಿ ಪ್ರಮಾದಗಳನ್ನು ನಾವು ಗುರುತಿಸಬಹುದು. ಹಾಗಾಗಿ ಅವರು ಹುದ್ದೆ ತೊರೆಯಬೇಕು" ಎಂದು ಟ್ರೇಡ್ ಯೂನಿಯನ್ ಮುಖಂಡ ರವಿ ಕುಮುದೇಶ್ ಹೇಳಿದ್ದಾರೆ.

Sri Lanka Crisis ಲಂಕಾದ ರಾಜಪಕ್ಸೆ ಸರ್ಕಾರಕ್ಕಿಂದು ಅಗ್ನಿಪರೀಕ್ಷೆ, ಅವಿಶ್ವಾಸ ಮಂಡನೆ

ದೇಶದ ಮೂರನೇ ಎರಡರಷ್ಟು ಬಸ್ ಗಳನ್ನು ಹೊಂದಿರುವ ಖಾಸಗಿ ಬಸ್‌ಗಳು ಸಹ ರಸ್ತೆಯಿಂದ ಹೊರಗುಳಿದಿವೆ ಎಂದು ಖಾಸಗಿ ಬಸ್ ನಿರ್ವಾಹಕರ ಸಂಘದ ಅಧ್ಯಕ್ಷ ಗೇಮುನು ವಿಜೆರತ್ನ ಹೇಳಿದರು. "ನಾವು ಇಂದು ಸೇವೆಗಳನ್ನು ಒದಗಿಸುತ್ತಿಲ್ಲ, ಆದರೆ 20 ಕಿಲೋಮೀಟರ್ ವ್ಯಾಪ್ತಿಯೊಳಗೆ ಜನರ ಗುಂಪುಗಳು ಸರ್ಕಾರಿ ವಿರೋಧಿ ಪ್ರತಿಭಟನೆಯಲ್ಲಿ ಸೇರಲು ಬಯಸಿದರೆ, ನಾವು ನಮ್ಮ ಬಸ್‌ಗಳನ್ನು ಉಚಿತವಾಗಿ ನೀಡುತ್ತೇವೆ" ಎಂದು ವಿಜೆರತ್ನೆ ಕೊಲಂಬೊದಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ಲಂಕಾ ಅಧ್ಯಕ್ಷರ ಅಧಿಕಾರ ಕಟ್‌?: ಸೋದರ ಗೋಟಬಾಯ ಅಧಿಕಾರ ಮೊಟಕುಗೊಳಿಸಲು ಮಹಿಂದಾ!

ಇನ್ನೊಂದೆಡೆ ಅಧ್ಯಕ್ಷ ಗೋಟಾಬಯ ರಾಜಪಕ್ಸೆ  ಯಾವುದೇ ಕಾರಣಕ್ಕೂ ಅಧಿಕಾರದಿಂದ ಕೆಳಗಿಳಿಯುವುದಿಲ್ಲ ಎಂದು ಹೇಳಿದ್ದಾರೆ. ಕರೋನಾವೈರಸ್ ನಿಂದಾಗಿ ಶ್ರೀಲಂಕಾಕ್ಕೆ ಪ್ರವಾಸೋದ್ಯಮದಿಂದ ಬರುವ ಬಹುದೊಡ್ಡ ಆದಾಯ ದೊಡ್ಡ ಮಟ್ಟದಲ್ಲಿ ಕಡಿಮೆಯಾಗಿದೆ. ಇದು ದೇಶದ ಆರ್ಥಿಕ ಸಂಕಷ್ಟಕ್ಕೆ ಕಾರಣ ಎಂದು ಹೇಳಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ವಿಶ್ವದ ಅತಿ ಬಲಿಷ್ಠ ಕರೆನ್ಸಿಗಳಿವು: ಭಾರತದ ರುಪಾಯಿ ಮುಂದೆ ಘರ್ಜಿಸುವ ಡಾಲರ್ ಈ ದೇಶದ ಕರೆನ್ಸಿ ಮುಂದೆ ಡಮ್ಮಿ!
ರಾಜಮೌಳಿ-ಜೇಮ್ಸ್ ಕ್ಯಾಮರೂನ್ ಹೊಸ ಹೆಜ್ಜೆ, ನಟ ಮಹೇಶ್ ಬಾಬುಗೆ ಪ್ಯಾನ್ ವರ್ಲ್ಡ್ ಪಟ್ಟ..!