ಈ ಹಕ್ಕಿಗೂ ಅದೆಂಥಾ ಜವಾಬ್ದಾರಿ: ತನ್ನ ಹೆಣ್ಣಿಗೆ ಆಹಾರ ತಂದು ತಿನ್ನಿಸುವ ಗಂಡು ಹಾರ್ನ್‌ಬಿಲ್‌

Published : May 06, 2022, 04:57 PM IST
ಈ ಹಕ್ಕಿಗೂ ಅದೆಂಥಾ ಜವಾಬ್ದಾರಿ: ತನ್ನ ಹೆಣ್ಣಿಗೆ ಆಹಾರ ತಂದು ತಿನ್ನಿಸುವ ಗಂಡು ಹಾರ್ನ್‌ಬಿಲ್‌

ಸಾರಾಂಶ

ಸಂಗಾತಿಯ ಸೊಗಸಾಗಿ ಸಾಕುವ ಗಂಡು ಹಾರ್ನ್‌ಬಿಲ್ ಈತ ತೋರುವ ಪ್ರೀತಿಗೆ ಯಾರೂ ಸರಿಸಾಟಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್

ಬುದ್ಧಿವಂತ ಪ್ರಾಣಿ ಎನಿಸುವ ಮನುಷ್ಯನೇ ಇಂದಿನ ಕಾಲದಲ್ಲಿ ಯಾವುದೇ ಜವಾಬ್ದಾರಿಯಿಲ್ಲದೇ ಬೇಕಾಬಿಟ್ಟಿ ಬದುಕುವುದನ್ನು ನೋಡಿದ್ದೇವೆ. ಆದರೆ ಮನುಷ್ಯರಷ್ಟು ಬುದ್ಧಿವಂತಿಕೆ ಇಲ್ಲದವೂ ಎಂದು ಮನುಷ್ಯರಿಂದ ಅನ್ನಿಸಿಕೊಳ್ಳುವ  ಪ್ರಾಣಿಗಳು ಪಕ್ಷಿಗಳು ಕೂಡ ತಾವು ತಮ್ಮವರೂ ಎಂದು ಬಂದಾಗ ಜವಾಬ್ದಾರಿ ಮೆರೆಯುವ ಸಂಗಾತಿಗೆ ಪ್ರೀತಿ ತೋರುವ ಹಲವು ವಿಡಿಯೋಗಳನ್ನು ನಾವು ಈಗಾಗಲೇ ನೋಡಿದ್ದೇವೆ. ಅಂತಹ ಮತ್ತೊಂದು ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಬಾರಿ ಅದು ಪಕ್ಷಿ. 

ಹೌದು ಹಾರ್ನ್‌ಬಿಲ್‌ ಎಂದು ಕರೆಯಲ್ಪಡುವ ಈ ಗಂಡು ಪಕ್ಷಿ ಗೂಡೊಳಗೆ ಕುಳಿತಿರುವ ತನ್ನ ಸಂಗಾತಿಗೆ ದೂರದಿಂದೆಲ್ಲೋ ಆಹಾರವನ್ನು ತಂದು ಬಾಯಿಗೆ ಕೊಡುತ್ತಿರುವ ದೃಶ್ಯವಿದು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅನೇಕ ಪ್ರಾಣಿ ಪಕ್ಷಿಗಳು ತಮ್ಮ ಸಂಗಾತಿಗಳನ್ನು ಮನುಷ್ಯರಿಗಿಂತಲೂ ಮಿಗಿಲಾಗಿ ಭಾರಿ ಪ್ರೀತಿಯಿಂದ ನೋಡಿಕೊಳ್ಳುತ್ತವೆ ಎಂಬುವುದಕ್ಕೆ ಈ ವಿಡಿಯೋವೊಂದು ಉದಾಹರಣೆಯಷ್ಟೇ. ಮರದ ಕಾಂಡವನ್ನು ಕೊರೆದು ಮಾಡಿರುವ ಗೂಡಿನಲ್ಲಿ ಹೆಣ್ಣು ಹಾರ್ನ್‌ಬಿಲ್‌ ಹಕ್ಕಿ ಕುಳಿತಿದ್ದರೆ, ಗಂಡು ಹಾರ್ನ್‌ಬಿಲ್ ಹಕ್ಕಿ ಒಳಗಿರುವ ತನ್ನ ಸಂಗಾತಿಗೆ ಕೊಕ್ಕಿನಿಂದ ಆಹಾರ ನೀಡುವ  ಸುಂದರ ದೃಶ್ಯವಿದು.

ನಿಮ್ಮ ಹುಡ್ಗಿ ಮುಂದೆ ಹೀಗೆಲ್ಲ ಮಾತಾಡ್ಬೇಡಿ ಸ್ವಾಮೀ.. ಬಿಟ್ ಹೋದಾಳು!

ಐಎಫ್‌ಎಸ್ ಅಧಿಕಾರಿ ಪರ್ವೀನ್ ಕಸ್ವಾನ್ ಅವರು ಈ ವಿಡಿಯೋವನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಗಂಡು ಹಾರ್ನ್‌ಬಿಲ್ ಹಣ್ಣಿಗೆ ಆಹಾರ ಹೊತ್ತುಕೊಂಡು ಬಂದು ಮರದ ಕಾಂಡದೊಳಗಿನ ಇರುವ  ಹೆಣ್ಣಿಗೆ ತಿನ್ನಿಸುತ್ತಿದೆ. ತೋರಿಸುತ್ತದೆ. "ನೀವು ಇಂದು ವೀಕ್ಷಿಸುವ ಅತ್ಯಂತ ಸುಂದರವಾದ ದೃಶ್ಯವಿದು. ಗೂಡಿನೊಳಗೆ ಕುಳಿತ ಹೆಣ್ಣಿಗೆ ಹಾರ್ನ್‌ಬಿಲ್ ಗಂಡು ಆಹಾರ ನೀಡುತ್ತಿದೆ. ಇದನ್ನು ಅವರು ತಿಂಗಳುಗಟ್ಟಲೆ ಮಾಡುತ್ತಾರೆ" ಎಂದು ಕಸ್ವಾನ್ ಶೀರ್ಷಿಕೆಯಲ್ಲಿ ವಿವರಿಸಿದ್ದಾರೆ.

 

 

ಟ್ವಿಟರ್ ಥ್ರೆಡ್ ಹಾರ್ನ್‌ಬಿಲ್‌ಗಳ ಬಗ್ಗೆ ಹಲವಾರು ವಿಚಾರಗಳನ್ನು ತಿಳಿಸುತ್ತಿದೆ. ಭಾರತದಲ್ಲಿ 9 ಜಾತಿಯ ಹಾರ್ನ್‌ಬಿಲ್‌ಗಳಿವೆ. ಗ್ರೇಟ್‌ನಿಂದ ಗ್ರೇ ವರೆಗೆ (Great to Grey hornbill). ಹಾರ್ನ್ ಬಿಲ್‌ಗಳು ಸಾಮಾನ್ಯವಾಗಿ ಏಕಪತ್ನಿವೃತರು. ಈ ಜೋಡಿಯು ದೀರ್ಘಕಾಲ ಇರುತ್ತದೆ ಎಂದು ಟ್ವಿಟ್‌ಗಳಲ್ಲಿ ವಿವರ ನೀಡಿದ್ದಾರೆ. 

ಹ್ಯಾರಿ ಪಾಟರ್ ಥೀಮ್‌ ಸಾಂಗ್‌ ಹಾಡುವ ಪುಟ್ಟ ಹಕ್ಕಿ: ವಿಡಿಯೋ ವೈರಲ್‌

ಈ  ಸುಂದರ ಪಕ್ಷಿಗಳು ತಮ್ಮ ಗೂಡುಗಳನ್ನು ಹೇಗೆ ನಿರ್ಮಿಸುತ್ತವೆ ಮತ್ತು ತಮ್ಮ ಸಂತತಿಯನ್ನು ಹೇಗೆ ನೋಡಿಕೊಳ್ಳುತ್ತವೆ ಎಂಬುದನ್ನು ಕಸ್ವಾನ್ ವಿವರಿಸುತ್ತಾರೆ. ಅವರ ಅವಲೋಕನದ ಪ್ರಕಾರ, ಹೆಣ್ಣು ಹಾರ್ನ್‌ಬಿಲ್ ಗೂಡನ್ನು ಆರಿಸಿಕೊಳ್ಳುತ್ತದೆ ಮತ್ತು ತಿಂಗಳುಗಳ ಕಾಲ ಒಳಗೆ ಉಳಿಯಲು ಅದನ್ನು ಮುಚ್ಚುತ್ತದೆ ಎಂದು ಕಸ್ವಾನ್ ಉಲ್ಲೇಖಿಸಿದ್ದಾರೆ. 3-4 ತಿಂಗಳುಗಳವರೆಗೆ, ಗಂಡು ಹಾರ್ನ್‌ಬಿಲ್‌ನ (hornbill) ಕೆಲಸವು ತನ್ನ ಸಂಗಾತಿಗೆ ಆಹಾರವನ್ನು ತರುವುದು. ಮರಿಗಳು ಮೊಟ್ಟೆಯೊಡೆದ ನಂತರ, ಗಂಡು ಹೆಣ್ಣು ಎರಡೂ ಹಕ್ಕಿಗಳು ತಮ್ಮ ಸಂತತಿಯನ್ನು ಪೋಷಿಸಲು ಆಗಾಗ್ಗೆ ದೂರ ಸಾಗಿ ಆಹಾರ ತಂದು ಮರಿಗಳಿಗೆ ತಿನ್ನಿಸುತ್ತವೆ ಎಂದು ಕಸ್ವಾನ್ ವಿವರಿಸಿದ್ದಾರೆ. 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ವಿಶ್ವದ ಅತಿ ಬಲಿಷ್ಠ ಕರೆನ್ಸಿಗಳಿವು: ಭಾರತದ ರುಪಾಯಿ ಮುಂದೆ ಘರ್ಜಿಸುವ ಡಾಲರ್ ಈ ದೇಶದ ಕರೆನ್ಸಿ ಮುಂದೆ ಡಮ್ಮಿ!
ರಾಜಮೌಳಿ-ಜೇಮ್ಸ್ ಕ್ಯಾಮರೂನ್ ಹೊಸ ಹೆಜ್ಜೆ, ನಟ ಮಹೇಶ್ ಬಾಬುಗೆ ಪ್ಯಾನ್ ವರ್ಲ್ಡ್ ಪಟ್ಟ..!