ಸೆಕ್ಸ್‌ ಅನ್ನೋದು ದೇವರು ಮಾನವನಿಗೆ ನೀಡಿದ ಅದ್ಭುತ ಸಂಗತಿ, ಪೋಪ್‌ ಫ್ರಾನ್ಸಿಸ್‌ ಮಾತು!

By Santosh Naik  |  First Published Apr 6, 2023, 6:29 PM IST

ಪೋಪ್ ಫ್ರಾನ್ಸಿಸ್ ಅವರು ಸೆಕ್ಸ್‌ ಅನ್ನೋದು ಮಾನವನಿಗೆ ದೇವರು ನೀಡಿದ ಸುಂದರವಾದ ಸಂಗತಿಗಳಲ್ಲಿ ಒಂದು ಎಂದು ಹೇಳಿದ್ದಾರೆ. ಸಾಕ್ಷ್ಯಚಿತ್ರದಲ್ಲಿ ಅವರು ಈ ಮಾತನ್ನು ಹೇಳಿದ್ದಾರೆ.
 


ವ್ಯಾಟಿಕನ್‌ ಸಿಟಿ (ಏ.6): ಕ್ರಿಶ್ಚಿಯನ್ನರ ಧಾರ್ಮಿಕ ನಾಯಕ ಪೋಪ್‌ ಫ್ರಾನ್ಸಿಸ್‌ ಬುಧವಾರ ಬಿಡುಗಡೆಯಾದ ಸಾಕ್ಷ್ಯಚಿತ್ರದಲ್ಲಿ ಸೆಕ್ಸ್‌ನ ಉತ್ತಮ ಅಂಶಗಳನ್ನು ಶ್ಲಾಘಿಸಿದ್ದಾರೆ, "ದೇವರು ಮಾನವ ವ್ಯಕ್ತಿಗೆ ನೀಡಿದ ಸುಂದರವಾದ ಸಂಗತಿಗಳಲ್ಲಿ ಸೆಕ್ಸ್‌ ಕೂಡ ಒಂದು ಎಂದು ವಿವರಿಸಿದ್ದಾರೆ. 86 ವರ್ಷ ವಯಸ್ಸಿನ ಪೋಪ್‌ ಫ್ರಾನ್ಸಿಸ್‌,  ಡಿಸ್ನಿ ನಿರ್ಮಾಣದ "ದಿ ಪೋಪ್ ಆನ್ಸರ್ಸ್" ಸಾಕ್ಷ್ಯಚಿತ್ರದಲ್ಲಿ ಈ ಹೇಳಿಕೆ ನೀಡಿದ್ದಾರೆ. ಇದು ಕಳೆದ ವರ್ಷ ರೋಮ್‌ನಲ್ಲಿ 20 ರ ದಶಕದ ಆರಂಭದಲ್ಲಿ 10 ಜನರೊಂದಿಗೆ ನಡೆಸಿದ ಸಭೆಯ ಬಗ್ಗೆ ಮಾಹಿತಿ ಒದಗಿಸುತ್ತದೆ.ಎಲ್‌ಜಿಬಿಟಿ ಹಕ್ಕುಗಳು, ಗರ್ಭಪಾತ, ಪೋರ್ನ್‌ ಇಂಡಸ್ಟ್ರಿ, ಸೆಕ್ಸ್‌ ಮತ್ತು ಕ್ಯಾಥೋಲಿಕ್ ಚರ್ಚ್‌ನೊಳಗಿನ ನಂಬಿಕೆ ಮತ್ತು ಲೈಂಗಿಕ ನಿಂದನೆ ಸೇರಿದಂತೆ ವಿವಿಧ ವಿಷಯಗಳ ಕುರಿತು ಫ್ರಾನ್ಸಿಸ್ ಅವರನ್ನು ಪ್ರಶ್ನೆ ಮಾಡಲಾಗಿತ್ತು. ಈ ಎಲ್ಲದಕ್ಕೂ ಅವರು ಸಮಾಧಾನದಿಂದಲೇ ಉತ್ತರ ನೀಡಿದ್ದಾರೆ. "ಮನುಷ್ಯನಿಗೆ ದೇವರು ನೀಡಿದ ಸುಂದರವಾದ ಸಂಗತಿಗಳಲ್ಲಿ  ಸೆಕ್ಸ್‌ ಕೂಡ ಒಂದು" ಎಂದು ಅವರು ಸಾಕ್ಷ್ಯಚಿತ್ರದಲ್ಲಿ ಹೇಳಿದ್ದಾರೆ. "ನಮ್ಮನ್ನು ನಾವು ಲೈಂಗಿಕವಾಗಿ ವ್ಯಕ್ತಪಡಿಸುವುದು ಶ್ರೀಮಂತಿಕೆಯಾಗಿದೆ. ಆದ್ದರಿಂದ ನಿಜವಾದ ಲೈಂಗಿಕ ಅಭಿವ್ಯಕ್ತಿಯಿಂದ ದೂರವಿರುವುದು ನಿಮ್ಮ ಮನಸ್ಸನ್ನು ಗೌಣ ಮಾಡುತ್ತದೆ ಮತ್ತು ಈ ಶ್ರೀಮಂತಿಕೆಯನ್ನು ಕಡಿಮೆ ಮಾಡುತ್ತದೆ" ಎಂದು ಅವರು ಹಸ್ತಮೈಥುನವನ್ನು ಉಲ್ಲೇಖಿಸಿ ಹೇಳಿದ್ದಾರೆ.

ಫ್ರಾನ್ಸಿಸ್ ಅವರನ್ನು "ಬೈನರಿ ಅಲ್ಲದ ವ್ಯಕ್ತಿ" ಎಂದರೇನು ಎಂದು ಅವರಿಗೆ ತಿಳಿದಿದೆಯೇ ಎಂದು ಕೇಳಲಾಯಿತು ಮತ್ತು ಅದಕ್ಕೆ ಅವರು ಸಮಾಧಾನದಿಂದಲೇ ಉತ್ತರ ನೀಡಿದರು. ಎಲ್‌ಬಿಜಿಟಿ ಜನರನ್ನು ಕ್ಯಾಥೋಲಿಕ್ ಚರ್ಚ್ ಮುಕ್ತ ಮನಸ್ಸಿನಿಂದ ಸ್ವಾಗತಿಸಬೇಕು ಎಂದು ಅವರು ಮತ್ತೊಮ್ಮೆ ಹೇಳಿದರು.

Tap to resize

Latest Videos

ಪಾದ್ರಿಗಳು, ಕ್ರೈಸ್ತ ಸನ್ಯಾಸಿನಿಯರು ಕೂಡ Porn ವೀಕ್ಷಿಸ್ತಾರೆ, ಅಪಾಯದ ಎಚ್ಚರಿಕೆ ನೀಡಿದ ಪೋಪ್‌!

ಭೂಮಿಯ ಮೇಲಿರುವ ಎಲ್ಲರೂ ದೇವರು ಮಕ್ಕಳು. ಇದಕ್ಕೆ ಯಾರೂ ಕೂಡ ಹೊರತಲ್ಲ. ದೇವರನ್ನು ಯಾರನ್ನೂ ತಿರಸ್ಕರಿಸೋದಿಲ್ಲ. ದೇವರೇ ನಮಗೆಲ್ಲರಿಗೂ ತಂದೆ. ಹಾಗಾಗಿ ಯಾರನ್ನೂ ಕೂಡ ಚರ್ಚ್‌ನಿಂದ ಹೊರಹಾಕುವ ಹಕ್ಕು ನನಗೆ ಇಲ್ಲ ಎಂದು ಪೋಪ್‌ ಹೇಳಿದ್ದಾರೆ. ಗರ್ಭಪಾತದ ಕುರಿತಾಗಿ ಮಾತನಾಡಿದ ಅವರು, ಗರ್ಭಾವಸ್ಥೆಯನ್ನು ಕೊನೆಗೊಳಿಸಿದ ಮಹಿಳೆಯರ ಬಗ್ಗೆ ಪಾದ್ರಿಗಳು "ಕರುಣೆಯಿಂದ" ವರ್ತಿಸಬೇಕು ಎಂದು ಫ್ರಾನ್ಸಿಸ್ ಹೇಳಿದರು, ಆದರೆ ಅಭ್ಯಾಸವು ಸ್ವೀಕಾರಾರ್ಹವಲ್ಲ ಎಂದು ಹೇಳಿದ್ದಾರೆ.

ಪೋಪ್‌ ಜೊತೆ ಪ್ರಧಾನಿ ಮೋದಿ ಮೊದಲ ಭೇಟಿ: 20 ನಿಮಿಷದ ಮಾತುಕತೆ 1 ತಾಸಿಗೆ ವಿಸ್ತರಣೆ!

ಪೋಪ್ ಅವರ ಹೇಳಿಕೆಗಳನ್ನು ಅಧಿಕೃತ ವ್ಯಾಟಿಕನ್ ಪತ್ರಿಕೆಯಾದ L'Osservatore Romano ಪ್ರಕಟಿಸಿದೆ, ಇದು ಯುವ ಜನರೊಂದಿಗೆ ಅವರ ಸಂಭಾಷಣೆಯನ್ನು "ಮುಕ್ತ ಮತ್ತು ಪ್ರಾಮಾಣಿಕ ಸಂಭಾಷಣೆ" ಎಂದು ವಿವರಿಸಿದೆ.
 

click me!