
ನ್ಯೂಯಾರ್ಕ್(ಮೇ.09): ಕೊರೋನಾ ವೈರಸ್ ವಕ್ಕರಿಸಿದ ಮೇಲೆ ಅಮೆರಿಕ ಹಾಗೂ ಚೀನಾ ಸಂಬಂಧ ಮತ್ತಷ್ಟು ಹದಗೆಟ್ಟಿದೆ. ಚೀನಾ ಮೇಲೆ ವೈರಸ್ ಜನಕ ಎಂದು ನೇರ ಆರೋಪ ಮಾಡಿದ ಅಮೆರಿಕಾ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಮೇಲೆ ವಿಶ್ವ ಆರೋಗ್ಯ ಸಂಸ್ಥೆ ಅಸಮಧಾನ ವ್ಯಕ್ತಪಡಿಸಿತ್ತು ಹೀಗಾಗಿ ಚೀನಾ ಹಾಗೂ ವಿಶ್ವ ಆರೋಗ್ಯ ಸಂಸ್ಥೆ ವಿರುದ್ಧ ಅಮೆರಿಕದ ಸಮರ ಮುಂದುವರಿದೆ. ಇದೀಗ ವಿಶ್ವ ಆರೋಗ್ಯ ಸಂಸ್ಥೆ ಚೀನಾದ ಕೈಗೊಂಬೆ ಎಂದಿರುವ ಡೋನಾಲ್ಡ್ ಟ್ರಂಪ್, ಶೀಘ್ರದಲ್ಲೇ ಅದೀಕೃತ ಪ್ರಕಟಣೆ ಹೊರಡಿಸುವುದಾಗಿ ಹೇಳಿದ್ದಾರೆ.
ಉದ್ಯೋಗ ಸೃಷ್ಟಿಗೆ ಮೋದಿ ಮಹಾ ಪ್ಲಾನ್; ಸಪೋರ್ಟ್ ಮಾಡುತ್ತಾ ಅಮೆರಿಕಾ?
ಅಮೆರಿಕಾ ಪ್ರತಿ ವರ್ಷ 500 ಮಿಲಿಯನ್ ಯುಎಸ್ ಡಾಲರ್ ಹಣವನ್ನು ವಿಶ್ವ ಆರೋಗ್ಯ ಸಂಸ್ಥೆಗೆ ನೀಡುತ್ತಿದೆ. ಚೀನಾ ವಾರ್ಷಿಕ ಹಣ ಕೇವಲ 30 ಮಿಲಿಯನ್ ಯುಎಸ್ ಡಾಲರ್ ಹಣದ ನೆರವು ನೀಡುತ್ತಿದೆ. ಇದೀಗ ವಿಶ್ವ ಆರೋಗ್ಯ ಸಂಸ್ಥೆ ಚೀನಾದ ಕೈಗೊಂಬೆ ರೀತಿ ವರ್ತಿಸುತ್ತಿದೆ. ಇತರ ದೇಶಗಳಿಗೆ ಹೋಲಿಸಿದರೆ ಅತೀ ದೊಡ್ಡ ಮೊತ್ತದ ನೆರವನ್ನು ವಿಶ್ವ ಆರೋಗ್ಯ ಸಂಸ್ಥೆಗೆ ಅಮೆರಿಕ ನೀಡುತ್ತಿದೆ. ಇದೀಗ ಈ ನೆರವು ನಿಲ್ಲಿಸುವ ಕುರಿತು ಶೀಘ್ರದಲ್ಲೇ ಅಧೀಕೃತ ಪ್ರಕಟಣೆ ಹೊರಡಿಸುವುದಾಗಿ ಡೋನಾಲ್ಡ್ ಟ್ರಂಪ್ ಹೇಳಿದ್ದಾರೆ.
ಲಾಕ್‌ಡೌನ್ ಸಡಿಲಿಕೆ: ಪೂರ್ಣ ಪ್ರಮಾಣದ ವಹಿವಾಟಿಗೆ ಅವಕಾಶ
ವೈರಸ್ ಹುಟ್ಟು ಹಾಗೂ ಇತರ ಮಾಹಿತಿಗಳ ಕುರಿತು ಅಧ್ಯಯನಕ್ಕೆ ಚೀನಾ ನಮಗೆ ಅವಕಾಶ ನೀಡುತ್ತಿಲ್ಲ. ಇತ್ತ ವಿಶ್ವ ಆರೋಗ್ಯ ಸಂಸ್ಥೆ ಕೂಡ ಸಹಾಯ ಮಾಡುತ್ತಿಲ್ಲ. ಸದ್ಯ ವಿಶ್ವ ಎದುರಿಸುತ್ತಿರುವ ಈ ಆರೋಗ್ಯ ತುರ್ತು ಪರಿಸ್ಥಿತಿಗೆ ಚೀನಾ ಕಾರಣ ಎಂದರೆ, ವಿಶ್ವ ಆರೋಗ್ಯ ಸಂಸ್ಥೆ ಅಸಮಧಾನ ವ್ಯಕ್ತಪಡಿಸುತ್ತಿದೆ. ಅಮೆರಿಕಾಗೆ ಈ ರೀತಿ ಹೊಡೆತ ನೀಡಿದ ಮೇಲೆ ವಿಶ್ವ ಆರೋಗ್ಯ ಸಂಸ್ಥೆಗೆ ಆರ್ಥಿಕ ನೆರವು ನೀಡುವುದರಲ್ಲಿ ಅರ್ಥವಿಲ್ಲ ಎಂದು ಟ್ರಂಪ್ ಹೇಳಿದ್ದಾರೆ.
ವಿಶ್ವ ಸಂಸ್ಥೆಗೆ ವರ್ಷಕ್ಕೆ 39 ಡಾಲರ್ ಯುಎಸ್ ಹಣ ನೀಡುವ ಚೀನಾದಿಂದ, ವರ್ಷಕ್ಕೆ 500 ಮಿಲಿಯನ್ ಡಾಲರ್ ನೀಡುವ ಅಮೆರಿಕಾ ಏನು ಮಾಡಬೇಕು, ಏನು ಮಾಡಬಾರದು ಎಂದು ಅವರಿಂದ ಅಪ್ಪಣೆ ಪಡೆಯಬೇಕಾದ ಅಗತ್ಯವಿಲ್ಲ. ನಾವೇನು ಅನ್ನೋದನ್ನು ತೋರಿಸುತ್ತಿವೇ ಎಂದು ಟ್ರಂಪ್ ಎಚ್ಚರಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ