ಅಮೆರಿಕದ ವೈಟ್ ಹೌಸ್ ನಲ್ಲಿ ಮೊಳಗಿದ ಮಂತ್ರಘೋಷ/ ಶಾಂತಿ ಸ್ಥಾಪನೆಗಾಗಿ ಮಂತ್ರ ಪಠಣ/ ಟ್ರಂಪ್ ಆಹ್ವಾನದ ಮೇರೆಗೆ ವೈಟ್ ಹೌಸ್ ಗೆ ತೆರಳಿದ ವಿದ್ವಾಂಸ ಹರೀಶ್ ಬ್ರಹ್ಮಾಭಟ್ ಅವರಿಂದ ಮಂತ್ರಘೋಷ
ವಾಷಿಂಗ್ ಟನ್( ಮೇ 08) ಅಮೆರಿಕದ ವೈಊಟ್ ಹೌಸ್ ನಲ್ಲಿ ಹಿಂದೂ ಅರ್ಚಕರಿಂಧ ಪ್ರಾರ್ಥನೆ. ಹೌದು ಇಂಥದ್ದೊಂದು ಸುದ್ದಿಗೂ ಸಾಕ್ಷಿಯಾಗಬೇಕಿದೆ. ವೈಟ್ ಹೌಸ್ ನಲ್ಲಿ ಶಾಂತಿ ಮಂತ್ರ ಪಠಣವಾಗಿದೆ. ಆರೋಗ್ಯ, ಸಂಪತ್ತು ವೃದ್ಧಿ, ಸುರಕ್ಷತೆ ದಯಪಾಲಿಸಲು ಮಂತ್ರ ಪಠಣ ಮಾಡಲಾಗಿದೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಹ್ವಾನದ ಮೇರೆಗೆ ನ್ಯೂಜೆರ್ಸಿ ಬಿಎಪಿಎಸ್ ಸ್ವಾಮಿನಾರಾಯಣ ಮಂದಿರದ ವಿದ್ವಾಂಸ ಹರೀಶ್ ಬ್ರಹ್ಮಾಭಟ್ ಉಳಿದ ಧರ್ಮಗುರುಗಳೊಂದಿಗೆ ಸೇರಿಕೊಂಡಿದ್ದಾರೆ. ರಾಷ್ಟ್ರೀಯ ಪ್ರಾರ್ಥನಾ ದಿನದ ಅಂಗವಾಗಿ ಅಮೆರಿಕದಲ್ಲಿ ಮಂತ್ರಘೋಷ ಮೊಳಗಿದೆ.
undefined
ಕೊರೋನಾ ವೈರಸ್ ದಾಳಿ ಮಾಡುತ್ತಿರುವ ಸಂಕಷ್ಟದ ಸಮಯ ಇದಾಗಿದೆ. ಜನರು ಆತಂಕದಲ್ಲಿಯೇ ದಿನ ದೂಡುವ ಸ್ಥಿತಿ ನಿರ್ಮಾಣವಾಗಿದ್ದು ಯಶಸ್ಸು, ಶಾಂತಿ ಮತ್ತು ನೆಮ್ಮದಿಗಾಗಿ ಪ್ರಾರ್ಥನೆ ಮಾಡಲಾಗಿದೆ ಎಂದು ರೋಸ್ ಗಾರ್ಡನ್ ನಲ್ಲಿ ಬ್ರಹ್ಮಾಭಟ್ ತಿಳಿಸಿದರು.
ಮೂರೇ ವಾರದಲ್ಲಿ ಪಿಎಂ ಮೋದಿ ಅನ್ ಫಾಲೋ ಮಾಡಿದ ವೈಟ್ ಹೌಸ್
ಯಜುರ್ವೇದದ ಈ ಮಂತ್ರ ಶಾಂತಿ ದಯಪಾಲಿಸುತ್ತದೆ. ಮೊದಲು ಸಂಸ್ಕೃತದಲ್ಲಿ ಶ್ಲೋಕ ಪಠಣ ಮಾಡಿ ನಂತರ ಇಂಗ್ಲಿಷ್ ಗೆ ತುರ್ಜುಮೆ ಮಾಡಲಾಯಿತು. ಸ್ವರ್ಗದಲ್ಲಿ ಶಾಂತಿ ನೆಲೆಸಲಿ, ಭೂಮಿ-ಆಕಾಶಲ್ಲಿ ಶಾಂತಿ ನೆಲೆಸಲಿ, ನೀರಿನಲ್ಲಿ ಶಾಂತಿ ನೆಲೆಸಲಿ, ಗಿಡ-ಮರ ಪರಿಸರದಲ್ಲಿ ಶಾಂತಿ ನೆಲೆಸಲಿ ಎಂದು ಪ್ರಾರ್ಥನೆ ಮಾಡಿಕೊಳ್ಳಲಾಗುತ್ತದೆ. ಸೃಷ್ಟಿಯ ಚರಾಚರ ವಸ್ತುಗಳಲ್ಲಿ ಶಾಂತಿ ನೆಲೆಸಲಿ ಎಂದು ಕೇಳಿಕೊಳ್ಳಲಾಗುತ್ತದೆ.
ಅಮೆರಿಕ ಅಧ್ಯಕ್ಷರು ಸಹ ಬ್ರಹ್ಮಾಭಟ್ ಅವರಿಗೆ ಧನ್ಯವಾದ ತಿಳಿಸಿದ್ದಾರೆ. ಅಮೆರಿಕದ ನ್ಯಾಶನಲ್ ಪ್ರೇಯರ್ ಸಹ ಇದೇ ಸಂದರ್ಭದಲ್ಲಿ ಮೂಡಿಬಂತು. ಅಮೆರಿಕಾ ಕೊರೋನಾ ಅಟ್ಟಹಾಸನಕ್ಕೆ ನಲುಗಿಹೋಗಿದ್ದು 76 ಸಾವಿರಕ್ಕೂ ಅಧಿಕ ಜನ ಸಾವನ್ನಪ್ಪಿದ್ದಾರೆ.