ಪಾಕಿಸ್ತಾನದ ಧರ್ಮಗುರುನಿಂದ ವಿವಾದಾತ್ಮಕ ಹೇಳಿಕೆ/ ಶೇ. 40ಕ್ಕಿಂತ ಕಡಿಮೆ ಆಲ್ಕೋಹಾಲ್ ಇರುವ ಮದ್ಯ ಹಲಾಲ್/ ಮದ್ಯ ಸೇವನೆ ಮಾಡಬಹುದು ಎಂಬ ಅರ್ಥದಲ್ಲು ಮಾತನಾಡಿದ ಧರ್ಮಗುರು
ಇಸ್ಲಾಮಾಬಾದ್(ಮೇ 08) ಕಳೆದ ಒಂದು ವಾರದಿಂದ ಎಲ್ಲಿ ಹೋದರೂ ಎಣ್ಣೆಯದ್ದೇ ಸುದ್ದಿ. ಈಗ ಪಾಕಿಸ್ತಾನದಿಂದಲೂ ಎಣ್ಣೆಗೆ ಸಂಬಂಧಿಸಿದ ಸುದ್ದಿಯೇ ಬಂದಿದೆ.
ಪಾಕಿಸ್ತಾನದ ಧರ್ಮಗುರು ಒಬ್ಬರು ಮದ್ಯದ ಬಗ್ಗೆ ವಿವಾದ ಎಬ್ಬಿಸುವ ಹೇಳಿಕೆ ನೀಡಿದ್ದಾರೆ. ಶೇ. 40 ಕ್ಕಿಂತ ಕಡಿಮೆ ಆಲ್ಕೋಹಾಲ್ ಪ್ರಮಾಣ ಇರುವ ಮದ್ಯಕ್ಕೆ 'ಹಲಾಲ್' ಎಂದು ಕರೆದಿದ್ದಾರೆ.
ವಬ್ ತಾಣವೊಂದಕ್ಕೆ ಸಂದರ್ಶನ ನೀಡಿದ ಸಂದರ್ಭ ಧರ್ಮಗುರು ಇಂಥ ಮಾತನ್ನಾಡಿದ್ದಾರೆ. ಸೌದಿ ಅರೇಬಿಯಾದಲ್ಲಿ ಧರ್ಮಗುರುಗಳು ಹೊರಡಿಸಿದ ಫತ್ವಾ ಬಗ್ಗೆ ಮಾತನಾಡುತ್ತ ಇಂಥ ಕಮೆಂಟ್ ಮಾಡಿದ್ದಾರೆ.
ಶೇ. 40 ಕ್ಕಿಂತ ಕಡಿಮೆ ಆಲ್ಕೋಹಾಲ್ ಪರ್ಸಂಟೇಜ್ ಇರುವ ಮದ್ಯ ಕಾನೂನಿಗೆ ಬದ್ಧ ಎನ್ನುವ ರೀತಿ ಮಾತನಾಡಿದ್ದಾರೆ. ಅಂದರೆ ನೀವು ಕುಡಿಯಬಹುದು ಎಂಬ ಅರ್ಥದಲ್ಲೇ ಮಾತನಾಡಿದ್ದಾರೆ.
ಮದ್ಯಪ್ರಿಯರಿಗೆ ಮತ್ತೊಂದು ಶುಭ ಸುದ್ದಿ ನೀಡಿದ ಸರ್ಕಾರ
ಮಿನರಲ್ಸ್. ಸ್ಪೀರಿಟ್, ಪೆಟ್ರೋಕೆಮಿಕಲ್ಸ್ ಎಂದು ವಿಭಾಗ ಮಾಡಬಹುದು. ಹಾಗಾಗಿ ಇದನ್ನು ಕುಡಿಯಬಹುದು ಎಂಬ ಅರ್ಥದಲ್ಲಿ ಮಾತನಾಡಿದ್ದಾರೆ. ತಂಬಾಕು ಸಮೇತ ಅಡಿಕೆ ಸೇವನೆ ಮಾಡುವುದು ಕಾನೂನು ಬದ್ಧವಾಗಿದ್ದರೆ ಇದು ಸಹ ಹಲಾಲ್ ಆಗುತ್ತದೆ ಎಂದು ಹೇಳಿದ್ದಾರೆ.
ಭಾರತದಲ್ಲಿಯೂ ಕಳೆದ ಒಂದು ವಾರದಿಂದ ಮದ್ಯದ ಕುರಿತಾಗಿಯೇ ಚರ್ಚೆಗಳು ನಡೆಯುತ್ತಾ ಬಂದಿದೆ. ಕರ್ನಾಟಕ ಸರ್ಕಾರ ಸಹ ಮೇ 4 ರಿಂದ ಮದ್ಯ ಖರೀದಿಗೆ ಅವಕಾಶ ನೀಡಿದೆ.