ಧೂಮಪಾನಿಗಳಲ್ಲಿ ಕೋವಿಡ್‌ ಸಾವಿನ ಪ್ರಮಾಣ ಶೇ.50 ಹೆಚ್ಚು!

By Kannadaprabha NewsFirst Published May 31, 2021, 7:36 AM IST
Highlights

* ಧೂಮಪಾನಿಗಳಲ್ಲಿ ಕೋವಿಡ್‌ ಸಾವಿನ ಪ್ರಮಾಣ ಶೇ.50 ಹೆಚ್ಚು

* ಸೋಂಕು ವಿಪರೀತಕ್ಕೆ ಹೋಗುವ ಸಾಧ್ಯತೆ ಕೂಡ ಅಧಿಕ

* ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ

* ಇಂದು ವಿಶ್ವ ತಂಬಾಕು ಮುಕ್ತ ದಿನ

ನವದೆಹಲಿ(ಮೇ.31): ಧೂಮಪಾನ ಮಾಡುವವರಿಗೆ ಕೊರೋನಾ ಸೋಂಕು ತಗಲಿದರೆ ಅದು ವಿಪರೀತಕ್ಕೆ ಹೋಗುವ ಹಾಗೂ ರೋಗಿ ಮರಣಹೊಂದುವ ಸಾಧ್ಯತೆ ಶೇ.50ರಷ್ಟುಹೆಚ್ಚಿರುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಹೇಳಿದೆ.

ಮೇ 31ರ ವಿಶ್ವ ತಂಬಾಕು ಮುಕ್ತ ದಿನದ ನಿಮಿತ್ತ ‘ತಂಬಾಕು ಬಿಡಿ’ ಆಂದೋಲವನ್ನು ಡಬ್ಲ್ಯುಎಚ್‌ಒ ಹಮ್ಮಿಕೊಂಡಿದೆ. ಈ ಹಿನ್ನೆಲೆಯಲ್ಲಿ ಹೇಳಿಕೆ ಬಿಡುಗಡೆ ಮಾಡಿರುವ ಸಂಸ್ಥೆಯ ಮಹಾ ಪ್ರಧಾನ ಕಾರ್ಯದರ್ಶಿ ಟೆಡ್ರೋಸ್‌ ಅಧನೋಮ್‌ ಗೇಬ್ರಿಯೇಸಸ್‌, ‘ಧೂಮಪಾನ ಮಾಡುವವರಿಗೆ ಕ್ಯಾನ್ಸರ್‌, ಹೃದ್ರೋಗ ಹಾಗೂ ಶ್ವಾಸಕೋಶದ ರೋಗಗಳು ಬರುವ ಸಾಧ್ಯತೆ ಹೆಚ್ಚು. ಕೊರೋನಾ ಪೀಡಿತರು ಧೂಮಪಾನಿಗಳಾಗಿದ್ದರೆ ಈ ರೋಗಗಳು ಬರುವ ಸಾಧ್ಯತೆ ಇನ್ನೂ ಹೆಚ್ಚಾಗುತ್ತದೆ. ಜೊತೆಗೆ ಕೋವಿಡ್‌ ಸೋಂಕು ತೀವ್ರಕ್ಕೆ ಹೋಗುವ ಮತ್ತು ಸಾವು ಸಂಭವಿಸುವ ಸಾಧ್ಯತೆ 50% ಹೆಚ್ಚಾಗುತ್ತದೆ’ ಎಂದು ಹೇಳಿದ್ದಾರೆ.

ಚೀನಾ ಲ್ಯಾಬ್‌ನಲ್ಲೇ ಕೊರೋನಾ ಹುಟ್ಟು, ಅಮೆರಿಕಾದ ಫಂಡಿಂಗ್: ಮೋಸ ಮಾಡಿದ್ದ ಡ್ರ್ಯಾಗನ್!

ಧೂಮಪಾನಿಗಳಿಗೆ ಕೊರೋನಾದ ಅಪಾಯ ಹೆಚ್ಚು ಎಂದು ಒಂದು ವರ್ಷದ ಹಿಂದೆಯೇ ಭಾರತ ಸರ್ಕಾರ ಹೇಳಿತ್ತು.

ಹರ್ಷವರ್ಧನ್‌ಗೆ ಡಬ್ಲ್ಯುಎಚ್‌ಒ ಪ್ರಶಸ್ತಿ:

ಭಾರತದಲ್ಲಿ ಧೂಮಪಾನ ನಿಯಂತ್ರಣಕ್ಕೆ 2019ರಲ್ಲಿ ಇ-ಸಿಗರೆಟ್‌ ಹಾಗೂ ಹುಕ್ಕಾ ನಿಷೇಧಿಸುವ ಕಾಯ್ದೆ ಜಾರಿಗೆ ತಂದಿರುವ ಹಿನ್ನೆಲೆಯಲ್ಲಿ ಆರೋಗ್ಯ ಸಚಿವ ಡಾ

ಹರ್ಷವರ್ಧನ್‌ ಅವರಿಗೆ ವಿಶ್ವ ಆರೋಗ್ಯ ಸಂಸ್ಥೆ ವಿಶೇಷ ಸಾಧನೆಯ ಪ್ರಶಸ್ತಿ ನೀಡಿ ಗೌರವಿಸಿದೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

click me!