ಭಾರತಕ್ಕೆ 12  ಟನ್ ಚಹಾ, ಕಾಫಿ, ನೆಲಗಡಲೆ ಕಳಿಸಿಕೊಟ್ಟ ಕೀನ್ಯಾ

By Suvarna News  |  First Published May 30, 2021, 5:44 PM IST

* ಕೊರೋನಾ ಎರಡನೇ ಅಲೆ ವಿರುದ್ಧ ಭಾರತದ ಹೋರಾಟ
* 12  ಟನ್ ಚಹಾ, ಕಾಫಿ, ನೆಲಗಡಲೆ ಕಳಿಸಿಕೊಟ್ಟ ಕೀನ್ಯಾ
* ಮಹಾರಾಷ್ಟ್ರದಲ್ಲಿ ವಿತರಣೆ ಮಾಡಲು ಸಿದ್ಧತೆ
* ದೇಶದಲ್ಲಿ ಪಾಸಿಟಿವಿಟಿ ದರ ಇಳಿಕೆ


ನೈರೋಬಿ(ಮೇ  30)  ಕೊರೋನಾ ವಿರುದ್ಧದ ಹೋರಾಟದಲ್ಲಿ ಜಗತ್ತೇ ಒಂದಾಗಿದೆ. ರಾಷ್ಟ್ರಗಳು ಪರಸ್ಪರ ಸಹಕಾರ ನೀಡಿಕೊಳ್ಳುತ್ತಿವೆ. ಭಾರತಕ್ಕೆ ಕೀನ್ಯಾ  12  ಟನ್ ಆಹಾರ ಉತ್ಪನ್ನ ನೀಡಿದೆ.

ಪೂರ್ವ ಆಫ್ರಿಕಾದ ದೇಶ ಭಾರತಕ್ಕೆ 12  ಟನ್ ಚಹಾ, ಕಾಫಿ, ನೆಲಗಡಲೆಯನ್ನು ಕಳಿಸಿಕೊಟ್ಟಿದೆ. ಭಾರತದ ರೆಡ್ ಕ್ರಾಸ್ ಸಂಸ್ಥೆಗೆ ನೀಡಿದೆ.  ಮಹಾರಾಷ್ಟ್ರದಲ್ಲಿ ಈ ಪ್ಯಾಕೇಟ್ ಗಳನ್ನು ವಿತರಿಸಲಾಗುವುದು.

Latest Videos

undefined

ಕೊರೋನಾ ವಿರುದ್ಧದ ಹೋರಾಟದಲ್ಲಿ ಭಾರತದೊಂದಿಗೆ ನಾವು ನಿಲ್ಲುತ್ತೇವೆ ಎಂದು ಆಫ್ರಿಕನ್ ಹೈಕಮಿಷನರ್ ವಿಲ್ಲಿ ಬೆಟ್ ತಿಳಿಸಿದ್ದಾರೆ. ಕೀನ್ಯಾಕ್ಕೆ ಧನ್ಯವಾದ ತಿಳಿಸಿರುವ ಭಾರತೀಯ ರೆಡ್ ಕ್ರಾಸ್ ಸೊಸೈಟಿ ಉಪಾಧ್ಯಕ್ಷ ಹೋಮಿ ಖುಸ್ರೋಖಾನ್ ಇಂಥ ಬೆಳವಣಿಗೆ ಮಾದರಿ ಎಂದಿದ್ದಾರೆ.

ದೇಶದಲ್ಲಿ ತಗ್ಗಿದ ಕೊರೋನಾ ಪಾಸಿಟಿವಿಟಿ ದರ

ಭಾರತವು ಒಂದೇ ದಿನ 1,65,553 ಹೊಸ ಕೊರೋನಾ ಪ್ರಕರಣ ದಾಖಲಾಗಿದೆ.  ಎಲ್ಲ ರಾಜ್ಯಗಳು ಮತ್ತು ಜಿಲ್ಲಾಧಿಕಾರಿಗಳು ತುರ್ತು ಕ್ರಮ ತೆಗೆದುಕೊಂಡಿದ್ದು ಕೊರೋನಾ ಪಾಸಿಟಿವಿಟಿ ದರ ಇಳಿಕೆಯಾಗಿದೆ.  ಪಾಸಿಟಿವಿಟಿ  ದರವು 9.36 ಪ್ರತಿಶತಕ್ಕೆ ಇಳಿಕೆಯಾಗಿದೆ.

ಸಾವನ್ನಪ್ಪಿದವರ ಸಂಖ್ಯೆ ದೇಶದಲ್ಲಿ 3,25,972 ಕ್ಕೆ ಏರಿದ್ದು, 24 ಗಂಟೆಗಳ ಅವಧಿಯಲ್ಲಿ 3,460 ಸಾವುಗಳು ದಾಖಲಾಗಿವೆ. ಕರ್ನಾಟಕದಲ್ಲಿಯೂ ಕೊರೋನಾ ಕಾರಣಕ್ಕೆ ಕಠಿಣ ನಿಯಮಗಳನ್ನು ಹೇರಲಾಗಿದ್ದು ರಾಜಧಾನಿ ಬೆಂಗಳೂರು ಸೇರಿದಂತೆ ಜಿಲ್ಲೆಗಳಲ್ಲಿಯೂ ಕೊರೋನಾ ನಿಧಾನವಾಗಿ ನಿಯಂತ್ರಣಕ್ಕೆ ಬರುತ್ತಿದೆ. 

"

 

click me!