ಸಣ್ಣ, ಉದ್ದಕ್ಕೆ ಕಾಣುವ ವಿಚಿತ್ರ ದೇಶ; ಆಫ್ರಿಕಾದ 'ಘನತೆ' ಹೆಚ್ಚಿಸಿದ ಟೋಗೋ ದೇಶದ ಬಗ್ಗೆ ನೀವು ತಿಳಿದುಕೊಳ್ಳಲೇಬೇಕು!

Published : Oct 06, 2026, 04:08 PM IST
Togolese Republic

ಸಾರಾಂಶ

ಪಶ್ಚಿಮ ಆಫ್ರಿಕಾದ ಅತ್ಯಂತ ಸಣ್ಣ ದೇಶಗಳಲ್ಲಿ ಒಂದಾದ ಟೋಗೋ, ಕೇವಲ 160 ಕಿ.ಮೀ ಉದ್ದವಿದ್ದರೂ ವಿಶ್ವಸಂಸ್ಥೆಯಲ್ಲಿ ಆಫ್ರಿಕಾದ ನೈಜ ನಕ್ಷೆಯ ಬಗ್ಗೆ ಧ್ವನಿ ಎತ್ತಿದೆ. ಜರ್ಮನ್, ಬ್ರಿಟಿಷ್ ಮತ್ತು ಫ್ರೆಂಚ್ ಆಳ್ವಿಕೆಗೆ ಒಳಪಟ್ಟಿದ್ದ ಈ ದೇಶ 1960ರಲ್ಲಿ ಸ್ವಾತಂತ್ರ್ಯ ಪಡೆಯಿತು. ಆಫ್ರಿಕಾದ ಅತಿ ಆಳವಾದ ನೈಸರ್ಗಿಕ ಬಂದರು ಮತ್ತು ಪಾರಂಪರಿಕ ಮಣ್ಣಿನ ಮನೆಗಳಿಗೆ ಈ ದೇಶ ಪ್ರಸಿದ್ಧವಾಗಿದೆ.

ಪಾಶ್ಚಿಮಾತ್ಯ ದೇಶಗಳು ಆಫ್ರಿಕಾ ಖಂಡವನ್ನು ಕತ್ತಲಿನ ಖಂಡ ಅಂತಲೇ ಹೇಳುತ್ತಿದ್ದವು. ಈ ಖಂಡ ಬಗ್ಗೆ ಪ್ರಪಂಚಕ್ಕೆ ಹೆಚ್ಚು ತಿಳಿದಿಲ್ಲ. ಏಷ್ಯಾ ಬಳಿಕ ಪ್ರಪಂಚದಲ್ಲೇ ಅತಿದೊಡ್ಡ ಖಂಡ ಆಗಿದ್ದರೂ, ನಿನ್ನೆ ಮೊನ್ನೆವರೆಗೂ ವಿಶ್ವ ಭೂಪಟದಲ್ಲಿ ಆಫ್ರಿಕಾವನ್ನು ಚಿಕ್ಕದಾಗಿ ಕಾಣುತ್ತಿತ್ತು. ಆದರೆ ಆಫ್ರಿಕಾ ಅಸಲಿ ವಿಸ್ತೀರ್ಣವನ್ನು ತೋರಿಸುವಂತೆ, ಈಕ್ವಲ್ ಆರ್ಥ್ ಮ್ಯಾಪ್ ಅನ್ನು ಅಧಿಕೃತವಾಗಿ ಬಳಕೆ ಮಾಡಲು ವಿಶ್ವಸಂಸ್ಥೆಯಲ್ಲಿ ತೀರ್ಮಾನಿಸಲಾಗಿದೆ. ಆಫ್ರಿಕಾ ಯೂನಿಯನ್ ಪರ ಟೋಗೋ ಅನ್ನೋ ದೇಶ ವಿಶ್ವಸಂಸ್ಥೆಯಲ್ಲಿ ಇದನ್ನು ಪ್ರಸ್ತಾಪಿಸಿತ್ತು, ಈ ಪ್ರಸ್ತಾವನೆಯನ್ನು ವಿಶ್ವಸಂಸ್ಥೆಯಲ್ಲಿ ಅಂಗೀಕರಿಸಲಾಗಿತ್ತು.

ಜಸ್ಟ್ 160 ಕಿಲೋ ಮೀಟರ್ ಉದ್ದ, 99 ಲಕ್ಷ ಜನಸಂಖ್ಯೆ!

ವಿಶ್ವಸಂಸ್ಥೆಯಲ್ಲಿ ಈ ಪ್ರಸ್ತಾವನೆ ಮಾಡಿದ್ದ ಟೋಗೋ ದೇಶದ ಬಗ್ಗೆ ಆಸಕ್ತಿಯುತ ಸಂಗತಿಗಳು ಇಲ್ಲಿದೆ. ಪಶ್ಚಿಮ ಆಫ್ರಿಕಾದ ಚಿಕ್ಕ ದೇಶಗಳಲ್ಲಿ ಟೋಗೋ ರಿಪಬ್ಲಿಕ್ ದೇಶ ಒಂದು. ಪಶ್ಚಿಮ ಆಫ್ರಿಕಾದ ಅತ್ಯಂತ ಸಣ್ಣ ದೇಶಗಳಲ್ಲಿ ಟೋಗೋ ಕೂಡ ಒಂದು. ಪಶ್ಚಿಮ ಆಫ್ರಿಕಾದ ಮ್ಯಾಪ್‌ನಲ್ಲಿ ಸಣ್ಣದಾಗಿ, ಉದ್ದವಾಗಿ ಕಾಣುತ್ತದೆ. ಇದರ ವಿಸ್ತೀರ್ಣ 56,785 ಚದರ ಕಿಲೋ ಮೀಟರ್, 50-60 ಕಿಲೋ ಮೀಟರ್ ಸಮುದ್ರ ತೀರವನ್ನು ಹೊಂದಿದೆ. ಗರಿಷ್ಠ ಎಂದರೆ 160 ಕಿಲೋ ಮೀಟರ್ ಉದ್ದವಿದೆ. ಉಳಿದಂತೆ ಈ ದೇಶ 579 ಕಿಲೋ ಮೀಟರ್ ಅಗಲವಿದೆ.

ಕ್ರಿಶ 11 ಶತಮಾನದಿಂದ 16ನೇ ಶತಮಾನದ ನಡುವೆ ಈ ಪ್ರದೇಶಕ್ಕೆ ಈವ್, ಮೀನಾ, ಕಾಬ್ಯೆ ಜನಾಂಗದ ಜನರು ಬಂದು ನೆಲೆಸಿದ್ದರು. 1884ರಲ್ಲಿ ಜರ್ಮನಿ ಈ ಪ್ರದೇಶವನ್ನು ಆಕ್ರಮಿಸಿ ಟೋಗೋಲ್ಯಾಂಡ್ ಹೆಸರಿನಲ್ಲಿ ತನ್ನ ಸಂರಕ್ಷಿತ ಪ್ರದೇಶ ಒಂದು ಘೋಷಣೆ ಮಾಡಿತ್ತು. ಆದರೆ ಈ ದೇಶವನ್ನು ಪಶ್ಚಿಮದ ಕಡೆಗೆ ಬ್ರಿಟಿಷ್ ವಶದಲ್ಲಿದ್ದ ಪ್ರದೇಶಗಳು ಇದ್ದವು. ಇನ್ನು ಪೂರ್ವದ ಕಡೆಗೆ ಫ್ರೆಂಚ್‌ ವಶದಲ್ಲಿದ್ದ ಪ್ರದೇಶಗಳಿದ್ದವು. ಈ ಕಾರಣದಿಂದ ಎರಡು ಕಡೆ ವಿಸ್ತರಣೆ ಮಾಡಲು ಜರ್ಮನಿಗೆ ಸಾಧ್ಯವಾಗಲಿಲ್ಲ. ಆದ್ದರಿಂದ ಉತ್ತರ ಕಡೆಗೆ ಸ್ವಲ್ಪ ವಿಸ್ತರಣೆ ಮಾಡಿದ್ದರು.

1960ರಲ್ಲಿ ಟೋಗೋಗೆ ಸ್ವಾತಂತ್ರ್ಯ

ಮೊದಲ ವಿಶ್ವಯುದ್ಧದಲ್ಲಿ ಜರ್ಮನಿ ಸೋಲುಂಡ ಪರಿಣಾಮ ಈ ಪ್ರದೇಶವನ್ನು ಬ್ರಿಟನ್ ಮತ್ತು ಫ್ರಾನ್ಸ್ ದೇಶಗಳು ಹಂಚಿಕೆ ಮಾಡಿಕೊಂಡಿದ್ದವು. 1957ರ ವರೆಗೂ ಬ್ರಿಟಿಷರ ವಶದಲ್ಲಿಯೇ ಇದ್ದ ಈ ಪ್ರದೇಶದಲ್ಲಿ ಟೋಗೋಲ್ಯಾಂಡ್ ಅನ್ನು ಘನಾದಲ್ಲಿ ವಿಲೀನ ಮಾಡಲಾಗಿತ್ತು. ಫ್ರೆಂಚ್ ವಶದಲ್ಲಿದ್ದ ಉಳಿದ ಪ್ರದೇಶ 1960 ಏಪ್ರಿಲ್ 27ರಂದು ಸ್ವಾತಂತ್ರ್ಯ ಪಡೆದುಕೊಂಡಿತ್ತು. ಇದರೊಂದಿಗೆ ಟೋಗೋ ರಿಪಬ್ಲಿಕ್ ದೇಶದು ಉದಯವಾಗಿತ್ತು.

ಆಫ್ರಿಕಾ ಖಂಡದಲ್ಲಿಯೇ ಹೆಚ್ಚು ಆಳವಾದ ನೈಸರ್ಗಿಕ ಬಂದರು ಲೋಮೆ

ಟೋಗೋ ದೇಶದಲ್ಲಿ 99 ಲಕ್ಷ ಮಂದಿ ಜನಸಂಖ್ಯೆ ಇದ್ದು, ಈ ದೇಶದ ಶೇಕಡಾ 60ರಷ್ಟು ಜನರಿಗೆ ಕೃಷಿಯೇ ಜೀವನಾಧಾರವಾಗಿದೆ. ಕೋಕೋ, ಕಾಫಿ, ಹತ್ತಿ, ಜೋಳವನ್ನು ಪ್ರಮುಖವಾಗಿ ಬೆಳೆಯಲಾಗುತ್ತದೆ. ಟೋಗೋದಲ್ಲಿ ಫಾಸ್ಫೇಟ್ ಖನಿಜ ಸಂಪನ್ಮೂಲ ಅಧಿಕರವಾಗಿದೆ. ಟೋಗೋ ರಾಜಧಾನಿ ಲೋಮೆ ನಗರ ಮತ್ತೊಂದು ದೇಶದ ಗಡಿಯ ಪಕ್ಕದಲ್ಲಿಯೇ ಇರುವುದು ಇಲ್ಲಿನ ಮತ್ತೊಂದು ವಿಶೇಷ. ಲೋಮೆ ಆಫ್ರಿಕಾ ಖಂಡದಲ್ಲಿಯೇ ಹೆಚ್ಚು ಆಳವಾದ ನೈಸರ್ಗಿಕ ಬಂದರುಗಳಲ್ಲಿ ಒಂದಾಗಿದೆ.

ಟೋಗೋ ದೇಶದ ಪಶ್ಚಿಮ ಭಾಗದಲ್ಲಿ ಘನಾ, ಪೂರ್ವಲ್ಲಿ ಬೆನಿನ್, ಉತ್ತರಕ್ಕೆ ಬುರ್ಕಿನಾ ಫಾಸೊ ದೇಶಗಳು ಗಡಿಯನ್ನು ಹಂಚಿಕೊಂಡಿವೆ. ದಕ್ಷಿಣದಲ್ಲಿ ಅಟ್ಲಾಂಟಿಕ್ ಮಹಾಸಾಗರವಿದೆ. ವಿಶ್ವದಲ್ಲಿಯೇ ಅತಿದೊಡ್ಡ ಸಾಂಪ್ರದಾಯಿಕ ಮರದ ವಸ್ತುಗಳ ಮಾರ್ಕೆಟ್ ಟೋಗೋದಲ್ಲಿದೆ. ಟೋಗೋ ಚಿಕ್ಕ ದೇಶ ಆದರೂ, ಇಲ್ಲಿ ಸುಮಾರು 40ಕ್ಕೂ ಹೆಚ್ಚು ಜನಾಂಗಗಳಿಗೆ ಸೇರಿದ ಜನರುವ ಒಟ್ಟಾಗಿ ವಾಸಿಸುತ್ತಿದ್ದಾರೆ.

ಟೋಗೋ ದೇಶದ ಮಧ್ಯ ಭಾಗದಲ್ಲಿ ಉದ್ಭವಿಸುವ ಮೊನೊ ನದಿ ಟೋಗೋ-ಬೆನಿಸ್ ನಡುವೆ ಪ್ರವಾಹಿಸುತ್ತಾ ಸಮುದ್ರ ಸೇರುತ್ತದೆ. ಮತ್ತೊಂದು ನದಿ ಬುರ್ಕಿನಾ ಫಾಸೊನಿಂದ ಟೋಗೋ ಮೂಲಕ ಸಾಗುತ್ತಾ ಘನಾದಲ್ಲಿರುವ ವೋಲ್ಟಾ ನದಿಯನ್ನು ಸೇರುತ್ತದೆ. ಇನ್ನು, ಟೋಗೋ ಉತ್ತರ ಭಾಗದಲ್ಲಿ ನೆಲೆಸಿರುವ ಬಾತಮಾರಿಬಾ ಜನಾಂಗದ ಜನರು ಮಣ್ಣಿನಲ್ಲಿ ಎರಡು ಅಂತಸ್ತಿನ ಮನೆಗಳನ್ನು ಕೋಟೆಗಳ ರೀತಿಯಲ್ಲಿ ನಿರ್ಮಿಸುತ್ತಾರೆ. ಇವು ಶತ್ರುಗಳಿಂದ ರಕ್ಷಣೆ ಮಾಡಲು, ಆತ್ಮರಕ್ಷಣೆ, ಪಶುಗಳ ಸಾಕಾಣಿಕೆಗೆ ನೆರವು ನೀಡುತ್ತದೆ. ಈ ಮನೆಗಳು ವಿಶ್ವಸಂಸ್ಥೆಯ ಪಾರಂಪರಿಕ ತಾಣಗಳ ಪಟ್ಟಿಗೆ ಸೇರಿವೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಹೆಲಿಕಾಪ್ಟರ್‌ನಿಂದ ಇಳಿಯುವಾಗ ಎಡವಿದ ಅಮೆರಿಕದ ಸೆಕೆಂಡ್ ಲೇಡಿ ಉಷಾ ವೆನ್ಸ್ - ಮಗು ಎತ್ತಿಕೊಂಡಿದ್ರೂ ಅಲುಗಾಡದ ಅಧಿಕಾರಿಗಳು !
ಆಸ್ಪತ್ರೆಯಲ್ಲಿರುವ ಕ್ಯಾಪ್ಟನ್ ಸ್ಮಿತ್‌ಗೆ ಎಮರ್ಜೆನ್ಸಿ ಸರ್ಜರಿ, ಭಾರತೀಯ ಪೈಲೆಟ್ ಆರೋಗ್ಯ ಹೇಗಿದೆ?