ಆಸ್ಪತ್ರೆಯಲ್ಲಿರುವ ಕ್ಯಾಪ್ಟನ್ ಸ್ಮಿತ್‌ಗೆ ಎಮರ್ಜೆನ್ಸಿ ಸರ್ಜರಿ, ಭಾರತೀಯ ಪೈಲೆಟ್ ಆರೋಗ್ಯ ಹೇಗಿದೆ?

Published : Oct 06, 2026, 02:11 PM IST
Captain Smith Undergoes Emergency Operation

ಸಾರಾಂಶ

ಫ್ಲೈದುಬೈ ವಿಮಾನದಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಗಾಯಗೊಂಡ ಭಾರತೀಯ ಪೈಲೆಟ್ ಸ್ಮಿತ್ ಮಛಾರ್ ಚಿಕಿತ್ಸೆ ಪಡೆಯುತ್ತಿದ್ದಾರೆ. ಚೇತರಿಕೆ ಹಾದಿಯಲ್ಲಿದ್ದ ಕ್ಯಾಪ್ಟನ್ ಸ್ಮಿತ್ ಮಛಾರ್‌ಗೆ ವೈದ್ಯರ ತಂಡ ತುರ್ತು ಸರ್ಜರಿ ಮಾಡಿದೆ.

ದುಬೈ (ಅ.06) ಫ್ಲೈದುಬೈ ವಿಮಾನ ಹೈಜಾಕ್ ಪ್ರಯತ್ನ ತಡೆದ ಭಾರತೀ ಪೈಲೆಟ್ ಕ್ಯಾಪ್ಟನ್ ಸ್ಮಿತ್ ಮಛಾರ್ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 174 ಮಂದಿ ಪ್ರಯಾಣಿಕರ ಜೀವ ಉಳಿಸಿದ ಕ್ಯಾಪ್ಟನ್ ಸ್ಮಿತ್ ಮಚಾರ್ ಮೇಲೆ ಕೋ ಪೈಟ್ ದಾಳಿ ಮಾಡಿ ವಿಮಾನ ಪತನ ಮಾಡಲು ಮುಂದಾಗಿದ್ದರು. ಗಾಯಗೊಂಡ ಸ್ಮಿತ್ ಮಛಾರ್ ಆಸ್ಪತ್ರೆಯಲ್ಲಿ ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು ಫೋನ್ ಮೂಲಕ ಮಾತನಾಡಿದ್ದಾರೆ. ಚೇತರಿಕೆ ಹಾದಿಯಲ್ಲಿದ್ದ ಸ್ಮಿತ್ ಮಛಾರ್‌ಗೆ ವೈದ್ಯರ ತಂಡ ತುರ್ತು ಸರ್ಜರಿ ನಡೆಸಿದೆ.

ತೆಲೆಬುರುಡೆಗೆ ಗಾಯ, ಎಮರ್ಜೆನ್ಸಿ ಸರ್ಜರಿ

38 ವರ್ಷದ ಕ್ಯಾಪ್ಟನ್ ಸ್ಮಿತ್ ಮಛಾರ್ ಮೇಲೆ ಕೋ ಪೈಲೆಟ್ ಭೀಕರ ದಾಳಿ ನಡೆಸಿದ್ದರು. ವಿಮಾನದಲ್ಲಿ ತುರ್ತು ಸಂದರ್ಭದಲ್ಲಿ ಬಳಸುವ ಕೊಡಲಿ ರೀತಿಯ ಆಯುಧ ಮೂಲಕ ಕೋ ಪೈಲೆಟ್ ದಾಳಿ ಮಾಡಿದ್ದರು. ಕೈ ಹಾಗೂ ತಲೆಗೆ ಗಂಭೀರ ಗಾಯವಾಗಿತ್ತು. ಸ್ಮಿತ್ ಪೈಲೆಟ್ ತಲೆಬುರುಡುಗೆ ಗಾಯವಾಗಿದ್ದ ಕಾರಣ ಇದೀಗ ವೈದ್ಯರ ತಂಡ ತುರ್ತು ಸರ್ಜರಿ ನಡೆಸಿದೆ. ತಲೆ ಬುರುಡೆಯ ಗಾಯ ಗಂಭೀರ ಸ್ವರೂಪಕ್ಕೆ ತಿರುಗುವ ಆತಂಕ ಎದುರಾಗಿತ್ತು. ದಾಳಿಯಲ್ಲಿ ತಲೆ ಬುರುಡೆ ಹಾಗೂ ಎಲುಬಿಗೆ ಗಾಯಗೊಂಡಿತ್ತು. ಸಣ್ಣ ಎಲುಬು ಒಂದು ಮೆದುಳಿನತ್ತ ಇಳಿದು ಗಂಭೀರ ಸಮಸ್ಯೆಗೆ ಕಾರಣಾಗುವ ಮೊದಲೇ ವೈದ್ಯರ ತಂಡ ಎಮರ್ಜೆನ್ಸಿ ಸರ್ಜರಿ ನಡೆಸಿದೆ.

ಕೊಡಲಿ ರೀತಿಯ ಆಯುಧ ಮೂಲಕ ದಾಳಿಯಲ್ಲಿ ತೆಲೆಬುರುಡೆಯ ಸಣ್ಣ ಎಲುಬಿನ ಚೂರು ಮೆದುಳಿನತ್ತ ಇಳಿದಿತ್ತು. ಇದು ಮೆದುಳನ್ನು ಗಾಯಗೊಳಿಸುವ ಸಾಧ್ಯತೆ ಹಾಗೂ ನರಕೋಶಗಳ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇತ್ತು. ಹೀಗಾಗಿ ವೈದ್ಯರ ತಂಡ ಕ್ಯಾಪ್ಟನ್ ಸ್ಮಿತ್ ಚೇತರಿಕೆ ಕಾಣುತ್ತಿದ್ದಂತೆ ಸರ್ಜರಿ ನಡೆಸಿದ್ದಾರೆ.

ಕ್ಯಾಪ್ಟನ್ ಸ್ಮಿತ್ ಆರೋಗ್ಯ ಹೇಗಿದೆ

ತಲೆ ಬುರುಡೆಯ ಗಂಭೀರ ಗಾಯ ಹೊರತುಪಡಿಸಿದರೆ, ತೋಳು, ಎದೆ, ಹೊಟ್ಟೆ ಭಾಗದ ಮೇಲೂ ಭಾರಿ ಗಾಯಗಳಾಗಿದೆ. ಕ್ಯಾಪ್ಟನ್ ಸ್ಮಿತ್ ಆರೋಗ್ಯ ಸ್ಥಿರವಾಗಿದೆ ಹಾಗೂ ಚೇತರಿಕೆಯಲ್ಲಿದ್ದಾರೆ. ಸ್ಮಿತ್ ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದಾರೆ.ಕೆಲ ದಿನಗಳು ಕ್ಯಾಪ್ಟನ್ ಸ್ಮಿತ್ ವೈದ್ಯರ ನಿಗಾದಲ್ಲಿರಲಿದ್ದಾರೆ.

ವಿಮಾನ ಸೌದಿ ಅರೆಬಿಯಾದಲ್ಲಿ ಲ್ಯಾಂಡ್ ಆದ ಬೆನ್ನಲ್ಲೇ ತಕ್ಷಣವೇ ಕ್ಯಾಪ್ಟನ್ ಸ್ಮಿತ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಸೌದಿ ಅರೆಬಿಯಾದಿಂದ ಅಬುಧಾಬಿಗೆ ಏರ್ ಲಿಫ್ಟ್ ಮಾಡಲಾಗಿತ್ತು. ಸದ್ಯ ಅಭುದಾಬಿಯ ಮಿಲಿಟರಿ ಆಸ್ಪತ್ರೆಯಲ್ಲಿ ಕ್ಯಾಪ್ಟನ್ ಸ್ಮಿತ್‌ಗೆ ಚಿಕಿತ್ಸೆ ನೀಡಲಾಗುತ್ತಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ವಿಮಾನ ಹೈಜಾಕ್ ಸಂದೇಶ ಬೆನ್ನಲ್ಲೇ ಯುದ್ಧ ವಿಮಾನಕ್ಕೆ ಇಸ್ರೇಲ್ ಕೊಟ್ಟ ಭಯಾನಕ ಸೂಚನೆ ಬಯಲು
ಮತ್ತೆ ಒಂದಾದ ಪಾಕ್, ಟರ್ಕಿ, ಸೌದಿ! ಇಸ್ರೇಲ್‌ ಅನ್ನು ದೂರವಿಡೋ ಪ್ಲಾನ್? ಮೆಕ್ಕಾ ಒಪ್ಪಂದ ಬಿಗ್‌ ಅಪ್ಡೇಟ್ ಇದೇ ನೋಡಿ!