
ಭಾರತ ಮತ್ತು ಅಮೆರಿಕದ ವ್ಯಾಪಾರ ಸಂಬಂಧದಲ್ಲಿ ಉದ್ವಿಗ್ನತೆ ಹೆಚ್ಚುತ್ತಲೇ ಸಾಗಿದೆ. ಭಾರತದಿಂದ ಅಮೆರಿಕಕ್ಕೆ ರಫ್ತಾಗುವ ಉತ್ಪನ್ನಗಳ ಟ್ಯಾರಿಫ್ ಏರಿಕೆ ಮಾಡಿರೋದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಣೆ ಮಾಡಿದಂತೆಯೇ ಇಂದಿನಿಂದ ಅಮೆರಿಕ ತೆರಿಗೆ ಏರಿಕೆ ನೀತಿ ಜಾರಿಯಾಗಿದೆ. ಶೇಕಡಾ 25ರಷ್ಟು ಇದ್ದ ತೆರಿಗೆಯನ್ನು ಡಬಲ್ ಮಾಡಲಾಗಿದೆ. ಹೀಗೆ ಭಾರತದ ಉತ್ಪನ್ನಗಳಿಗೆ ಟ್ರಂಪ್ ಶೇ.50ರಷ್ಟು ತೆರಿಗೆ ವಿಧಿಸಿದ್ದಾರೆ. GTRI ವರದಿಯ ಪ್ರಕಾರ, ಅಮೆರಿಕದ ಈ ಕ್ರಮದಿಂದಾಗಿ ಭಾರತದ 5.4 ಲಕ್ಷ ಕೋಟಿ ರೂಪಾಯಿಗಳ ರಫ್ತಿನ ಮೇಲೆ ನೇರ ಪರಿಣಾಮ ಬೀರಲಿದೆ.
ಇದರ ನಡುವೆಯೇ, ಇದೀಗ ಅಮೆರಿಕದ ಜನತೆಗೆ 'ಹಬೂಬ್' ಶಾಕ್ ಕೊಟ್ಟಿದೆ. ಹಬೂಬ್ ಎಂದರೆ ದೈತ್ಯ ಧೂಳಿನ ಬಿರುಗಾಳಿ. ಇದನ್ನು ಪ್ರಾಥಮಿಕವಾಗಿ ಹಬೂಬ್ ಎಂದು ಕರೆಯಲಾಗುತ್ತದೆ. ದೊಡ್ಡ ದೊಡ್ಡ ಬಿರುಗಾಳಿಗಳು ಒಟ್ಟುಗೂಡಿ ಬೃಹತ್ ಬಿರುಗಾಳಿಯನ್ನು ಸೃಷ್ಟಿಸುತ್ತದೆ. ಮರುಭೂಮಿ ಪ್ರದೇಶಗಳಿಂದ ಹೆಚ್ಚಿನ ಪ್ರಮಾಣದ ಮರಳು ಮತ್ತು ಧೂಳನ್ನು ಎತ್ತಿ ಗಾಳಿಯಲ್ಲಿ ದಪ್ಪವಾದ ಧೂಳಿನ ಗೋಡೆಯನ್ನು ಸೃಷ್ಟಿಸುತ್ತವೆ. ಈ ಬಿರುಗಾಳಿಗಳಲ್ಲಿ ಗಾಳಿಯ ವೇಗವು ತುಂಬಾ ಹೆಚ್ಚಾಗಿರುತ್ತದೆ, ಇದು ಗೋಚರತೆಯನ್ನು ಬಹಳವಾಗಿ ಕಡಿಮೆ ಮಾಡುತ್ತದೆ.
ಧೂಳಿನ ಬೃಹತ್ ಗೋಡೆ ನಿರ್ಮಾಣ
ಇಂಥ ಪ್ರಕೃತಿ ವಿಕೋಪಕ್ಕೆ ಈಗ ಅಮೆರಿಕ ಸಾಕ್ಷಿಯಾಗಿದೆ. ಕಳೆದ ಸೋಮವಾರ ಸಂಜೆ ಅಮೆರಿಕದ ಮಧ್ಯ ಅರಿಜೋನಾದ ಕೆಲವು ಭಾಗಗಳು ಧೂಳಿನ ಬೃಹತ್ ಗೋಡೆಯಿಂದ ಆವೃತವಾಗಿದ್ದು, ಅನೇಕರನ್ನು ದಿಗ್ಭ್ರಮೆಗೊಳಿಸುವ ದೃಶ್ಯಗಳನ್ನು ಸೃಷ್ಟಿಸಿದವು. ಇದು ಇಂದಿಗೂ ಮುಂದುವರೆದಿದೆ. ವಾಹನ ಸವಾರರಿಗೆ ರಸ್ತೆಗಳು ಕಾಣದ ಹಿನ್ನೆಲೆಯಲ್ಲಿ ಹಲವು ಕಡೆಗಳಲ್ಲಿ ಅಪಘಾತಗಳು ಸಂಭವಿಸಿವೆ. ಹಲವು ಪ್ರದೇಶಗಳಲ್ಲಿ ವಿದ್ಯುತ್ ಕಡಿತವಾಗಿದೆ. ಹಲವಾರು ವಿಮಾನಗಳನ್ನು ರದ್ದುಗೊಳಿಸಲಾಗಿದೆ. ಅಮೆರಿಕದ ಆರ್ಥಿಕ ಚಟುವಟಿಕೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
ಗುಡುಗು ಸಹಿತ ಮಳೆಯು ಹಬೂಬ್ ಬಿರುಗಾಳಿಯನ್ನು ಪ್ರಚೋದಿಸುತ್ತದೆ ಮತ್ತು ಹಲವಾರು ಮೈಲು ಅಗಲ ಮತ್ತು ಸಾವಿರಾರು ಅಡಿ ಎತ್ತರದ ಧೂಳಿನ ಗೋಡೆಯನ್ನು ಸೃಷ್ಟಿಸುವ ಶಕ್ತಿ ಇದಕ್ಕಿದೆ. ಇದು ಗಂಟೆಗೆ 60 ಮೈಲು (97 ಕಿಮೀ) ಅಥವಾ ಅದಕ್ಕಿಂತ ಹೆಚ್ಚಿನ ವೇಗದಲ್ಲಿ ಚಲಿಸುತ್ತದೆ. ಇಂಥ ವಿಕೋಪದಿಂದ ಈಗ ಅಮೆರಿಕ ತತ್ತರಿಸಿದೆ. ಚಂಡಮಾರುತವು ನಗರದ ಹಲವು ಭಾಗಗಳನ್ನು ಆವರಿಸಿಕೊಂಡಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಫೀನಿಕ್ಸ್ ಸ್ಕೈ ಹಾರ್ಬರ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನಗಳನ್ನು ಸ್ಥಗಿತಗೊಳಿಸಲಾಗಿದೆ. ರಾಜ್ಯದ ಸಾರಿಗೆ ಇಲಾಖೆ ಜನರು ರಸ್ತೆಗಳಿಂದ ದೂರವಿರಲು ಸಲಹೆ ನೀಡಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ