ಸರೋವರಕ್ಕೆ ಅಪ್ಪಳಿಸಿದ ಕಾಡ್ಗಿಚ್ಚು ಆರಿಸುತ್ತಿದ್ದ ಹೆಲಿಕಾಪ್ಟರ್ : ವೀಡಿಯೋ

Published : Aug 26, 2025, 05:25 PM IST
France Helicopter Crash

ಸಾರಾಂಶ

ಕಾಡ್ಗಿಚ್ಚು ನಂದಿಸುವ ಕಾರ್ಯಾಚರಣೆಯಲ್ಲಿ ತೊಡಗಿದ್ದ ಹೆಲಿಕಾಪ್ಟರೊಂದು ಸಮೀಪದ ಸರೋವರದಿಂದ ನೀರು ಸಂಗ್ರಹಿಸುತ್ತಿದ್ದ ವೇಳೆ ಅಚಾನಕ್ ಆಗಿ ಪತನಗೊಂಡು ಸರೋವರಕ್ಕೆ ಬಿದ್ದಂತಹ ಘಟನೆ ಫ್ರಾನ್ಸ್‌ನಲ್ಲಿ ನಡೆದಿದೆ

ಕಾಡ್ಗಿಚ್ಚು ನಂದಿಸುವ ಕಾರ್ಯಾಚರಣೆಯಲ್ಲಿ ತೊಡಗಿದ್ದ ಹೆಲಿಕಾಪ್ಟರೊಂದು ಸಮೀಪದ ಸರೋವರದಿಂದ ನೀರು ಸಂಗ್ರಹಿಸುತ್ತಿದ್ದ ವೇಳೆ ಅಚಾನಕ್ ಆಗಿ ಪತನಗೊಂಡು ಸರೋವರಕ್ಕೆ ಬಿದ್ದಂತಹ ಘಟನೆ ಫ್ರಾನ್ಸ್‌ನಲ್ಲಿ ನಡೆದಿದೆ. ಈ ದುರಂತ ಕ್ಯಾಮರಾದಲ್ಲಿ ಸೆರೆ ಆಗಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಭಾನುವಾರ ಸಂಜೆ ಪಶ್ಚಿಮ ಫ್ರಾನ್ಸ್‌ನಲ್ಲಿ ಈ ಘಟನೆ ನಡೆದಿದೆ. ಆ ಪ್ರದೇಶದಲ್ಲಿ ಸಂಭವಿಸಿದ್ದ ಕಾಡ್ಗಿಚ್ಚನ್ನು ನಂದಿಸುವ ಕಾರ್ಯಾಚರಣೆಯಲ್ಲಿ ತೊಡಗಿದ್ದ ಹೆಲಿಕಾಪ್ಟರೊಂದು ಡ್ರಮ್ ಮೂಲಕ ಸಮೀಪದ ಕರೆಯೊಂದರಿಂದ ನೀರು ಸಂಗ್ರಹಿಸುತ್ತಿದ್ದಾಗ ಈ ಅನಾಹುತ ಸಂಭವಿಸಿದೆ.

ಸರೋವರಕ್ಕೆ ಅಪ್ಪಳಿಸಿದ ಮೊರೇನ್ 29 ಹೆಸರಿನ ಹೆಲಿಕಾಪ್ಟರ್

ಅಗ್ನಿಶಾಮಕ ಕಾರ್ಯಾಚರಣೆಯಲ್ಲಿ ತೊಡಗಿದ್ದ ಮೊರೇನ್ 29 ಹೆಸರಿನ ಹೆಲಿಕಾಪ್ಟರ್ ರೋಸ್ಪೋರ್ಡೆನ್ ಸರೋವರಕ್ಕೆ ಅಪ್ಪಳಿಸಿದೆ. ಈ ಘಟನೆಯಲ್ಲಿ ಇಬ್ಬರೂ ಸಿಬ್ಬಂದಿ ಯಾವುದೇ ಗಾಯಗಳಿಲ್ಲದೆ ಅಪಘಾತಕ್ಕೀಡಾದ ಹೆಲಿಕಾಪ್ಟರ್‌ನಿಂದ ಹೊರಬಂದು ಸುರಕ್ಷಿತವಾಗಿ ಈಜಿ ಪಾರಾಗಿದ್ದಾರೆ.

@CollinRugg ಎಂಬುವವರು ಈ ವೀಡಿಯೊವನ್ನು ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಫ್ರಾನ್ಸ್‌ನಲ್ಲಿ ಕಾಡ್ಗಿಚ್ಚನ್ನು ನಂದಿಸಲು ಸರೋವರದಿಂದ ನೀರನ್ನು ಎತ್ತಲು ಪ್ರಯತ್ನಿಸುತ್ತಿದ್ದಾಗ ಹೆಲಿಕಾಪ್ಟರ್ ಸರೋವರಕ್ಕೆ ಅಪ್ಪಳಿಸಿತು. ಘಟನೆಯಲ್ಲಿ ಪೈಲಟ್ ನೀರಿನ ಡ್ರಮ್ ತುಂಬಲು ತುಂಬಾ ವೇಗವಾಗಿ ಇಳಿಯುತ್ತಿರುವುದು ಕಂಡುಬಂದಿದೆ. ಈ ವೇಳೆ ಹೆಲಿಕಾಪ್ಟರ್‌ನ ಬಾಲ ನೀರಿನಲ್ಲಿ ಮುಳುಗಿದೆ. ಸ್ಥಳೀಯ ಅಧಿಕಾರಿಗಳ ಪ್ರಕಾರ, ಹೆಲಿಕಾಪ್ಟರ್‌ನಲ್ಲಿದ್ದ ಇಬ್ಬರು ವ್ಯಕ್ತಿಗಳು ಯಾವುದೇ ಹಾನಿಯಾಗದಂತೆ ದಡ ತಲುಪಿದ್ದಾರೆ. ಅಪಘಾತಕ್ಕೂ ಮೊದಲು ಹೆಲಿಕಾಪ್ಟರ್ 27 ಬಾರಿ ನೀರನ್ನು ಹೊತ್ತು ಸಾಗಿ ಬೆಂಕಿ ಹತ್ತಿದ ಸ್ಥಳಕ್ಕೆ ಹಾಕಿ ಬಂದಿತ್ತು ಎಂದು ಅವರು ಬರೆದಿದ್ದಾರೆ.

ಬೆಂಕಿಯನ್ನು ಸಂಗ್ರಹಿಸಲು ನೀರು ಸಂಗ್ರಹಿಸುತ್ತಿದ್ದಾಗ ಘಟನೆ:

ಕಾಡ್ಗಿಚ್ಚು ನಂದಿಸಲು ನಡೆದ ಅಗ್ನಿಶಾಮಕ ಕಾರ್ಯಾಚರಣೆಯು ಬಹುತೇಕ ದುರಂತವಾಗಿ ಮಾರ್ಪಟ್ಟಿತು. ಆ ಪ್ರದೇಶದಲ್ಲಿ ಬೆಂಕಿಯನ್ನು ನಂದಿಸಲು ನೀರು ಸಂಗ್ರಹಿಸಲು ಪ್ರಯತ್ನಿಸುತ್ತಿದ್ದಾಗ ಹೆಲಿಕಾಪ್ಟರ್ ಪತನಗೊಂಡಿತು. ಪತನಗೊಂಡ ನಂತರ ಪೈಲಟ್ ಮತ್ತು ಅದರಲ್ಲಿದ್ದ ಅಗ್ನಿಶಾಮಕ ದಳದವರು ಹೆಲಿಕಾಪ್ಟರ್‌ನ ಅವಶೇಷಗಳಿಂದ ಪಾರಾಗಿ ಈಜುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಫಿನಿಸ್ಟೆರ್‌ನ ಅಧಿಕಾರಿಗಳು ತಿಳಿಸಿದ್ದಾರೆ. ಈ ಹೆಲಿಕಾಪ್ಟರ್ ದೈನಂದಿನ ಕಾರ್ಯಾಚರಣೆಯಲ್ಲಿತ್ತು ಮತ್ತು ರೋಸ್ಪೋರ್ಡೆನ್ ಬಳಿಯ ಮನೆಗಳಿಗೆ ಬೆಂಕಿ ಬರದಂತೆ ತಡೆಯಲು ದಿನವಿಡೀ 27 ಬಾರಿ ನೀರು ಹಾಕಿತ್ತು ಎಂದು ಅಧಿಕಾರಿಗಳು ಹೇಳಿದ್ದಾರೆ.

ಘಟನೆಯ ದೃಶ್ಯಗಳು ಹೆಲಿಕಾಪ್ಟರ್ ಬಕೆಟ್ ತುಂಬಲು ಪ್ರಯತ್ನಿಸುವಾಗ ಹೆಲಿಕಾಪ್ಟರ್ ಬಾಲವೂ ನೀರಿಗೆ ಇಳಿಯುವುದನ್ನು ತೋರಿಸುತ್ತದೆ. ಕೆಲವು ಕ್ಷಣಗಳ ನಂತರ, ಅದು ಸಮತೋಲನ ಕಳೆದುಕೊಂಡು, ನಿಯಂತ್ರಣಕ್ಕೆ ಸಿಗದೆ ತಿರುಗಿ, ಸರೋವರಕ್ಕೆ ಬಿದ್ದಿದೆ. ಘಟನೆಗೆ ಸಂಬಂಧಿಸಿದಂತೆ ಪ್ರತ್ಯಕ್ಷದರ್ಶಿಗಳು ಸ್ಥಳೀಯ ಮಾಧ್ಯಮಗಳಿಗೆ ವಿವರಿಸಿದ್ದು, ಹೆಲಿಕಾಪ್ಟರ್‌ ತುಂಬಾ ಕೆಳಕ್ಕೆ ಇಳಿದು ವೇಗವಾಗಿ ಇಳಿಯುತ್ತಿತ್ತು. ಅದು ಇಳಿದ ರಭಸ ನೋಡಿ ಅದು ಸ್ಫೋಟಗೊಳ್ಳುತ್ತದೆ ಅಥವಾ ತುಂಡುಗಳಾಗಿ ಒಡೆಯುತ್ತದೆ ಎಂದು ನಾನು ಭಾವಿಸಿದೆ. ಹಾಗೆಯೇ ಅದು ನೀರಿಗೆ ಪತನಗೊಂಡು ಬೀಳುತ್ತಿದ್ದಂತೆ ಹಲವು ಭಾಗಗಳಾಗಿ ಒಡೆಯಿತು ಎಂದರು.

ಈ ಅಪಘಾತಕ್ಕೆ ಕಾರಣವೇನು ಎಂಬುದನ್ನು ನಿರ್ಧರಿಸಲು ತನಿಖೆಯನ್ನು ಪ್ರಾರಂಭಿಸಲಾಗಿದೆ. ಘಟನೆಯ ನಂತರ ಶೀಘ್ರದಲ್ಲೇ ಮತ್ತೊಂದು ಹೆಲಿಕಾಪ್ಟರ್‌ ಮೂಲಕ ಅಗ್ನಿಶಾಮಕ ಕಾರ್ಯಾಚರಣೆ ಮುಂದುವರೆಯಿತು. ಫ್ರಾನ್ಸ್‌ನಲ್ಲಿ ವ್ಯಾಪಕವಾದ ಕಾಡ್ಗಿಚ್ಚಿನ ಸಮಯದಲ್ಲಿ ಈ ಘಟನೆ ನಡೆದಿದೆ. ಅಲ್ಲಿ ಈಗಾಗಲೇ ಪ್ಯಾರಿಸ್‌ಗಿಂತ ದೊಡ್ಡ ಪ್ರದೇಶಗಳು ಕಾಡ್ಗಿಚ್ಚಿಗೆ ನಾಶವಾಗಿವೆ. ಈ ಕಾಡ್ಗಿಚ್ಚಿಗೆ ಒಬ್ಬರು ಬಲಿಯಾಗಿದ್ದು, 11 ಅಗ್ನಿಶಾಮಕ ದಳದವರು ಸೇರಿದಂತೆ ಕನಿಷ್ಠ 13 ಜನರು ಗಾಯಗೊಂಡಿದ್ದಾರೆ. ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಸಾವಿರಾರು ಸಿಬ್ಬಂದಿ ಮತ್ತು ಡಜನ್ಗಟ್ಟಲೆ ವಿಮಾನಗಳನ್ನು ದಕ್ಷಿಣ ಪ್ರದೇಶಗಳಲ್ಲಿ ನಿಯೋಜಿಸಲಾಗಿದೆ.

 

 

ಇದನ್ನೂ ಓದಿ: ವೃದ್ಧಾಪ್ಯದಲ್ಲಿ ತೊರೆದ ಮಕ್ಕಳಿಗೆ ಬುದ್ಧಿ ಕಲಿಸಿದ ತಾಯಿ: ಬಹುಕೋಟಿ ಮೌಲ್ಯದ ಆಸ್ತಿಯನ್ನು ಬರೆದಿದ್ದು ಯಾರ ಹೆಸರಿಗೆ

ಇದನ್ನೂ ಓದಿ: ಪತ್ನಿಯ ಕೊನೆಯಾಸೆ ಈಡೇರಿಸಲು 40 ವರ್ಷ ಕಳೆದ ಗಂಡ: ಗಿಟಾರ್ ಆಕಾರದ ಕಾಡನ್ನೇ ನಿರ್ಮಿಸಿದ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ವಿಶ್ವದ ಅತಿ ಬಲಿಷ್ಠ ಕರೆನ್ಸಿಗಳಿವು: ಭಾರತದ ರುಪಾಯಿ ಮುಂದೆ ಘರ್ಜಿಸುವ ಡಾಲರ್ ಈ ದೇಶದ ಕರೆನ್ಸಿ ಮುಂದೆ ಡಮ್ಮಿ!
ರಾಜಮೌಳಿ-ಜೇಮ್ಸ್ ಕ್ಯಾಮರೂನ್ ಹೊಸ ಹೆಜ್ಜೆ, ನಟ ಮಹೇಶ್ ಬಾಬುಗೆ ಪ್ಯಾನ್ ವರ್ಲ್ಡ್ ಪಟ್ಟ..!