ವಿಶ್ವದ ಧಡೂತಿ ವ್ಯಕ್ತಿ ಎನಿಸಿಕೊಂಡಿದ್ದವ ಈಗ ಹೇಗಿದ್ದಾನೆ ನೋಡಿ: 6 ತಿಂಗಳಲ್ಲಿ 542 ಕೇಜಿ ಇಳಿಕೆ

By Anusha Kb  |  First Published Aug 15, 2024, 11:09 AM IST

ಸೌದಿ ರಾಷ್ಟ್ರದ ಖಾಲಿದ್ ಬಿನ್ ಮೊಹ್ಸಿನ್ ಶಾರಿ ಎಂಬ ಈ ವ್ಯಕ್ತಿ ಹಿಂದೊಮ್ಮೆ 610 ಕೇಜಿ ತೂಗುತ್ತಿದ್ದ ತಮ್ಮ ದೈತ್ಯ ದೇಹದ ಕಾರಣಕ್ಕೆ ಭಾರಿ ತೂಕದ ವ್ಯಕ್ತಿ ಎಂದು ಗುರುತಿಸಿಕೊಂಡಿದ್ದವರು.ಸೌದಿ ರಾಜನ ನೆರವಿನಿಂದಾಗಿ ಈಗ ಖಾಲಿದ್ ಆರೇ ತಿಂಗಳಲ್ಲಿ  542 ಕೇಜಿ ತೂಕ ಇಳಿಸಿಕೊಂಡು ಸಾಮಾನ್ಯನಂತಾಗಿದ್ದಾರೆ.


ನವದೆಹಲಿ: ಸೌದಿ ರಾಷ್ಟ್ರದ ಖಾಲಿದ್ ಬಿನ್ ಮೊಹ್ಸಿನ್ ಶಾರಿ ಎಂಬ ಈ ವ್ಯಕ್ತಿ ಹಿಂದೊಮ್ಮೆ  542 ಕೇಜಿ ತೂಗುತ್ತಿದ್ದ ತಮ್ಮ ದೈತ್ಯ ದೇಹದ ಕಾರಣಕ್ಕೆ ಭಾರಿ ತೂಕದ ವ್ಯಕ್ತಿ ಎಂದು ಗುರುತಿಸಿಕೊಂಡಿದ್ದವರು.  2013ರಲ್ಲಿ ಖಾಲಿದ್ ಅವರು ಜೀವಕ್ಕೆ ಅಪಾಯವಾಗುವಷ್ಟರ ಮಟ್ಟಿಗೆ ಅಂದರೆ ಬರೋಬ್ಬರಿ 610 ಕೇಜಿ ತೂಕ ಹೊಂದಿದ್ದರು. ಈ ಅತೀಯಾದ ತೂಕದ ಕಾರಣಕ್ಕೆ ನಡೆಯಲು ಆಗದೇ ಕೂರಲು ಆಗದೇ ಮೂರು ವರ್ಷಗಳ ಕಾಲ ಹಾಸಿಗೆ ಹಿಡಿದಿದ್ದರು.  ತುಂಬಾ ಅಗತ್ಯವಾದ ತನ್ನ ಸ್ವಂತ ಕೆಲಸಗಳಿಗೆ ಅವರು ತಮ್ಮ ಕುಟುಂಬದವರನ್ನು ಅವಲಂಬಿಸಬೇಕಾದಂತಹ ಸ್ಥಿತಿ ಇತ್ತು. ಆದರೆ ಈ ವಿಚಾರ ತಿಳಿದು ಸೌದಿ ಅರೇಬಿಯಾದ ಹಿಂದಿನ ರಾಜ ಅಬ್ದುಲ್ಲಾ ಆತನ ಜೀವ ಉಳಿಸಲು ಸಮಗ್ರ ಯೋಜನೆಯೊಂದಿಗೆ ಮಂದೆ ಬಂದರು. 

ಧಡೂತಿ ದೇಹದ ಖಾಲಿದ್‌ಗೆ ಸಂಪೂರ್ಣ ಉಚಿತವಾಗಿ  ಉನ್ನತ ಮಟ್ಟದ ವೈದ್ಯಕೀಯ ಆರೈಕೆ ಸಿಗುವಂತೆ ರಾಜ ಅಬ್ಬುಲ್ಲಾ ವ್ಯವಸ್ಥೆ ಮಾಡಿದರು. ಬಳಿಕ ಆತನನ್ನು ವಿಶೇಷವಾಗಿ ವಿನ್ಯಾಸಗೊಳಿಸಿದ್ದ ಹಾಸಿಗೆಯಲ್ಲಿ ಮಲಗಿಸಿ ಹಾಗೂ ಪೋರ್ಕ್‌ ಲಿಫ್ಟ್‌ ಸಹಾಯದಿಂದ ಆತನಿದ್ದ ಜಝನ್‌ನ ಮನೆಯಿಂದ ರಿಯಾದ್‌ನಲ್ಲಿರುವ ಕಿಂಗ್ ಫಹಾದ್ ಮೆಡಿಕಲ್ ಸಿಟಿ ಆಸ್ಪತ್ರೆಗೆ ಕರೆ ತರಲಾಯ್ತು. ಬಳಿಕ 30 ವೈದ್ಯಕೀಯ ಸಿಬ್ಬಂದಿ ಇದ್ದ ತಂಡವನ್ನು ಆತನ ಆರೋಗ್ಯದ ಪರಿಶೀಲನೆಗೆ ನೇಮಿಸಿ ಕಠಿಣ ಚಿಕಿತ್ಸೆ ಹಾಗೂ ಆಹಾರ ಪದ್ಧತಿಯನ್ನು ಆತನಿಗಾಗಿ ತಯಾರಿಸಲಾಯ್ತು. 

Tap to resize

Latest Videos

undefined

Health Tips: ಬೊಜ್ಜಿರೋರಿಗೆ ಕೊಬ್ಬು ತಿನ್ನೋದನ್ನ ಕಂಟ್ರೋಲ್ ಮಾಡೋದೇಕೆ ಕಷ್ಟ?

ಖಾಲಿದ್‌ಗೆ ನೀಡಿದ ಚಿಕಿತ್ಸೆ ಗ್ಯಾಸ್ಟ್ರಿಕ್ ಬೈಪಾಸ್ ಸರ್ಜರಿಯನ್ನು ಕೂಡ ಒಳಗೊಂಡಿತ್ತು. ಇದರ ಜೊತೆಗೆ ಆತನಿಗಾಗಿ ಮಾಡಿದ ಡಯಟ್ ಪ್ಲಾನ್ ಹಾಗೂ ವ್ಯಾಯಾಮದ ಯೋಜನೆಗಳು ಹಾಗೂ ಬಹಳ ತೀವ್ರವಾದ ಫಿಸಿಯೋಥೆರಪಿ ಸೆಸನ್‌ಗಳು ಆತ ಎಲ್ಲರಂತಾಗಬೇಕು ಎದ್ದು ಓಡಾಡಬೇಕು ಎಂಬ ಗುರಿಯನ್ನು ಹೊಂದಿದ್ದವು. ಇದರ ಜೊತೆಗೆ ಮಧ್ಯಪ್ರಾಚ್ಯದ ವಿಜ್ಞಾನಿಗಳು ಈತನ ಆರೋಗ್ಯಕ್ಕೆ ಸಂಬಂಧಿಸಿದಂತೆ ನೀಡಿದ ಬೆಂಬಲದಿಂದ ಖಾಲಿದ್‌ನ ದೇಹದಲ್ಲಿ ನಂಬಲಸಾಧ್ಯವಾದ ಬದಲಾವಣೆಯಾಯ್ತು.

ಆಫ್ರಿಕಾದ ಮರಿಯಾನೆಗಿಂತಲೂ ಹೆಚ್ಚು ತೂಕವಿದ್ದ ಈ ಬಾಲಕ ಈಗ ಹೇಗಿದ್ದಾನೆ ನೋಡಿ

ರಾಜ ಹಾಗೂ ವೈದ್ಯರ ಅವಿರತ ಪರಿಶ್ರಮ ಡಯಟ್ ಪ್ಲಾನ್‌ನಿಂದಾಗಿ ಖಾಲಿದ್ ಬಿನ್ ಮೊಹ್ಸಿನ್ ಶಾರಿ ದೇಹದಲ್ಲಿ ಅದ್ಭುತವಾದ ಬದಲಾವಣೆಯಾಯ್ತು. ಆತ ಕೇವಲ ಆರು ತಿಂಗಳಲ್ಲಿ ತನ್ನ ದೇಹದ ಅರ್ಧ ಭಾರವನ್ನು ಕಳೆದುಕೊಂಡಿದ್ದ. 2023ರ ವೇಳೆಗೆ ಖಾಲಿದ್ ಒಟ್ಟು 542 ಕೇಜಿ ತೂಕವನ್ನು ಕಳೆದುಕೊಂಡಿದ್ದ, ಹೀಗಾಗಿ ಆತನ ತೂಕ 63.5 ಕೇಜಿಯಷ್ಟಾಗಿತ್ತು. ಈತನ ದೇಹದ ಈ ಬದಲಾವಣೆ ಬಹಳ ವಿಶೇಷವಾಗಿತ್ತು. ಆತನ ದೇಹದ ವಿವಿಧ ಭಾಗಗಳಲ್ಲಿದ್ದ ಹೆಚ್ಚಿನ ಚರ್ಮವನ್ನು ಸರ್ಜರಿ ಮೂಲಕ ತೆಗೆಯಲಾಗಿತ್ತು. 

ಹಿಂದೊಮ್ಮೆ ವಿಶ್ವದ ಅತೀ ಧಡೂತಿ ದೇಹಿ ಎಂಬ ಕುಖ್ಯಾತಿಗೆ ಪಾತ್ರನಾಗಿದ್ದ ಖಾಲಿದ್ ಇಂದು ಕೇವಲ ನಗುಮುಖದ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರನಾಗಿದ್ದಾನೆ. ಈತನ ದೇಃದ ನಂಬಲಸಾಧ್ಯವೆನಿಸಿದ ಬದಲಾವಣೆಗೆ ಕಾರಣರಾದ ವೈದ್ಯರ ತಂಡ ಆತನಿಗೆ ಸ್ಮೈಲಿಂಗ್ ಮ್ಯಾನ್ ಎಂಬ ಅಡ್ಡಹೆಸರು ನೀಡಿ ಮನೆಗೆ ಕಳುಹಿಸಿಕೊಟ್ಟಿತ್ತು. 

click me!