ಬಾಂಗ್ಲಾದಲ್ಲಿ ಇನ್ನೂ ನಿಲ್ಲದ ಹಿಂದೂಗಳ ಮೇಲಿನ ದಾಳಿ: ಮನೆಗೆ ಬೆಂಕಿ ಹಚ್ಚಿ ಕಿಡಿಗೇಡಿಗಳ ದುಷ್ಕೃತ್ಯ..!

By Kannadaprabha News  |  First Published Aug 15, 2024, 5:21 AM IST

ಬಾಂಗ್ಲಾದ ಠಾಕೂರ್‌ಗಾಂವ್ ಜಿಲ್ಲೆಯ ಫರಬಾರಿ ಮಂದಿರಪಾರಾ ಗ್ರಾಮದಲ್ಲಿ ಮಂಗಳವಾರ ಸಂಜೆ ಈ ಘಟನೆ ನಡೆದಿದ್ದು ಕಾಳೇಶ್ವರ ಬರ್ಮನ್ ಎನ್ನುವವರ ಮನೆಯನ್ನು ಗುರಿಯಾಗಿಸಿಕೊಂಡು ಅಪರಿಚಿತರು ಬೆಂಕಿ ಹಚ್ಚಿದ್ದಾರೆ.


ಢಾಕಾ(ಆ.15): ಶೇಖ್‌ ಹಸೀನಾ ನೇತೃತ್ವದ ಸರ್ಕಾರ ಪತನಗೊಂಡ ಬಳಿಕ ಬಾಂಗ್ಲಾದಲ್ಲಿ ಹಿಂದೂಗಳ ಮೇಲಿನ ಹಿಂಸಾಚಾರ ಮುಂದುವರೆದಿದ್ದು, ವಾಯವ್ಯ ಬಾಂಗ್ಲಾದಲ್ಲಿ ಹಿಂದೂ ಕುಟುಂಬವೊಂದರ ಮನೆಗೆ ಬೆಂಕಿ ಹಚ್ಚಿ ಕಿಡಿಗೇಡಿಗಳು ದುಷ್ಕೃತ್ಯ ಮೆರೆದಿದ್ದಾರೆ. ಹಿಂದೂಗಳ ಮೇಲೆ ದಾಳಿ ಮಾಡಿದರೆ ಕಠಿಣ ಕ್ರಮ ಜರುಗಿಸುವುದಾಗಿ ಮಧ್ಯಂತರ ಸರ್ಕಾರದ ಮುಖ್ಯಸ್ಥ ಮುಹಮ್ಮದ್ ಯೂನಸ್ ಎಚ್ಚರಿಸಿದ್ದರೂ ಕೃತ್ಯ ಮುಂದುವರಿದಿವೆ.

ಬಾಂಗ್ಲಾದ ಠಾಕೂರ್‌ಗಾಂವ್ ಜಿಲ್ಲೆಯ ಫರಬಾರಿ ಮಂದಿರಪಾರಾ ಗ್ರಾಮದಲ್ಲಿ ಮಂಗಳವಾರ ಸಂಜೆ ಈ ಘಟನೆ ನಡೆದಿದ್ದು ಕಾಳೇಶ್ವರ ಬರ್ಮನ್ ಎನ್ನುವವರ ಮನೆಯನ್ನು ಗುರಿಯಾಗಿಸಿಕೊಂಡು ಅಪರಿಚಿತರು ಬೆಂಕಿ ಹಚ್ಚಿದ್ದಾರೆ.

Tap to resize

Latest Videos

undefined

ಬಾಂಗ್ಲಾ ದಂಗೆಕೋರರು ಹಚ್ಚಿದ ಬೆಂಕಿಗೆ ಆಹುತಿಯಾಯ್ತು 65 ಕೋಟಿ ಮೌಲ್ಯದ ನೂರಾರು ವಾಹನಗಳು

'ಕಾಳೇಶ್ವರ್ ಅವರಿಗೆ ಯಾವುದೇ ರಾಜಕೀಯ ನಂಟಿರದಿದ್ದರೂ, ಹಿಂದೂ ಸಮುದಾಯದವರನ್ನು ಹಿಂಸಿಸಲು ಈ ದಾಳಿ ನಡೆಸಿದ್ದಾರೆ' ಎಂದು ಬಾಂಗ್ಲಾದೇಶದ ರಾಷ್ಟ್ರೀಯ ಹಿಂದೂ ಮಹಾ ಒಕ್ಕೂಟ ಆರೋಪಿಸಿದೆ.

ಶೇಖ್ ಹಸೀನಾ ರಾಜೀನಾಮೆ ಬಳಿಕ 48 ಜಿಲ್ಲೆಗಳ 278 ಕಡೆಗಳಲ್ಲಿ ಅಲ್ಪಸಂಖ್ಯಾತ ಸಮುದಾಯದವರ ಮೇಲೆ ದಾಳಿ ನಡೆದಿದೆ ಎಂದು ರಾಷ್ಟ್ರೀಯ ಹಿಂದೂ ಮಹಾ ಒಕ್ಕೂಟ ಆರೋಪ ಮಾಡಿತ್ತು. ಅಲ್ಲದೇ ಬಾಂಗ್ಲಾದಲ್ಲಿ ಹಿಂದೂಗಳು ಸೇರಿದಂತೆ ಅಲ್ಪಸಂಖ್ಯಾತ ಸಮುದಾಯಗಳ ಮೇಲೆ ಶೋಷಣೆ ಮಾಡಿದವರಿಗೆ ಶಿಕ್ಷೆ ವಿಧಿಸುವುದಾಗಿ ಸರ್ಕಾರದ ಪ್ರಮುಖ ಯೂನಸ್ ಘೋಷಿಸಿದ ಕೆಲವೇ ಗಂಟೆಗಳಲ್ಲಿ ಈ ಘಟನೆ ನಡೆದಿದೆ.

click me!