
ರಿಯಾದ್ (ಮೇ.09): ಸೌದಿ ಅರೆಬಿಯಾ ರಾಜ ಸಲ್ಮಾನ್ ಬಿನ್ ಅಬ್ದುಲಾಜಿಜ್ ಅಲ್ ಸೌದ್ ಹೊರಡಿಸಿದೆ ಆದೇಶಕ್ಕೆ ಹಲವರು ಬೆಚ್ಚಿ ಬಿದ್ದಿದ್ದಾರೆ. ಸೌದಿ ಅರೇಬಿಯಾದಲ್ಲಿ ಆಡಳಿತ ಮತ್ತು ಅಧಿಕಾರಿಗಳ ಮಟ್ಟದಲ್ಲಿ ದೊಡ್ಡ ಬದಲಾವಣೆ ಮಾಡಲಾಗಿದೆ. ಗವರ್ನರ್, ಡೆಪ್ಯುಟಿ ಗವರ್ನರ್, ಡೆಪ್ಯುಟಿ ಮಂತ್ರಿ, ಅಧಿಕಾರಿಗಳು, ಶೂರಾ ಕೌನ್ಸಿಲ್ ಸದಸ್ಯರು ಸೇರಿದಂತೆ ಹಲವು ಹುದ್ದೆಗಳಿಗೆ ವಜಾ ಮತ್ತು ಮರು ನೇಮಕಾತಿ ಮಾಡಿ ಸಲ್ಮಾನ್ ರಾಜ ಆದೇಶ ಹೊರಡಿಸಿದ್ದಾರೆ. ಗುರುವಾರ ಸಂಜೆ ಈ ರಾಜಾಜ್ಞೆ ಹೊರಬಿದ್ದಿದೆ. ಜಿಝಾನ್ ಪ್ರಾಂತ್ಯದ ಗವರ್ನರ್ ಅಮೀರ್ ಮುಹಮ್ಮದ್ ಬಿನ್ ನಾಸಿರ್ ಬಿನ್ ಅಬ್ದುಲ್ ಅಜೀಜ್ ಅವರನ್ನು ಬದಲಾಯಿಸಿ, ಅವರ ಸ್ಥಾನದಲ್ಲಿ ಕ್ಯಾಬಿನೆಟ್ ದರ್ಜೆಯೊಂದಿಗೆ ಅಮೀರ್ ಮುಹಮ್ಮದ್ ಬಿನ್ ಅಬ್ದುಲ್ ಅಜೀಜ್ ಬಿನ್ ಮುಹಮ್ಮದ್ ಬಿನ್ ಅಬ್ದುಲ್ ಅಜೀಜ್ ಅವರನ್ನು ಹೊಸ ಗವರ್ನರ್ ಆಗಿ ನೇಮಿಸಲಾಗಿದೆ. ಅಮೀರ್ ಬಂದರ್ ಬಿನ್ ಮುಖ್ರಿನ್ ಬಿನ್ ಅಬ್ದುಲ್ ಅಜೀಜ್ ಅವರನ್ನು ಉನ್ನತ ದರ್ಜೆಯೊಂದಿಗೆ ರಾಯಲ್ ಕೋರ್ಟ್ ಸಲಹೆಗಾರರನ್ನಾಗಿ ನೇಮಿಸಲಾಗಿದೆ.
ವಿಶೇಷ ಸ್ಥಾನಮಾನದೊಂದಿಗೆ ಜಿಝಾನ್ ಡೆಪ್ಯುಟಿ ಗವರ್ನರ್ ಆಗಿ ಅಮೀರ್ ನಾಸ್ವಿರ್ ಬಿನ್ ಮುಹಮ್ಮದ್ ಬಿನ್ ಅಬ್ದುಲ್ಲ ಬಿನ್ ಜಲವಿ ಅವರ ನೇಮಕಾತಿಯೂ ಈ ಆದೇಶದಲ್ಲಿದೆ. ಶೂರಾ ಕೌನ್ಸಿಲ್ ಸದಸ್ಯತ್ವದಿಂದ ಅಮೀರ್ ಫಹದ್ ಬಿನ್ ಸಾದ್ ಬಿನ್ ಫೈಸಲ್ ಅವರನ್ನು ವಜಾಗೊಳಿಸಲಾಗಿದೆ. ಗೃಹ ಉಪ ಮಂತ್ರಿಯಾಗಿದ್ದ ಡಾ. ನಾಸ್ವಿರ್ ಬಿನ್ ಅಬ್ದುಲ್ ಅಜೀಜ್ ಅಲ್ದಾವೂದಿ ಅವರನ್ನು ಆ ಹುದ್ದೆಯಿಂದ ತೆಗೆದುಹಾಕಿ, ಕ್ಯಾಬಿನೆಟ್ ದರ್ಜೆಯೊಂದಿಗೆ ರಾಷ್ಟ್ರೀಯ ಭದ್ರತಾ ಪಡೆಯ ಉಪ ಮಂತ್ರಿಯನ್ನಾಗಿ ನೇಮಿಸಲಾಗಿದೆ. ಸಲ್ಮಾನ್ ರಾಜನ ವಿಶೇಷ ಸಲಹೆಗಾರರಾದ ಡಾ. ಅಬ್ದುಲ್ ಅಜೀಜ್ ಬಿನ್ ಮುಹಮ್ಮದ್ ಬಿನ್ ಅಬ್ದುಲ್ ಅಜೀಜ್ ಅಲ್ ಮಖ್ರಿನ್ ಅವರನ್ನು ಗೃಹ ಉಪ ಮಂತ್ರಿಯನ್ನಾಗಿ ಬಡ್ತಿ ನೀಡಲಾಗಿದೆ.
ಹಠಾತ್ ಭಾರತಕ್ಕೆ ಭೇಟಿ ನೀಡಿದ ಸೌದಿ ಸಚಿವ :ಉಗ್ರವಾದ ನೆಲಸಮಗೊಳಿಸಲು ಭಾರತಕ್ಕೆ ಬೆಂಬಲ
ಫಹದ್ ಬಿನ್ ಅಬ್ದುಲ್ಲ ಅಲ್ ಅಸ್ಕರಿ ಅವರನ್ನು ಕ್ಯಾಬಿನೆಟ್ ದರ್ಜೆಯೊಂದಿಗೆ ರಾಯಲ್ ಕೋರ್ಟ್‌ನ ಉಪ ಮುಖ್ಯಸ್ಥರನ್ನಾಗಿ ನೇಮಿಸಲಾಗಿದೆ. ತಮೀಮ್ ಬಿನ್ ಅಬ್ದುಲ್ ಅಜೀಜ್ ಅಲ್ಸಾಲಿಮಿ ಅವರನ್ನು ಸಲ್ಮಾನ್ ರಾಜನ ಉಪ ಖಾಸಗಿ ಕಾರ್ಯದರ್ಶಿಯಾಗಿ ಮಂತ್ರಿ ದರ್ಜೆಯೊಂದಿಗೆ ನೇಮಿಸಲಾಗಿದೆ. ಅಮೀರ್ ಫಹದ್ ಬಿನ್ ಸಾದ್ ಬಿನ್ ಫೈಸಲ್ ಬಿನ್ ಸಾದ್ ಅವರನ್ನು ಉತ್ತಮ ದರ್ಜೆಯೊಂದಿಗೆ ಖಾಸಿಮ್ ಪ್ರಾಂತ್ಯದ ಡೆಪ್ಯುಟಿ ಗವರ್ನರ್ ಆಗಿ ನೇಮಿಸಲಾಗಿದೆ. ಸಂವಹನ, ಬಾಹ್ಯಾಕಾಶ ಮತ್ತು ತಂತ್ರಜ್ಞಾನ ಆಯೋಗದ ಗವರ್ನರ್ ಡಾ. ಮುಹಮ್ಮದ್ ಬಿನ್ ಸೌದ್ ಬಿನ್ ಮೂಸ ಅಲ್ ತಮೀಮಿ ಅವರನ್ನು ಆ ಹುದ್ದೆಯಿಂದ ತೆಗೆದುಹಾಕಿ, ಮಂತ್ರಿ ದರ್ಜೆಯೊಂದಿಗೆ ರಾಷ್ಟ್ರೀಯ ತುರ್ತು ನಿರ್ವಹಣಾ ಪ್ರಾಧಿಕಾರದ ಗವರ್ನರ್ ಆಗಿ ನೇಮಿಸಲಾಗಿದೆ.
ಡಾ. ಇನಾಸ್ ಬಿಂತ್ ಸುಲೈಮಾನ್ ಅಲೀಸಾ ಅವರನ್ನು ಉನ್ನತ ದರ್ಜೆಯೊಂದಿಗೆ ಶಿಕ್ಷಣ ಉಪ ಮಂತ್ರಿಯನ್ನಾಗಿ ನೇಮಿಸಲಾಗಿದೆ. ಅಬ್ದುಲ್ಲ ಬಿನ್ ಸಿರಾಜ್ ಸಖ್ಸೂಖಿ ಅವರನ್ನು ಉತ್ತಮ ದರ್ಜೆಯೊಂದಿಗೆ ಕಿರೀಟಾಧಿಕಾರಿಯ ಖಾಸಗಿ ವ್ಯವಹಾರಗಳ ಮುಖ್ಯಸ್ಥರನ್ನಾಗಿ ನೇಮಿಸಲಾಗಿದೆ. ಹಿಶಾಮ್ ಬಿನ್ ಅಬ್ದುಲ್ ಅಜೀಜ್ ಬಿನ್ ಸೆಯ್ಫ್ ಅವರನ್ನು ಉನ್ನತ ದರ್ಜೆಯೊಂದಿಗೆ ರಕ್ಷಣಾ ಮಂತ್ರಿಯ ಗುಪ್ತಚರ ಸಲಹೆಗಾರರನ್ನಾಗಿ ನೇಮಿಸಲಾಗಿದೆ ಎಂದು ರಾಜಾಜ್ಞೆಯಲ್ಲಿ ತಿಳಿಸಲಾಗಿದೆ.
2025 ರ ಹಜ್ ಯಾತ್ರೆಗೆ ಹೊಸ ಮಾರ್ಗಸೂಚಿಗಳು: ಈ ತಪ್ಪು ಮಾಡಿದ್ರೆ ₹22.7 ಲಕ್ಷ ದಂಡ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ